Amruthadhaare; ಗೌತಮ್-ಭೂಮಿಕಾನ ಒಂದು ಮಾಡಲು ಅಜ್ಜಿ ಮಾಸ್ಟರ್‌ ಪ್ಲಾನ್,ಲವ್ ಮಾಸ್ಟರ್ ಐಡಿಯಾ ವರ್ಕ್‌ ಆಗುತ್ತಾ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಅಜ್ಜಿಗೆ ಕಷಾಯದಲ್ಲಿ ಮಾತ್ರೆ ಬೆರೆಸಿ, ಜೈದೇವ್ ಪ್ರಜ್ಞೆ ತಪ್ಪಿಸಿದ್ದಾನೆ. ಅಜ್ಜಿಯನ್ನು ಮನೆಯಿಂದ ವೃದ್ದಾಶ್ರಮಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಆಸ್ತಿಯೆಲ್ಲ ನನ್ನ ಪಾಲಾಯ್ತು ಎಂದು ಅಜ್ಜಿಗೆ ಜೈದೇವ್‌ ಹೇಳಿದ್ದು ಅಜ್ಜಿ ಗಾಬರಿಯಾಗಿದ್ದಾಳೆ. ಇಷ್ಟೇ ಅಲ್ಲದೇ ಅಜ್ಜಿಯನ್ನು ಜೈದೇವ್ ಹಂಗಿಸಿದ್ದು ಬದುಕಿದ್ದಷ್ಟು ದಿನ ಜಪ ತಪ ಮಾಡಿಕೊಂಡು ಕಾಲ ಕಳೆದು ನೆಮ್ಮದಿಯಾಗಿ ಹೋಗ್ತೀಯಾ ಅಥವಾ ದೀಢೀರ್ ...

ಎಂದು ಮೇಲಕ್ಕೆ ಹೋಗ್ತೀಯಾ ಎಂದು ಯೋಚನೆ ಮಾಡು ಎಂದು ಹೇಳಿದ್ದಾನೆ. ಅಜ್ಜಿಗೆ ಎಚ್ಚರಿಕೆಯನ್ನು ನೀಡಿ ಹೋಗಿದ್ದಾನೆ. ಅಜ್ಜಿಯ ಜೊತೆ ಜೈದೇವ್ ಮಾತನಾಡಿರುವ ಮಾತುಗಳನ್ನು ಶಕುನಿ ಮಾವ ಲಕ್ಷ್ಮೀಕಾಂತ್ ಕೇಳಿಸಿಕೊಂಡಿದ್ದು ವಿಷಯವನ್ನು ಮೊದಲು ಆನಂದ್‌ಗೆ ಹೇಳಬೇಕೆಂದುಕೊಂಡು ಹೋಗಿದ್ದಾನೆ.

amruthadhaare-dec-12-the-love-masters-strike-back-can-ajji-plot-unite-goutham-and-bhoomika

ಇನ್ನೊಂದು ಕಡೆ ಅಜ್ಜಿ ಮನೆಯಿಂದ ಕಾಣೆಯಾದ ವಿಚಾರ ಭಾಗ್ಯಮ್ಮಗೆ ಗೊತ್ತಾಗಿದ್ದು ಭಾಗ್ಯಮ್ಮ ಆತಂಕಕ್ಕೀಡಾಗಿದ್ದಾಳೆ. ಇದೇ ಸಮಯದಲ್ಲಿ ಲಕ್ಷ್ಮೀಕಾಂತ್ ಓಡೋಡಿ ಆನಂದ್‌ನ ಮನೆಗೆ ಬಂದಿದ್ದು ಅಜ್ಜಿ ಕಾಣೆಯಾಗಿರುವದರ ಹಿಂದೆ ನಾನು ಹೇಳಿದಂತೆ ಜೈದೇವ್ ಕೈವಾಡ ಇದೆ ಎಂದು ಹೇಳುತ್ತಾನೆ. ಅಜ್ಜಿಯನ್ನು ಕರೆದುಕೊಂಡು ಹೋಗಿ ವೃದ್ಧಾಶ್ರಮದಲ್ಲಿ ಇಟ್ಟಿರುವ ವಿಚಾರ ಹೇಳುತ್ತಾನೆ.

