'ಮಗಳು ಜಾನಕಿ' ಸಂವಾದ ಕಾರ್ಯಕ್ರಮ: ಯಾರು ಬಂದಿದ್ದರು.? ಏನೇನು ಆಯ್ತು.?

By ನವೀನ್ ಕುಮಾರ್.ಆರ್‌.ಓ

ಒಂದು ಧಾರಾವಾಹಿಯ ಸಂವಾದ ಕಾರ್ಯಕ್ರಮ ನಡೆಯುವುದು ತುಂಬಾ ವಿರಳ. ಅದರಲ್ಲೂ ಮೆಗಾ ಸೀರಿಯಲ್ ಗಳದ್ದು ನಡೆಯುವುದೇ ಇಲ್ಲ ಬಿಡಿ. ಇಲ್ಲಿಯವರೆಗೂ ನಾವು ನೋಡಿರಬಹುದಾದ ಸಂವಾದಗಳೆಂದರೆ ಅದು ಕಿರುತೆರೆಯ ಸ್ಟಾರ್ ನಿರ್ದೇಶಕ ಟಿ.ಎನ್‌.ಸೀತಾರಾಮ್ ಅವರ ಸಾಲು ಸಾಲು ಧಾರಾವಾಹಿಗಳದ್ದು ಹಾಗೂ ಈಗ ನಡೆಯುತ್ತಿರುವ ಅವರದ್ದೇ ಆದ 'ಮಗಳು ಜಾನಕಿ' ಧಾರಾವಾಹಿಯದ್ದು.

ಈ ಸಂವಾದಗಳ ಅವಶ್ಯಕತೆ ಇದೆಯಾ ಅಂತ ಕೇಳಿದರೇ ಹೌದು ಅಥವಾ ಇಲ್ಲ ಎಂಬ ಮಿಶ್ರ ಪ್ರತಿಕ್ರಿಯೆ ಬರುವುದು ಸಾಮಾನ್ಯ. ಮತ್ತು ಅವರವರ ವಿವೇಚನೆಗೆ ಬಿಟ್ಟಂತಹ ವಿಚಾರವೂ ಹೌದು. ಆದರೆ ಇವಕ್ಕೂ ಮುಂಚಿನ ಸಂವಾದಗಳೆಲ್ಲ ಭರ್ಜರಿ ಯಶಸ್ಸನ್ನು ಪಡೆದುಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ.

ಬೆಂಗಳೂರಿನಲ್ಲಿ ನಡೆದ 'ಮಗಳು ಜಾನಕಿ' ಧಾರಾವಾಹಿಯ ಎರಡನೇ ಸಂವಾದದಲ್ಲಿ 'ಮಾಯಾಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ' ಪಾತ್ರಧಾರಿಗಳಾದ ಎಂ.ಡಿ.ಪಲ್ಲವಿ, ಮಾಳವಿಕಾ ಅವಿನಾಶ್, ನಂದಿನಿ, ಅಶ್ವಿನಿ ಗೌಡ, ಜಯಶ್ರೀ ರಾಜ್, ವೀಣಾ ಸುಂದರ್, ಸುಷ್ಮಾ ರಾವ್ ಹಾಗೂ ಗಾನವಿ ಉಪಸ್ಥಿತರಿದ್ದರು.

ಇವರೊಂದಿಗೆ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್, 'ಮಗಳು ಜಾನಕಿ'ಗೆ ಶೀರ್ಷಿಕೆ ಗೀತೆಯನ್ನು ಬರೆದಿರುವ ಹೆಚ್.ಎಸ್.ವೆಂಕಟೇಶಮೂರ್ತಿ ಹಾಗೂ ಸಂಗೀತ ಸಂಯೋಜನೆ ಮಾಡಿರುವ ಪ್ರವೀಣ್ ಡಿ‌.ರಾವ್ ಅವರು ಭಾಗವಹಿಸಿದ್ದರು. ಮುಂದೆ ಓದಿರಿ...

ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು.?

ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು.?

''ನಾವು ಈ ದಿನ ಎಲ್ಲ ಟಿ.ಆರ್.ಪಿ ಗೋಸ್ಕರ ಕೆಲಸ ಮಾಡಬೇಕಾಗುತ್ತದೆ ಹಾಗೂ ಒಂದು ಪ್ರಾಡಕ್ಟ್ 'ಮಗಳು ಜಾನಕಿ' ಇರಬಹುದು ಅಥವಾ 'ಅಗ್ನಿಸಾಕ್ಷಿ' ಇರಬಹುದು... ಅದನ್ನು ನೀವು ಇಷ್ಟಪಡೋದ್ರಿಂದ ನಾವು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅದನ್ನು ಸರಿಯಾಗಿ ಮಾರಾಟ ಮಾಡಬೇಕಾಗುತ್ತದೆ. ಟಿ.ಎನ್‌.ಎಸ್‌ ಅವರು ಮನಸ್ಸು ಮಾಡಿದ್ದರೆ ಇವತ್ತು ಯಾವುದೋ ಒಂದು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರನ್ನ ಮಾಡಬಹುದಿತ್ತು. ಆದರೆ ಯಾವುದೇ ಒಂದು ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಂಡು ಮುಂದುವರೆಯಲಿಲ್ಲ. 1985 ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸೋಲನ್ನು ಅನುಭವಿಸಿದರು. ಅದೇ ಇವತ್ತು ಅವರು ರಾಜಕೀಯದಲ್ಲಿದ್ದಿದ್ದರೆ ಇಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಇರ್ತಿದ್ರಿ. ಆದರೆ ನೀವು ಕಮರ್ಷಿಯಲ್ ಸಿನಿಮಾ ಮಾಡದೇ ಕೇವಲ ಕಲಾತ್ಮಕ ಸಿನಿಮಾ ಮಾಡಿ ವಿಭಿನ್ನವಾಗಿ ನಿಲ್ತೀರಿ ಹಾಗೂ ಕಿರುತೆರೆಯಲ್ಲಿ ಒಬ್ಬ ಸ್ಟಾರ್ ನಿರ್ದೇಶಕರಾಗಿ ಮುಂದುವರೆಯುತ್ತಿದ್ದೀರಿ. ಅದೇ ನಿಮ್ಮ ವಿಶೇಷತೆ'' ಎಂದರು ಪರಮೇಶ್ವರ್ ಗುಂಡ್ಕಲ್.

