For Quick Alerts
  ALLOW NOTIFICATIONS  
  For Daily Alerts

  'KBC'ಯಲ್ಲಿ ಫುಡ್ ಡೆಲಿವರಿ ಬಾಯ್ ಆದ ಅಮಿತಾಬ್ ಬಚ್ಚನ್: ಬಿಗ್ ಬಿ ನಡೆಗೆ ಅಭಿಮಾನಿಗಳ ಮೆಚ್ಚುಗೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅನೇಕ ಕಾರಣಗಳಿಗೆ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಈ ಇಳಿ ವಯಸ್ಸಿನಲ್ಲೂ ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳ ರಂಜಿಸುತ್ತಿರುವ ಅಮಿತಾಬ್ ಕಿರುತೆರೆಯಲ್ಲೂ ಆಕ್ಟೀವ್ ಆಗಿದ್ದಾರೆ. ಹಿಂದಿ ಕಿರುತೆರೆಯ ಪ್ರಸಿದ್ಧ ಶೋಗಳಲ್ಲಿ ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿ ಶೋಅನ್ನು ಅಮಿತಾಬ್ ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಇದೀಗ ಸೀಸನ್ 13ರ ಪ್ರಾರಂಭವಾಗಿದ್ದು, ಅಮಿತಾಬ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

  ಈಗಾಗಲೇ ಈ ಶೋ ಪ್ರಾರಂಭವಾಗಿ ಅನೇಕ ದಿನಗಳಾಗಿದೆ. ಪ್ರತಿ ಎಪಿಸೋಡ್ ಕೂಡ ಪ್ರೇಕ್ಷಕರ ಕುತೂಹಲ ಮೂಡಿಸುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾದು ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಕೆಬಿಸಿ ಕಾರ್ಯಕ್ರಮ ಅನೇಕ ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ಮನರಂಜನೆ ಜೊತೆಗೆ ಅನೇಕ ಭಾವುಕ ಕ್ಷಣಗಳು ಪ್ರೇಕ್ಷಕರನ್ನು ಕಣ್ಣೀರಾಗಿಸಿದೆ. ಇದೀಗ ಇಂತಹದೆ ಒಂದು ಭಾವುಕ ಘಟನೆ ಕೆಬಿಸಿ 13ರಲ್ಲಿ ನಡೆದಿದೆ. ಶೋನಲ್ಲಿ ಅಮಿತಾಬ್ ಬಚ್ಚನ್ ಫುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದ್ದು, ಅಮಿತಾಬ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಹಾಟ್ ಸೀಟಿನಲ್ಲಿ ಫುಡ್ ಡಿಲಿವರಿ ಬಾಯ್

  ಹಾಟ್ ಸೀಟಿನಲ್ಲಿ ಫುಡ್ ಡಿಲಿವರಿ ಬಾಯ್

  27 ವರ್ಷದ ಪುಣೆ ಮೂಲದ ವ್ಯಕ್ತಿ ಆಕಾಶ್ ವಾಘ್ಮಾರೆ ಅವರನ್ನು ಅಮಿತಾಬ್ ಕರೋಡ್ ಪತಿ ಶೋಗೆ ಸ್ವಾಗತ ಮಾಡಿದರು. ಆಕಾಶ್ ಫುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ, ತಮ್ಮ ಕನಸುಗಳ ಸಾಕಾರಕ್ಕಾಗಿ ಪಾರ್ಟ್ ಟೈಮ್ ಜಾಬ್ ನಿಂದ ಆಕಾಶ್ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅಮಿತಾಬ್ ತಿಳಿಸಿದರು. ನಂತರ ಆಕಾಶ್ ತಾವೇ ಸ್ವತಃ ತಮ್ಮ ಬದುಕಿನ ಕುರಿತು ಮಾತನಾಡಿದ್ದಾರೆ.

  ತನ್ನ ಆಸೆ ಹೇಳಿಕೊಂಡಿದ್ದ ಆಕಾಶ್

  ತನ್ನ ಆಸೆ ಹೇಳಿಕೊಂಡಿದ್ದ ಆಕಾಶ್

  ಆಕಾಶ್ ಸದ್ಯ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ತನ್ನ ಜೀವನದ ಭದ್ರತೆಗೆ ಒಂದು ಉದ್ಯೋಗ ಮತ್ತು ಕುಟುಂಬಕ್ಕಾಗಿ ಒಂದು ಮನೆಯನ್ನು ಖರೀದಿ ಮಾಡುವ ಕನಸನ್ನು ಕಂಡಿದ್ದಾರೆ. ತನ್ನ ಈ ಕನಸಿನ ಜೊತೆಗೆ ಮತ್ತೊಂದು ಆಸೆಯನ್ನು ಅಮಿತಾಬ್ ಮುಂದಿ ಬಿಚ್ಚಿಟ್ಟರು. ತಾನು ಆಹಾರವನ್ನು ಎಲ್ಲರಿಗೂ ತಲುಪಿಸುತ್ತೇನೆ. ಆದರೆ ಒಂದು ದಿನ ನನಗೆ ನನ್ನ ಮನೆ ಬಾಗಿಲಿಗೆ ಯಾರಾದರು ಆಹಾರವನ್ನು ತಲುಪಿಸಬೇಕು, ನಾನು ಅವರಿಗೆ ನನ್ನ ಕೈಯಾರೆ ಟಿಪ್ಸ್ ಕೊಡಬೇಕು ಎನ್ನುವ ದೊಡ್ಡ ಆಸೆಯನ್ನು ಅಮಿತಾಬ್ ಮುಂದೆ ಹೇಳಿದರು.

