Karan: 'ಅಮೃತಧಾರೆ' ಕರಣ್ ಶಿವನ ಪೂಜೆ; ಒಳ್ಳೆ ಸಂಸ್ಕಾರ ಕಲಿಸಿದ್ದಾರೆ ಎಂದ ನೆಟ್ಟಿಗರು

By ಎಸ್ ಸುಮಂತ್

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನಾಗಿ ಕರಣ್ ನಟಿಸುತ್ತಿದ್ದಾರೆ. ಗೌತಮ್ ಮುದ್ದಿನ ತಮ್ಮ, ಭೂಮಿಕಾಳ ಮುದ್ದಿನ ಮೈದುನ, ಅಪ್ಪಿಯ ಪ್ರೀತಿಯ ಹುಡುಗ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ಕರಣ್, ನೆಟ್ಟಿಗರ ಮನದ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿಕೊಳ್ಳುತ್ತಿದ್ದಾರೆ.

ಧಾರಾವಾಹಿಯಲ್ಲಂತೂ ಪಾರ್ಥ ಪಾತ್ರದಲ್ಲಿ ಯಾವಾಗಲೂ ಜೋಶ್ ಆಗಿ ಇರುತ್ತಾನೆ. ಅವನಿದ್ದರೆ ಮನೆಯಲ್ಲೆಲ್ಲಾ ಖುಷಿಯೋ ಖುಷಿ. ನಿಜ ಜೀವನದಲ್ಲೂ ಕರಣ್‌ರನ್ನು ನೋಡಿದರೆ ಅದೇ ಥರ ಎನಿಸದೇ ಇರುವುದಿಲ್ಲ. ಜೊತೆಗೆ ಶಿವನ ಭಕ್ತರು ಕೂಡ. ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ರೀತಿಗೆ ಜನ ಫಿದಾ ಆಗಿದ್ದಾರೆ.

Amruthadare Serial Fame Karan visits shiva temple in his hometown

ಶಿವಭಕ್ತ ಗೌತಮ್ ತಮ್ಮ ಪಾರ್ಥ

ಕರಣ್, ಶಿವನ ಭಕ್ತ ಎಂಬುದು ಈ ವಿಡಿಯೋ ನೋಡಿದವರಿಗೆ ಗೊತ್ತಾಗುತ್ತಿದೆ. ಕೈಯಲ್ಲಿ ಹಾಲನ್ನು ಹಿಡಿದು, ಇನ್ನೊಂದು ಕೈನಲ್ಲಿ ಹೂಗಳನ್ನು ಹಿಡಿದು, ಶಿವನ ಪುಟ್ಟ ದೇವಾಲಯಕ್ಕೆ ಹೋಗಿದ್ದಾರೆ. ಆರಂಭದಲ್ಲಿ ಸಿಗುವ ಬಸವಣ್ಣನಿಗೆ ಎಡಗೈನಲ್ಲಿಯೇ ನಮಸ್ಕಾರ ಮಾಡಿದ್ದಾರೆ. ಶಿವಲಿಂಗನಿಗೆ ಹಾಲಿನಲ್ಲಿ ಅಭಿಷೇಕ ಮಾಡಿ, ಪೂಜೆ ಮಾಡಿದ್ದಾರೆ. ಲಿಂಗಕ್ಕೆ ವಿಭೂತಿ ಇಟ್ಟು, ಭಕ್ತಿಯಿಂದ ಪೂಜೆ ಮಾಡಿದ್ದಾರೆ.

ಶಿವನ ಬಗ್ಗೆ ಹೇಳಿದ್ದೇನು ಕರಣ್..?

