ಎರಡೇ ತಿಂಗಳಿನಲ್ಲಿ ಕಿರುತೆರೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ
'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಬಿಡುಗಡೆಯಾಗಿದ್ದು ಇತ್ತೀಚೆಗೆ. ಸಪ್ಟೆಂಬರ್ 27 ರಂದು ತೆರೆಗೆ ಬಂದಿದ್ದ ಈ ಸಿನಿಮಾ ಎರಡು ತಿಂಗಳ ನಂತರ ಈಗ ಟಿವಿ ಪರದೆ ಮೇಲೆ ಬರುತ್ತಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಪ್ರಸಾರ ಆಗುತ್ತಿದೆ. ಶೀಘ್ರದಲ್ಲೇ ಚಿತ್ರ ಪ್ರಸಾರವಾಗಲಿದ್ದು, ಸದ್ಯ ಅದರ ಪ್ರೊಮೋವನ್ನು ಸ್ಟಾರ್ ಸುವರ್ಣ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳಲಾಗಿದೆ.
ಸುದೀಪ್ ಹಾಗೂ ಅಂಬರೀಶ್ ಜೋಡಿಯ ಈ ಸಿನಿಮಾ ಬಿಡುಗಡೆಗೆ ಮುಂಚೆ ದೊಡ್ಡ ಸುದ್ದಿ ಮಾಡಿತ್ತು. ಸಿನಿಮಾ ಕೂಡ ಚೆನ್ನಾಗಿಯೇ ಇತ್ತು. ಆದರೂ ಅದೇಕೋ ಹೆಚ್ಚು ದಿನ 'ಅಂಬಿ ನಿಂಗೆ ವಯಸ್ಸಾಯ್ತೋ' ಥಿಯೇಟರ್ ನಲ್ಲಿ ಉಳಿಯಲಿಲ್ಲ.

ಉಳಿದಂತೆ, ಅಂಬರೀಶ್, ಸುದೀಪ್, ಸುಹಾಸಿನಿ, ಶ್ರುತಿ ಹರಿಹರನ್ ಚಿತ್ರದಲ್ಲಿ ನಟಿಸಿದ್ದರು. ಜಾಕ್ ಮಂಜು ನಿರ್ಮಾಣ ಹಾಗೂ ಗುರುದತ್ ಗಾಣಿಗ ನಿರ್ದೇಶನ ಚಿತ್ರಕ್ಕಿತ್ತು.
More from Filmibeat
English summary
Actor Abareesh and Sudeep starring 'Ambi Ning Vayassaytho' kannada movie will be telecasting soon in star suvarna.


Click it and Unblock the Notifications











