Jyothi Rai: ಗುಟ್ಟಾಗಿ ಜ್ಯೋತಿ ರೈ 2ನೇ ಮದುವೆ? ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ 'ಜೋಗುಳ'ದ ಅಮ್ಮ

ವೈಯಕ್ತಿಕ ವಿಚಾರಗಳಿಂದ ಇತ್ತೀಚೆಗೆ ಕಿರುತೆರೆ ನಟಿ ಜ್ಯೋತಿ ರೈ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಒಂದು ಮದುವೆ ಆಗಿರುವ ಜ್ಯೋತಿ ಸದ್ಯ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಪದೇ ಪದೆ ಈ ವಿಚಾರವನ್ನು ಪರೋಕ್ಷವಾಗಿ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸುಕು ಪುರ್ವಜ್ ಜೊತೆಗಿನ ಫೋಟೊಗಳನ್ನು ಇತ್ತೀಚೆಗೆ ಹೆಚ್ಚು ಹೆಚ್ಚು ಪೋಸ್ಟ್ ಮಾಡುತ್ತಿದ್ದಾರೆ. ತಮ್ಮ ಎಲ್ಲಾ ಪೋಸ್ಟ್‌ಗಳಿಗೂ ಜ್ಯೋತಿಪೂರ್ವಜ್ ಎನ್ನುವ ಹ್ಯಾಷ್‌ಟ್ಯಾಗ್ ಹಾಕುತ್ತಿದ್ದಾರೆ. ಇದೀಗ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

Amid Jyothi Rai, Suku Purvaj 2nd marriage rumours, Actress changed her name

ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಆಕೆಗೆ ಒಬ್ಬ ಮಗ ಕೂಡ ಇದ್ದಾನೆ. ಮೊದಲು ಕನ್ನಡ ಕಿರುತೆರೆಯಲ್ಲಿ ನಟಿಸಲು ಆರಂಭಿಸಿದ ಜ್ಯೋತಿ ನಂತರ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸದ್ಯ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ.

ಗುಟ್ಟಾಗಿ 2ನೇ ಮದುವೆ?

ಸದ್ಯ ಟ್ವಿಟರ್‌ನಲ್ಲೂ ಜ್ಯೋತಿ ರೈ ತಮ್ಮ ಹೆಸರಿನ ಜೊತೆ ಪ್ರಿಯಕರನ ಹೆಸರು ಸೇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಗುಟ್ಟಾಗಿ ಮದುವೆ ಆಗಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಅಥವಾ ಶೀಘ್ರದಲ್ಲೇ ಮದುವೆ ಆಗುವ ಲೆಕ್ಕಾಚಾರದಲ್ಲಿದ್ದಾರಾ? ಎನ್ನುವ ವದಂತಿ ಹರಿದಾಡುತ್ತಿದೆ. ಒಟ್ನಲ್ಲಿ ಪರೋಕ್ಷವಾಗಿ ತಾವಿಬ್ಬರು ರಿಲೇಷನ್‌ಶಿಪ್‌ನಲ್ಲಿ ಇರುವ ಸಂಗತಿಯನ್ನು ಆಗಿಂದಾಗ್ಗೆ ಜ್ಯೋತಿ ರೈ ಎಲ್ಲರಿಗೂ ತಿಳಿಸುವ ಪ್ರಯತ್ನವನ್ನಂತು ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಸುಕು ಪೂರ್ವಜ್ ನಿರ್ದೇಶನದ 'ಮಾಸ್ಟರ್‌ ಪೀಸ್' ಚಿತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ.

ಮೊದಲ ಪತಿಯಿಂದ ಡಿವೋರ್ಸ್?

ಪದ್ಮನಾಭ್ ಎಂಬುವವರನ್ನು ಬಹಳ ಹಿಂದೆಯೇ ಜ್ಯೋತಿ ರೈ ಮದುವೆ ಆಗಿದ್ದರು. ಆದರೆ ಏನಾಯ್ತೋ ಏನೋ ಈಗ ನಿರ್ದೇಶಕ ಸುಕು ಪೂರ್ವಜ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸದ್ಯ ಟ್ವಿಟ್ಟರ್‌ನಲ್ಲಿ ಹೆಸರು ಬದಲಿಸಿಕೊಂಡಿರುವುದು ನೋಡುತ್ತಿದ್ದರೆ ಮೊದಲ ಪತಿಯಿಂದ ಜ್ಯೋತಿ ರೈ ಡಿವೋರ್ಸ್ ಪಡೆದಿದ್ದಾರೆ ಎನ್ನುವ ವದಂತಿ ಶುರುವಾಗಿದೆ.

