Amruthadare: ಪಾರ್ಥನ ಪ್ರೀತಿಗೆ ಅಡ್ಡಗಾಲಾದ ಜೈದೇವ್‌ಗೆ ತಕ್ಕ ಶಾಸ್ತಿ; ಅಣ್ಣನಿಂದಾನೇ ಕಪಾಳ ಮೋಕ್ಷ!
ಜೈದೇವ್ ಬೇಲಿ ಹಾರುವ ಬುದ್ಧಿಯನ್ನು ಹೆಚ್ಚು ಬೆಳೆಸಿಕೊಂಡಿದ್ದಾನೆ ಎಂಬುದು ಅವನ ತಾಯಿಗೆ ಮಾವನಿಗೆ ಚೆನ್ನಾಗಿಯೇ ಗೊತ್ತು. ಆದರೆ ಈ ಕೆಟ್ಟ ನಡವಳಿಕೆಗೆ ಬುದ್ದಿ ಹೇಳದೆ ಹಾಗೇ ಮುಂದುವರೆಯುವುದಕ್ಕೆ ಬಿಟ್ಟರು. ಅದಕ್ಕೆ ತಕ್ಕ ಶಾಸ್ತಿ ಎಂಬಂತೆ ಗೌತಮ್ ಸರಿಯಾಗಿ ಕಪಾಳ ಮೋಕ್ಷ ಮಾಡಿದ್ದಾನೆ.
ಜೈದೇವ್‌ಗೆ ಹೊಸದಾಗಿ ಯಾರೇ ಹುಡುಗಿಯರನ್ನು ಕಂಡರು ಅವರ ಜೊತೆಗೆ ಡೇಟಿಂಗ್ ಮಾಡುವ ಹಂಬಲ. ಅಪ್ಪಿಯ ಜೊತೆಗೂ ಆ ದಾರಿಯಲ್ಲಿ ನಡೆಯುವುದಕ್ಕೆ ಪ್ರಯತ್ನ ಪಟ್ಟ. ಆದರೆ ಅದು ಸಾಧ್ಯವಾಗದೆ ಇದ್ದಾಗ, ಮದುವೆಯೆಂಬ ಅಸ್ತ್ರ ಮುಂದಿಟ್ಟು, ಇದೀಗ ಎಲ್ಲರೆದುರು ಅವಮಾನಕ್ಕೀಡಾಗಿದ್ದಾನೆ.