ಗೋಪಿಕೆಯರ ಕೃಷ್ಣ

ಗೋಪಿಕೆಯರ ಕೃಷ್ಣ

ಶೀರ್ಷಿಕೆ ಗೀತೆಯನ್ನ ಬರೆದಿರುವ ಹೆಚ್.ಎಸ್.ವಿಯವರು ಮಾತನಾಡುತ್ತಾ, ''ಟಿ.ಎನ್.ಎಸ್ ಮಹಿಳಾ ಪ್ರಧಾನ ಧಾರಾವಾಹಿಗಳನ್ನು ಮಾಡುವುದರಿಂದ ಅವರಿಗೆ ಗೋಪಿಕೆಯರ ಕೃಷ್ಣ'' ಎಂದು ಹೇಳಿ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದರು. ಇನ್ನೂ ಎಂ.ಡಿ.ಪಲ್ಲವಿ ಮಾತನಾಡಿ, ''ನಾನು ಹೋದಲೆಲ್ಲಾ ಭಾವಗೀತೆಗಳ ಜೊತೆಗೆ ಟಿ.ಎನ್.ಎಸ್. ಅವರ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡುತ್ತೇನೆ. ಯಾಕೆಂದರೆ ಆ ಗೀತೆಗಳಿಗೆ ಅಶ್ವಥ್ ಅವರ ರಾಗ ಸಂಯೋಜನೆಯ ಭಾವಗೀತೆಗಳನ್ನೇ ನೆನಪಿಸುತ್ತವೆ'' ಎಂದರು.

ಸಂವಾದದಲ್ಲಿ ಭಾವುಕರಾದ ಜನ

ಸಂವಾದದಲ್ಲಿ ಭಾವುಕರಾದ ಜನ

ಸಂವಾದ ಪ್ರಾರಂಭಗೊಂಡಾಗ ಒಬ್ಬೊಬ್ಬರಾಗಿ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆ ಕೇಳುವಾಗಲೇ ಎಷ್ಟೋ ಜನ ಭಾವುಕರಾದದ್ದು ವಿಶೇಷ. ಒಬ್ಬ ಹೆಣ್ಣು ಮಗಳು ಮಾತನಾಡುತ್ತ, ''ನನ್ನ ಜೀವನವು ಜಾನಕಿ ಪಾತ್ರದ ಹಾಗೆ ನಡೀತಾ ಇದೆ. ಇದರಿಂದ ಮಾನಸಿಕವಾಗಿ ಹೇಗೆ ಮುನ್ನಡೆಯಬೇಕು ಎಂದು ಪಾತ್ರದಿಂದ ಎದುರು ನೋಡುತ್ತಿದ್ದೇನೆ'' ಎಂದರು. ಅದಕ್ಕೆ ಟಿ.ಎನ್.ಎಸ್, ''ಜಾನಕಿ ಪಾತ್ರಕ್ಕೆ ಇನ್ನಷ್ಟು ಶಕ್ತಿ ಹಾಗೂ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಸಿಗುವ ಹಾಗೆ ಪಾತ್ರವನ್ನು ಪೋಷಿಸುತ್ತೇನೆ'' ಎಂದು ಹೇಳಿದರು.

ಅರ್ಥಗರ್ಭಿತ ಸಂವಾದ

ಅರ್ಥಗರ್ಭಿತ ಸಂವಾದ

ಸಂವಾದ ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರು ಪ್ರಶ್ನೆಗಳ ಸುರಿಮಳೆ ಹಾಗೂ ಸಲಹೆಗಳನ್ನು ಮಂಡಿಸಿದರು. ಅದಕ್ಕೆ ಅಷ್ಟೇ ಸಮರ್ಥವಾಗಿ ಧಾರಾವಾಹಿ ತಂಡ ಉತ್ತರ ನೀಡಿದರು. ಈ ರೀತಿಯಾದ ಅರ್ಥಗರ್ಭಿತ ಸಂವಾದಗಳು ನಡೆಯುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುವುದರಲ್ಲಿ ಸಂದೇಹವಿಲ್ಲ ಎನ್ನುವುದು ಅನೇಕ ವೀಕ್ಷಕರ ಅಭಿಪ್ರಾಯ.

More from Filmibeat

English summary
Have a look at the complete report of 'Magalu Janaki' serial's second samvada in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X