ಜಸ್ಟ್ 20 ಟು 25 ಎನ್ನುವ ಕಿರುತೆರೆ ನಟಿಯರು ಯಾರು ಯಾರು?

By ಪ್ರಿಯಾ ದೊರೆ

ಪ್ರತಿ ಬಾರಿಯೂ ಹೊಸ ಧಾರಾವಾಹಿ ಶುರುವಾದಾಗಲೆಲ್ಲಾ ಹೊಸ ನಟ-ನಟಿಯರ ಆಗಮನ ಇದ್ದೇ ಇರುತ್ತೆ. ಇವರಲ್ಲಿ ಕಿರುತೆರೆ ನಟ-ನಟಿಯರು ಹೆಚ್ಚು ಫೇಮಸ್ ಆಗಿರುತ್ತಾರೆ. ಯಾಕೆಂದರೆ ಅವರು ಸೀರಿಯಲ್‌ ಮೂಲಕ ನಿತ್ಯ ವೀಕ್ಷಕರಿಗೆ ಹತ್ತಿರವಾಗುತ್ತಾರೆ. ತಮ್ಮ ನಟನೆ, ಹಾವ-ಭಾವ ಬಹುಬೇಗ ಧಾರಾವಾಹಿ ಪ್ರಿಯರನ್ನು ಸೆಳೆಯತ್ತಾರೆ.

ಇನ್ನು ಪ್ರತಿಯೊಬ್ಬ ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕುತೂಹಲವಿರುತ್ತದೆ.

ಕನ್ನಡ ಧಾರಾವಾಹಿಯಲ್ಲಿ ಹಲವು ನಾಯಕ ನಟಿಯರ ವಯಸ್ಸು ಕೇವಲ 20 ರಿಂದ 25 ವರ್ಷವಿರುತ್ತದೆ. ಹಾಗಾದರೆ, ಯಾವ ನಟಿಯ ವಯಸ್ಸು ಎಷ್ಟು ಎಂದು ನೋಡೋಣ ಬನ್ನಿ.

All Famous Kannada TV Actress Age List 2025

ಮುದ್ದು ಸೊಸೆಗೆ 20ರ ಹರೆಯ

'ಮುದ್ದು ಸೊಸೆ' ಧಾರಾವಾಹಿಯ ನಟಿ ಪ್ರತಿಮಾ ಠಾಕೂರ್ 'ಅಂತರಪಟ', 'ದೊರೆಸಾನಿ' ಧಾರಾವಾಹಿಗಳಲ್ಲಿ ನಟಿಸಿದ್ದವರು. ನಟಿ ಪ್ರತಿಮಾ ಅವರು ತೆಲುಗು ಅಂಗಳದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ 'ಸಿವಾಂಗಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರು ಈಗ ಮುದ್ದಿನ ಸೊಸೆಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. 2005ರಲ್ಲಿ ಜನಿಸಿದ ಇವರ ವಯಸ್ಸು ಜಸ್ಟ್ 20.

ಪಾರುಗೆ ಈಗ ಜಸ್ಟ್ 24

ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದ 'ಗಟ್ಟಿಮೇಳ' ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. ತಂದೆ ರವಿಕೃಷ್ಣನ್ ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುವುದು ನಿಶಾ ಸಿನಿ ಜರ್ನಿಗೆ ಸ್ಪೂರ್ತಿಯಾಯಿತು. ಇವರು ಕರ್ನಾಟಕ ಮತ್ತು ಭರತನಾಟ್ಯದಲ್ಲಿ ಕೂಡ ಪರಿಣಿತಿ ಪಡೆದಿದ್ದಾರೆ. ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಸಿನಿಪಯಣ ಆರಂಭಿಸಿದ ನಟಿ ನಿಶಾ, ನಂತರ 'ಸರ್ವ ಮಂಗಳ ಮಾಂಗಲ್ಯೇ' ಎಂಬ ಧಾರಾವಾಹಿಯಲ್ಲಿ ತಂಗಿ ಪಾತ್ರ ನಿರ್ವಹಿಸಿದರು. ಬಳಿಕ 'ಗಟ್ಟಿಮೇಳ' ಸೀರಿಯಲ್ ನಾಯಕಿಯಾದ ಇವರು, ಬಜಾರಿ ಅಮೂಲ್ಯ ಪಾತ್ರದ ಮೂಲಕ ಮನೆಮಾತಾದರು. ಈಗ 'ಅಣ್ಣಯ್ಯ' ಧಾರಾವಾಹಿಯಲ್ಲಿ ಪಾರು ಆಗಿ ಕಾಣಿಸಿಕೊಂಡಿದ್ದು, 2000 ಜೂನ್ 9ರಂದು ಜನಿಸಿದ ಇವರಿಗೀಗ 24 ವರ್ಷ.

All Famous Kannada TV Actress Age List 2025

21ಕ್ಕೆ ಕಾಲಿಟ್ಟ ಭೂಮಿಕಾ ರಮೇಶ್

ಭೂಮಿಕಾ ರಮೇಶ್ ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಸೀರಿಯಲ್‌ನಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ನಟಿಗೆ ಕೇವಲ 21 ವರ್ಷ. ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಭೂಮಿಕ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಭೂಮಿಕಾ 'ಸೈ ಅಂಟೆ ಸೈ',' ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್' ಶೋಗಳಲ್ಲಿ ಭಾಗವಹಿಸಿದ್ದರು. ಬಿಸಿಎ ಓದುತ್ತಿರುವ ಈ ನಟಿ ಸದ್ಯ ತೆಲುಗಿನ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಮೌನಗೆ ಇನ್ನೂ 21

ಮೂಲತಃ ಕರಾವಳಿಯ ನಟಿ ಮೌನ ಗುಡ್ಡೆಮನೆ ಕಲರ್ಸ್ ಕನ್ಬಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೊದಲನೆ ವರ್ಷದ ಡಿಗ್ರಿಯಲ್ಲಿ ಇವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗಾಗಿ ಓದು ಮತ್ತು ನಟನೆ ಎರಡನ್ನೂ ಇವರು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈ ನಟಿಗೂ ಕೂಡ ಜಸ್ಟ್ 21 ವರ್ಷ.

24ರಲ್ಲಿ ತೇಲಾಡುತ್ತಿರುವ ಸಂಜನಾ

ಸಂಜನಾ ಬುರ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ಘಾಟಿ ಸ್ನೇಹ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ಇವರು, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎಂಜಿನಿಯರಿಂಗ್ ಓದುತ್ತಿರುವ ಸಂಜನಾ ಜನಿಸಿದ್ದು, 2000ರ ಮೇ 25ರಂದು. ಈ ನಟಿಗೆ ಈಗ 24 ವರ್ಷ.

More from Filmibeat

English summary
Nisha Ravikrishnan to Mouna Guddemane; here is details about Kannada Serial actresses age;
Read more about: actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X