ಮಗಳು ಕೇಳಿದ ಪ್ರಶ್ನೆಗೆ ಕಣ್ಣೀರು ಹಾಕಿದ ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್ ಮಾಗಿದ ನಟ, ನಟನಾಗಿ ಅಷ್ಟೆ ಅಲ್ಲ ವ್ಯಕ್ತಿಯಾಗಿಯೂ ಅವರು ಮಾಗಿದ್ದಾರೆ. ವಯಸ್ಸಾದಂತೆ ದೊಡ್ಡ ಗಂಭೀರತೆ, ನಿರುದ್ವಿಗ್ನತೆಯನ್ನು ಸಾಧಿಸಿಕೊಂಡಿದ್ದಾರೆ. ಸುಲಭವಾಗಿ ಅವರು ಭಾವುಕರಾಗುವುದಿಲ್ಲ. ಆದರೆ ಕೌನ್‌ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋನಲ್ಲಿ ಮಗಳು ಹಾಗೂ ಮೊಮ್ಮಗಳ ಮುಂದೆ ಅಮಿತಾಬ್ ಬಚ್ಚನ್ ಭಾವುಕರಾಗಿ ಕಣ್ಣ ಹನಿ ಒರೆಸಿಕೊಂಡಿದ್ದಾರೆ.

'ಕೌನ್ ಬನೇಗಾ ಕರೋಡ್‌ ಪತಿ' ಎಂದರೆ ಅಮಿತಾಬ್ ಬಚ್ಚನ್ ಎಂಬ ಮಟ್ಟಿಗೆ ಆ ಶೋ ಹಾಗೂ ಅಮಿತಾಬ್ ಬಚ್ಚನ್ ಪರಸ್ಪರ ಒಂದಾಗಿಬಿಟ್ಟಿದ್ದಾರೆ. ಇದೀಗ ಕೌನ್ ಬನೇಗಾ ಕರೋಡ್‌ಪತಿ 1000 ನೇ ಎಪಿಸೋಡ್ ಪ್ರಸಾರವಾಗಲಿದೆ. ಈ ಎಪಿಸೋಡ್‌ಗೆ ವಿಶೇಷ ಅತಿಥಿಗಳಾಗಿ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಹಾಗೂ ಮೊಮ್ಮಗಳು ನವ್ಯಾ ನಂದಾ ಆಗಮಿಸಿದ್ದಾರೆ.

ಎಪಿಸೋಡ್‌ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಡಿಸೆಂಬರ್ 03 ರಂದು ಎಪಿಸೋಡ್ ಪ್ರಸಾರವಾಗಲಿದೆ. ಎಪಿಸೋಡ್‌ನ ಪ್ರೋಮೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಮಿತಾಬ್ ಬಚ್ಚನ್, ತಮ್ಮ ಮಗಳು ಹಾಗೂ ಮೊಮ್ಮಗಳ ಮುಂದೆ ಭಾವುಕರಾಗಿರುವ ದೃಶ್ಯಗಳು ಪ್ರೋಮೋನಲ್ಲಿವೆ. ಹಾಗಿದ್ದರೆ ಅಮಿತಾಬ್ ಬಚ್ಚನ್ ಭಾವುಕರಾಗಿದ್ದು ಏಕೆ?

ಮಗಳ ಪ್ರಶ್ನೆಯಿಂದ ಭಾವುಕರಾದ ಬಚ್ಚನ್

ಮಗಳ ಪ್ರಶ್ನೆಯಿಂದ ಭಾವುಕರಾದ ಬಚ್ಚನ್

ಅಮಿತಾಬ್ ಬಚ್ಚನ್ ಭಾವುಕರಾಗಲು ಕಾರಣ ಮಗಳು ಕೇಳಿದ ಪ್ರಶ್ನೆ. ಕೌನ್ ಬನೇಗಾ ಕರೋಡ್‌ಪತಿ 1000 ಎಪಿಸೋಡ್ ಆದ ಕಾರಣ, ನಿಮಗೆ ಈ ಎಪಿಸೋಡ್‌ನೊಂದಿಗಿನ ನಂಟು ಹೇಗಿದೆ? ಎಂದು ಶ್ನೇತ ಬಚ್ಚನ್ ನಂದಾ ಪ್ರಶ್ನೆ ಮಾಡಿದ್ದಾರೆ. ಸತತವಾಗಿ 21 ವರ್ಷದಿಂದ ಈ ಶೋ ಅನ್ನು ನಡೆಸಿಕೊಂಡು ಬರುತ್ತಿರುವ ಬಚ್ಚನ್ (ಒಂದು ಸೀಸನ್ ಹೊರತುಪಡಿಸಿ) ಶೋ ಜೊತೆಗೆ ಆತ್ಮೀಯ ನಂಟು ಹೊಂದಿದ್ದು, ಅವುಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಶೋ ಪ್ರಾರಂಭವಾಗಿ 21 ವರ್ಷ

