Amruthadhaare ; ಡೇಟಿಂಗ್ ಹೊರಟ ಜೋಡಿಗಳು : ಚೌಕಾಸಿ ಮಾಡಿ ಬಟ್ಟೆ ಕೊಡಿಸಿದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಮದುವೆ ಆದ ಬಳಿಕ ಮೊದಲ ಸಂಬಳ ಬಂದಿದೆ. ಇದೇ ಖುಷಿಯಲ್ಲಿ ಭೂಮಿಕಾ ಕುಣಿದಾಡಿದ್ದಾಳೆ.ತನ್ನ ಮೊದಲ ಸಂಬಳದಲ್ಲಿ ಪತಿ ಗೌತಮ್ ಗೆ ಟ್ರೀಟ್ ಕೊಡಿಸಲು ಪ್ಲಾನ್ ಮಾಡಿದ್ದಾಳೆ. ಅದೂ ಕೂಡ ಕೇವಲ 3 ಸಾವಿರ ರೂಪಾಯಿಗೆ ಟ್ರೀಟ್ ಕೊಡಿಸಲು ಮುಂದಾಗಿದ್ದಾಳೆ.
ಕೋಟಿಗೆ ಬೆಲೆ ಬಾಳುವ ಗೌತಮ್ ಮೂರು ಸಾವಿರ ರೂಪಾಯಿಗೆ ಎಂಥಹ ಟ್ರೀಟ್ ಎಂದು ಆಶ್ಚರ್ಯ ಪಟ್ಟಿದ್ದಾನೆ. ಭೂಮಿಕಾ ಟ್ರೀಟ್ ಹೇಗಿರಬಹುದು ಎಂದು ಕುತೂಹಲಗೊಂಡಿದ್ದಾನೆ.

ಡೇಟಿಂಗ್ ಹೊರಟ ಜೋಡಿಗಳು

ಮದುವೆಯಾದ ಬಳಿಕ ಪ್ರೀತಿ ಮಾಡಿ ಈಗ ಡೇಟಿಂಗ್ ಹೊರಟಿರುವ ಗೌತಮ್ ಮತ್ತು ಭೂಮಿಕಾ ಜೋಡಿ ದಿನ ದಿನಕ್ಕೂ ಕ್ಲೋಸ್ ಆಗುತ್ತಿದ್ದಾರೆ. ತನ್ನ ಸಂಬಳದಲ್ಲಿ ಟ್ರೀಟ್ ಕೊಡಿಸಲು ಭೂಮಿಕಾ ಆಟೋದಲ್ಲಿ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಮೊದಲು ತಾನು ಓದಿದ ಶಾಲೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ತನ್ನ ಅನುಭವಗಳನ್ನು ಹೇಳಿಕೊಂಡಿದ್ದಾಳೆ. ಬಳಿಕ ಮಕ್ಕಳೊಂದಿಗೆ ಸೇರಿಕೊಂಡು ಭೂಮಿಕಾ ಮತ್ತು ಗೌತಮ್ ಕ್ರಿಕೆಟ್ ಆಟವಾಡಿದ್ದಾರೆ. ನಂತರ ಬಟ್ಟೆಯ ಅಂಗಡಿಗೆ ಹೋಗಿ ಗೌತಮ್ ಗೆ ಶರ್ಟ್ ಕೊಡಿಸಿದ್ದಾಳೆ. ಬಾರ್ಗೈನ್ ಮಾಡಿ ಗಂಡನನ್ನು ಮೆಚ್ಚಿಸಿದ್ದಾಳೆ. ರಸ್ತೆ ಬದಿಯಲ್ಲಿ ಸಿಗುವ ಜೋಳ ಕೊಡಿಸಿದ್ದು, ಗೌತಮ್ ಇಷ್ಟಪಟ್ಟಿದ್ದಾನೆ.

Amrutha dhaare Serial 04 July episode written update

ಸಿನಿಮಾ ನೋಡಿ ಎಮೋಷನಲ್ ಆದ ಗೌತಮ್

ಕೊನೆಗೆ ಗೌತಮ್ ನನ್ನು ಭೂಮಿಕಾ ಸಿನಿಮಾಗೆ ಕರೆದುಕೊಂಡು ಹೋಗಿದ್ದಾಳೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ಕರೆದುಕೊಂಡು ಹೋಗಿರುವ ಭೂಮಿಕಾ ಬ್ರೇಕ್ ನಲ್ಲಿ ಪಾಪ್ ಕಾರ್ನ್ ತಂದಿದ್ದಾಳೆ. ಸಿನಿಮಾದಲ್ಲಿನ ಎಮೋಷನಲ್ ಸೀನ್ಸ್ ಗೆ ಗೌತಮ್ ಕಣ್ಣೀರು ಹಾಕಿದ್ದಾನೆ. ಭೂಮಿಕಾ ಪ್ರೇಮಿಗಳಂತೆ ಗೌತಮ್ ನನ್ನು ಅಪ್ಪಿಕೊಂಡಿದ್ದಾಳೆ. ಮದುವೆಯಾದ ಬಳಿಕ ಡೇಟಿಂಗ್ ಹೋಗಿರುವ ಜೋಡಿಗಳು ತಮ್ಮ ದಿನವನ್ನು ಎಂಜಾಯ್ ಮಾಡಿದ್ದಾರೆ.

