For Quick Alerts
  ALLOW NOTIFICATIONS  
  For Daily Alerts

  'ಡ್ರಾಮಾ ಕಿಂಗ್' ಮಹೇಂದ್ರ ಪ್ರಸಾದ್ ಬಗ್ಗೆ ನಿಮಗೆಷ್ಟು ಗೊತ್ತು?

  By Harshitha
  |

  ''ಇನ್ನೂ ಮೂರು ತಿಂಗಳಲ್ಲಿ ನಾನೇ 'ಡ್ರಾಮಾ ಕಿಂಗ್' ಅಂತ ಅವಾರ್ಡ್ ತೆಗೆದುಕೊಳ್ಳದಿದ್ರೆ, 'ನಾನ್ ನಾನೇ ಅಲ್ಲ'...ಇಟ್ಸ್ ಎ ಚಾಲೆಂಜ್.!'' ಅಂತ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಖಾಕಿ ತೊಟ್ಟು ಸಾಯಿ ಕುಮಾರ್ ತರಹ ಡೈಲಾಗ್ ಹೊಡಿದಿದ್ದ ಅದ್ಭುತ ಪ್ರತಿಭೆ ಮಹೇಂದ್ರ ಪ್ರಸಾದ್.

  ಮೂರು ತಿಂಗಳ ಹಿಂದೆ ಡೈಲಾಗ್ ಹೊಡೆದಂತೆ ಇಂದು 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಮಹೇಂದ್ರ ಪ್ರಸಾದ್ ಲಗ್ಗೆ ಇಟ್ಟಿದ್ದಾನೆ. [ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

  ಕಾಮಿಡಿ ಪಾತ್ರಗಳನ್ನ ನಿರ್ವಹಿಸಿ ನಿಮ್ಮನ್ನೆಲ್ಲಾ ನಕ್ಕು ನಲಿಸಿರುವ ಮಹೇಂದ್ರ ಪ್ರಸಾದ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿರಿ....

  ಮಹೇಂದ್ರ ಪ್ರಸಾದ್ ಬಗ್ಗೆ....

  ಮಹೇಂದ್ರ ಪ್ರಸಾದ್ ಬಗ್ಗೆ....

  ತಂದೆ - ಮಹಾದೇವಪ್ಪ
  ತಾಯಿ - ಮಹಾದೇವಮ್ಮ
  ಊರು - ಮೈಸೂರು

  ತಂದೆ ಇಲ್ಲ, ತಾಯಿನೇ ಎಲ್ಲಾ.!

  ತಂದೆ ಇಲ್ಲ, ತಾಯಿನೇ ಎಲ್ಲಾ.!

  12 ವರ್ಷದ ಪುಟ್ಟ ಹುಡುಗ ಮಹೇಂದ್ರ ಪ್ರಸಾದ್ ಗೆ ತಂದೆ ಇಲ್ಲ. ಮಹೇಂದ್ರ ಪ್ರಸಾದ್ ನಾಲ್ಕನೇ ತರಗತಿಯಲ್ಲಿ ಓದುವಾಗಲೇ ತಂದೆ ತೀರಿಕೊಂಡರು. ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ತಾಯಿ ಮಹಾದೇವಮ್ಮ ಮಗನನ್ನ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

  ಡ್ಯಾನ್ಸ್ ನಲ್ಲಿ ಪಂಡಿತ

  ಡ್ಯಾನ್ಸ್ ನಲ್ಲಿ ಪಂಡಿತ

  ಡ್ಯಾನ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಹೇಂದ್ರ ಪ್ರಸಾದ್ ಬ್ರೇಕ್ ಡ್ಯಾನ್ಸ್ ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುತ್ತಾನೆ. [ಡ್ರಾಮಾದಲ್ಲಿ ವೀಕ್ಷಕರ ಮನಗೆದ್ದ ಕುಡ್ಲದ ಪೋರಿ ಚಿತ್ರಾಲಿ ಬಗ್ಗೆ ಒಂಚೂರು..]

  ಮಗನ ಬಗ್ಗೆ ತಾಯಿ ಮಾತು

  ಮಗನ ಬಗ್ಗೆ ತಾಯಿ ಮಾತು

  ''ಸ್ಕೂಲ್ ಡೇ ನಲ್ಲಿ ಡ್ಯಾನ್ಸ್ ಮತ್ತೆ ನಾಟಕ ಮಾಡ್ತಿದ್ದ. ನಮಗೆ ಡ್ರಾಮಾ ಜ್ಯೂನಿಯರ್ಸ್ ಆಡಿಷನ್ ಬಗ್ಗೆ ಏನೂ ಗೊತ್ತಿರ್ಲಿಲ್ಲ. ಇವತ್ತು ಅವನು ಇಲ್ಲಿಗೆ ಬಂದಿದ್ದಾನೆ ಅಂದ್ರೆ ಅದಕ್ಕೆ ಅವರ ಟೀಚರ್ ಕಾರಣ'' ಎನ್ನುತ್ತಾರೆ ಮಹೇಂದ್ರ ತಾಯಿ ಮಹಾದೇವಮ್ಮ.

