ಬಳ್ಳಾರಿಯ ಈ ಬಡ ಹುಡುಗನ ಹಾಡು ಕೇಳಿ ಕೈ ಮುಗಿದ ಹಂಸಲೇಖ!
Recommended Video

'ಜೀ ಕನ್ನಡ' ವಾಹಿನಿಯ 'ಸರಿಗಮಪ' ಕಾರ್ಯಕ್ರಮ ಮೆಗಾ ಆಡಿಷನ್ ನಲ್ಲಿಯೇ ಮೋಡಿ ಮಾಡಿದೆ. ಎರಡು ವಾರ ಕಾರ್ಯಕ್ರಮದ ಮೆಗಾ ಆಡಿಷನ್ ನಡೆದಿದ್ದು, ಇದರಲ್ಲಿ ಒಟ್ಟು 15 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ.
ಇನ್ನು ಈ ಬಾರಿ ಕಾರ್ಯಕ್ರಮದಲ್ಲಿ ಆಯ್ಕೆ ಆದ ಮಕ್ಕಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಇದ್ದಾರೆ. ಒಬ್ಬೊಬ್ಬರು ಕೂಡ ಹಾಡು ಹಾಡುವುದರಲ್ಲಿ ಎತ್ತಿದ ಕೈ. ಇನ್ನು ಬಡತನದಲ್ಲಿ ಬೆಳೆದ ಸಾಕಷ್ಟು ಮಕ್ಕಳು ಈ ಬಾರಿ 'ಸರಿಗಮಪ' ವೇದಿಕೆ ಏರಿದ್ದಾರೆ. ಅದರಲ್ಲಿ ಒಬ್ಬ ಬಳ್ಳಾರಿಯ ಜ್ಞಾನೇಶ್. ಕಾರ್ಯಕ್ರಮದಲ್ಲಿ ಸೃಜನ್ ಮತ್ತು ಲಕ್ಷ್ಮಿ ನಂತರ ಜ್ಞಾನೇಶ್ ಎಂಬ ಹುಡುಗ ಕೂಡ ಎಲ್ಲರ ಗಮನ ಸೆಳೆದಿದ್ದಾನೆ. 10 ವರ್ಷದ ಈ ಹುಡುಗನ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಕೈ ಮುಗಿದಿದ್ದಾರೆ. ಮುಂದೆ ಓದಿ...

'ನೀಡು ಶಿವ ನೀಡದಿರು ಶಿವ..'
ಜ್ಞಾನೇಶ್ ಎಂಬ ಹುಡುಗ ಮೆಗಾ ಆಡಿಷನ್ ನಲ್ಲಿ ''ಗಾನಯೋಗಿ ಪಂಚಾಕ್ಷರಗವಾಯಿ' ಚಿತ್ರದ 'ನೀಡು ಶಿವ ನೀಡದಿರು ಶಿವ..' ಎಂಬ ಹಾಡನ್ನು ಹಾಡಿದರು. ಈ ಹಾಡು ಕೇಳಿ ಮೂರು ತೀರ್ಪುಗಾರರು ಮೂಕ ವಿಸ್ಮಿತರಾದರು.

ಜ್ಞಾನೇಶ್ ಬಗ್ಗೆ
ಜ್ಞಾನೇಶ್ ಮೂಲತಃ ಬಳ್ಳಾರಿಯವರು. 10 ವರ್ಷದ ಈ ಹುಡುಗ 'ಗಾನಯೋಗಿ ಪಂಚಾಕ್ಷರಗವಾಯಿ'ಗಳ ಮಠದಲ್ಲಿ ಸಂಗೀತ ಕಲಿತಿದ್ದು, ಈಗ ಮೆಗಾ ಆಡಿಷನ್ ನಲ್ಲಿ ಆಯ್ಕೆ ಆಗಿದ್ದಾರೆ.

