For Quick Alerts
  ALLOW NOTIFICATIONS  
  For Daily Alerts

  ಟಿವಿ ಪರದೆ ಮೇಲೆ ಅಂಬರೀಶ್ ಕೊನೆಯ ಸಿನಿಮಾ

  |
  Ambareesh : ಟಿವಿ ಪರದೆ ಮೇಲೆ ಅಂಬರೀಶ್ ಕೊನೆಯ ಸಿನಿಮಾ..! | FILMIBEAT KANNADA

  ನಟ ಅಂಬರೀಶ್ ಅವರ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಈಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಸಪ್ಟೆಂಬರ್ 27 ರಂದು ತೆರೆಗೆ ಬಂದಿದ್ದ ಈ ಸಿನಿಮಾ ಈಗ ಟಿವಿ ಪರದೆ ಮೇಲೆ ಬರುತ್ತಿದೆ.

  ಕಳೆದ ವಾರ ಅಂಬರೀಶ್ ನಿಧನ ಹೊಂದಿದ್ದು, ಈ ಹಿನ್ನಲೆಯಲ್ಲಿ ಈ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗಿತ್ತು. ವಿದೇಶದಲ್ಲಿ ತೆರೆಗೆ ಬಂದ ಈ ಸಿನಿಮಾದ ಪೂರ್ಣ ಹಣವನ್ನು ಮಂಡ್ಯದ ರಸ್ತೆ ದುರಂತ ಆದ ಕುಟುಂಬಕ್ಕೆ ನೀಡುವುದಾಗಿ ನಿರ್ಮಾಪಕ ಜಾಕ್ ಮಂಜು ಹೇಳಿದ್ದರು.

  ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ

  ದೊಡ್ಡ ಪರದೆಯ ಜೊತೆಗೆ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಪ್ರಸಾರ ಆಗುತ್ತಿದೆ. ಡಿಸೆಂಬರ್ 9 ರಂದು ಸಂಜೆ 7 ಗಂಟೆಗೆ ಚಿತ್ರ ಪ್ರಸಾರವಾಗಲಿದ್ದು, ಸದ್ಯ ಅದರ ಪ್ರೊಮೋವನ್ನು ಸ್ಟಾರ್ ಸುವರ್ಣ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳಲಾಗಿದೆ.

  ಅಂಬರೀಶ್ ಹಾಗೂ ಸುದೀಪ್ ಈ ಸಿನಿಮಾದಲ್ಲಿ ಜೋಡಿಯಾಗಿದ್ದರು. ಅಂಬರೀಶ್ ವೃತ್ತಿ ಜೀವನದ ಬೆಸ್ಟ್ ಪಾತ್ರಗಳಲ್ಲಿ ಈ ಪಾತ್ರ ಕೂಡ ಒಂದಾಗಿತ್ತು. ಆದರೂ ಅದೇಕೋ ಹೆಚ್ಚು ದಿನ 'ಅಂಬಿ ನಿಂಗೆ ವಯಸ್ಸಾಯ್ತೋ' ಥಿಯೇಟರ್ ನಲ್ಲಿ ಉಳಿಯಲಿಲ್ಲ.

  ಎರಡೇ ತಿಂಗಳಿನಲ್ಲಿ ಕಿರುತೆರೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ

  ಉಳಿದಂತೆ, ಅಂಬರೀಶ್, ಸುದೀಪ್, ಸುಹಾಸಿನಿ, ಶ್ರುತಿ ಹರಿಹರನ್ ಚಿತ್ರದಲ್ಲಿ ನಟಿಸಿದ್ದರು. ಜಾಕ್ ಮಂಜು ನಿರ್ಮಾಣ ಹಾಗೂ ಗುರುದತ್ ಗಾಣಿಗ ನಿರ್ದೇಶನ ಚಿತ್ರಕ್ಕಿತ್ತು. ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

  English summary
  Actor Abareesh and Sudeep starring 'Ambi Ning Vayassaytho' kannada movie will be telecasting December 9th in star suvarna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X