ಪಾರ್ಥನ ಬಗ್ಗೆ ತಲೆ ಕೆಡಿಸಿಕೊಂಡ ಅಶ್ವಿನಿ

ಅಶ್ವಿನಿಗೆ ಪಾರ್ಥ ಮತ್ತು ಅಪೇಕ್ಷಾಳ ಪ್ರೀತಿ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ತಾಯಿ ಶಕುಂತಲಾ ಬಳಿ ಮಾತನಾಡಿದ್ದಾಳೆ. ಆದರೆ ಶಕುಂತಲಾ ಕ್ಯಾರೆ ಎಂದಿಲ್ಲ. ಇದರಿಂದ ಅಶ್ವಿನಿ ಇರಿಟೇಟ್ ಆಗಿದೆ. ಪಾರ್ಥನನ್ನು ಪ್ರಶ್ನಿಸಿದರೂ ಆಕೆಗೆ ಸಮಾಧಾನವಾಗುತ್ತಿಲ್ಲ. ಅಶ್ವಿನಿ ಪಾರ್ಥನ ವಿಚಾರದಲ್ಲಿ ಯಾಕೆ ತಲೆ ಕೆಡಿಸಿಕೊಂಡಿದ್ದಾಳೆ ಎಂದು ಜೈದೇವ್ ಗಮನಿಸಿದ್ದಾನೆ. ನೇರವಾಗಿ ಅಶ್ವಿನಿ ಬಳಿ ಹೋಗಿ ಏನಾಯ್ತು ಎಂದು ಕೇಳಿದ್ದಕ್ಕೆ, ಪಾರ್ಥ ಮತ್ತು ಅಪೇಕ್ಷಾ ಪ್ರೀತಿ ಬಗ್ಗೆ ಹೇಳಿದ್ದಾಳೆ. ಅವಳು ನಮ್ಮ ಮನೆಗೆ ಬರುವುದು ಇಷ್ಟವಿಲ್ಲ. ನಿನ್ನ ಜೊತೆಗೆ ಮದುವೆ ಕ್ಯಾನ್ಸಲ್ ಆದಮೇಲೂ ಪಾರ್ಥನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದಾಗ ಜೈದೇವ್ ಅಶ್ವಿನಿಗೆ ಐಡಿಯಾ ಕೊಟ್ಟಿದ್ದಾನೆ.

amrutha-dhaare-serial-04-july-episode-written-update

ಹೆಂಡತಿ ಹಣಕ್ಕೆ ಕೈ ಚಾಚಿದ ಜೈದೇವ್

ಸದಾಶೀವನ ಬಳಿ ಹೋಗಿ ಇವರಿಬ್ಬರ ಪ್ರೀತಿ ಬಗ್ಗೆ ಹೇಳು. ಆಗ ಅವರ ತಂದೆಯೇ ಈ ಪ್ರೀತಿಗೆ ಕೊನೆಯಾಡುತ್ತಾರೆ ಎಂದು ಹೇಳಿಕೊಡುತ್ತಾನೆ. ಅಶ್ವಿನಿಯೂ ಇದಕ್ಕೆ ಒಪ್ಪಿಕೊಂಡಿದ್ದಾಳೆ. ಇನ್ನು ಜೈದೇವ್ ಸ್ನೇಹಿತರು ಪಾರ್ಟಿಗೆ ಕರೆದಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದೇ ಜೈದೇವ್ ಒದ್ದಾಡುತ್ತಿದ್ದಾನೆ. ಮಲ್ಲಿ ಜೈದೇವ್ ಗೆ ತನ್ನ ಬಳಿ ಹಣವಿದ್ದು ಕೊಡುವುದಾಗಿ ಹೇಳಿದ್ದಾಳೆ. ಪಾರ್ಟಿಗೆ ಹೋಗಲು ಈಗ ಜೈದೇವ್ ಮಲ್ಲಿ ಬಳಿ ಹಣ ಪಡೆಯುವ ಸ್ಥಿತಿ ಬಂದೊದಗಿದೆ. ಮಲ್ಲಿ ಎಂದರೆ ಸಿಡಿಯುವ ಜೈದೇವ್ ಈಗ ಅವಳ ಬಳಿಯೇ ಹಣಕ್ಕಾಗಿ ಕೈ ಚಾಚಿದ್ದಾನೆ. ಭೂಮಿಕಾ ಮಾಡಿರುವ ಕೆಲಸದಿಂದ ಮನೆಯವರ ಪಾಕೆಟ್ ಖಾಲಿಯಾಗಿದ್ದು, ಕೈ ಕಟ್ಟಿ ಹಾಕಿದಂತಾಗಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X