For Quick Alerts
  ALLOW NOTIFICATIONS  
  For Daily Alerts

  ಯಾರೀ 'ಶನಿ' ಪಾತ್ರಧಾರಿ.? ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ

  By Pavithra
  |

  ಕೆಲ ಜನರು ಸೀರಿಯಲ್ ಅಂದ್ರೆ ಉರಿದು ಬೀಳ್ತಾರೆ. ಇನ್ನು ಕೆಲವರು ಸೀರಿಯಲ್ ಅಂದ್ರೆ ಕಣ್ಣು ಮುಚ್ಚದೇ ನೋಡ್ತಾರೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶನಿ' ಧಾರಾವಾಹಿಯ ಬಗ್ಗೆ ಎಲ್ಲರಲ್ಲೂ ಒಂದೇ ಅಭಿಪ್ರಾಯವಿದೆ.

  ಕಾರ್ತೀಕ ಅಮಾವಾಸ್ಯೆ ಶನೈಶ್ಚರ ಪೂಜೆ ವಿಪರೀತ ವಿಶೇಷ, ಸಿಕ್ಕಾಪಟ್ಟೆ ಫಲ

  'ಶನಿ' ಸೀರಿಯಲ್ ಚೆನ್ನಾಗಿ ಮೂಡಿ ಬರ್ತಿದೆ. ಸೀರಿಯಲ್ ನಲ್ಲಿ ಮೇನ್ ಅಟ್ರಾಕ್ಷನ್ ಅಂದ್ರೆ ಶನಿ ಪಾತ್ರಧಾರಿ. ಯಾರೀ ಹುಡುಗ.? ಕನ್ನಡದವನಾ? ಅಥವಾ ಬೇರೆ ಭಾಷೆಯಿಂದ ಕರೆತಂದ್ರಾ? ಎಲ್ಲೂ ಮಾಹಿತಿ ಸಿಕ್ತಿಲ್ವಲ್ಲಾ ಅಂತ ಅದೆಷ್ಟೋ ಜನರು ತಲೆ ಕೆಡಿಸಿಕೊಂಡು ಫೇಸ್ ಬುಕ್ ನಲ್ಲಿ ಕಲರ್ಸ್ ಕನ್ನಡ ಪೇಜ್ ಗೆ ಮೆಸೇಜ್ ಹಾಕ್ತಿದ್ದಾರೆ.

  ಶನಿಯಿಂದ ಆಗುವ ತೊಂದರೆಗೆ ಮಾಡಿಸಬೇಕಾದ ಶಾಂತಿ, ಪರಿಹಾರ ಮಾರ್ಗ

  ಆದ್ರೆ 'ಶನಿ' ಪಾತ್ರಧಾರಿ ಬಗೆಗಿನ ಕಂಪ್ಲೀಟ್ ಮಾಹಿತಿ ನಿಮಗಾಗಿ ಫಿಲ್ಮಿಬೀಟ್ ಕನ್ನಡದಲ್ಲಿ 'ಎಕ್ಸ್ ಕ್ಲೂಸಿವ್' ಆಗಿ ಕೊಡ್ತಿದ್ದೇವೆ. ಓದಿರಿ....

  'ಶನಿ' ಪಾತ್ರಧಾರಿಯ ಅಭಿನಯಕ್ಕೆ ಶ್ಲಾಘನೆ

  'ಶನಿ' ಪಾತ್ರಧಾರಿಯ ಅಭಿನಯಕ್ಕೆ ಶ್ಲಾಘನೆ

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಶನಿ' ಸೀರಿಯಲ್ ನ ಶನಿ ಪಾತ್ರಧಾರಿಯ ಹೆಸರು 'ಸುನೀಲ್ ಕುಮಾರ್'. ಸುನೀಲ್, ಚಾಮರಾಜನಗರದ ಮೂಲದವರು. ಚಿಕ್ಕಂದಿನಿಂದಲೇ ಅಭಿನಯದ ಬಗ್ಗೆ ಆಸಕ್ತಿ ಹೊಂದಿದ್ದ 'ಸುನೀಲ್ ಕುಮಾರ್' ರನ್ನ ಕಲರ್ಸ್ ಕನ್ನಡದ ತಂಡದವರು ಕರೆತಂದಿದ್ದಾರೆ.

  ಶಿವಕುಮಾರ್ ರನ್ನು ಖೆಡ್ಡಾಕ್ಕೆ ಕೆಡವಿದ್ದು ಶನಿ, ಪರಿಹಾರವೂ ಅವನೇ...

