ಹಾಟ್ ಲುಕ್‌ನಲ್ಲಿ ಅಮೃತಧಾರೆ ನಟಿ : ಸಾರಾ ಅಣ್ಣಯ್ಯ ಮಾಡರ್ನ್ ಲುಕ್‌ಗೆ ನೆಟ್ಟಿಗರು ಏನಂದ್ರು ಗೊತ್ತೇ?

By ಪೂರ್ವ

ಸಾರಾ ಅಣ್ಣಯ್ಯ ಹಾಟ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೆ 'ಅಮೃತಧಾರೆ' ಧಾರಾವಾಹಿ ಮೂಲಕ ಎಲ್ಲರ ಮನಗೆದ್ದಿರುವ ಚೆಲುವೆ ಸಾರಾ ಅಣ್ಣಯ್ಯ. ನಿಜ ಜೀವನದಲ್ಲಿ ಹೇಗೆ ಮಾಡರ್ನ್ ಆಗಿ ಇರುತ್ತಾರೋ ಅದೇ ರೀತಿ ಸೀರಿಯಲ್‌ನಲ್ಲೂ ಕೂಡ ಸಖತ್ ಮಾಡರ್ನ್ ಆಗಿ ಇದ್ದಾರೆ. ಸದ್ಯ ಈ ನಟಿ ಕೊಟ್ಟಿರುವ ಲುಕ್‌ಗೆ ಪಡ್ಡೆ ಹುಡುಗರು ಮಾತ್ರ ಕಳೆದು ಹೋಗಿದ್ದಾರೆ. ಮುದ್ದು ಮುದ್ದಾಗಿ ಕಾಣಿಸುತ್ತಿರುವ ಚೆಲುವೆ 'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ತಂಗಿ ಮಹಿಮಾ ಪಾತ್ರ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಇನ್ನೂ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಾರಾ ಅಣ್ಣಯ್ಯ ಅವರನ್ನು ಹಾಡಿ ಹೊಗಳುತ್ತಿರುತ್ತಾರೆ. ಕೆಲವೊಂದು ಬಾರಿ ಫುಲ್ ಮಾಡರ್ನ್ ಆಗಿ ನಟಿ ಕಾಣಿಸಿಕೊಂಡು ಹುಡುಗರ ನಿದ್ದೆ ಕದ್ದಿದ್ದೂ ಇದೆ. ಇನ್ನೂ ಕೆಲವು ಬಾರಿ ಭಾರತೀಯ ನಾರಿಯ ಹಾಗೆ ಮೈ ತುಂಬಾ ಬಟ್ಟೆ ಹಾಕಿಕೊಂಡು ಟ್ರೆಡಿಷನಲ್ ಲುಕ್ ಕೊಟ್ಟಿದ್ದೂಇದೆ.

Amrithadhare Serial actress Sara Annaiah new glamour photoshoot is trending

ಇನ್ನೂ ಮಹಿಮಾ ಪಾತ್ರಧಾರಿ ಯಾವುದೇ ಡ್ರೆಸ್ ತೊಟ್ಟರು ಬಹಳ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳು ಇವರ ಕ್ಯೂಟ್ ಲುಕ್‌ಗೆ ಫಿದಾ ಆಗಿದ್ದಾರೆ. ಇನ್ನೂ ಈ ಫೋಟೋಗೆ ಸಾಕಷ್ಟು ಲೈಕ್ ಬಂದಿದ್ದು ಹಾಗೆಯೇ ಸಾಕಷ್ಟು ಕಾಮೆಂಟ್‌ಗಳು ಬರುತ್ತಿದೆ. ಇನ್ನೂ ಸಾರಾ ಅಣ್ಣಯ್ಯ ಸಖತ್ ಬೋಲ್ಡ್ ಆಗಿರುವ ನಟಿ. ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಎಂದು ಹೇಳಿದರು ತಪ್ಪಾಗದು. ಯಾವುದೇ ಪಾತ್ರ ಕೊಟ್ಟರು ಅದನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಟ್ಯಾಲೆಂಟ್ ಸಾರಾ ಅಣ್ಣಯ್ಯಗಿದೆ.

