»   » 'ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?

'ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?

Posted By:
Subscribe to Filmibeat Kannada

'ನಾಗವಲ್ಲಿ', 'ಸಂಪತ್ತಿಗೆ ಸವಾಲ್' ಚಿತ್ರದ ಮಂಜುಳಾ, 'ಶರಪಂಜರ' ಸಿನಿಮಾದ ಕಲ್ಪನಾ ಸೇರಿದಂತೆ ಹಲವಾರು ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿರುವ ಚಿತ್ರಾಲಿ 'ಡ್ರಾಮಾ ಜ್ಯೂನಿಯರ್ಸ್' ತೀರ್ಪುಗಾರರ ಅಚ್ಚುಮೆಚ್ಚಿನ ಸ್ಪರ್ಧಿ.

'ಚಿತ್ರಾಲಿ ಅಭಿಮಾನಿಗಳ ಸಂಘದ ಅಧ್ಯಕ್ಷ' ಅಂತ ಸ್ವತಃ ಟಿ.ಎನ್.ಸೀತಾರಾಮ್ ರವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಚಿತ್ರಾಲಿಯಲ್ಲಿ ಅಡಗಿರುವ ಅಗಾಧ ಪ್ರತಿಭೆಗೆ ಹಿಡಿದಿರುವ ಕೈಗನ್ನಡಿ.

'ಐ ಬುಸ್ ಯು' ಎನ್ನುತ್ತಾ ಕೋಟ್ಯಾಂತರ ವೀಕ್ಷಕರ ಮನಗೆದ್ದಿರುವ ಮುದ್ದು ಪುಟಾಣಿ ಚಿತ್ರಾಲಿ ತೇಜ್ ಪಾಲ್ ಈಗ 'ಡ್ರಾಮಾ ಜ್ಯೂನಿಯರ್ಸ್' ಫೈನಲ್ ತಲುಪಿದ್ದಾಳೆ. ಕರಾವಳಿ ಪ್ರತಿಭೆ ಚಿತ್ರಾಲಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಇದ್ರೆ, ಈ ವರದಿಯನ್ನ ಪೂರ್ತಿ ಓದಿರಿ....

ಚಿತ್ರಾಲಿ ತೇಜ್ ಪಾಲ್ ಬಗ್ಗೆ....

ಮಂಗಳೂರಿನ ಬೋಳಾರ್ ತೇಜ್ ಪಾಲ್ ಸುವರ್ಣ ಮತ್ತು ವೈಶಾಲಿ ತೇಜ್ ಪಾಲ್ ಸುವರ್ಣ ದಂಪತಿಯ ಪುತ್ರಿ ಚಿತ್ರಾಲಿ ತೇಜ್ ಪಾಲ್.

ಆರು ವರ್ಷದ ಪುಟಾಣಿ

ಸೆಪ್ಟೆಂಬರ್ 25 ರಂದು ಆರನೇ ವಸಂತಕ್ಕೆ ಕಾಲಿಡಲಿರುವ ಚಿತ್ರಾಲಿ, ಮಂಗಳೂರಿನ ಪ್ರಿಯದರ್ಶಿನಿ ಮಾಂಟೆಸರಿ ಸ್ಕೂಲ್ ನಲ್ಲಿ ಯು.ಕೆ.ಜಿ ಓದುತ್ತಿದ್ದಾಳೆ.

ಚಿತ್ರಾಲಿ ಸ್ಟೇಜ್ ಹತ್ತಿರುವುದು ಇದೇ ಮೊದಲು!