ಬಡ ಕುಟುಂಬ
ಜ್ಞಾನೇಶ್ ಅವರದ್ದು ತುಂಬ ಬಡತನದ ಕುಟುಂಬ. ಬಳ್ಳಾರಿ ಜಿಲ್ಲೆಯ ಎಮ್ಮಿನೂರು ಎಂಬ ಸಣ್ಣ ಗ್ರಾಮದಲ್ಲಿ ಜ್ಞಾನೇಶ್ ಹುಟ್ಟಿದ್ದರು. ಜ್ಞಾನೇಶ್ ತಂದೆಗೆ ತನ್ನ ಮಗನನ್ನು ದೊಡ್ಡ ಸಂಗೀತಗಾರನನ್ನಾಗಿ ಮಾಡಬೇಕು ಎಂಬ ಆಸೆ ಇತ್ತು. ಅದೇ ಕಾರಣಕ್ಕೆ ಕಷ್ಟ ಪಟ್ಟು ಆತನಿಗೆ ಸಂಗೀತಾಭ್ಯಾಸ ಮಾಡಿಸಿದ್ದಾರೆ.

ದಿನ 50 ಕಿಲೋ ಮೀಟರ್
ಜ್ಞಾನೇಶ್ ಹುಟ್ಟಿದ ಹಳ್ಳಿಯಲ್ಲಿ ಯಾರು ಸಂಗೀತ ಕಲಿಸುವುದಕ್ಕೆ ಇರಲಿಲ್ಲವಂತೆ. ಅದ್ದರಿಂದ ದಿನ ಶಾಲೆ ಮುಗಿಸಿ 50 ಕಿಲೋ ಮೀಟರ್ ಪ್ರಯಾಣ ಮಾಡಿ ಈ ಹುಡುಗ ಸಂಗೀತ ಕಲಿತಿದ್ದಾನೆ.

ಕಳೆದ ಸೀಸನ್ ನಲ್ಲಿ
ಈ ಹಿಂದಿನ 'ಸರಿಗಪಮ' ಕಾರ್ಯಕ್ರಮದಲ್ಲಿ ಸುನೀಲ್ ಮತ್ತು ಮೆಹಬುಬ್ ಇಬ್ಬರು ಸ್ಪರ್ಧಿಗಳು ಕೂಡ ಗಾನಯೋಗಿ ಪಂಚಾಕ್ಷರಗವಾಯಿಗಳ ಮಠದಿಂದ ಬಂದು ಕಾರ್ಯಕ್ರಮದ ವಿಜೇತರಾಗಿದ್ದರು. ಈಗ ಜ್ಞಾನೇಶ್ ಕೂಡ ಅದೇ ಮಠದಿಂದ ಬಂದಿದ್ದಾರೆ.

ರಾಷ್ಟ್ರ ಪ್ರಶಸ್ತಿ ಬಂದ ಹಾಡು
ವಿಶೇಷ ಅಂದರೆ 'ಗಾನಯೋಗಿ ಪಂಚಾಕ್ಷರಗವಾಯಿ' ಚಿತ್ರದ 'ನೀಡು ಶಿವ ನೀಡದಿರು ಶಿವ..' ಹಾಡನ್ನು ಜ್ಞಾನೇಶ್ ಹಾಡಿದರು. ಇದೇ ಹಾಡಿಗೆ ನಾದಬ್ರಹ್ಮ ಹಂಸಲೇಖ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.

ಎದ್ದು ನಿಂತು ಚಪ್ಪಾಳೆ
ಜ್ಞಾನೇಶ್ ಹಾಡಿರುವ ಈ ಹಾಡು ಕೇಳಿ ಇಡೀ 'ಸರಿಗಮಪ' ಸ್ಟೂಡಿಯೊದಲ್ಲಿ ಇದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದರು. ಹಂಸಲೇಖ ಜ್ಞಾನೇಶ್ ಸಂಗೀತ ಪಾಂಡಿತ್ಯಕ್ಕೆ ಕೈ ಮುಗಿದರು.


Click it and Unblock the Notifications











