ಈ ಬಾರಿಯ ಬಿಗ್ ಬಾಸ್ ಮನೆಗೆ ಈ 18 ಜನ ತೆರಳುವುದು ಖಚಿತ, ಯಾರೆಲ್ಲ ಹೋಗಲಿದ್ದಾರೆ ಗೊತ್ತಾ..?

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಮತ್ತೊಮ್ಮೆ ಶುರುವಾಗಲಿದೆ. ಎಲ್ಲೆಡೆ ತಯಾರಿಗಳು ಕೂಡ ಆರಂಭವಾಗಿವೆ. ಕನ್ನಡದಲ್ಲಿ ಈ ಸೆಪ್ಟೆಂಬರ್ 29ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಹಿಂದಿಯಲ್ಲಿ ಅಕ್ಟೋಬರ್ ಆರರಿಂದ ಬಿಗ್ ಬಾಸ್ ಧ್ವನಿ ಕೇಳಿ ಬರಲಿದೆ.

ಇನ್ನೂ.. ಕನ್ನಡದಲ್ಲಿ ಬಿಗ್ ಬಾಸ್ ಅಂದರೆ ಸುದೀಪ್ ಹೇಗೆ ನೆನಪಾಗ್ತಾರೋ, ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ಖಾನ್ ನೆನಪಾಗುತ್ತಾರೆ. ಸಲ್ಮಾನ್ ಖಾನ್ ಅವರಿಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳುವುದು ಕೂಡ ಕಷ್ಟ. ಅಷ್ಟರ ಮಟ್ಟಿಗೆ ಬಿಗ್ ಬಾಸ್‌ ಪ್ರೇಕ್ಷಕರನ್ನು ಸಲ್ಮಾನ್ ಖಾನ್ ಆವರಿಸಿಕೊಂಡಿದ್ದಾರೆ. ಈ ಬಾರಿ ಕೂಡ ಸಲ್ಮಾನ್ ಖಾನ್ ಬಿಗ್ ಬಾಸ್‌ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿದ್ದಾರೆ. ಇದರ ನಡುವೆ ಕನ್ನಡದಲ್ಲಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ ಎನ್ನುವ ಚರ್ಚೆ ಶುರುವಾದಂತೆ, ಹಿಂದಿಯಲ್ಲಿ ಕೂಡ ಬಿಗ್ ಬಾಸ್‌ನ 18ನೇ ಸೀಸನ್‌ನ ಸ್ಫರ್ಧಿಗಳು ಯಾರು ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ. ಇದಕ್ಕೆ ಉತ್ತರ ಹುಡುಕುವ ಕೆಲಸವನ್ನು ಕೂಡ ಮಾಡುತ್ತಿರುವ ಅನೇಕರು ಸದ್ಯ 18 ಜನರ ಹೆಸರನ್ನು ಹೆಕ್ಕಿ ತೆಗೆದಿದ್ದಾರೆ.

all-you-need-to-know-about-bigg-boss-18-premiere-date-contestants-and-more

ಹೌದು, ಪವಿತ್ರ ರಿಶ್ತಾದಿಂದ ಫೇಮಸ್ ಆದ ಕಿರುತೆರೆ ಕಲಾವಿದ ರಿತ್ವಿಕ್ ಹೆಸರು ಬಿಗ್ ಬಾಸ್ ಸೀಸನ್ 18ರಲ್ಲಿ ಮುಂಚೂಣಿಯಲ್ಲಿದೆ. ಇವರನ್ನು ಹೊರತು ಪಡಿಸಿದರೆ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ದಿಗ್ವಿಜಯ್ ಸಿಂಗ್ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನೂ ಜೋದಾ ಅಕ್ಬರ್, ಅಲಿ ಬಾಬಾ, ದಾಸ್ತಾನ್ ಎ ಕಬೂಲ್, ಹೀಗೆ ಹಲವು ಧಾರಾವಾಹಿಗಳ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿರುವ ಶೇಜಾನ್ ಖಾನ್ ಕೂಡ ಬಿಗ್ ಬಾಸ್ ಮನೆಗೆ ತೆರಳುವುದು ಖಚಿತ ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ.

ಇನ್ನೂ ಕುಂಡಲಿ ಭಾಗ್ಯ, ಸಸುರಾಲ್ ಸೀಮರ್ ಕಾ ಸೇರಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಧೀರಜ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ. ಏಕ್ ಹಜಾರೋ ಮೇ ಮೇರಿ ಬೆಹನಾ ಹೈ, ನಾಗಿನ್ 4 ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಿಯಾ ಶರ್ಮಾ ಕೂಡ ಬಿಗ್ ಬಾಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

all-you-need-to-know-about-bigg-boss-18-premiere-date-contestants-and-more

ಉಳಿದಂತೆ ಶೋಯಬ್ ಇಬ್ರಾಹಿಂ, ದೆಬ್ ಚಂದ್ರಿಮಾ ಸಿಂಗ್ ರಾಯ್, ದಲ್ಜಿತ್ ಕೌರ್, ಅವಿನಾಶ್ ಮಿಶ್ರಾ, ಶಿಲ್ಪಾ ಶಿರೋಡಕರ್, ಚಾಹತ್ ಪಾಂಡೆ, ಶಾಂತಿ ಪ್ರಿಯಾ, ಇವರೆಲ್ಲರು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎಂದು ಮುಂಬೈನಲ್ಲಿ ಸದ್ಯಕ್ಕೆ ಗುಲ್ಲಾಗಿದೆ.

ಅಂದ್ಹಾಗೇ ಈ ಬಾರಿ ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಆ ನಂತರ ಸೂರ್ಯವಂಶ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದು, ಕರುನಾಡಿನೆಲ್ಲೆಡೆ 'ಪದ್ಮಾ' ಎಂದೇ ಫೇಮಸ್‌ ಆದ ಇಶಾ ಕೊಪ್ಪಿಕರ್ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇಶಾ ಕೊಪ್ಪಿಕರ್ ಅವರನ್ನು ಹೊರತು ಪಡಿಸಿ ಪುರಾತನ ಕಾಲದ ಮತ್ತೊಬ್ಬ ನಾಯಕಿ ಸಮೀರಾ ರೆಡ್ಡಿ ಅವರ ಹೆಸರು ಕೂಡ ಕೇಳಿ ಬಂದಿತ್ತು. ಇನ್ನೂ ಸಾಮಾಜಿಕ ಜಾಲತಾಣದ ಮೂಲಕವೇ ರಾತ್ರೋ ರಾತ್ರಿ ಜಗದ್ವಿಖ್ಯಾತಿಯನ್ನು ಗಳಿಸಿದ ಡಾಲಿ ಚಾಯವಾಲಾ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಇಶಾ ಕೊಪ್ಪಿಕರ್ ಬಿಗ್ ಬಾಸ್ ಮನೆಗೆ ಹೋಗದಿರಲು ನಿರ್ಧಾರ ಮಾಡಿದ್ದಾರೆ ಎನ್ನುವ ವಿಚಾರ ಗುಲ್ಲಾಗಿದೆ. ಸಂಭಾವನೆ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಇಶಾ ಕೊಪ್ಪಿಕರ್ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇನ್ನೂ ಸಮೀರಾ ರೆಡ್ಡಿ ಮತ್ತು ಡಾಲಿ ಚಾಯವಾಲಾ ಹೋಗ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: bigg boss biggboss salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X