ಶೋ ಪ್ರಾರಂಭವಾಗಿ 21 ವರ್ಷ

ಇಂಗ್ಲೀಷ್‌ನ 'ಹೂ ವಾಂಟ್ಸ್‌ ಟು ಬಿ ಮಿಲಿಯನೇರ್' ಶೋನಿಂದ ಸ್ಪೂರ್ತಿ ಪಡೆದ, ಕೌನ್ ಬನೇಗಾ ಕರೋಡ್‌ಪತಿ ಶೋ ಪ್ರಾರಂಭವಾಗಿ 21 ವರ್ಷಗಳಾಗಿವೆ. 2000 ನೇ ಇಸವಿ ಜುಲೈ ತಿಂಗಳ 3ನೇ ತಾರೀಖು ಈ ರಿಯಾಲಿಟಿ ಶೋನ ಮೊದಲ ಎಪಿಸೋಡ್ ಪ್ರಸಾರವಾಗಿತ್ತು. ಈವರೆಗೆ ಹದಿಮೂರು ಸೀಸನ್‌ಗಳಲ್ಲಿ ಕೌನ್ ಬನೇಗಾ ಕರೋಡ್‌ಪತಿ ಪ್ರಸಾರವಾಗಿದೆ. ಈವರೆಗೆ ಸಾವಿರಾರು ಮಂದಿ ಸ್ಪರ್ಧಾಳುಗಳು ಶೋನಲ್ಲಿ ಭಾಗವಹಿಸಿ ಕೋಟ್ಯಂತರ ರುಪಾಯಿ ಹಣ ಗೆದ್ದಿದ್ದಾರೆ. ಹಲವು ಜನರಿಗೆ ಈ ಶೋದಿಂದ, ಇಲ್ಲಿ ಗೆದ್ದ ಮೊತ್ತದಿಂದ ಸಹಾಯವಾಗಿದೆ. ಇದನ್ನೆಲ್ಲ ನೆನದು ಅಮಿತಾಬ್ ಬಚ್ಚನ್ ಭಾವುಕರಾಗಿದ್ದಾರೆ.