  ಪಾತ್ರಧಾರಿಯ ಆಯ್ಕೆ ಹೇಗಾಯ್ತು?

  ಪಾತ್ರಧಾರಿಯ ಆಯ್ಕೆ ಹೇಗಾಯ್ತು?

  ಸಾಮಾನ್ಯವಾಗಿ ಕಲರ್ಸ್ ಕನ್ನಡ ತಂಡ ಸೀರಿಯಲ್ ಗಾಗಿ ಆಡಿಷನ್ ಕರೆಯುತ್ತೆ. ಆಡಿಷನ್ಸ್ ಮಾಡಿದ ನಂತ್ರ ಅಭಿನಯದಲ್ಲಿ ಹಾಗೂ ಅಪಿರಿಯನ್ಸ್ ಹೇಗಿರುತ್ತೆ ಅನ್ನೋದನ್ನ ಚೆಕ್ ಮಾಡ್ತಾರೆ. ಈ ಎರಡರಲ್ಲೂ ಓಕೆ ಆದ್ರೆ ಪಾತ್ರಕ್ಕೆ ಫಿಕ್ಸ್ ಮಾಡಲಾಗುತ್ತೆ. ಆದ್ರೆ 'ಶನಿ' ಪಾತ್ರಕ್ಕೆ ಕೆಲ ಕಡೆಗೆ ಶನಿತಂಡ ಭೇಟಿ ಕೊಟ್ಟು ವಿತ್ ಕಾಸ್ಟ್ಯೂಮ್ಸ್ ನಲ್ಲಿ ಆಡಿಷನ್ ಮಾಡಲಾಗಿದೆ. ಜೊತೆಗೆ ಮೇಕಪ್ ಹಾಕಿ ನೋಡಿ ಸುನೀಲ್ ರನ್ನ 'ಶನಿ' ಪಾತ್ರಧಾರಿಯಾಗಿ ಫಿಕ್ಸ್ ಮಾಡಿದ್ದಾರೆ.

  ವೃಶ್ಚಿಕ ಪ್ರವೇಶಿಸಿರುವ ಶನಿ ಹನ್ನೆರಡು ರಾಶಿಯಲ್ಲಿ ಏನೇನು ಬದಲಾವಣೆ ತರಲಿದ್ದಾನೆ

  ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆ ಸುನೀಲ್

  ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆ ಸುನೀಲ್

  ಸುನೀಲ್ ಚಿಕ್ಕವಯಸ್ಸಿನಲ್ಲೇ ಅದ್ಭುತ ಪ್ರತಿಭೆ ಅಂತ ನಿರೂಪಿಸಿರುವ ಕಲಾವಿದ. ಈಗಷ್ಟೇ 'ಎಸ್ ಎಸ್ ಎಲ್ ಸಿ' ಮುಗಿಸಿರುವ ಸುನೀಲ್ ಈಗ 'ಪಿ ಯು ಸಿ' ಓದುತ್ತಿದ್ದಾನೆ. ಶನಿ ಧಾರಾವಾಹಿಯಲ್ಲಿ ಅಭಿನಯಿಸೋದಕ್ಕೆ ಪ್ರಾರಂಭ ಮಾಡಿದ ನಂತರದಿಂದ ಕರೆಸ್ಪಾಂಡೆಸ್ ನಲ್ಲಿ ವಿದ್ಯಾಭ್ಯಾಸವನ್ನ ಮುಂದುವರೆಸುತ್ತಿದ್ದಾರೆ.

  ಶನೈಶ್ಚರನ ಅನುಗ್ರಹಕ್ಕೆ 10 ಸರಳ ಮಾರ್ಗಗಳು...

  ಪ್ರಧಾನ ನಿರ್ದೇಶಕರಾಗಿ ರಾಘವೇಂದ್ರ ಹೆಗ್ಡೆ

  ಪ್ರಧಾನ ನಿರ್ದೇಶಕರಾಗಿ ರಾಘವೇಂದ್ರ ಹೆಗ್ಡೆ

  ಕನ್ನಡ ಸಿನಿಮಾರಂಗಕ್ಕೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಕೊಟ್ಟ ನಿರ್ದೇಶಕ, ನಿರ್ಮಾಪಕ 'ರಾಘವೇಂದ್ರ ಹೆಗ್ಡೆ' ಕೂಡ 'ಶನಿ' ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ದಾರೆ. 'ರಾಘವೇಂದ್ರ' ಅವರು ಪ್ರಧಾನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ಕಾರಣದಿಂದ ಧಾರಾವಾಹಿ ಉತ್ತಮ ಗುಣಮಟ್ಟದಲ್ಲಿ ಪ್ರಸಾರವಾಗ್ತಿದೆ.

