ಸಾಕಿದ ಕರು ಮಾರಿ 'ಸರಿಗಮಪ' ವೇದಿಕೆ ಏರಿದ ಮಂಡ್ಯದ ಬಡ ಹುಡುಗ!
Recommended Video

'ಜೀ ಕನ್ನಡ' ವಾಹಿನಿಯಲ್ಲಿ ಮತ್ತೆ 'ಸರಿಗಮಪ' ಕಾರ್ಯಕ್ರಮ ಶುರು ಆಗಿದೆ. 'ಸರಿಗಮಪ ಸೀಸನ್ 14' ಕಾರ್ಯಕ್ರಮ ಕಳೆದ ಶನಿವಾರದಿಂದ ಪ್ರಸಾರ ಆಗುತ್ತಿದೆ..
ಪ್ರತಿ ಬಾರಿಗಿಂತ ಈ ಬಾರಿಯ ಕಾರ್ಯಕ್ರಮದ ಸ್ಪರ್ಧಿಗಳು ತುಂಬ ವಿಶೇಷವಾಗಿ ಇದ್ದಾರೆ. ಸಣ್ಣ ಹಳ್ಳಿಯಿಂದ ಬಡತನದಲ್ಲಿ ಬೆಳೆಯುತ್ತಿರುವ ಕೆಲವು ಮಕ್ಕಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅದರಲ್ಲಿಯೂ ಮಂಡ್ಯದ ಸೃಜನ್ ಪಟೇಲ್ ಎಂಬ ಒಬ್ಬ ಹುಡುಗ ಕಷ್ಟಪಟ್ಟು ಕಾರ್ಯಕ್ರಮದ ವೇದಿಕೆ ಏರಿದ್ದಾನೆ.
ಅಂದಹಾಗೆ, ಸೃಜನ್ ಪಟೇಲ್ ಎಂಬ ಈ ಹುಡುಗನ ಕಥೆ ಕೇಳಿ ಮೂರು ತೀರ್ಪುಗಾರರು ಹಾಗೂ ವೀಕ್ಷಕರ ಮನ ಕರಗಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಇರುವ ಈ ಹುಡುಗ ಅದಕ್ಕಾಗಿ ತನ್ನ ಪ್ರೀತಿಯ ಕರುವನ್ನೇ ಮಾರಿದ್ದಾನೆ. ಮುಂದೆ ಓದಿ...

ಕಣ್ಣೀರಿನ ಕಥೆ
ಸೃಜನ್ ಪಟೇಲ್ ಎಂಬ 13 ವರ್ಷದ ಮಂಡ್ಯದ ಹುಡುಗ ಈಗ 'ಸರಿಗಮಪ ಸೀಸನ್ 14' ಕಾರ್ಯಕ್ರಮದ ಸ್ಪರ್ಧಿ ಆಗಿದ್ದಾನೆ.

ಬಡತನದ ಕುಟುಂಬ
9 ಕ್ಲಾಸ್ ಓದುತ್ತಿರುವ ಸೃಜನ್ ಪಟೇಲ್ ಅವರದ್ದು ಬಡತನದ ಕುಟುಂಬ. ಅವರ ತಂದೆ ರೈತರಾಗಿದ್ದು, ಮೂರು ವರ್ಷದಿಂದ ಬೆಳೆ ಸರಿಯಾಗಿ ಬಂದಿಲ್ಲವಂತೆ. ಇದರಿಂದ ಅವರ ಕುಟುಂಬ ದೊಡ್ಡ ಸಮಸ್ಯೆಯಲ್ಲಿ ಇದೆ.

ಕರು ಮಾರಿ ವೇದಿಕೆ ಏರಿದ
'ಸರಿಗಪಮ 'ಕಾರ್ಯಕ್ರಮಕ್ಕೆ ಬರಲು ಸಹ ಸೃಜನ್ ತಂದೆಯ ಬಳಿ ದುಡ್ಡು ಇರಲಿಲ್ಲ. ಆಗ ಸೃಜನ್ ಸಾಕಿದ ಗೌರಿ ಎಂಬ ಕರು ವನ್ನು ಮಾರಿ ಅದರಿಂದ ಬಂದ ದುಡ್ಡಿನಿಂದ ಬಟ್ಟೆ, ಶೂ ಕೊಂಡು ಬೆಂಗಳೂರಿಗೆ 'ಸರಿಗಪಮ' ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ.

ಸಂಗೀತ ಕಲಿತಿಲ್ಲ
ಸೃಜನ್ ಸಂಗೀತ ಕಲಿತಿಲ್ಲ.. ಆದರೂ ಚೆನ್ನಾಗಿ ಹಾಡುತ್ತಾನೆ. ಈ ಹುಡುಗ 4 ಕ್ಲಾಸ್ ಓದುವಾಗ 'ಪ್ರತಿಭಾ ಕಾರಂಜಿ' ಕಾರ್ಯಕ್ರಮದಲ್ಲಿ ಮೊದಲು ಹಾಡಿದ. ಆ ನಂತರ ಸಂಗೀತದಲ್ಲಿ ಸಾಧನೆ ಮಾಡಬೇಕು ಎಂದು ಸ್ವತಃ ತಾನೇ ಅಜ್ಜಿಯ ಮೊಬೈಲ್ ನಲ್ಲಿ ಹಾಡು ಕೇಳಿ ಸಂಗೀತ ಅಭ್ಯಾಸ ಶುರು ಮಾಡಿದ್ದಾನೆ.

ಹಂಸಲೇಖ ನೆರವು
ಸೃಜನ್ ಕಥೆ ಕೇಳಿದ ಹಂಸಲೇಖ ''ನಾನು ಹಣ ಕೊಡುತ್ತೇನೆ.. ಮರಳಿ ಆ ಕರುವನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ'' ಎಂದರು. ಅಲ್ಲದೆ ಆ ಹುಡುಗನಿಗೆ ತಮ್ಮ ಶಾಲೆಯಲ್ಲಿ ಉಚಿತವಾಗಿ ಸಂಗೀತ ಕಲಿಸುವುದಾಗಿ ಹಂಸಲೇಖ ಹೇಳಿದರು.

ಮೆಗಾ ಆಡಿಷನ್ ನಲ್ಲಿ ಆಯ್ಕೆ
ಸೃಜನ್ ಪಟೇಲ್ ಮೆಗಾ ಆಡಿಷನ್ ನಲ್ಲಿ 'ಚಕ್ರವರ್ತಿ' ಚಿತ್ರದ ಶೀರ್ಷಿಕೆ ಗೀತೆ ಹಾಡಿ ಆಯ್ಕೆ ಆಗಿದ್ದಾನೆ. ಹಾಡುವುದರ ಜೊತೆಗೆ ಪಂಚಿಂಗ್ ಡೈಲಾಗ್ ಹೇಳುವ ಈ ಹುಡುಗ ವೀಕ್ಷಕರಿಗೆ ಒಳ್ಳೆಯ ಮನರಂಜನೆಯನ್ನು ನೀಡುವ ಸೂಚನೆ ನೀಡಿದ್ದಾನೆ.


Click it and Unblock the Notifications











