For Quick Alerts
  ALLOW NOTIFICATIONS  
  For Daily Alerts

  'ಇಸ್ಮಾರ್ಟ್ ಜೋಡಿ' ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ: ಹಿರಿಯ, ಕಿರಿಯ ಜೋಡಿಗಳ ದರ್ಬಾರ್!

  |

  ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸೆಲೆಬ್ರೆಟಿ ಜೋಡಿಗಳ ಆಟ ನೋಡಿ ಮಸ್ತ್ ಮಜಾ ಮಾಡಲು ಮುಂದಾಗಿದ್ದಾರೆ.

  ಜೋಡಿಗಳ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಅದ್ಧೂರಿ ಸೆಟ್ ನಿರ್ಮಿಸಿದೆ. ಸೆಲಬ್ರಿಟಿ ಜೋಡಿಗಳನ್ನು ಸ್ವಾಗತಿಸಲು ಪ್ರೇಕ್ಷಕರ ಬಳಗ ಕಾದು ಕುಳಿತಿದಿದೆ. ಇನ್ನೊಂದು ರಾತ್ರಿ ಕಳೆದರೆ, ಇಸ್ಮಾರ್ಟ್ ಜೋಡಿ ವೇದಿಕೆಯಲ್ಲಿ ಹಬ್ಬವೋ ಹಬ್ಬ.

  'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಸ್ಪರ್ಧಿಗಳು ಇವರೇ ನೋಡಿ!'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಸ್ಪರ್ಧಿಗಳು ಇವರೇ ನೋಡಿ!

  'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮದಲ್ಲಿ ಕುಣಿಸು ಕುಪ್ಪಳಿಸಲು ಸೆಲೆಬ್ರೆಟಿ ಜೋಡಿಗಳು ತಯಾರಾಗಿದ್ದಾರೆ. 40 ವರ್ಷದ ದಾಂಪತ್ಯ ಜೀವನ ನಡೆಸಿರುವ ಜೋಡೊಗಳಿಂದ ಹಿಡಿದು ಇತ್ತೀಚೆಗೆ ಮದುವೆಯಾಗಿರುವ ಕಪಲ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಇದ್ದಾರೆ.

  ಇಸ್ಮಾರ್ಟ್ ಜೋಡಿಗಳಿಗೆ ಕ್ಷಣಗಣನೆ

  ಸ್ಟಾರ್ ಸುವರ್ಣವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ 'ಇಸ್ಮಾರ್ಟ್ ಜೋಡಿ' ಪ್ರಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಜುಲೈ 16 ಇಸ್ಮಾರ್ಟ್ ಜೋಡಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10.30ರವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ಪರೇಕ್ಷಕರ ಮನ ಗೆದ್ದಿರುವ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮ ಗಮನ ಸೆಳೆದಿದೆ. ಪ್ರೇಕ್ಷಕರನ್ನು ರಂಜಿಸಲು ಹತ್ತು ಜೋಡಿಗಳು ಕೂಡ ರೆಡಿಯಾಗಿದ್ದಾರೆ.

  ಸ್ಪರ್ಧಿಯಲ್ಲಿರುವ ಜೋಡಿಗಳು ಯಾರು!

  'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋನಲ್ಲಿ ಹಿರಿಯ ಜೋಡಿಗಳು ಹಾಗೂ ಕಿರಿಯ ಜೋಡಿಗಳು ಕೂಡ ಇದ್ದಾರೆ. ದಶಕಗಳ ಕಾಲ ಒಟ್ಟಾಗಿ ಜೀವನ ನಡೆಸಿರುವ ಹಿರಿಯ ಜೋಡಿಗಳ ಜೊತೆಗೆ, ಇತ್ತೀಚೆಗೆ ಮದುವೆ ಆದ ಹಲವು ಜೋಡಿಗಳು ಕೂಡ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರುವುದು ವಿಶೇಷ. ಈ ಜೋಡಿಗಳ ಕಾರ್ಯಕ್ರಮ ನಟ ಗೋಲ್ಡನ್ ಸ್ಟಾರ್ ಸಾರಥ್ಯದಲ್ಲಿ ನಡೆಯಲಿದೆ.

  ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್!