ಈ ವಿಚಾರ ಕೇಳಿ ಆನಂದ್ ಶಾಕ್ ಆಗಿದ್ದು ಆಸ್ತಿಯನ್ನು ಕೂಡ ಜೈದೇವ್ ತನ್ನ ಹೆಸರಿಗೆ ಮಾಡಿಕೊಂಡಿರುವ ವಿಚಾರವನ್ನು ಕೂಡ ಲಕ್ಷ್ಮೀಕಾಂತ್ ಹೇಳುತ್ತಾನೆ. ವೃದ್ಧಾಶ್ರಮದಲ್ಲಿ ಅಜ್ಜಿ ದಿಗ್ಭಂಧನದಲ್ಲಿದ್ದಾರೆ ಎನ್ನುತ್ತಾನೆ. ಈ ವಿಚಾರ ಕೇಳಿ ಭಾಗ್ಯಮ್ಮ ಹಿಡಿಶಾಪ ಹಾಕಿದ್ದಾಳೆ.

ಮತ್ತೊಂದು ಕಡೆ ವೃದ್ದಾಶ್ರಮದಲ್ಲಿ ಅಜ್ಜಿ ಚಿಂತೆ ಮಾಡುತ್ತಾ ಕೂತಿದ್ದಾಳೆ. ಅಯ್ಯೋ ದೇವರೇ ಎಂತಹ ಗತಿ ಬಂತಪ್ಪ ನನಗೆ ಎಂದು ನೊಂದುಕೊಂಡಿದ್ದಾಳೆ. ಯಾರನ್ನೂ ನಂಬಲು ಆಗದ ಪರಿಸ್ಥಿತಿ ಆಗೋಯ್ತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಸಂಬಂಧಗಳಿಗೆ ಅರ್ಥ ಇಲ್ಲ.. ಭಾವನೆಗಳಿಗೆ ಬೆಲೆ ಇಲ್ಲ.. ಹೇಗಿದ್ದ ಮನೆ ಹೇಗಾಯ್ತು..? ಎಲ್ಲರೂ ದಿಕ್ಕಾಪಾಲಾದರು ಎಂದುಕೊಂಡು ಕಣ್ಣೀರು ಹಾಕುತ್ತಾಳೆ.

ಇದೇ ಸಮಯದಲ್ಲಿ ಭಾಗ್ಯಮ್ಮ ವೃದ್ಧಾಶ್ರಮಕ್ಕೆ ಬಂದಿದ್ದು ಅಮ್ಮ ಎಂದು ಕೂಗಿದ್ದಾಳೆ. ಭಾಗ್ಯಮ್ಮ ಮತ್ತೆ ಮಾತನಾಡಿದ್ದ ಕೇಳಿ ಅಜ್ಜಿ ಆನಂದಭಾಷ್ಪ ಸುರಿಸುತ್ತಾಳೆ. ನಮ್ಮ ಇಬ್ಬರ ಬಾಂಧವ್ಯ ತಾಯಿ ಮಗಳಂತೆಯೇ ಇತ್ತು ಎಂದು ಕಣ್ಣೀರು ಹಾಕುತ್ತಾಳೆ. ನನ್ನ ಆಸ್ತಿಯೆಲ್ಲ ಅವನ ಹೆಸರಿಗೆ ಬರೆದುಕೊಂಡ ಅಂತೆ ಎಂದು ಹೇಳುತ್ತಾಳೆ.

amruthadhaare-dec-12-the-love-masters-strike-back-can-ajji-plot-unite-goutham-and-bhoomika

