ಕೆಟ್ಟ ಅನುಭವಗಳನ್ನೇ ಕಂಡಿದ್ದವನ ಬಾಳಲಿ ಅದೃಷ್ಟ ತಂದ 'ಕಾಕರಾಜ'.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಶನಿ' ಧಾರಾವಾಹಿಯ ಅತ್ಯಂತ ಜನಪ್ರಿಯಗಳಿಸಿಕೊಂಡಿದೆ. ಸದ್ಯ ಶನಿ ಧಾರಾವಾಹಿಯಲ್ಲಿ ಬಾಲಕಲಾವಿದರು ಅಧ್ಯಾಯ ಮುಗಿದಿದ್ದು, ಆ ಜಾಗಕ್ಕೆ ಹೊಸ ಹೊಸ ಕಲಾವಿದರು ಆಗಮಿಸಿದ್ದಾರೆ.

ಶನಿ, ಕಾಕರಾಜ, ಯಮ, ಯಮಿ, ಹನುಮ, ಹೀಗೆ ಚಿಕ್ಕ ವಯಸ್ಸಿನ ಎಲ್ಲರೂ ಈಗ ಯೌವನಕ್ಕೆ ಕಾಲಿಟ್ಟಿದ್ದು, ಅದರಂತೆ ಕಲಾವಿದರು ಬದಲಾಗಿದ್ದಾರೆ. ಇದರಲ್ಲಿ ಕಾಕರಾಜ ಕೂಡ ಒಬ್ಬರ.

ಶನಿಯ ವಾಹನ 'ಕಾಕರಾಜ' ಪಾತ್ರ ಶನಿಯಷ್ಟೇ ಮಹತ್ವದ್ದು. ಈ ಹಿಂದೆ ನಟಿಸುತ್ತಿದ್ದ ಬಾಲಕ ಅದಕ್ಕೆ ಸೂಕ್ತವಾಗಿ ಜೀವ ತುಂಬಿದ್ದ. ಈಗ ಹೊಸ ಕಲಾವಿದನ ಆಗಮನವಾಗಿದ್ದು, ಹಳೆಯ ಕಾಕರಾಜನಂತೆ ಈ ನಟ ಕೂಡ ಜನರ ಮನಸ್ಸು ಗೆದ್ದಿದ್ದಾನೆ. ಅಂದ್ಹಾಗೆ, ಈ ಹೊಸ ಕಾಕರಾಜನ ಬಳಲ್ಲಿ, ಇಲ್ಲಿಯವರೆಗೂ ಕೆಟ್ಟ ಅನುಭವಗಳೇ ಹೆಚ್ಚು. ಆದ್ರೆ, ಶನಿಯಿಂದ ತನ್ನ ಅದೃಷ್ಟ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ, ಈ ಕಾಕರಾಜನ ಪಾತ್ರ ಮಾಡ್ತಿರುವುದು ಯಾರು.? ಈತನ ಹಿನ್ನೆಲೆ ಏನು.?

'ಕಾಕರಾಜ'ನಾದ ಹರೀಶ್

'ಕಾಕರಾಜ'ನಾದ ಹರೀಶ್

ಮೂಲತಃ ಶಿವಮೊಗ್ಗದವರಾದ ಹರೀಶ್ ಎಂಬುವರು ಈಗ ಕಾಕರಾಜನ ಪಾತ್ರ ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಕಲಾವಿದನಾಗಿರುವ ಹರೀಶ್ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಧಾರವಾಹಿಯಲ್ಲಿ ಕೂಡ ನಟಿಸಿದ್ದಾರೆ.

ಟೆಕ್ನಿಕಲಿ ಕೆಲಸ ಮಾಡಿದ್ದರು

ಟೆಕ್ನಿಕಲಿ ಕೆಲಸ ಮಾಡಿದ್ದರು

ಜೂನಿಯರ್ ಆರ್ಟಿಸ್ಟ್ ಆಗಿ ವೃತ್ತಿ ಆರಂಭಿಸಿದ ಹರೀಶ್ ತದನಂತರ ರಂಗಭೂಮಿಯಲ್ಲಿ ತರಬೇತಿ ಪಡೆದು ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೀವನಕ್ಕಾಗಿ ಜೊತೆಯಲ್ಲೇ ಎಡಿಟಿಂಗ್ ಕೂಡ ಮಾಡ್ತಾರೆ. ಸ್ವತಃ ಹರೀಶ್ ಅವರೇ ಹೇಳುವಂತೆ ಸಿನಿಮಾ ಜಗತ್ತಿನಲ್ಲಿ ಬಹಳಷ್ಟು ಕೆಟ್ಟ ಅನುಭವ ಪಡೆದು, ಈಗೊಂದು ಒಳ್ಳೆಯವ ಅವಕಾಶ ಪಡೆದುಕೊಂಡಿದ್ದಾರೆ.