  ಪ್ರತಿಭೆ ಗುರುತಿಸಿದ ಟೀಚರ್

  ಪ್ರತಿಭೆ ಗುರುತಿಸಿದ ಟೀಚರ್

  ''ಅವನಲ್ಲಿ ಇರುವ ಕಲೆಯನ್ನ ಗುರುತಿಸಿ, ಅವನ ಟೀಚರ್ 'ಡ್ರಾಮಾ ಜ್ಯೂನಿಯರ್ಸ್' ಆಡಿಷನ್ ಗೆ ಕಳುಹಿಸಿಕೊಟ್ಟರು'' - ಮಹಾದೇವಮ್ಮ

  ಕಾಮಿಡಿ ಪ್ಲಸ್ ಪಾಯಿಂಟ್

  ಕಾಮಿಡಿ ಪ್ಲಸ್ ಪಾಯಿಂಟ್

  ''ಎಲ್ಲರೂ ಹೇಳ್ತಾರೆ, ಅವನು ಕಾಮಿಡಿ ಚೆನ್ನಾಗಿ ಮಾಡ್ತಾನೆ ಅಂತ. ಅದೇ ಅವನಿಗೆ ಪ್ಲಸ್ ಪಾಯಿಂಟ್ ಅನ್ಸುತ್ತೆ'' - ಮಹಾದೇವಮ್ಮ

  ಇಲ್ಲಿವರೆಗೂ ಬಂದಿರುವುದೇ ಖುಷಿ

  ಇಲ್ಲಿವರೆಗೂ ಬಂದಿರುವುದೇ ಖುಷಿ

  ''ಮಹೇಂದ್ರ ಇಲ್ಲಿಯವರೆಗೂ ಬಂದಿರುವುದೇ ದೊಡ್ಡ ವಿಷಯ. ಅದಕ್ಕೆ ನನಗೆ ತುಂಬಾ ಖುಷಿ ಇದೆ. ಸೆಲೆಕ್ಟ್ ಆಗ್ತಾನೆ ಅಂತ ನಾನು ನಿಜವಾಗಲೂ ಅಂದುಕೊಂಡಿರಲಿಲ್ಲ'' - ಮಹಾದೇವಮ್ಮ

  'ಲೊಟ್ಟೆ ನ್ಯೂಸ್' ಮಹೇಂದ್ರ

  'ಲೊಟ್ಟೆ ನ್ಯೂಸ್' ಮಹೇಂದ್ರ

  ''ಲೊಟ್ಟೆ ನ್ಯೂಸ್ ಗೆ ಸ್ವಾಗತ, ಸುಸ್ತಾಗುತ್ತಾ..ಸಾರಿ ಸುಸ್ವಾಗತ...ನಾನು ನಿಮ್ಮ ಕ್ರಿಷ್, ಅಲಿಯಾಸ್ ಕೃಷ್ಣ ಉರುಫ್ ಕೃಷ್ಣ ಮೂರ್ತಿ'' - ಮಹೇಂದ್ರ ಹೇಳಿದ ಈ ಡೈಲಾಗ್ ಮತ್ತು ಮಾಡಿದ ನಟನೆಯನ್ನ 'ಡ್ರಾಮಾ ಜ್ಯೂನಿಯರ್ಸ್' ವೀಕ್ಷಕರು ಮರೆಯೋಕೆ ಸಾಧ್ಯವೇ ಇಲ್ಲ.

  ಕಾಮಿಡಿ ಕಿಂಗ್

  ಕಾಮಿಡಿ ಕಿಂಗ್

  'ಡ್ರಾಮಾ ಜ್ಯೂನಿಯರ್ಸ್' ವೇದಿಕೆ ಮೇಲೆ ಅನೇಕ ಪಾತ್ರಗಳನ್ನ ಮಹೇಂದ್ರ ನಿರ್ವಹಿಸಿರಬಹುದು. ಆದ್ರೆ, ಕಾಮಿಡಿ ಪಾತ್ರಗಳಿಗೆ ಹೆಚ್ಚು ಜನಪ್ರಿಯ.

  ನಿಮ್ಮ ಶ್ರೀರಕ್ಷೆ ಮಹೇಂದ್ರ ಮೇಲೆ ಇರಲಿ

  ನಿಮ್ಮ ಶ್ರೀರಕ್ಷೆ ಮಹೇಂದ್ರ ಮೇಲೆ ಇರಲಿ

  ಚಿಕ್ಕವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿರುವ ಮಹೇಂದ್ರ 'ಡ್ರಾಮಾ ಜ್ಯೂನಿಯರ್ಸ್' ಗೆಲಲ್ಲಿ ಅಂತ ನೀವೂ ಹಾರೈಸಿ.

  English summary
  Mahendra Prasad from Mysuru has been selected for Grand Finale of Zee Kannada's 'Drama Juniors' reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X