Amruthadhaare ; ಬಯಲಾಯ್ತು ಜೈದೇವ್ ಬಣ್ಣ, ನೀನು ಗಂಡಸೇ ಅಲ್ಲ- ಬೆಂಕಿಯಾದ ಭೂಮಿಕಾ

''ಅಮೃತಧಾರೆ'' ಧಾರಾವಾಹಿಯನ್ನು ತಪ್ಪದೇ ನೋಡುವ ಹಲವರು ಮಲ್ಲಿಯ ಹೃದಯ ಇನ್ನೊಮ್ಮೆ ನುಚ್ಚು ನೂರಾಗುತ್ತೆ ಎಂದುಕೊಂಡಿದ್ದರು. ಕೊನೆಗೂ ಹಲವರು ಅಂದುಕೊಂಡತೆ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಮದುವೆ ಗಂಡು ಸುನಿ, ಸಿಂಪಲ್ ಸುನಿ ಅಲ್ಲ ಬದಲಿಗೆ ಕೇಡಿ ಜೈದೇವ್ ನ ಅಚ್ಚು ಮೆಚ್ಚಿನ ಪೈಲ್ವಾನ್ ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿದೆ.

ಹೌದು, ಅಸಲಿಗೆ ಸುನಿಯ ಮುಖವಾಡ ಲಕ್ಷ್ಮಿಕಾಂತ್ ಹೇಳಿಕೆಯಿಂದ ಕಳಚಿ ಬೀಳುತ್ತೆ ಎನ್ನುವ ಲೆಕ್ಕಾಚಾರ ಹಲವರು ಹಾಕಿದ್ದರು. ಆದರೆ, ಆಗಿದ್ದೇ ಬೇರೆ. ಈ ಹಿಂದೆ ನಡೆದ ನಿಶ್ಚಿತಾರ್ಥದ ಸಂಭ್ರಮದಲ್ಲಿ ಪಾರ್ಥನನ್ನು ಕಂಡು ಕದ್ದು ಮುಚ್ಚಿ ಓಡಾಡಿದ್ದ ಸುನಿಯನ್ನು ಕಂಡು ಪಾರ್ಥ ಹೌಹಾರಿದ್ದಾನೆ.

amruthadhaare-bhoomika-s-fiery-face-off-sunil-s-reality-exposed-as-jaidev-s-masterplan-crumbles

ಈ ಸುನಿ ಬೇರೆ ಯಾರು ಅಲ್ಲ. ಬದಲಿಗೆ ಜೈದೇವ್ ಶಿಷ್ಯ ಎಂದು ಪಾರ್ಥ ಗಾಬರಿಯಲ್ಲೇ ಗೌತಮ್ ಗೆ ಹೇಳಿದ್ದಾನೆ. ಮತ್ತೊಂದು ಮರಿ ಡುಮ್ಮ ಆಕಾಶ್ ಕೂಡ ಸುನಿಯ ಹಿನ್ನೆಲೆ ಪತ್ತೆ ಹಚ್ಚಿದ್ದಾನೆ. ತಡ ಮಾಡದೇ ತಾಯಿ ಭೂಮಿಕಾ ಬಳಿ ಇರುವ ವಿಚಾರ ಹೇಳಿದ್ದಾನೆ.

ಇದರಿಂದ ಇಲ್ಲಿಯವರೆಗೆ ಸೇಡಿನ ಜ್ವಾಲೆಯಿಂದ ತಪ್ಪಿಸಿಕೊಳ್ಳುತ್ತಾ, ತಾನಾಯ್ತು, ತನ್ನ ಮನೆ ಆಯ್ತು, ಗಂಡ‌ ಮಕ್ಕಳಾಯ್ತು ಎಂದುಕೊಂಡು ಸುಮ್ಮನೆ ಇದ್ದ ಭೂಮಿಕಾ ಕೆರಳಿ ಕೆಂಡವಾಗಿದ್ದಾಳೆ. ಮದುವೆಯ ಸಂಭ್ರಮ ಮರೆತು ಸೀದಾ ಜೈದೇವ್ ಬಳಿ ತೆರಳಿದ್ದಾಳೆ.

amruthadhaare-bhoomika-s-fiery-face-off-sunil-s-reality-exposed-as-jaidev-s-masterplan-crumbles

ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಭೂಮಿಕಾ ಡೈಲಾಗ್ ಹೊಡೆದಿದ್ದು ಭೂಮಿಕಾ ರೌದ್ರಾವತಾರ ಕಂಡು ಜೈದೇವ್ ನಲುಗಿದ್ದಾನೆ. ಆದರೂ ಎಗರಾಡಲು ಜೈದೇವ್ ಮುಂದಾಗಿದ್ದು ಭೂಮಿಕಾ ಧಗಧಗಿಸಿದ್ದಾಳೆ. ನೀನೇನು ಅವಳ ಮದುವೆ ನಿಲ್ಲಿಸೋದು, ನಾನೇ ನಿಲ್ಲಿಸುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾಳೆ.

