For Quick Alerts
  ALLOW NOTIFICATIONS  
  For Daily Alerts

  'ಡ್ರಾಮಾ'ದಲ್ಲಿ ಮಾತ್ರ ಅಲ್ಲ, ಓದಿನಲ್ಲೂ ಪುಟ್ಟರಾಜು ನಂ.1..!

  By Harshitha
  |

  ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೊದಲ 'ಆಕ್ಟ್'ನಲ್ಲೇ ಹಸಿವಿನ ಮಹತ್ವ ಸಾರಿ, ಎಲ್ಲರ ಕಣ್ಣಲ್ಲಿ ನೀರು ತರಿಸಿ, ತೀರ್ಪುಗಾರರ ಮನಸ್ಸು ಗೆದ್ದ ಅಪ್ರತಿಮ ಪ್ರತಿಭಾವಂತ ಪುಟ್ಟರಾಜು ಹೂಗಾರ್.

  ಎಂತಹ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ಪುಟ್ಟರಾಜು ಸದ್ಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾನೆ. ['ಡ್ರಾಮಾ ಕಿಂಗ್' ಮಹೇಂದ್ರ ಪ್ರಸಾದ್ ಬಗ್ಗೆ ನಿಮಗೆಷ್ಟು ಗೊತ್ತು?]

  ವೇದಿಕೆ ಮೇಲಿನ ಪುಟ್ಟರಾಜು ಪರಿಚಯ ನಿಮಗೆಲ್ಲಾ ಇದೆ. ಪುಟ್ಟರಾಜು ಹಿನ್ನಲೆ ಕುರಿತು ನಿಮಗೆ ಪರಿಚಯ ಮಾಡಿಸುವ ಪ್ರಯತ್ನ ನಮ್ಮದು. ಮುಂದೆ ಓದಿ.....

  ಪುಟ್ಟರಾಜು ಹೂಗಾರ್ ಬಗ್ಗೆ...

  ಪುಟ್ಟರಾಜು ಹೂಗಾರ್ ಬಗ್ಗೆ...

  ತಂದೆ - ನಿಂಗಬಸಪ್ಪ ಹೂಗಾರ್
  ತಾಯಿ - ಅನ್ನಪೂರ್ಣ
  ಅಣ್ಣ - ಮಲ್ಲೇಶ್ ಹೂಗಾರ್
  ಊರು - ಗದಗ
  ವಾಸ - ಬೆಂಗಳೂರು

  ಹದಿನಾಲ್ಕು ವರ್ಷದ ಹುಡುಗ ಪುಟ್ಟರಾಜು

  ಹದಿನಾಲ್ಕು ವರ್ಷದ ಹುಡುಗ ಪುಟ್ಟರಾಜು

  ಹದಿನಾಲ್ಕು ವರ್ಷ ವಯಸ್ಸಿನ ಪುಟ್ಟರಾಜು ಹೂಗರ್ ಬೆಂಗಳೂರಿನ ಸೇಂಟ್ ಗ್ಲೋರಿಯಸ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ಪುಟ್ಟರಾಜು ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕ. [ಮಕ್ಕಳ ಪ್ರತಿಭೆ ಮುಂದೆ ಶಿವಣ್ಣ, ರವಿಚಂದ್ರನ್ ತಲೆಬಾಗಲು ಸಾಧ್ಯವೇ.?]

  ಅಣ್ಣನಿಗಾಗಿ 'ಸರಿಗಮಪ' ಬಿಟ್ಟ ಪುಟ್ಟರಾಜು

  ಅಣ್ಣನಿಗಾಗಿ 'ಸರಿಗಮಪ' ಬಿಟ್ಟ ಪುಟ್ಟರಾಜು

  ಪುಟ್ಟರಾಜು ಅಣ್ಣ ಮಲ್ಲೇಶ್, ಕಳೆದ ಬಾರಿ 'ಸರಿಗಮಪ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಅಣ್ಣನ ಜೊತೆಗೆ ಪುಟ್ಟರಾಜು ಕೂಡ ಸ್ಪರ್ಧಿಸಿದ್ದ. ಮೆಗಾ ಆಡಿಷನ್ ನಲ್ಲಿ ಪುಟ್ಟರಾಜು ಸೆಲೆಕ್ಟ್ ಆಗ್ಲಿಲ್ಲ. ಬದಲಿಗೆ ಮಲ್ಲೇಶ್ ಸೆಲೆಕ್ಟ್ ಆದರು. ['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

  ಇಬ್ಬರಲ್ಲಿ ಯಾರು ಇರಬೇಕು?

  ಇಬ್ಬರಲ್ಲಿ ಯಾರು ಇರಬೇಕು?