ಆಗ ಭಾಗ್ಯಮ್ಮ ನ್ಯಾಯ ಕೇಳಲು ಹೋಗೋಣ ಬನ್ನಿ ಎಂದು ಹೇಳಿದಾಗ ಅಜ್ಜಿ ಬೇಡ ಎಂದಿದ್ದು ಈ ವಯಸ್ಸಿನಲ್ಲಿ ನನಗೆ ಅದೆಲ್ಲ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತಾಳೆ. ನನಗೆ ಸಾಕು ಎನಿಸಿದೆ ಮನಸು ಮುರಿದು ಹೋಗಿದೆ ಎನ್ನುತ್ತಾಳೆ. ಆಗ ಆನಂದ್ ಈ ಎಲ್ಲ ವಿಷಯ ಗೌತಮ್‌ಗೆ ಹೇಳೋಣಾ ಎನ್ನುತ್ತಾನೆ. ಆಗಲೂ ಕೂಡ ಅಜ್ಜಿ ಬೇಡ ಎಂದಿದ್ದು ಈ ವಿಷಯ ಗೊತ್ತಾದರೆ ಅವನು ಇನ್ನೂ ನೊಂದುಕೊಳ್ಳುತ್ತಾನೆ ಎಂದು ಹೇಳುತ್ತಾಳೆ. ಯಾರಿಗೂ ಈ ವಿಷಯ ಹೇಳಬೇಡಿ ಎನ್ನುತ್ತಾಳೆ.

ಇದೇ ಸಮಯದಲ್ಲಿ ಗೌತಮ್ ಬಗ್ಗೆ ಅಜ್ಜಿ ಆನಂದ್ ಬಳಿ ವಿಚಾರಿಸಿದ್ದು ಆಗ ಗೌತಮ್ ಮತ್ತು ಆನಂದ್ ವಠಾರದಲ್ಲಿರುವ ವಿಚಾರ ಆನಂದ್ ಹೇಳುತ್ತಾನೆ. ಒಂದೇ ಕಡೆ ಇದ್ದಾರೆ ಆದರೆ ಒಂದೇ ಮನೆಯಲ್ಲಿ ಇಲ್ಲ. ಇಬ್ಬರು ಎದುರು ಬದುರು ಮನೆಯಲ್ಲಿದ್ದಾರೆ ಎನ್ನುತ್ತಾನೆ. ಆಗ ಅಜ್ಜಿ ಎಲ್ಲರೂ ಸೇರಿ ಮಾಡೋದಲ್ವಾ ಎಂದು ಪ್ರಶ್ನೆ ಕೇಳಿದಾಗ ನಾನು ಮಾತನಾಡುವ ಪ್ರಯತ್ನ ಮಾಡಿದೆ ಆದರೆ ಬಗೆಹರಿಯಲಿಲ್ಲ ಎಂದು ಭಾಗ್ಯಮ್ಮ ಹೇಳುತ್ತಾಳೆ.

ಸದ್ಯ ಗೌತಮ್ ಮತ್ತು ಭೂಮಿಕಾನ ಒಂದು ಮಾಡಲು ಅಜ್ಜಿ ಮಾಸ್ಟರ್ ಪ್ಲಾನ್ ಮಾಡಿದ್ದು ಸಾಯುವ ಡ್ರಾಮಾ ಮಾಡಿದ್ದಾಳೆ. ಅವರಿಬ್ಬರನ್ನು ನೋಡುವುದೇ ನನ್ನ ಕೊನೆಯಾಸೆ, ನನ್ನ ಈ ಆಸೆ ಈಡೇರಿಸುವಂತೆ ಇಬ್ಬರಿಗೆ ಹೇಳಿ ಎಂದು ಭಾಗ್ಯಮ್ಮ ಮತ್ತು ಆನಂದ್‌ಗೆ ಹೇಳಿದ್ದಾಳೆ. ಇನ್ನೂ ಅಜ್ಜಿ ಅಂದರೆ ಆನಂದ್ ಮತ್ತು ಭೂಮಿಕಾ ಇಬ್ಬರಿಗೆ ಮೊದಲಿಂದ ಪ್ರೀತಿ. ಅಜ್ಜಿಯ ಸಾಯುವ ಹಂತದಲ್ಲಿದ್ದಾಳೆ ಎಂದಾಗ ಇಬ್ಬರು ತಮ್ಮ ಮನಸ್ತಾಪ ಮರೆತು ನೋಡಲು ಬಂದೇ ಬರುತ್ತಾರೆ. ಹೀಗೆ ಬರುವ ಇಬ್ಬರು ಒಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhaare: Dec 12! Will Ajji's dramatic plan finally succeed? The Love Masters strike back to bring Goutham and Bhoomika together. Don't miss the twist!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X