Amid Jyothi Rai, Suku Purvaj 2nd marriage rumours, Actress changed her name

ಕಿರುತೆರೆಯ ಜನಪ್ರಿಯ ನಟಿ

ಓದು ಮುಗಿಸಿ ನಟಿಯಾಗಲು ಬೆಂಗಳೂರಿಗೆ ಬಂದ 'ಬಂದೇ ಬರುತಾವ ಕಾಲ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ ಹಾಗೂ ಕಿನ್ನರಿ ಧಾರಾವಾಹಿ ಪಾತ್ರಗಳು ಹೆಚ್ಚು ಜನಪ್ರಿಯತೆ ತಂದು ಕೊಟ್ಟವು. 'ಗುಪ್ಪೆಡಂತ ಮನಸು' ತೆಲುಗು ಧಾರಾವಾಹಿ ಆಕೆ ಅಲ್ಲಿ ಹೆಚ್ಚು ಹೆಸರು ತಂದು ಕೊಟ್ಟಿತ್ತು.

ಪರಭಾಷೆಯಲ್ಲೂ ಜ್ಯೋತಿ ಮೋಡಿ

ಕನ್ನಡ ಕಿರುತೆರೆ ಕಲಾವಿದರು ಸಾಕಷ್ಟು ಜನ ತೆಲುಗಿನಲ್ಲಿ ಸಕ್ಸಸ್ ಕಂಡಿದ್ದಾರೆ. ಇವತ್ತಿಗೂ ಹಲವರು ಕನ್ನಡ, ತೆಲುಗು ಎರಡು ಭಾಷೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಬಹಳ ಹಿಂದೆಯೇ ಜ್ಯೋತಿ ರೈ ತೆಲುಗು ಕಿರುತೆರೆಯಲ್ಲಿ ಮನೆ ಮಾತಾದರು. 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಆಕೆ ನಟಿಸಿದ್ದಾರೆ. ಕನ್ನಡ, ತೆಲುಗು ಮಾತ್ರವಲ್ಲದೇ ತುಳು ಹಾಗೂ ತಮಿಳಿನಲ್ಲೂ ಬಣ್ಣ ಹಚ್ಚಿದ್ದಾರೆ. ವಯಸ್ಸು ಹೆಚ್ಚಾದಂತೆ ಮತ್ತಷ್ಟು ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯೋಗ, ಜಿಮ್‌ ವರ್ಕ್‌ಔಟ್‌ ಮೂಲಕ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ.

'ಪ್ರೆಟಿ ಗರ್ಲ್' ವೆಬ್‌ ಸೀರಿಸ್

ಜ್ಯೋತಿ ರೈ ತಮ್ಮ ಬೋಲ್ಡ್ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಾ ಬರ್ತಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದರೂ ಆಕೆಯ ಗ್ಲಾಮರ್ ಕಮ್ಮಿ ಆಗಿಲ್ಲ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಆಕೆಯನ್ನು ಅಭಿಮಾನಿಗಳು ಬೆಳ್ಳಿ ಪರದೆಯಲ್ಲಿ ನಾಯಕಿಯಾಗಿ ನೋಡಲು ಇಷ್ಟಪಡುತ್ತಿದ್ದಾರೆ. ಸದ್ಯ 'ಪ್ರೆಟಿ ಗರ್ಲ್' ಹಿಂದಿ ಮತ್ತು ಇಂಗ್ಲೀಷ್ ವೆಬ್‌ ಸೀರಿಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಇತ್ತೀಚೆಗೆ ಪೋಸ್ಟರ್ ಸಮೇತ ಈ ವಿಚಾರವನ್ನು ಆಕೆ ಹಂಚಿಕೊಂಡಿದ್ದರು.

More from Filmibeat

English summary
Jyothi Rai's Post sparks her second marriage rumours with Suku Purvaj. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X