ವೈರಲ್ ವಿಡಿಯೋ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಪಾದಕ್ಕೆರಗಿದ ಜ್ಯೋತಿ ರೈ..!
ಕಳೆದ ಮೂರು ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದವರು ಜ್ಯೋತಿ ರೈ. ಕುಂತರು.. ನಿಂತರು.. ಸುದ್ದಿಯಗ್ತಾನೇ ಬರ್ತಿರುವ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್ ಸದ್ಯಕ್ಕೆ ತಿರುಪತಿ ತಿಮ್ಮಪ್ಪನ ಪಾದಕ್ಕೆರಗಿದ್ದಾರೆ
ಹೌದು, ತಮ್ಮ ಸುತ್ತ ಮುತ್ತ ಎದ್ದಿರುವ ಅಶ್ಲೀಲ ಅಲೆಯಿಂದ ಬೇಸತ್ತಂತೆ ಇರುವ ಜ್ಯೋತಿ ರೈ, ಮಾನಸಿಕ ನೆಮ್ಮದಿಯನ್ನ ಅರಸಿ ತಮ್ಮ ಸಂಗಾತಿ ಸುಕು ಪೂರ್ವಜ್ ಜೊತೆ ತಿರುಪತಿಗೆ ತೆರಳಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು ಪುನೀತರಾಗಿದ್ದಾರೆ.

ಇನ್ನೂ.. ದ್ವೇಷಿಸುವವರ ನಡುವೆ, ಟ್ರೋಲ್ ಮಾಡುವವರ ನಡುವೆ.. ಜ್ಯೋತಿ ರೈ ಅವರನ್ನ ಇಷ್ಟ ಪಡುವವರು ಇದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜ್ಯೋತಿ ರೈ ಅವರನ್ನ ಅವರ ಅಭಿಮಾನಿಗಳು ಮಾತನಾಡಿಸಿದ್ದಾರೆ. ಜ್ಯೋತಿ ರೈ ಕೂಡ ಅಲ್ಲಿನ ಸಿಬ್ಬಂದಿ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ. ಫೋಟೋ ಕೂಡ ಕ್ಲಿಕಿಸಿಕೊಂಡಿದ್ದಾರೆ ಜ್ಯೋತಿ ರೈ
ತಿರುಪತಿಯ ತಮ್ಮ ಈ ದಿವ್ಯ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜ್ಯೋತಿ ರೈ, ತಮ್ಮ ಅಭಿಮಾನಿಗಳಿಗಾಗಿ ತಮ್ಮ ಹಿಂಬಾಲಕರಿಗಾಗಿ ಫೋಟೋಗಳನ್ನ ಕೂಡ ಹಂಚಿಕೊಂಡಿದ್ದಾರೆ.

ಅಂದ್ಹಾಗೇ ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಆಕ್ಟ್ ಮಾಡಿ, ಸದ್ಯಕ್ಕೆ ತೆಲುಗು ಉದ್ಯಮದಲ್ಲಿ ಸಕ್ರಿಯರಾಗಿರುವ ಜ್ಯೋತಿ ರೈ ಮೊನ್ನೆಯಷ್ಟೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯನವರನ್ನು ತಮ್ಮ ತಂಡದ ನೆರವಿನಿಂದ ಭೇಟಿ ಮಾಡಿದ್ದರು. ಸಹಾಯದ ಹಸ್ತವನ್ನ ಚಾಚಿದ್ದರು.
ನನ್ನ ಕಷ್ಟಗಳಿಗಿಂತ ಮೊಗಿಲಯ್ಯನವರ ಕಷ್ಟಗಳು ದೊಡ್ಡದು ಎಂದು ಹೇಳಿದ್ದ ಜ್ಯೋತಿ ರೈ ಈ ಸಹಾಯ ದೊಡ್ಡದೇನು ಅಲ್ಲ. ಹೀಗಾಗಿ ಇವರ ಸಹಾಯಕ್ಕೆ ಬೇರೆಯವರು ಮುಂದೆ ಬರಬೇಕು ಎಂದು ಮನವಿಯನ್ನೂ ಕೂಡ ಮಾಡಿಕೊಂಡಿದ್ದರು. ಮೊಗಿಲಯ್ಯನವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದವನ್ನು ಕೂಡ ಜ್ಯೋತಿ ರೈ ಪಡೆದಿದ್ದರು.

ಇನ್ನೂ ವಿಡಿಯೋ ವಿಚಾರಕ್ಕೆ ಬಂದರೆ ಜ್ಯೋತಿ ರೈ ವಿಚಾರದ ಕಿಡಿಗೇಡಿಗಳು ಡೀಪ್‌ಫೇಕ್ ವಿಡಿಯೋ ಬಳಸಿ ನಟಿ ಜ್ಯೋತಿ ರೈ ಅವರ ನಕಲಿ ವಿಡಿಯೋ ಹಾಗೂ ಫೋಟೊಗಳನ್ನು ಸೃಷ್ಟಿಸಿರಬಹುದೆಂದು ಚರ್ಚೆಯಾಗುತ್ತಿದೆ.
ಜ್ಯೋತಿ ರೈ ಅವರು ಕೂಡ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ತಮಗೆ ಕಿರುಕುಳ ನೀಡುತ್ತಿದ್ದಾರೆಂದು ತಮ್ಮ ಅಳಲನ್ನ ಕೂಡ ಬಹುಭಾಷಾ ನಟಿ ತೋಡಿಕೊಂಡಿದ್ದರು. ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳ ವ್ಯಕ್ತಪಡಿಸಿದ್ದರು.
ಇಂತಹ ಜ್ಯೋತಿ ರೈ ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತಮ್ಮ ಗೆಳೆಯ ಸುಕು ಪೂರ್ವಜ್ ಜೊತೆ ಭೇಟಿ ನೀಡಿದ್ದಾರೆ. ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಸದ್ಯಕ್ಕೆ ಜ್ಯೋತಿ ರೈ ಅವರ ಈ ಆಧ್ಯಾತ್ಮಿಕ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


Click it and Unblock the Notifications