ಎಂತಹ ಪಾತ್ರ ಕೊಟ್ಟರೂ ಅಮೋಘ ಅಭಿನಯ ನೀಡುವ ಚಿತ್ರಾಲಿಗೆ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮವೇ ಮೊದಲ ವೇದಿಕೆ ಅಂದ್ರೆ ನೀವು ನಂಬಲೇಬೇಕು. ['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

ಕೃಷ್ಣನ ವೇಷ ಹಾಕಿ ಫೋಟೋ ತೆಗೆಯುವ ಆಸೆ ಚಿತ್ರಾಲಿ ತಾಯಿಗೆ

''ಕೃಷ್ಣ ವೇಷ ಹಾಕಿ ಇವಳದ್ದೊಂದು ಫೋಟೋ ತೆಗೆಯುವುದು ನಮಗೆ ಖುಷಿ. ಒಂದು ವರ್ಷದಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಭಾರತೀಯ ವಿದ್ಯಾ ಭವನದಲ್ಲಿ ಒಮ್ಮೆ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಇತ್ತು. ಅಲ್ಲಿ ಅವಳ ಭರತನಾಟ್ಯ ಟೀಚರ್ 'ಮೂರು ಕಾಲಿನ ಮನುಷ್ಯ' ಡ್ರೆಸ್ ಹಾಕಿಸಿದರು. ಅದರಲ್ಲಿ ಅವಳಿಗೆ ಡಿಸ್ಟ್ರಿಕ್ಟ್ ಲೆವೆಲ್ ನಲ್ಲಿ ಸೆಕೆಂಡ್ ಪ್ಲೇಸ್ ಸಿಕ್ತು. ಅಷ್ಟು ಬಿಟ್ಟರೆ ಚಿತ್ರಾಲಿ ವೇದಿಕೆ ಮೇಲೆ ಹೋಗಿ ಎಲ್ಲೂ ಪರ್ಫಾಮ್ ಮಾಡಿಲ್ಲ'' ಎನ್ನುತ್ತಾರೆ ಚಿತ್ರಾಲಿ ತಾಯಿ ವೈಶಾಲಿ ತೇಜ್ ಪಾಲ್.

ಯಶ್ ಅಂದ್ರೆ ಪ್ರಾಣ

''ಚಿತ್ರಾಲಿಗೆ ಯಶ್ ಅಂದ್ರೆ ಪ್ರಾಣ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ಹತ್ತು ಬಾರಿ ನೋಡಿದ್ದಾಳೆ. ಅದನ್ನ ನೋಡಿದ ಮೇಲೆಯೇ ಯಶ್ ಡೈಲಾಗ್ ಹೇಳಲು ಶುರು ಮಾಡಿದಳು''- ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ [ಕನ್ನಡ ಕಿರುತೆರೆ ಇತಿಹಾಸದಲ್ಲಿ ಜೀ ಕನ್ನಡ ಹೊಸ ಮೈಲಿಗಲ್ಲು.!]

ಧೈರ್ಯ ಇರಲಿಲ್ಲ!

''ಮನೆಯಲ್ಲಿ ಚಿತ್ರಾಲಿ ಏನ್ ಬೇಕಾದರೂ ಮಾಡ್ತಾಳೆ. ಆದರೆ ಈಗ ಮಾಡಿದ್ದು ನೆಕ್ಸ್ಟ್ ಟೈಮ್ ಕೂಡ ಹಾಗೇ ಮಾಡ್ತಾಳೆ ಎಂಬ ಧೈರ್ಯ ಇಲ್ಲ'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ [ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

'ಬಾರ್ಬಿ ಡಾಲ್' ಆಸೆಗೆ ಆಡಿಷನ್

''ಟಿವಿಯಲ್ಲಿ ಆಡ್ ಬರ್ತಿತ್ತು. ಟ್ರೈ ಮಾಡೋಣ ಅಂದುಕೊಂಡ್ವಿ. ಮಂಗಳೂರಿನಲ್ಲಿ ಆಡಿಷನ್ ನಡೆಯುತ್ತಿತ್ತು. ಅದಕ್ಕೆ ಹೋಗುವ ಮುನ್ನ ಅಳ್ತಿದ್ಳು. 'ಬಾರ್ಬಿ ಡಾಲ್' ಕೊಡಿಸ್ತೀನಿ ಹೋಗು ಅಂದ್ಮೇಲೆ ಹೋದ್ಲು. ಅವಳಿಗೆ ಬಾರ್ಬಿ ಡಾಲ್ ಅಂದ್ರೆ ತುಂಬಾ ಇಷ್ಟ. ಅದೇ ಆಸೆಯಲ್ಲಿ ಆಡಿಷನ್ ಗೆ ಹೋಗಿ 'ರಾಮಾಚಾರಿ' ಯಶ್ ಡೈಲಾಗ್ ಹೇಳಿದ್ದಾಳೆ'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ

