For Quick Alerts
  ALLOW NOTIFICATIONS  
  For Daily Alerts

  ಈ ವೀಕೆಂಡ್ ನಿಮ್ಮ ಜೊತೆ ಕಳೆಯುತ್ತಾರೆ 'ಅಮರ್'

  |

  ಈ ವಾರಾಂತ್ಯ ಪೂರ ನಿಮ್ಮ ಜೊತೆಗೆ ಅಭಿಷೇಕ್ ಅಂಬರೀಶ್ ಇರ್ತಾರೆ. ವೀಕೆಂಡ್ ನಲ್ಲಿ ಪ್ರಸಾರ ಆಗುವ ಕಿರುತೆರೆಯ ವಿಶೇಷ ಕಾರ್ಯಕ್ರಮಗಳಲ್ಲಿ 'ಅಮರ್' ಚಿತ್ರತಂಡ ಭಾಗಿಯಾಗಿದೆ.

  ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ 'ಅಮರ್' ಚಿತ್ರತಂಡ ಭೇಟಿ ನೀಡಿದೆ. ಅಂಬರೀಶ್ ಹಾಡುಗಳ ಜೊತೆಗೆ ಕಾರ್ಯಕ್ರಮ ನಡೆಯಲಿದೆ. ಅಭಿಷೇಕ್, ತಾನ್ಯ ಹೊಪ್, ನಿರ್ದೇಶಕ ನಾಗಶೇಖರ್ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಈ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

  ಕಲರ್ಸ್ ಸೂಪರ್ ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮದ ಮಹಾ ಮನೆಗೆ 'ಅಮರ್' ತಂಡ ಈ ವಾರದ ಅತಿಥಿಯಾಗಿದೆ. ಅಂಬರೀಶ್ ಹಾಗೂ ವಿಷ್ಣುವರ್ಧನ್ ಗೆಟಪ್ ನಲ್ಲಿ ಅಲ್ಲಿನ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಇಂದು ಮತ್ತು ನಾಳೆ 8 ಗಂಟೆಗೆ ಪ್ರಸಾರ ಆಗುತ್ತಿದೆ.

  'ಕನ್ನಡ ಕೋಗಿಲೆ' ಕಾರ್ಯಕ್ರಮಕ್ಕೆ ಸಹ ಅಭಿಷೇಕ್ ಅಂಬರೀಶ್ ಮತ್ತು ತಂಡ ಭೇಟಿ ನೀಡಿದೆ. ಜೊತೆಗೆ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಅವರಿಗೆ ಸಾಥ್ ನೀಡಿದ್ದಾರೆ. ಇಂದು ಮತ್ತು ನಾಳೆ ಈ ಕಾರ್ಯಕ್ರಮ ರಾತ್ರಿ 8 ಮತ್ತು 9 ಗಂಟೆಗೆ ಪ್ರಸಾರ ಆಗಲಿದೆ.

  'ಅಮರ್' ಸಿನಿಮಾ ಮೇ 31 ರಂದು ಬಿಡುಗಡೆಯಾಗುತ್ತಿದೆ. ಈ ವಿಶೇಷವಾಗಿ ಈ ಎಲ್ಲ ಕಾರ್ಯಕ್ರಮಗಳಲ್ಲಿ 'ಅಮರ್' ಚಿತ್ರ ತಂಡ ಭಾಗಿಯಾಗಿದೆ.

  English summary
  Abhishek Ambareesh 'Amar' kannada movie team in weekend programs

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X