For Quick Alerts
  ALLOW NOTIFICATIONS  
  For Daily Alerts

  'ಕೌನ್ ಬನೇಗಾ ಕರೋಡ್ ಪತಿ' ಶೋನಲ್ಲಿ ಅರ್ಥಿಕ ತಜ್ಞೆಯ ಸೌಂದರ್ಯ ಹೊಗಳಿ ಟ್ರೋಲ್ ಆದ ಅಮಿತಾಬ್

  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಶೋ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋಗಳಲ್ಲಿ ಒಂದಾಗಿದೆ. ಇದೀಗ 12ನೇ ಸೀಸನ್ ನಡೆಯುತ್ತಿದೆ. ಇತ್ತೀಚಿಗೆ ನಟ ಅಮಿತಾಬ್ ಬಚ್ಚನ್ ಕಾರ್ಯಕ್ರಮದಲ್ಲಿ ಆರ್ಥಿಕ ತಜ್ಞೆಯನ್ನು ಹೊಗಳಿ ಪೇಚಿಗೆ ಸಿಲುಕಿದ್ದಾರೆ.

  'ಅವರ ಮುಖವು ತುಂಬಾ ಸುಂದರವಾಗಿ, ಯಾರು ಆರ್ಥಿಕ ತಜ್ಞೆ ಎಂದು ಹೇಳಲು ಸಾಧ್ಯವಿಲ್ಲ' ಎಂದು ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರನ್ನು ಹೊಗಳಿ ಅಮಿತಾಬ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಅಮಿತಾಬ್ ಹೀಗೆ ಹೇಳುತ್ತಿರುವ ವಿಡಿಯೋವನ್ನು ಗೀತಾ ಗೋಪಿನಾಥ್ ಅವರು ಶೇರ್ ಮಾಡಿ, ಪ್ರತಿಕ್ರಿಯೆ ನೀಡಿದ್ದಾರೆ.

  ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ'ಶೋನಲ್ಲಿ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ'ಶೋನಲ್ಲಿ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ

  ಜನಪ್ರಿಯ ಕ್ವಿಜ್ ಕಾರ್ಯಕ್ರಮದಲ್ಲಿ ಅಮಿತಾಬ್, ಹಾಟ್ ಸೀಟಿನಲ್ಲಿ ಕುಳಿತ ಸ್ಪರ್ಧಿಗೆ, ಗೀತಾ ಗೋಪಿನಾಥ್ ಅವರ ಫೋಟೋ ತೋರಿಸಿ, 'ಈ ಚಿತ್ರದಲ್ಲಿ ಕಾಣುವ ಆರ್ಥಿಕ ತಜ್ಞರು 2019ರಿಂದ ಯಾವ ಸಂಸ್ಥೆಯ ಮುಖ್ಯ ಅರ್ಥಿಕ ತಜ್ಞರಾಗಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ.

  ಬಳಿಕ ಅವಳ ಮುಖವೂ ತುಂಬಾ ಸುಂದರವಾಗಿದೆ, ಯಾರೂ ಅವರನ್ನು ಆರ್ಥಿಕತೆಗೆ ಸಂಬಂಧಿಸಿದವಳು ಎನ್ನುವುದಿಲ್ಲ' ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಗೀತಾ ಶೇರ್ ಮಾಡಿ, ಸಾರ್ವಕಾಲಿನ ಶ್ರೇಷ್ಠ ನಟರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾದ ನಾನು ಇದನ್ನು ಅವರಿಂದ ನಿರೀಕ್ಷಿಸಿರಲಿಲ್ಲ' ಹೇಳಿದ್ದಾರೆ.

  ಗೀತಾ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅಮಿತಾಬ್ ಬಚ್ಚನ್, ಧನ್ಯವಾದಗಳು ಗೀತಾ ಅವರೆ. ನಾನು ನಿಮ್ಮ ಬಗ್ಗೆ ಬಳಸಿದ ಪ್ರತಿಯೊಂದು ಪದವು ವಿನಯದಿಂದ ಕೂಡಿತ್ತು' ಎಂದು ಹೇಳಿದ್ದಾರೆ.

  ಅಮಿತಾಬ್ ಅವರ ಈ ಮಾತಿಗೆ ಪರ ವಿರೋದ ಚರ್ಚೆಗಳು ನಡೆಯುತ್ತಿದೆ. ಕೆಲವರು ಅಮಿತಾಬ್ ಪರ ಬ್ಯಾಟಿಂಗ್ ಮಾಡಿದ್ರೆ ಇನ್ನು ಕೆಲವರು ಸುಂದರವಾದ ಆರ್ಥಿಕ ತಜ್ಞರು ಇರುತ್ತಾರೆ ಎಂದು ಹೇಳುತ್ತಿದ್ದಾರೆ.

  English summary
  Amitabh bachchan praised economist gita gopinath in kaun banega karodpati.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X