  ನಿರ್ದೇಶಕರ ಹೊಣೆ ಹೊತ್ತಿರೋದು ಯಾರು ?

  ನಿರ್ದೇಶಕರ ಹೊಣೆ ಹೊತ್ತಿರೋದು ಯಾರು ?

  'ಶನಿ' ಧಾರಾವಾಹಿ ಇಷ್ಟರ ಮಟ್ಟಿಗೆ ಚೆನ್ನಾಗಿ ಮೂಡಿ ಬರ್ತಿದೆ ಅಂದ್ರೆ ಅದಕ್ಕೆ ನಿರ್ದೇಶಕರು ಕೂಡ ಕಾರಣ. 'ಶನಿ' ಧಾರಾವಾಹಿಯನ್ನ ನಿರ್ದೇಶನ ಮಾಡುತ್ತಿರೋದು ಹೆಸರಾಂತ ನಿರ್ದೇಶಕರಾದ 'ಬುಕ್ಕಪಟ್ಟಣ ವಾಸು'. ಸಾಕಷ್ಟು ವರ್ಷಗಳಿಂದ ಮೆಗಾ ಧಾರಾವಾಹಿಗಳನ್ನ ನಿರ್ದೇಶನ ಮಾಡುತ್ತಾ ಪ್ರೇಕ್ಷಕರನ್ನ ರಂಜಿಸುವ ಕೆಲಸ ಮಾಡಿರೋ ವಾಸು ಇಂದಿಗೂ ಅದೇ ಕಾರ್ಯವನ್ನ ಮುಂದುವರೆಸುತ್ತಿದ್ದಾರೆ.

  ಧಾರಾವಾಹಿ ಸೆಟ್ ನೋಡಲು ಅವಕಾಶವಿದೆಯೇ ?

  ಧಾರಾವಾಹಿ ಸೆಟ್ ನೋಡಲು ಅವಕಾಶವಿದೆಯೇ ?

  'ಶನಿ' ಧಾರಾವಾಹಿ ಸೆಟ್ ನೋಡಿದ್ರೆ ಒಮ್ಮೆ ಸೆಟ್ ನೋಡಲು ಅವಕಾಶ ಸಿಕ್ಕರೆ ತುಂಬಾ ಚೆನ್ನಾಗಿರುತ್ತೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ. ಆದ್ರೆ ಅದು ತುಂಬಾ ಕಷ್ಟ , 'ಶನಿ' ಧಾರಾವಾಹಿಯ ಚಿತ್ರೀಕರಣ ಗುಜರಾತ್‌ ನ ಉಮರ್ ಗ್ರಾಮ್ ನಲ್ಲಿ ನಡೆಯುತ್ತಿದೆ. ಹಿಂದಿ ಹಾಗೂ ಕನ್ನಡ 'ಶನಿ' ಎರಡೂ ಧಾರಾವಾಹಿ ಒಂದೇ ಸೆಟ್ ನಲ್ಲಿ ನಡೆಯುತ್ತಿದೆ.

  ಅತೀ ಹೆಚ್ಚು ತಂತ್ರಜ್ಞಾನರಿಂದ ಕೆಲಸ

  ಅತೀ ಹೆಚ್ಚು ತಂತ್ರಜ್ಞಾನರಿಂದ ಕೆಲಸ

  ಶನಿ ಸೆಟ್ ನಲ್ಲಿ 100 ರಿಂದ 150 ಜನರು ಕೆಲಸ ಮಾಡ್ತಾರೆ. ಅತಿಹೆಚ್ಚು ಕಲಾವಿದರು ಕೂಡ ಧಾರವಾಹಿಯಲ್ಲಿ ಭಾಗಿಯಾಗಿದ್ದು ಪ್ರತಿ ನಿತ್ಯ ಶನಿ ಧಾರಾವಾಹಿಯ ಚಿತ್ರೀಕರಣ ನಡೆಯುತ್ತದೆ.

  English summary
  Exclusive information about the main character of the Shani serial, Sunil Kumar. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶನಿ ಧಾರಾವಾಹಿಯ ಮುಖ್ಯಪಾತ್ರಧಾರಿಯ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X