ಮುಂದೇನು ?

ಸದ್ಯಜೈದೇವನ ಮುಖವಾಡ ಇನ್ನೊಮ್ಮೆ ಗೌತಮ್ ಮತ್ತು ಭೂಮಿಕಾ ಎದುರು ಕಳಚಿ ಬಿದ್ದಿದೆ. ಮದುವೆಯ ನಾನೇ ನಿಲ್ಲಿಸುತ್ತೇನೆ ಎನ್ನುವ ಮಾತುಗಳನ್ನು ಭೂಮಿಕಾ ಆಡಿದ್ದಾಳೆ. ಹಾಗೊಂದು ವೇಳೆ ಮದುವೆ ನಿಲ್ಲಿಸಿದರೆ ಮಲ್ಲಿಯ ಕಥೆ ಏನು..? ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲ್ಲಿಯ ಜೊತೆ ಮದುವೆಯಾಗಲು ಅಣಿಯಾಗಿರುವ ಸುನಿ ಗೊಂದಲದಲ್ಲಿದ್ದಾನೆ. ಜೈದೇವ್ ಹೇಳಿದ್ದಕ್ಕೆ ಹಿಂದೆ ಬಿದ್ದೆ ಎಂದು ಸುನಿ ತಪ್ಪೊಪ್ಪಿಕೊಂಡರು ಕೂಡ ಸುನಿ ಮನದಲ್ಲಿ ಮಲ್ಲಿಯ ಕುರಿತು ಭಾವನೆಗಳು ಇದ್ದಂತೆ ಇವೆ.

amruthadhaare-bhoomika-s-fiery-face-off-sunil-s-reality-exposed-as-jaidev-s-masterplan-crumbles

ಇದರ ನಡುವೆ ಮಲ್ಲಿಯ ಪರೀಕ್ಷೆಗೆ ಅಡ್ಡಗಾಲು ಹಾಕಿದಾಗಲೇ ಜೈದೇವ್‌ಗೆ ಫೋನ್ ಮಾಡಿ ಗೌತಮ್ ಎಚ್ಚರಿಕೆಯನ್ನು ಕೂಡ ನೀಡಿದ್ದ. ಈ ವಿಷಯ ಗೊತ್ತಾದ ಮೇಲೆ ಜೈದೇವ್ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಜಿಜ್ಞಾಸೆ ಕೂಡ ಹಲವರಲ್ಲಿದೆ.ಹೀಗಾಗಿ ಮುಂದೇನಾಗುತ್ತೆ ಎನ್ನುವ ಕುತೂಹಲವಂತೂ ಸದ್ಯ ಇದೆ.

ಪ್ರೇಕ್ಷಕರ ಅಭಿಪ್ರಾಯ

ಸದ್ಯ ಪ್ರೋಮೊಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯಾರೆಲ್ಲಾ ಈ ಚಿಂದಿ ಪ್ರೋಮೋ ನಾ 2ಸಲಕಿಂತ ಜಾಸ್ತಿ ಸಲ ನೋಡಿದ್ರಿ ಲೈಕ್ ಮಾಡಿ, ಈ ವಾರದ ಜೀ ಚಪ್ಪಾಳೆ ನಮ್ಮ ನೆಚ್ಚಿನ "ಭೂಮಿಕಾ ಅಕ್ಕಾಗೆ!! ಅನ್ನೋರು ಲೈಕ್ ಮಾಡಿ, ತುಂಬಾ ದಿನಗಳ ನಂತರ ನಮ್ಮ ಭೂಮಿಕಾ ದುರ್ಗಾವತಾರ ನೋಡಿ ಯಾರಿಗೆಲ್ಲಾ ಖುಷಿ ಆಯ್ತು, ನಮ್ಮ ಭೂಮಿ ಮೇಡಂ ಜೇಡಿ ಗೆ ಒಂದೆರಡು ಬಾರಿಸಬೇಕು, ಇದು ಇದು ಬೇಕಾಗಿದ್ದಿದ್ದು, ಭೂಮಿ ಮೇಡಂ ಕಾಳಿ ಅವತಾರ ತಾಳಿದಾರೆ, ಈಗ ಅಸಲಿ ಅಮೃತಧಾರೆ ಸ್ಟಾರ್ಟ್ ಆಯ್ತು, ಜೇಡಿಗೆ ಮಾನ ಮರ್ಯಾದೆ ಎಲ್ಲಿದೆ, ಭೂಮಿಕಾಗೆ ಬರಲಿ ಚಪ್ಪಾಳೆ ಎಂದೆಲ್ಲ ಹಲವರು ಕಮೆಂಟ್ ಮಾಡಿದ್ದಾರೆ.

More from Filmibeat

English summary
Watch the latest Amruthadhaare twist: Bhoomika and Gautham finally learn Sunil’s truth. Jaidev’s secrets are out in this intense, must-watch episode update!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X