For Quick Alerts
  ALLOW NOTIFICATIONS  
  For Daily Alerts

  ಟಿಆರ್‌ಪಿ ರೇಸಿನಲ್ಲಿ ಮಹೇಶ್ ಬಾಬು ಎದುರು ಸೋತ ಅಲ್ಲು ಅರ್ಜುನ್!

  |

  ಮಹೇಶ್ ಬಾಬು-ಅಲ್ಲು ಅರ್ಜುನ್ ತೆಲುಗಿನ ಸೂಪರ್ ಸ್ಟಾರ್ ನಟರು. ಇಬ್ಬರಿಗೂ ಭಾರಿ ದೊಡ್ಡ ಅಭಿಮಾನಿವರ್ಗವೇ ಇದೆ ತೆಲುಗು ರಾಜ್ಯಗಳಲ್ಲಿ.

  ಇದೇ ವರ್ಷದ ಆರಂಭದಲ್ಲಿ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಟಪುರಂಲೋ' ಮತ್ತು ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾಗಳು ಬಹುತೇಕ ಒಟ್ಟಿಗೆ ಬಿಡುಗಡೆ ಆಗಿತ್ತು.

  ನಟನೆ ಬಿಟ್ಟಿದ್ದಕ್ಕೆ ಕಾರಣ ಕೊಟ್ಟ 'ಮಿರ್ಚಿ' ನಟಿ ರಿಚಾ

  ಚಿತ್ರಮಂದಿರಗಳಲ್ಲಿ ಅಲಾ ವೈಕುಂಟಪುರಂಲೋ ಸಿನಿಮಾ ಒಳ್ಳೆಯ ಪ್ರದರ್ಶನ ಕಂಡಿತ್ತು, ಸರಿಲೇರು ನೀಕೆವ್ವರು ಸಿನಿಮಾ ಹಿಟ್ ಎನಿಸಿಕೊಂಡಿತಾದರೂ, ಅಲಾ ವೈಕುಂಟಪುರಂಲೋ ಮುಂದೆ ತುಸು ಮಂಕಾಗಿತ್ತು.

  ಆದರೆ ಸಣ್ಣ ಪರದೆಯಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ವಿರುದ್ಧ ಸ್ಪಷ್ಟ ಜಯ ಸಾಧಿಸಿದ್ದಾರೆ. ಸರಿಲೇರು ನೀಕೆವ್ವರು ಸಿನಿಮಾದ ಟಿಆರ್‌ಪಿಯನ್ನು ಅಲಾ ವೈಕುಂಟಪುರಂಲೋ ಸಿನಿಮಾದಿಂದ ಬೀಟ್ ಮಾಡಲು ಸಾಧ್ಯವಾಗಿಲ್ಲ. ಟಿವಿಯಲ್ಲಿ ಅಲಾ ವೈಕುಂಟಪುರಂಲೋ ಸಿನಿಮಾಕ್ಕಿಂತಲೂ ಮಹೇಶ್ ಬಾಬು ಸಿನಿಮಾವನ್ನೇ ಹೆಚ್ಚು ಮಂದಿ ನೋಡಿದ್ದಾರೆ.

  ಆಗಸ್ಟ್ 15 ಕ್ಕೆ ಟಿವಿಯಲ್ಲಿ ಪ್ರದರ್ಶನವಾಗಿದ್ದ ಸರಿಲೇರು ನೀಕೆವ್ವರು ಸಿನಿಮಾ ದಾಖಲೆಯ 29.4 ಟಿಆರ್‌ಪಿ ಪಡೆದಿತ್ತು. ಅದೇ ಈ ದೀಪಾವಳಿಗೆ ಟಿವಿಗೆ ಬಂದ ಅಲಾ ವೈಕುಂಟಪುರಂಲೋ ಸಿನಿಮಾ ಕ್ಕೆ ದೊರೆತ ಟಿಆರ್‌ಪಿ ರೇಟಿಂಗ್ ಕೇವಲ 7.91.

  'ಪುಷ್ಪಾ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ತಮಿಳಿನ ಸ್ಟಾರ್ ನಟ?

  ಪ್ರಸ್ತುತ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅಲ್ಲು ಅರ್ಜುನ್ 'ಪುಷ್ಪಾ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Allu Arjun's movie Ala Vaikuntapuramlo movie fails to beat Mahesh Babu's Sarileru Neekevvaru movie's TRP rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X