  ಆಕಾಶ್ ಗಾಗಿ ಫುಡ್ ಡಿಲಿವರಿ ಬಾಯ್ ಆದ ಅಮಿತಾಬ್

  ಆಕಾಶ್ ಗಾಗಿ ಫುಡ್ ಡಿಲಿವರಿ ಬಾಯ್ ಆದ ಅಮಿತಾಬ್

  ಆಕಾಶ್ ಕನಸನ್ನು ಅಮಿತಾಬ್ ವೇದಿಕೆ ಮೇಲೆ ಈಡೇರಿಸಿದ್ದಾರೆ. ಇಂದೇ ಆಕಾಶ್ ಕನಸು ಈಡೇರಲಿದೆ, ನಾನು ಆಕಾಶ್ ಅವರಿಗೆ ಆಹಾರ ವಿತರಿಸುತ್ತೇನೆ ಎಂದು ಸ್ವತಃ ಅಮಿತಾಬ್ ಅವರೇ ಹೇಳಿ ಆಕಾಶ್‌ಗೆ ಫುಡ್ ಡಿಲಿವರಿ ಮಾಡಿದರು. ಅಮಿತಾಬ್ ನಡೆಯಿಂದ ಭಾವುಕರಾದ ಆಕಾಶ್ ನಾನು ಇದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

  ಎಷ್ಟು ಮೊತ್ತ ಗೆಲ್ಲುತ್ತಾರೆ ಆಕಾಶ್?

  ಎಷ್ಟು ಮೊತ್ತ ಗೆಲ್ಲುತ್ತಾರೆ ಆಕಾಶ್?

  ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಅಮಿತಾಭ್ ಬಚ್ಚನ್ 2,50,000 ರೂ. ಮೊತ್ತಕ್ಕೆ ಕೇಳಲಾಗುವ 13ನೇ ಪ್ರಶ್ನೆ ಎಂದು ಕೇಳಿದ್ದಾರೆ. ಅಲ್ಲಿಗೆ ಪ್ರೋಮೋ ಮುಕ್ತಾಯವಾಗಿದೆ. ಹಾಗಾಗಿ ಈ ಎಪಿಸೋಡ್ ಭಾರಿ ಕುತೂಹಲ ಮೂಡಿಸಿದೆ. ಆಕಾಶ್ ಎಷ್ಟು ಮೊತ್ತದ ಹಣ ಸಂಪಾದಿಸುತ್ತಾರೆ ಎಂದು ಕಾದುನೋಡಬೇಕು.

  ಸಂತೋಷದ ಜೀವನ ಎಂದ ಆಕಾಶ್

  ಸಂತೋಷದ ಜೀವನ ಎಂದ ಆಕಾಶ್

  ಅಂದಹಾಗೆ ಆಕಾಶ್ ಕಳೆದ 5 ತಿಂಗಳಿಂದ ಆನ್ ಲೈನ್ ಫುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಿರ್ಮಾಣದ ಹಂತದ ಕಟ್ಟದಲ್ಲಿಯೇ ವಾಸಿಸುತ್ತಿರುವುದಾಗಿ ಆಕಾಶ್ ಹೇಳಿದ್ದಾರೆ. ಆದರೆ ತುಂಬಾ ಸಂತೋಷದಿಂದ ಕುಟುಂಬದ ಜೊತೆ ಬದುಕು ಸಾಗಿಸುತ್ತಿರುವುದಾಗಿ ಆಕಾಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

  ಶುಕ್ರವಾರದ ಎಪಿಸೋಡ್‌ನಲ್ಲಿ ಚಿನ್ನದ ಹುಡುಗ ನೀರಜ್

  ಈ ಬಾರಿಯ ಕೆಬಿಸಿ13 ಅನೇಕ ವಿಶೇಷತೆಗಳಿಂದ ಕೂಡಿದೆ. ಪ್ರತಿ ಶುಕ್ರವಾರ ವಿಶೇಷ ಅತಿಥಿ ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕೂಳಿತುಕೊಳ್ಳುತ್ತಾರೆ. ಕಳೆದ ವಾರ ದೀಪಿಕಾ ಪಡುಕೋಣೆ ಮತ್ತು ಫರ್ಹಾ ಖಾನ್ ಅಮಿತಾಬ್ ಮುಂದೆ ಹಾಟ್ ಸೀಟ್ ಏರಿದ್ದರು. ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಚಿನ್ನದ ಹುಡುಗ ನೀಜರ್ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ನೀರಜ್ ಕುಳಿತುಕೊಳ್ಳುತ್ತಿದ್ದಾರೆ. ಶುಕ್ರವಾರ ಪ್ರಸಾರವಾಗುವ ಶಾನ್ದಾರ್ ಕಾ ಶುಕ್ರವಾರ್ ಎಪಿಸೋಡ್‌ನಲ್ಲಿ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ.

  English summary
  Big B Amitabh bachchan turns food delivery boy For KBC 13 contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X