For Quick Alerts
  ALLOW NOTIFICATIONS  
  For Daily Alerts

  ಟಿವಿ ಧಾರಾವಾಹಿಗೆ ಬಿಬ್ ಬಿ ಅಮಿತಾಬ್ ಬಚ್ಚನ್

  By Rajendra
  |
  ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೆಲವು ದಶಕಗಳಿಂದ ಬೆಳ್ಳಿತೆರೆ ಹಾಗೂ ಕಿರುತೆರೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆದರೆ ಈ ಬಾರಿ ಅವರು ಟಿವಿ ಧಾರಾವಾಹಿ ಮೂಲಕ ತನ್ನ ಅಭಿಮಾನಿ ಬಳಗಕ್ಕೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ದೈನಿಕ ಧಾರಾವಾಹಿಯೊಂದರಲ್ಲಿ ಅಮಿತಾಬ್ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

  ಕೌನ್ ಬನೇಗಾ ಕರೋಡ್ ಪತಿ ಆರನೇ ಸೀಸನ್ ಇತ್ತೀಚೆಗಷ್ಟೇ ಮುಗಿಯಿತು. ಈಗವರು ಹಿಂದಿ ಸೀರಿಯಲ್ ಒಂದರಲ್ಲಿ ಅಭಿನಯಿಸಲು ಮುಂದಾಗಿದ್ದಾರೆ ಎನ್ನುತ್ತವೆ ವಿಶ್ವಸನೀಯ ಮೂಲಗಳು. ಆದರೆ ಈ ಬಗ್ಗೆ ಎಲ್ಲೂ ಮಾಹಿತಿ ಸೋರಿಕೆಯಾಗದಂತೆ ಜಾಗ್ರತೆ ವಹಿಸಿದ್ದಾರೆ.

  ಈ ಧಾರಾವಾಹಿಯನ್ನು ಅಮಿತಾಬ್ ಅವರ ಎಬಿಸಿಎಲ್ ಸಂಸ್ಥೆಯೇ ನಿರ್ಮಿಸುತ್ತಿದೆ ಎಂಬ ಮಾಹಿತಿಯೂ ಅದು ಹೇಗೋ ಬಹಿರಂಗವಾಗಿದೆ. ಧಾರಾವಾಹಿಗಾಗಿ ಕಲಾವಿದರ ಆಯ್ಕೆಯೂ ಮುಂಬೈನ ಸ್ಟುಡಿಯೋಗಳಲ್ಲಿ ಭರದಿಂದ ಸಾಗಿದೆ. ಭಾರಿ ಬಜೆಟ್ ನೊಂದಿಗೆ ಈ ಚಿತ್ರವನ್ನು ಕಿರುತೆರೆಗೆ ತರಲಾಗುತ್ತಿದೆ.

  ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಅಮಿತಾಬ್ ಆದರೂ ಅವರು ಪ್ರತಿ ಎಪಿಸೋಡ್ ನಲ್ಲೂ ಕಾಣುವುದಿಲ್ಲವಂತೆ. ಕೆಲವೊಂದು ಸನ್ನಿವೇಶಗಳಲ್ಲಷ್ಟೇ ಬರುತ್ತಾರೆ. ಆದರೆ ಈ ಧಾರಾವಾಹಿ ಪ್ರಚಾರ ಜಾಹೀರಾತುಗಳಲ್ಲಿ ಬಿಗ್ ಬಿ ಇದ್ದೇ ಇರುತ್ತಾರೆ. (ಏಜೆನ್ಸೀಸ್)

  English summary
  Fans of megastar Amitabh Bachchan can look forward to seeing him on television once again but not as the host of ‘Kaun Banega Crorepati’. If the latest buzz is anything to go by, the thespian is gearing up for his TV debut as an actor. Sources close to the project, reportedly to be produced by Big B’s company ABCL are tight-lipped about the actor’s TV debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X