  ಹಿರಿಯ ತಾರಾ ಜೋಡಿಗಳಾದ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಇಸ್ಮಾಟ್ ಜೋಡಿಯಲ್ಲಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಹಿರಿಯ ದಂಪತಿಗಳು ಭಾಗವಹಿಸುತ್ತಿದ್ದಾರೆ. ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ತಾರಾ ಜೋಡಿಯ ದಾಂತ್ಯಕ್ಕೆ ದಶಕಗಳೇ ತುಂಬಿದೆ. ಇನ್ನು ವಿಜಯ ಲಕ್ಷ್ಮೀ ಸಿಂಗ್ ಜೈ ಜಗದೀಶ್‌ಗೆ ಎರಡನೇ ಪತ್ನಿ. ಈ ವಿಚಾರವನ್ನು ಈ ಹಿಂದೆ ಅವರೇ ರಿವೀಲ್ ಮಾಡಿದ್ದರು. ಈಗ ಇಸ್ಮಾಟ್ ಜೋಡಿಯಲ್ಲಿ ಮಿಂಚಲು ಬರ್ತಿದ್ದಾರೆ.

  ಸುಮನ್ ನಗರ್ಕರ್- ಗುರುದೇವ್!

  ಹಿರಿಯ ನಟಿ ಸುಮನ್ ನಗರ್ಕರ್ ಮತ್ತು ಗುರುದೇವ್ ನಾಗರಾಜ ಕೂಡ ಈ ಕಾರ್ಯಕ್ರಮದಲ್ಲಿ 'ಇಸ್ಮಾರ್ಟ್ ಜೋಡಿ'ಯಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಈ ಜೋಡಿ ಹೆಜ್ಜೆ ಹಾಕಿದ ಪುಟ್ಟ ಪ್ರೋಮೊ ಕೂಡ ರಿಲೀಸ್ ಆಗಿದೆ. ಸುಮನ್ ನಗರ್ಕರ್ ಬಗ್ಗೆ ನಿಮಗೆ ಗೊತ್ತಿರುತ್ತದೆ. ಅವರ ಪರಿಚಯವು ಇರುತ್ತೆ. ಸುಮನ್ ನಗರ್ಕರ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ, ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಆದರೆ ಅವರ ಪತಿ ಗುರುದೇವ್ ಬಬ್ರೂ ಎನ್ನುವ ಒಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈಗ ಮತ್ತಷ್ಟು ವಿಚಾರವನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.

  ದಿಶಾ ಮದನ್ ಮತ್ತು ಶಶಾಂಕ್!

  ಇನ್ನು ಕಿರಿಯ ಜೋಡಿಗಳಲ್ಲಿ, ದಿಶಾ ಮದನ್ ಮತ್ತು ಪತಿ ಶಶಾಂಕ್ ಜೋಡಿ ಕೂಡ ಒಂದು. ದಿಶಾ ಮದನ್ ಪರಿಚಯವಿದ್ದರೂ, ಪತಿಯ ಪರಿಚಯ ನಿಮಗೆ ಅಷ್ಟಾಗಿ ಇರಲಾರದು. ಇನ್ನು ಸದ್ಯ ರಿಲೀಸ್ ಆಗಿರು ಪ್ರೋಮೊದಲ್ಲಿ, ಪತಿ ಶಶಾಂಕ್ ರೋಸ್ ಕಥೆಯನ್ನು ಮಾತ್ರ ದಿಶಾ ಮದನ್ ಬಿಚ್ಚಿಟ್ಟಿದ್ದಾರೆ. ಇವರ ಜೊತೆಗೆ ರಘು ವೈನ್ ಸ್ಟೋರ್ ತಮ್ಮ ಪತ್ನಿ ವಿದ್ಯಾಶ್ರೀ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

  ಉಳಿದ ಜೋಡಿಗಳ ಪಟ್ಟಿ!

  ನಟಿ ಸಪ್ನ ದೀಕ್ಷಿತ್- ಅಶ್ವಿನ್ ದೀಕ್ಷಿತ್

  ಹಾಸ್ಯಗಾರ ರಿಚರ್ಡ್ ಲೂಯಿಸ್- ಹ್ಯಾರಿಯೆಟ್ ಲೂಯಿಸ್

  ನಟ ವಿನಯ್ ಗೌಡ- ಅಕ್ಷತಾ ಗೌಡ

  ಪ್ರತಿಕ್ ಪ್ರೊ- ಮೌಲ್ಯಶ್ರೀ ಎಂ

  ಶ್ರೀರಾಮ ಸುಳ್ಯ- ಪುನೀತಾ ಆಚಾರ್ಯ

  ಇಂಪನಾ ಜಯರಾಜ್- ಮತ್ತು ಅಜಿತ್ ಜಯರಾಜ್

  English summary
  All Set For Star Suvarna Reality Show Ismart Jodi Launch, Know About All The 10 Contestants, know more,
  Friday, July 15, 2022, 17:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X