ಮಗನ ಪರ ಶಕುಂತಲಾ ವಕಾಲತ್ತು
ಮಗನ ಘನಂಧಾರಿ ಕೆಲಸಗಳೆಲ್ಲಾ ಶಕುಂತಲಾಗೆ ಗೊತ್ತಿಲ್ಲದೇ ಏನು ಇಲ್ಲ. ಮಲ್ಲಿಯ ಪ್ರೆಗ್ನೆಂಟ್ ವಿಚಾರವೂ ತಿಳಿದು, ಕಪಾಳಕ್ಕೊಂದು ಕೊಟ್ಟು, ರಾತ್ರೋ ರಾತ್ರಿ ಮಲ್ಲಿಯನ್ನು ಅಲ್ಲಿಂದ ಸಾಗಾಟ ಮಾಡಿದ್ದಳು. ಈಗ ಮದುವೆ ಮಂಟಪಕ್ಕೆ ಮಲ್ಲಿ ಬಂದಾಗಿದೆ. ಭೂಮಿಕಾ ತನ್ನ ತಂಗಿಯ ಜೀವನ ಹಾಗೂ ಮಲ್ಲಿಯ ಜೀವನಕ್ಕೆ ನ್ಯಾಯ ಕೇಳುತ್ತಿದ್ದರೆ, ಶಕುಂತಲಾ ಸೊಸೆಯ ಮೇಲೆ ಜೋರು ಮಾಡುತ್ತಿದ್ದಾಳೆ ವಿನಃ, ಮಗನ ತಪ್ಪಿನ ಬಗ್ಗೆ ಒಂದು ಮಾತನ್ನು ಆಡುತ್ತಿಲ್ಲ. ಮಗನ ಪರವಾಗಿಯೇ ಮಾತನಾಡಿದ್ದು, ಭೂಮಿಕಾಳ ಕೋಪ ಹೆಚ್ಚಿಸಿದೆ.
ಮಲ್ಲಿಯದ್ದು ನಾಟಕವೆಂದ ಜೈದೇವ್
ಇನ್ನು ಮಲ್ಲಿ ಮಂಟಪದೊಳಗೆ ಬಂದಿದ್ದು ಜೈದೇವ್ ಹಾಗೂ ಶಕುಂತಾಲಾಗೆ ಶಾಕ್ ಆಗಿದೆ. ಈ ಸಮಯದಲ್ಲಿ ಶಕುಂತಲಾ ಕೂಡ ತಾತ-ಮೊಮ್ಮಗಳದ್ದು ನಾಟಕ ಎಂದೇ ಬಿಂಬಿಸಿದ್ದಾಳೆ. ನನ್ನ ಮಗ ಒಬ್ಬ ಕೆಲಸದವನ ಮೊಮ್ಮಗಳ ಬಳಿ. ಛೀಛೀ ಎಂದು ನಾಟಕವಾಡಿದರೆ, ಜೈದೇವ್ ಹಸೆಮಣೆಯಿಂದಾನೇ ಎದ್ದು ಬಂದು, ಹೌದು ಬಿಗ್ ಬ್ರದರೋ ಇಬ್ಬರು ನಾಟಕವಾಡುತ್ತಿದ್ದಾರೆ. ಮಲ್ಲಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ.
ಗೌತಮ್ ಸಹಾಯ ಪಡೆದ ಭೂಮಿಕಾ
ಮಲ್ಲಿಯ ವಿಚಾರವನ್ನು ಭೂಮಿಕಾ, ಗೌತಮ್ ಬಳಿ ಹೇಳಿದ್ದಾಳೆ. ಅವಳು ಇಲ್ಲದೆ ಇರುವ ವಿಚಾರವನ್ನು ತಿಳಿಸಿದ್ದಾಳೆ. ನಿಮ್ಮ ತಾಯಿ ಸಾಕ್ಷಿಯಿಲ್ಲದೆ ಒಪ್ಪುವುದಿಲ್ಲ ಎಂಬುದನ್ನು ಹೇಳಿದ್ದಾಳೆ. ಹೀಗಾಗಿ ಮುತುವರ್ಜಿ ವಹಿಸಿ ಗೌತಮ್, ಮಲ್ಲಿಯನ್ನು ಹುಡುಕಿಸಿ, ಮಂಟಪಕ್ಕೆ ಕರೆತಂದಿದ್ದಾನೆ. ಮಲ್ಲಿ ಬಳಿ ಆ ಮಗುವಿಗೆ ಕಾರಣ ಯಾರೆಂದು ಕೇಳಿದ್ದಾನೆ. ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ವಾದಿಸಲು ಬಂದ ಜೈದೇವ್‌ಗೆ ಗೌತಮ್ ಕಪಾಳ ಮೋಕ್ಷ ಮಾಡಿದ್ದಾನೆ. ನಂಬಿಕೆಯನ್ನು ಕಳೆದುಕೊಂಡ ದ್ರೋಹಿ ಎಂದು ಬೈದಿದ್ದಾನೆ.

ಪಾರ್ಥನ ಪ್ರೀತಿಗೆ ಸಿಗುತ್ತಾ ಜಯ
ಈಗ ಪಾರ್ಥ ಮತ್ತು ಅಪೇಕ್ಷಾ ಪ್ರೀತಿ ಮಾಡುತ್ತಿದ್ದ ವಿಚಾರ ತಿಳಿದ ಮೇಲೆ ಜೈದೇವ್ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದನು. ಅಪ್ಪಿಯೂ ಪಾರ್ಥ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಂಡೆ ಮದುವೆಗೆ ಒಪ್ಪಿದ್ದಳು. ಆದರೆ ಪರಿಸ್ಥಿತಿಗೆ ಕಟ್ಟು ಬಿದ್ದು ಇಬ್ಬರು ಸುಮ್ಮನಾಗಿದ್ದರು. ಇನ್ನೇನು ಪ್ರೀತಿ ಕಳೆದು ಹೋಗುತ್ತಿದೆ ಎಂದು ನೋವು ಮಾಡಿಕೊಂಡಿದ್ದರು. ಆದರೆ ಜೈದೇವ್ ನಾಟಕ ತಾಳಿ ಕಟ್ಟುವ ಮೊದಲೇ ಬಯಲಾಗಿದೆ. ಮಲ್ಲಿ ಜೊತೆಗೆ ಈಗ ಮದುವೆಯಾಗಲೇಬೇಕಿದೆ, ಸಂಸಾರ ಮಾಡಲೇಬೇಕಿದೆ. ಹಸೆಮಣೆಯಿಂದ ಏಳಬಾರದು ಎಂಬ ಪದ್ಧತಿಯಿಂದಾಗಿ ಪಾರ್ಥ ಮದುವೆಯಾದರೂ ಆಗಬಹುದು. ಈ ಮೂಲಕವಾದರು ಅಪ್ಪಿಯ ಪ್ರೀತಿ ಉಳಿಯಬಹುದು.


Click it and Unblock the Notifications











