ಯಾರು ಈ 'ವೈಲ್ಡ್ ಕಾರ್ಡ್' ಸ್ಪರ್ಧಿ ಜೀವಿತಾ, ಎಲ್ಲಿದ್ರು ಇಷ್ಟು ದಿನ?

Recommended Video

Bigg Boss Kannada Season 6:ಯಾರು ಈ 'ವೈಲ್ಡ್ ಕಾರ್ಡ್' ಸ್ಪರ್ಧಿ ಜೀವಿತಾ, ಎಲ್ಲಿದ್ರು ಇಷ್ಟು ದಿನ?

ಈ ವಾರ ಬಿಗ್ ಬಾಸ್ ಮನೆಗೆ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ಕಿರುತೆರೆ ನಟಿ ಮೇಘಶ್ರೀ, ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಮತ್ತು ಜೀವಿತಾ.

ಮೇಘಶ್ರೀ ಬಗ್ಗೆ ಗೊತ್ತಿದೆ. ಕೆಲವು ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸಿದ್ದಾರೆ. ನಿವೇದಿತಾ ಗೌಡ ಬಿಗ್ ಬಾಸ್ ನಿಂದಲೇ ಫೇಮಸ್. ಈ ಮೂರನೇ ಸ್ಪರ್ಧಿ ಜೀವಿತಾ ಯಾರು?

ಇದುವರೆಗೂ ಎಲ್ಲಿ ನೋಡಿರುವ ನೆನಪು ಆಗ್ತಿಲ್ಲ ಅಲ್ವಾ ಎಂದು ಬಹುತೇಕರು ಯೋಚನೆ ಮಾಡಿರ್ತೀರಾ. ಆ ಯೋಚನೆ ಬಿಡಿ. ಜೀವಿತಾ ಯಾರು, ಎಲ್ಲಿಯವರು, ಅವರ ವೃತ್ತಿ ಏನು, ಇಷ್ಟು ದಿನ ಎಲ್ಲಿದ್ರು ಎಂಬ ಎಲ್ಲಾ ಮಾಹಿತಿಯನ್ನ ನಾವ್ ಕೊಡ್ತೀವಿ. ಮುಂದೆ ಓದಿ....

ಮೂಲತಃ ಬೆಂಗಳೂರು

ಮೂಲತಃ ಬೆಂಗಳೂರು

ಜೀವಿತಾ ಮೂಲತಃ ಬೆಂಗಳೂರಿನವರು. ಬೆಂಗಳೂರಿನಲ್ಲಿ ಹುಟ್ಟಿದ್ದು, ತಮ್ಮ ಶಿಕ್ಷಣವನ್ನ ಇಲ್ಲೇ ಮುಗಿಸಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯು ಮತ್ತು ಪದವಿ ವ್ಯಾಸಂಗ ಮಾಡಿದ್ದಾರೆ. ಕಿರುತೆರೆ ನಟಿ ರೇಣುಕ ಸ್ನೇಹ ಅವರ ಸಂಬಂಧಿ.

ಡ್ಯಾನ್ಸರ್ ಕಮ್ ಮಾಡೆಲ್

ಡ್ಯಾನ್ಸರ್ ಕಮ್ ಮಾಡೆಲ್

ಚಿಕ್ಕವಯಸ್ಸಿನಿಂದಲೂ ಜೀವಿತಾ ಅವರಿಗೆ ಡ್ಯಾನ್ಸ್ ಅಂದ್ರೆ ಅಚ್ಚುಮೆಚ್ಚು. ಹಲವು ವೇದಿಕೆಗಳಲ್ಲಿ ಡ್ಯಾನ್ಸ್ ಮಾಡೋದಕ್ಕೆ ಶುರು ಮಾಡಿ, ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳುವತ್ತಾ ಸಾಗಿದ್ದರು. ಈ ಮಧ್ಯೆ ಜೀವಿತಾ ಅವರನ್ನ ಮಾಡೆಲಿಂಗ್ ಕ್ಷೇತ್ರ ಕೈಬೀಸಿ ಕರೆಯಿತು. ಅಲ್ಲಿಂದ ಡ್ಯಾನ್ಸರ್ ಹಾಗೂ ಮಾಡೆಲ್ ಆದರು.

ಮಾಡೆಲ್ ಟು ಆಕ್ಟಿಂಗ್

ಮಾಡೆಲ್ ಟು ಆಕ್ಟಿಂಗ್

ಮಾಡೆಲಿಂಗ್ ನಲ್ಲಿ ಸಕ್ರೀಯರಾಗಿದ್ದ ಜೀವಿತಾ ಅವರನ್ನ ನೋಡಿದ ಒಬ್ಬರು, ನೀನು ಆಕ್ಟಿಂಗ್ ಮಾಡಬಹುದು ಎಂದು ಹೇಳಿದ್ರು. ಅವರ ಮೂಲಕವೇ ಒಬ್ಬ ನಿರ್ದೇಶಕರು ನನಗೆ ಆಡಿಷನ್ ಮಾಡಿದ್ರು. ಅದಾದ ಬಳಿಕ, ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ.

'ಜಾನಕಿ ರಾಘವ' ಸೀರಿಯಲ್

'ಜಾನಕಿ ರಾಘವ' ಸೀರಿಯಲ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ 'ಜಾನಕಿ ರಾಘವ' ಧಾರಾವಾಹಿಯಲ್ಲಿ ಜೀವಿತಾ ಪ್ರಮುಖ ನಟಿಯಾಗಿ ಅಭಿನಯಿಸುತ್ತಿದ್ದರು. ಈ ಸೀರಿಯಲ್ ಮೂಲಕ ಜೀವಿತಾ ಟಿವಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.

ಈಗ ಬಿಗ್ ಬಾಸ್

ಈಗ ಬಿಗ್ ಬಾಸ್

ಹೀಗೆ, ಡ್ಯಾನ್ಸ್, ಮಾಡೆಲಿಂಗ್, ನಟನೆಯಲ್ಲಿ ತೊಡಗಿಕೊಂಡಿರುವ ಜೀವಿತಾ ಈಗ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದಾರೆ. ''ನನ್ನ ಪ್ರತಿಭೆ ತೋರಿಸುವುದಕ್ಕೆ, ನನ್ನನ್ನು ವೈಯಕ್ತಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಬಿಗ್ ಬಾಸ್ ಒಳ್ಳೆಯ ವೇದಿಕೆ. ನಾನು ತುಂಬಾ ಭಾವಾನಾತ್ಮಕ ಜೀವಿಯಲ್ಲ. ಗೆಲ್ಲಬೇಕೆಂದುಕೊಂಡೇ ಬಂದಿದ್ದೀನಿ. ನನ್ನ ಆಟ ನಾನು ಆಡುತ್ತೇನೆ'' ಎಂದು ಕಾನ್ಫಿಡೆನ್ಸ್ ಆಗಿದ್ದಾರೆ.

More from Filmibeat

English summary
Who is Bigg boss kannada season 6 wild card contestant Jeevitha? check it in the story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X