ಅಮಿತಾಬ್‌ರಿಗೆ ಮರುಜೀವನ ನೀಡಿದ್ದು ಕೌನ್ ಬನೇಗಾ ಕರೋಡ್‌ಪತಿ

ಅಮಿತಾಬ್‌ರಿಗೆ ಮರುಜೀವನ ನೀಡಿದ್ದು ಕೌನ್ ಬನೇಗಾ ಕರೋಡ್‌ಪತಿ

ಕೌನ್ ಬನೇಗ ಕರೋಡ್‌ಪತಿ ಬಗ್ಗೆ ಬಚ್ಚನ್ ಭಾವುಕರಾಗಲು ಮತ್ತೊಂದು ಪ್ರಮುಖ ಕಾರಣವಿದೆ. ಆರ್ಥಿಕವಾಗಿ ಪಾತಾಳ ಸೇರಲಿದ್ದ ಅಮಿತಾಬ್ ಬಚ್ಚನ್‌ರನ್ನು ಮೇಲೆತ್ತಿದ್ದು ಇದೇ ಕೌನ್ ಬನೇಗಾ ಕರೋಡ್‌ಪತಿ. ಕೌನ್ ಬನೇಗಾ ಕರೋಡ್‌ಪತಿ ಆರಂಭಕ್ಕೆ ಮುನ್ನಾ ಅಮಿತಾಬ್ ಬಚ್ಚನ್ ಆರ್ಥಿಕವಾಗಿ ದಿವಾಳಿಯಾಗಿದ್ದರು. ತಮ್ಮ ಪ್ರತೀಕ್ಷಾ ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದ್ದರು, ಜೊತೆಗೆ ಇನ್ನೂ ಕೆಲವು ಆಸ್ತಿಗಳನ್ನು ಮಾರಿದ್ದರು. ಹಲವು ಕಡೆಗಳಿಂದ ಅಮಿತಾಬ್ ಬಚ್ಚನ್ ಸಾಲದಲ್ಲಿದ್ದರು. ಅಮಿತಾಬ್ ಇನ್ನು ಮೇಲಕ್ಕೆ ಏಳಲಾರರು ಎಂದು ಬಾಲಿವುಡ್ ನಿಶ್ಚಯಿಸಿತ್ತು. ಅಂತಹಾ ಕಷ್ಟದ ಸಂದರ್ಭದಲ್ಲಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಆರಂಭವಾಯಿತು. ಆ ನಂತರ ಇತಿಹಾಸವೇ ಸೃಷ್ಟಿಯಾಗಿ ಅಮಿತಾಬ್ ಬಚ್ಚನ್ ಮತ್ತೆ ಆರ್ಥಿಕವಾಗಿ ಸಬಲರಾದರು, ಕಳೆದು ಹೋಗಿದ್ದ ತಮ್ಮ ಸ್ಟಾರ್‌ಡಮ್ ಅನ್ನು ವಾಪಸ್ ಪಡೆದುಕೊಂಡರು. ಹಾಗಾಗಿ ಅಮಿತಾಬ್ ಬಚ್ಚನ್ ಜೀವನದಲ್ಲಿ ಕೌನ್ ಬನೇಗಾ ಕರೋಡ್‌ಪತಿಗೆ ವಿಶೇಷ ಸ್ಥಾನವಿದೆ.

ಶ್ವೇತಾ ಬಚ್ಚನ್ ನಂದಾ ಯಾರು?

ಶ್ವೇತಾ ಬಚ್ಚನ್ ನಂದಾ ಯಾರು?

ಇನ್ನು 1000ನೇ ಎಪಿಸೋಡ್‌ನಲ್ಲಿ ಭಾಗಿಯಾಗಿರುವ ಶ್ವೇತಾ, ಅಮಿತಾಬ್ ಬಚ್ಚನ್‌ರ ಮೊದಲ ಮಗಳು. ಅಭಿಷೇಕ್ ಬಚ್ಚನ್‌ಗಿಂತಲೂ ದೊಡ್ಡವರು. ಫ್ರಭಾವಿ ಉದ್ಯಮಿ ನಿಖಿಲ್ ನಂದಾರ ಪತ್ನಿಯಾಗಿರುವ ಶ್ವೇತಾಗೆ ನವ್ಯಾ ನಂದಾ ಹೆಸರಿನ ಮಗಳು ಹಾಗೂ ಅಗಸ್ತ್ಯ ನಂದಾ ಹೆಸರಿನ ಮಗನಿದ್ದಾನೆ. ಎಸ್ಕಾರ್ಟ್ ಸಂಸ್ಥೆಯ ಮಾಲೀಕರಾದ ನಿಖಿಲ್ ನಂದಾ ರಾಜ್ ಕಪೂರ್‌ ಅವರ ಮೊಮ್ಮಗ. ಇನ್ನು ಅಮಿತಾಬ್ ಬಚ್ಚನ್‌ರ ಮೊಮ್ಮಗಳು ನವ್ಯಾ ನವೇಲಿ ನಂದಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾಳೆ. ನಟನೆ ನನಗೆ ಇಷ್ಟವಿಲ್ಲ, ಅಪ್ಪನಂತೆ ಉದ್ಯಮಿ ಆಗುತ್ತೇನೆ ಎಂದಿದ್ದಾರೆ ನವ್ಯಾ. ಸಮಾಜ ಸೇವೆಯ ಹವ್ಯಾಸವನ್ನು ಈಗಿನಿಂದಲೇ ರೂಡಿಸಿಕೊಂಡಿದ್ದಾಳೆ ನವ್ಯಾ.

More from Filmibeat

English summary
Actor Amitabh Bachchan became emotional in Kaun Banega Crorepati. Kaun Banega Crorepati show's 1000 episode will telecast on December 03.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X