'ಕನ್ನಡತಿ'ಯ ಮೂಲಕ ಮನಗೆದ್ದ ಚೆಲುವೆ

ಸಾರಾ ಅಣ್ಣಯ್ಯ ಬಣ್ಣದ ಬದುಕಿನಲ್ಲಿ ತನ್ನ ಫ್ಯಾಷನ್‌ನಿಂದಲೇ ಫೇಮಸ್. ಫ್ಯಾಷನ್ ಜಗತ್ತಿನಲ್ಲಿ ಗುರುತಿಸಿಕೊಂಡಿರೋ ಡಿಸೈನರ್ ಆಗಿ ಕಾಣಿಸಿಕೊಂಡಿದ್ದು, ಅವರ ಡ್ರೆಸ್ಸಿಂಗ್ ಕೂಡ ತುಂಬಾನೆ ಸ್ಟೈಲಿಶ್. ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಸಖತ್ ಹಾಟ್ ಆಗಿ ಕಾಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಹೆಚ್ಚು ಬೋಲ್ಡ್ ಆಗಿದ್ದಾರೆ ಈ ನಟಿ. ನಟನೆಯಲ್ಲಿ ಮಾತ್ರ ಈಕೆ ಎತ್ತಿದ ಕೈ. ಸಾರಾ ಅಣ್ಣಯ್ಯ ಮೊದಲು ಕಾಣಿಸಿಕೊಂಡಿದ್ದು 'ಕನ್ನಡತಿ' ಧಾರಾವಾಹಿ ಮೂಲಕ.

ಮಾಡರ್ನ್ ಡ್ರೆಸ್‌ನಲ್ಲಿ ಮಿಂಚಿಂಗ್

ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಹೀರೋಯಿನ್ ಗೆಳತಿಯ ಪಾತ್ರವನ್ನು ನಿಭಾಯಿಸುತ್ತಿದ್ದರು. ಅಲ್ಲೇ ಜನಗಳ ಮನದಲ್ಲಿ ಈಕೆ ಜಾಗ ಪಡೆದುಕೊಂಡಿದ್ದರು. ಹಾಗೆಯೇ ಈಕೆ ಸ್ಟೈಲ್, ಬೋಲ್ಡ್‌ ಲುಕ್‌ಗಳಿಂದಲೇ ಗುರುತಿಸಿಕೊಂಡಿರುವುದು ಖುಷಿಯ ವಿಚಾರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತನ್ನ ಮುದ್ದಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಮಾಡರ್ನ್ ಸೀರೆಯಲ್ಲಿ ಮಿಂಚುವ ನಟಿ

ಮಾಡರ್ನ್ ಆಗಿ ಸೀರೆಯುಟ್ಟು ಅದೆಷ್ಟೋ ಬಾರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. "ಸೀರೆಯಲ್ಲಿ ನೀವು ಬಲು ಚೆಂದ" ಎಂದು ಅಭಿಮಾನಿಯೊಬ್ಬರು ಬಹಳ ಖುಷಿ ಕೂಡ ವ್ಯಕ್ತ ಪಡಿಸಿದ್ದಾರೆ. ಸಾರಾ ಅಣ್ಣಯ್ಯ, ಥ್ರೆಡ್ ಸ್ಲೀವ್ಸ್ ಹೊಂದಿರುವ ಬ್ಯಾಕ್ ಲೆಸ್ ತಿಳಿ ನೀಲಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ್ದು, ಸಖತ್ ಬೋಲ್ಡ್ ಆಗಿದ್ದಾರೆ. ಹಾಗೆಯೇ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಫೋಟೋದ ಕೆಳಗೆ "She saw love in empty hearts" ಎಂದು ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು ಸೆಕ್ಸಿ, ಸೂಪರ್, ಬ್ಯೂಟಿಫುಲ್, ಹಾಟ್, ಗಾರ್ಜಿಯಸ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವಾರು ಜನರು ಬೇರೆ ಇಂಡಸ್ಟ್ರಿಯ ನಾಯಕಿಯರಿಗೆ ಮೊರೆ ಹೋಗುತ್ತಿದ್ದಾರೆ ಅಂತಹದರಲ್ಲಿ ನಮ್ಮ ಕನ್ನಡದಲ್ಲಿರುವ ಅದೆಷ್ಟು ಚೆಂದದ ಹುಡುಗಿಯರು ಟ್ಯಾಲೆಂಟ್ ಇರುವ ಹುಡುಗಿಯರು ಬೆಳೆಯಬೇಕು ಎನ್ನುವುದು ಎಲ್ಲರ ಹೆಬ್ಬಯಕೆ.

More from Filmibeat

English summary
Amrithadhare Serial actress Sara Annaiah new glamour photoshoot is trending:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X