'ಶನಿ'ಯ ಅವಕಾಶ ಸಿಕ್ಕಿದ್ದು ಹೇಗೆ.?

'ಶನಿ'ಯ ಅವಕಾಶ ಸಿಕ್ಕಿದ್ದು ಹೇಗೆ.?

''ನನಗೆ ಒಂದು ದಿನ ಕಲರ್ಸ್ ಚಾನೆಲ್ ನಿಂದ ಕರೆ ಬಂತು. "ಶನಿ" ಧಾರಾವಾಹಿಗೆ ಆಡಿಶನ್ ಅಂತಾ ನನಗೆ ಎಲ್ಲಿಲ್ಲದ ಖುಷಿ. ಯಾಕಂದ್ರೆ ನಾನು ಶನಿ ಧಾರಾವಾಹಿಯ ಅಭಿಮಾನಿ‌. ನಮ್ಮ ಊರಿನ ಕಡೆ ಈಗಲೂ ಸಹ ಶನಿಯ ಧಾರಾವಾಹಿ ಬರುವ ಮುಂಚೆ ಸ್ನಾನ ಮಾಡಿ ನೋಡುವ ಅಭಿಮಾನಿ ವರ್ಗ ಅಷ್ಟೋಂದು ಪ್ರಸಿದ್ಧಿ. ನಾನು ಎಷ್ಟೋ ಆಡಿಶನ್ ಕೊಟ್ಟಿದ್ದೀನಿ. ಎಲ್ಲಾ ಸೂಪರ್ ಅನ್ನೋರು ಆದ್ರೆ ಮತ್ತೆ ಕಾಲ್‌ ಮಾಡ್ತಾ ಇರ್ಲಿಲ್ಲ''

ಕಲಾವಿದನಿಗೆ ತಾಳ್ಮೆ ಇರಬೇಕು

ಕಲಾವಿದನಿಗೆ ತಾಳ್ಮೆ ಇರಬೇಕು

''ಕಲರ್ಸ್ ಚಾನೆಲ್‌ ಫಸ್ಟ್ ಟೈಮ್ ಹೋದಾಗ ಭಯ ಇತ್ತು. ಆಡಿಶನ್ ಕೊಟ್ಟೆ. ಚೆನ್ನಾಗಿ ಆಯ್ತು ಅಂದ್ರು ಸರಿ ಅಂತಾ ಬಂದೆ. ಆದ್ರೆ ನೆಕ್ಟ್ ಡೇ ನಾನು ಸೆಲೆಕ್ಟ್ ಅಂತಾ ಗೊತ್ತಾದಾಗ ನನಗೆ ಆದ ಖುಷಿ ಹೇಳ್ಲಿಕೆ ಅಸಾಧ್ಯ. ನಾನೇನು ತುಂಬಾ ದೊಡ್ಡ ಸಾಧನೆ ಮಾಡಿದ್ದೀನಿ ಅಂತಾ ಹೇಳ್ತಾ ಇಲ್ಲಾ. ಆದ್ರೆ, ಕಲಾವಿದನಿಗೆ ತಾಳ್ಮೆ ಇರ್ಬೇಕು. ಒಂದೇ ಸಾರಿ ಫೇಮಸ್ ಆಗೋಕೆ ಆಗಲ್ಲಾ ಇಲ್ಲಿ. ಸೋ ಕಲಾವಿದನಿಗೆ ತಾಳ್ಮೆ ಜೊತೆ ಅವನ ಪರಿಶ್ರಮ ಇದ್ದೆರೆ ಅವನು ಕಂಡ ಕನಸು ಅವನ್ನನ್ನು ಕೈ ಬಿಡುವುದಿಲ್ಲಾ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಹರೀಶ್.

ಶ್ರೀವಿಷ್ಣುದಶಾವತಾರದಲ್ಲೂ ನಟನೆ

ಶ್ರೀವಿಷ್ಣುದಶಾವತಾರದಲ್ಲೂ ನಟನೆ

ಸದ್ಯ, ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಶ್ರೀವಿಷ್ಣುದಶಾವತಾರ' ಧಾರಾವಾಹಿಯಲ್ಲಿ ಬ್ರಾಹ್ಮಣನ ಪಾತ್ರದಲ್ಲಿ ಹರೀಶ್ ಅಭಿನಯಿಸಿದ್ದರು. ಇದೀಗ, ಶನಿ ಸೀರಿಯಲ್ ನಲ್ಲೂ ಕಾಣಿಸಿಕೊಂಡಿದ್ದಾರೆ.

More from Filmibeat

English summary
Who plays Kakaraja character in kannada serial shani. All about kakaraja character harish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X