  'ಸರಿಗಮಪ' ಮೆಗಾ ಆಡಿಷನ್ ನಲ್ಲಿ ''ಅಣ್ಣ ಅಥವಾ ತಮ್ಮ ಯಾರಾದರೂ ಒಬ್ಬರು ಉಳಿದುಕೊಳ್ಳಬೇಕು'' ಅಂತ ತೀರ್ಪುಗಾರರು ಹೇಳಿದಾಗ ''ಅಣ್ಣ ಚೆನ್ನಾಗಿ ಹಾಡ್ತಾನೆ. ಅವನೇ ಇರಲಿ'' ಅಂತ ಪುಟ್ಟರಾಜು ಹೊರಗೆ ಬಂದಿದ್ದ. [ಕನ್ನಡ ಕಿರುತೆರೆ ಇತಿಹಾಸದಲ್ಲಿ ಜೀ ಕನ್ನಡ ಹೊಸ ಮೈಲಿಗಲ್ಲು.!]

  ಸಂಗೀತ ಪಂಚಪ್ರಾಣ

  ಸಂಗೀತ ಪಂಚಪ್ರಾಣ

  ಕಳೆದ ನಾಲ್ಕು ವರ್ಷಗಳಿಂದ ಪುಟ್ಟರಾಜು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾನೆ. ['ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?]

  ಯಾವ ಹೀರೋ ಇಷ್ಟ?

  ಯಾವ ಹೀರೋ ಇಷ್ಟ?

  ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಪುಟ್ಟರಾಜುಗೆ ತುಂಬಾ ಇಷ್ಟ.

  ಪುಟ್ಟರಾಜು ಬಗ್ಗೆ ತಾಯಿ ಏನಂತಾರೆ?

  ಪುಟ್ಟರಾಜು ಬಗ್ಗೆ ತಾಯಿ ಏನಂತಾರೆ?

  ''ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಮಗ ಗೆಲ್ಲಬೇಕು ಎಂಬ ಆಸೆ ಖಂಡಿತ ಇದೆ. ಇಲ್ಲಿಯವರೆಗೂ ಬಂದಿರುವುದಕ್ಕೆ ಖುಷಿ ಇದೆ. ಗೆಲ್ಲೋದು, ಬಿಡೋದು ಅವನ ಕೈಯಲ್ಲಿ ಇದೆ'' ಎನ್ನುತ್ತಾರೆ ಪುಟ್ಟರಾಜು ತಾಯಿ ಅನ್ನಪೂರ್ಣ.

  ಪಂಚಾಕ್ಷರಿ ಗವಾಯಿ ಪಾತ್ರ ತುಂಬಾ ಇಷ್ಟ

  ಪಂಚಾಕ್ಷರಿ ಗವಾಯಿ ಪಾತ್ರ ತುಂಬಾ ಇಷ್ಟ

  ''ಪಂಚಾಕ್ಷರಿ ಗವಾಯಿ ನಮ್ಮ ಆರಾಧ್ಯ ದೇವರು. ಅವರ ಪಾತ್ರವನ್ನ ಪುಟ್ಟರಾಜು ತುಂಬಾ ಚೆನ್ನಾಗಿ ಮಾಡಿದ್ದ. ಆನಂದ್ ಸರ್ ಕೂಡ ತುಂಬಾ ಇನ್ವಾಲ್ವ್ ಆಗಿ ನಟಿಸಿದ್ರು. ಅದು ನನ್ನ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ'' - ಅನ್ನಪೂರ್ಣ

  ಓದಿನಲ್ಲೂ ಪುಟ್ಟರಾಜು ನಂಬರ್ 1

  ಓದಿನಲ್ಲೂ ಪುಟ್ಟರಾಜು ನಂಬರ್ 1

  ''ಓದುವುದರಲ್ಲೂ ಪುಟ್ಟರಾಜು ನಂಬರ್ 1. ಈ ಶೋಗೆ ಬಂದು ನಾಲ್ಕೈದು ತಿಂಗಳಾಯ್ತು. ಅವಾಗ್ಲಿಂದ್ಲೂ ಸ್ಕೂಲ್ ಗೆ ಹೋಗಿಲ್ಲ. ಆದರೂ, ಒಮ್ಮೆ ಹೇಳಿಕೊಟ್ಟರೆ ಸಾಕು ಕಲಿತುಬಿಡುತ್ತಾನೆ. ಚೆನ್ನಾಗಿ ಓದುತ್ತಾನೆ. ಎಲ್ಲಾ ಸಬ್ಜೆಕ್ಟ್ ನಲ್ಲೂ 94, 95 ಮಾರ್ಕ್ಸ್ ತೆಗೆಯುತ್ತಾನೆ'' - ಅನ್ನಪೂರ್ಣ

  English summary
  Puttaraju from Gadag has been selected for Grand Finale of Zee Kannada's 'Drama Juniors' reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X