'ನಾನು ವಾಪಸ್ ಹೊರಡುವ ಮುನ್ನ, ಮನೆಯ ಅಂಗಳದಲ್ಲಿ ಇರುವ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡವೇಕು ಎಂಬುದು, ನನ್ನ ತಾಯಿಯ ಬೇಡಿಕೆಯಾಗಿತ್ತು. ಹಾಗಾಗಿ ಅವಳಿಗೋಸ್ಕರ ಈ ಪೂಜೆ ಮಾಡುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಆ ದೇವರನ್ನು, ಪರಮಾತ್ಮನನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕುವುದಕ್ಕೆ ಇಷ್ಟವಿಲ್ಲ. ಅದಕ್ಕಾಗಿ ನಾನು ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ. ಯಾವುದನ್ನು ಅಳೆಯುವುದಕ್ಕೆ ಸಾಧ್ಯವಿಲ್ಲವೋ, ಯಾವುದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲವೋ, ಯಾವುದಕ್ಕೆ ಹುಟ್ಟು, ಸಾವು ಇಲ್ಲವೋ, ಆರಂಭವಿಲ್ಲ, ಅಂತ್ಯವಿಲ್ಲ, ಯಾವುದೇ ರೀತಿಯ ಇತಿ ಮಿತಿಗಳಿಲ್ಲ. ಅಷ್ಟು ಸಂಪೂರ್ಣವಾದುದ್ದನ್ನು, ಮನುಷ್ಯ ಕಟ್ಟಿರುವ ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಲು ಹೀಗೆ ಸಾಧ್ಯವೇ ಶಿವನೇ..?' ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕರಣ್‌ನ ಹೊಗಳಿದ ನೆಟ್ಟಿಗರು

ಕರಣ್ ಈ ರೀತಿಯ ಸಂಪ್ರದಾಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಮ್ಮ ತಾಯಿಯವರು ಉತ್ತಮ ಸಂಸ್ಕೃತಿ ನೀಡಿದ್ದಾರೆ. ಭಗವಂತನ ಬಗೆಗೆ ಅದ್ಭುತವಾಗಿ ಬರೆದಿದ್ದೀರಿ, ಪಂಚೆಯನ್ನು ಧರಿಸಿ ಪೂಜೆ ಮಾಡಿ ಎಂದು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಕರಣ್ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಜೊತೆಗೆ ಎರಡು ಕೈಗಳಿಂದ ನಮಸ್ಕಾರ ಮಾಡಿ ಎಂದು ಸಲಹೆ ನೀಡಿದ್ದಾರೆ. ಕರಣ್ ವಿಡಿಯೋಗೂ ಶಿವ ಭಕ್ತಿಯನ್ನು ಮೆರೆದಿದ್ದಾರೆ. ಎಲ್ಲರೂ ಹರಹರ ಮಹದೇವ ಎಂದು ಕಮೆಂಟ್ ಹಾಕಿದ್ದಾರೆ.

ಕ್ರೇಜಿ ಬಾಯ್ ಕರಣ್

ಕರಣ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಫಾಲೋವರ್ಸ್ ಅಷ್ಟೇನು ಇಲ್ಲದೆ ಹೋದರೂ ಇತ್ತಿಚೆಗೆ ಹೆಚ್ಚಾಗುತ್ತಿದ್ದಾರೆ. ದಿನೇ ದಿನೇ ಜಾಸ್ತಿಯಾಗುತ್ತಿದ್ದಾರೆ. ಬೈಕ್ ಕ್ರೇಜ್ ಹೆಚ್ಚಾಗಿದೆ. ಅದು ಸೋಷಿಯಲ್ ಪೇಜ್‌ನಲ್ಲಿ ಎದ್ದು ಕಾಣುತ್ತಿದೆ. ಒಂದೆರಡು ಬೈಕ್‌ಗಳ ಫೋಟೋಗಳನ್ನು ಹಾಕಿದ್ದಾರೆ. ಕರಣ್, ಕೃಷ್ಣನ ವೇಷವನ್ನು ಕೂಡ ಹಾಕಿದ್ದರು. ಕಾರು, ಬೈಕ್, ಶ್ವಾನಗಳ ಕ್ರೇಜ್ ಹೊಂದಿರುವ ನಟ, ಫುಲ್ ಜಾಲಿ ಜಾಲಿಯಾಗಿ ಇರುತ್ತಾರೆ. ಶೂಟಿಂಗ್ ಸೆಟ್‌ನಲ್ಲೂ ಅದೇ ಥರ ಇರುತ್ತಾರೆ.

More from Filmibeat

English summary
Kannada Tv Actor karan worships Shiva video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X