ಕಲ್ಪನಾ ಆಕ್ಟಿಂಗ್ ಕೂಡ ಕಲಿತಳು

''ನಂತರ ಸೆಲೆಕ್ಟ್ ಆಗಿದ್ದಾಳೆ ಅಂತ ಮನೆಗೆ ಕಾಲ್ ಬಂತು. ನಂತರ ಕಲ್ಪನಾ ಆಕ್ಟಿಂಗ್ ಟ್ರೈ ಮಾಡ್ಸೋಣ ಅಂದ್ಕೊಂಡ್ವಿ. 'ಶರಪಂಜರ' ಸಿಡಿ ತಗೊಂಡ್ ಬಂದು ತೋರಿಸಿದ್ವಿ. ಕಲ್ಪನಾ ಆಕ್ಟಿಂಗ್ ಕಲಿತುಬಿಟ್ಲು. ಮೆಗಾ ಆಡಿಷನ್ ನಲ್ಲಿ ರಾಮಾಚಾರಿ ಮತ್ತು ಕಲ್ಪನಾ ಆಕ್ಟಿಂಗ್ ಮಾಡಿದಳು. ಸೆಲೆಕ್ಟ್ ಆದಳು'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ

ಚಿತ್ರಾಲಿಗೆ ಥ್ಯಾಂಕ್ಸ್

''ನಮಗೆ ನಿಜವಾಗ್ಲೂ ನಂಬೋದಕ್ಕೆ ಆಗಲ್ಲ. ಫೈನಲ್ ಲೆವೆಲ್ ವರೆಗೂ ಬರ್ತಾಳೆ ಅಂತ. ಜೀ ಕನ್ನಡಗೆ ನಾವು ಥ್ಯಾಂಕ್ಸ್ ಹೇಳ್ತೀವಿ. ಚಿತ್ರಾಲಿಗೂ ನಾನು ಥ್ಯಾಂಕ್ಸ್ ಹೇಳ್ಬೇಕು. ಯಾಕಂದ್ರೆ, ಅಷ್ಟು ಚಿಕ್ಕ ವಯಸ್ಸಲ್ಲಿ ಕಷ್ಟ ಆದರೂ ಕಲಿತು ಮಾಡ್ತಾಳೆ'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ

ಚಿಕನ್, ಫಿಶ್ ಅಂದ್ರೆ ಪ್ರಾಣ

''ಚಿಕನ್, ಫಿಶ್ ಅಂದ್ರೆ ಅವಳಿಗೆ ತುಂಬಾ ಇಷ್ಟ'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ

ನಮಗೆ ಹೆಮ್ಮೆ

''ನಮಗೆ ಇವತ್ತು ತುಂಬ ಖುಷಿ ಆಗುತ್ತೆ. ಎಲ್ಲರೂ ಅವಳನ್ನು ಗುರುತಿಸುತ್ತಾರೆ. ನಮಗೆ ಹೆಮ್ಮೆ ಅವಳ ಅಪ್ಪ-ಅಮ್ಮ ಆಗಿರುವುದಕ್ಕೆ. ಚಿಕ್ಕವಯಸ್ಸಿನಲ್ಲಿ ನಾವೇನು ಮಾಡ್ಲಿಲ್ಲ. ನಮ್ಮ ಮಕ್ಕಳು ಇಷ್ಟೊಂದು ಗುರುತಿಸಿಕೊಳ್ತಿದ್ದಾರೆ. ಅದಕ್ಕೆ ನಮಗೆ ಹೆಮ್ಮೆ'' - ವೈಶಾಲಿ ತೇಜ್ ಪಾಲ್, ಚಿತ್ರಾಲಿ ತಾಯಿ

English summary
Chitrali Tejpal from Mangalore has been selected for Grand Finale of Zee Kannada's 'Drama Juniors' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada