Amruthadhaare ; ಕ್ಲೈಮ್ಯಾಕ್ಸ್ ಹಂತಕ್ಕೆ ಅಮೃತಧಾರೆ ? 'ಪ್ರೀತಿಸುವವರನ್ನು ಕೊಂದುಬಿಡಿ' ಎಂದ ಗೌತಮ್
"ಅಮೃತಧಾರೆ" ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್ ಮತ್ತು ಭೂಮಿಕಾನ ಒಂದು ಮಾಡಲು ಅಜ್ಜಿ ಮಾಸ್ಟರ್ ಪ್ಲಾನ್ ಮಾಡಿದ್ದು ಸಾಯುವ ಡ್ರಾಮಾ ಮಾಡಿದ್ದಾಳೆ. ಅವರಿಬ್ಬರನ್ನು ನೋಡುವುದೇ ನನ್ನ ಕೊನೆಯಾಸೆ, ನನ್ನ ಈ ಆಸೆ ಈಡೇರಿಸುವಂತೆ ಇಬ್ಬರಿಗೆ ಹೇಳಿ ಎಂದು ಭಾಗ್ಯಮ್ಮ ಮತ್ತು ಆನಂದ್‌ಗೆ ಹೇಳಿದ್ದಾಳೆ. ಮತ್ತೊಂದು ಕಡೆ ಭೂಮಿಕಾ ಹುಟ್ಟುಹಬ್ಬದ ಪ್ರಯುಕ್ತ, ಉಡುಗೊರೆ ಏನೂ ಕೊಡಬೇಕೆಂದು ಗೌತಮ್ ಬಳಿ ಆಕಾಶ್ ಕೇಳಿದ್ದಾನೆ.
ಆದರೆ, ಗೌತಮ್ ಸುಲಭವಾಗಿ ಹೇಳಬೇಕಲ್ಲ.ಯಾಕೆಂದರೆ ಮಗ ಕಿಲಾಡಿಯಾದರೆ ಅಪ್ಪ ಈ ವಿಚಾರದಲ್ಲಿ ಜಗತ್ ಕಿಲಾಡಿ. ಸತ್ಯ ಇಬ್ಬರಿಗೂ ಗೊತ್ತು. ಆದರೂ ಪೈಪೋಟಿಗೆ ಬಿದ್ದವರಂತೆ ಇಬ್ಬರು ಡ್ರಾಮಾ ಮಾಡ್ತಿದ್ದಾರೆ. ನಿನ್ನ ಮಮ್ಮಿಗೆ ಏನಿಷ್ಟ ಎನ್ನುವುದು ನನಗೆ ಹೇಗೆ ಗೊತ್ತಿರುತ್ತೆ ಎನ್ನುತ್ತಾನೆ ಗೌತಮ್. ಇಷ್ಟೇ ಅಲ್ಲ ಈ ಪ್ರಶ್ನೆ ನನ್ಯಾಕೆ ಕೇಳ್ತಿದ್ದೀಯಾ ಎಂದು ಹೇಳುತ್ತಾನೆ.

ಆಗ ಆಕಾಶ್ ಎಷ್ಟು ಚೆನ್ನಾಗಿ ಆಕ್ಟ್ ಮಾಡ್ತೀರಾ ಪಪ್ಪಾ ಒಳ್ಳೆಯ ಆಕ್ಟರ್ ನೀವು ಎಂದು ಮನದಲ್ಲಿಯೇ ಅಂದುಕೊಂಡು ಅವರಿಗೆ ಸೀರೆ ಅಂದರೆ ತುಂಬಾ ಇಷ್ಟ ಎಂದು ಹೇಳುತ್ತಾನೆ. ಮಲ್ಲಿಗೆ ಹೂ ಕೂಡ ಇಷ್ಟ ಎನ್ನುತ್ತಾನೆ. ಇಷ್ಟೇ ಅಲ್ಲದೇ ಸೀರೆ ಮತ್ತು ಮಲ್ಲಿಗೆ ಹೂ ಸೂಪರ್ ಕಾಂಬಿನೇಷನ್ ಅಲ್ವಾ ಸರ್ ಎಂದು ಕೇಳುತ್ತಾನೆ.
ಆಕಾಶ್‌ನ ಈ ಮಾತು ಕೇಳಿ ತನ್ನ ಗತಕಾಲದ ದಿನಗಳು ಗೌತಮ್‌ಗೆ ನೆನಪಾಗುತ್ತಾವೆ. ಅಷ್ಟರಲ್ಲೇ ಇನ್ನೇನೂ ಇಷ್ಟ ಆಕಾಶ್ ಎಂದು ಮಿಂಚು ಕೇಳಿದ್ದು ಅವರಿಗೆ ಕಾಫಿ ತುಂಬಾ ಇಷ್ಟ ಎಂದು ಆಕಾಶ್ ಹೇಳುತ್ತಾನೆ. ಆಗ ಸುಮ್ಮನಿರದ ಗೌತಮ್ ಕಾಫಿ ಜೊತೆ ಪುಸ್ತಕ ಕೂಡ ಇಷ್ಟ ಇರಬೇಕು, ಬುಕ್ ತಗೊಂಡು ಹೋಗಿ ಕೊಡೋ ಎಂದು ಹೇಳುತ್ತಾನೆ.
ಆಗ ಹೌದಲ್ವಾ ಸರ್ ನೀವು ಹೇಳಿದ ಮೇಲೆ ನನಗೆ ಅರ್ಥ ಆಯ್ತು ಸೂಪರ್ ಸರ್ ನೀವು, ನೀವು ಹೇಳಿದಂತೆ ಬುಕ್ ಕೊಡ್ತೀನಿ ಎಂದು ಹೇಳುತ್ತಾನೆ. ಬನ್ನಿ ಸರ್ ಕಾರ್ ಎತ್ತಿ ನೀವು ಎಂದು ಗೌತಮ್ ಮತ್ತು ಮಿಂಚು ಜೊತೆ ಹೊರಡುತ್ತಾನೆ.
ಗೌತಮ್ ಜೊತೆ ಹೋದ ಆಕಾಶ್ ಜೋಗಿ ಅವರ "ಅಶ್ವತ್ಥಾಮನ್ " ಬುಕ್ ತಂದು ತನ್ನ ತಾಯಿ ಭೂಮಿಕಾಗೆ ಉಡುಗೊರೆಯಾಗಿ ನೀಡಿದ್ದಾನೆ. ನೀವು ಕೊಟ್ಟಿರುವ ಪಾಕೆಟ್ ಮನಿಯನ್ನೆಲ್ಲಾ ಹಾಗೇ ಉಳಿಸಿಕೊಂಡು ತಂದಿರುವುದಾಗಿ ಹೇಳುತ್ತಾನೆ.

ಆಕಾಶ್‌ನ ಮಾತು ಕೇಳಿ ಮಲ್ಲಿ ಖುಷಿಯಾಗಿದ್ದರೆ, ಭೂಮಿಕಾ ಭಾವುಕಳಾಗುತ್ತಾಳೆ. ಆಕಾಶ್ ಗೆ ಥ್ಯಾಂಕ್ಯೂ ಎನ್ನುತ್ತಾಳೆ.ಆಗ ಆಕಾಶ್ ತಗೊಂಡಿದ್ದು ನಾನಾದರೂ ನನ್ನ ಜೊತೆ ಗೌತಮ್ ಸರ್ ಮತ್ತು ಮಿಂಚು ಕೂಡ ಬಂದಿದ್ದರು ಎಂದು ಹೇಳುತ್ತಾನೆ.ಭೂಮಿಕಾ ಈ ಬುಕ್ ತಗೋಬೇಕು ಅಂತ ನಿನಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನೆ ಮಾಡಿದ್ದು ನೀವು ದಿನಾ ಓದ್ತಿರೋದನ್ನು ನೋಡಿದ್ದೇ, ಅವರ ಫೋಟೋ ಬೇರೆ ತಲೆಯಲ್ಲಿತ್ತು ಹೀಗಾಗಿ ನಾನೇ ತಗೊಂಡೇ ಎಂದು ಹೇಳುತ್ತಾನೆ. ಇದಕ್ಕೆ ನಿಜವಾಗಿಯೂ ಈ ಬುಕ್ ನೀನೇ ಸೆಲೆಕ್ಟ್ ಮಾಡಿದ್ದು ಎಂದು ನನಗೆ ಈಗಲೂ ನಂಬೋಕಾಗ್ತಿಲ್ಲ ಎನ್ನುತ್ತಾಳೆ.
ಆದರೆ ಇದೇ ಸಮಯದಲ್ಲಿ ಒಂದಲ್ಲ ಬದಲಿಗೆ ಎರಡು ಬುಕ್ ಇರುವುದು ಭೂಮಿಕಾ ಮತ್ತು ಆಕಾಶ್ ಗಮನಕ್ಕೆ ಬಂದಿದ್ದು, ಜೋಗಿಯವರ ಮತ್ತೊಂದು ಪ್ರೀತಿಸುವವರನ್ನು ಕೊಂದು ಬಿಡಿ ಪುಸ್ತಕ ನೋಡಿ ಭೂಮಿಕಾ ಪ್ರಶ್ನೆ ಮಾಡುತ್ತಾಳೆ. ನಿನ್ನ ವಯಸ್ಸಿಗೆ ಮೀರಿದ ಟಾಪಿಕ್ ಅಲ್ವಾ ಇದು ಎನ್ನುತ್ತಾಳೆ. ಆಗ ಆಕಾಶ್ ಗೂಗ್ಲಿ ಎಸೆದಿದ್ದು ಓದೋದು ನಾನಲ್ವಲ್ಲಾ ನಿಮ್ಮ ವಯಸಿಗೆ ಕರೆಕ್ಟ್ ಆಗಿದೆ ಅದು ಎಂದು ಹೇಳುತ್ತಾನೆ. ಅಂಗಡಿಯವರು ಈ ಬುಕ್ ಕೂಡ ಚೆನ್ನಾಗಿದೆ ಅಂದರೂ ಅದಕ್ಕೆ ಅದನ್ನು ತಂದೇ ಎಂದು ಹೇಳುತ್ತಾನೆ.
ಸದ್ಯ ಅಜ್ಜಿಯ ಪ್ಲ್ಯಾನ್ ವರ್ಕ್ ಆಗಿದ್ದು, ಗೌತಮ್ ಜೊತೆ ಭೂಮಿಕಾ ಅಜ್ಜಿಯನ್ನು ನೋಡಲು ರೆಡಿಯಾಗಿದ್ದಾಳೆ. ಅಜ್ಜಿ ಇವರ ಇಬ್ಬರ ನಡುವೆ ಇರುವ ಮನಸ್ತಾಪ ದೂರ ಮಾಡ್ತಾಳಾ..? ಗೌತಮ್ ಮತ್ತು ಭೂಮಿಕಾ ಒಂದಾಗ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನೂ.. ಇದೇ ವೇಳೆ ''ಅಮೃತಧಾರೆ'' ಮುಕ್ತಾಯದ ಹಂತಕ್ಕೆ ಬಂದು ತಲುಪಿತಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಯಾಕೆಂದರೆ ಅಜ್ಜಿ ಮಾತಿಗೆ ಮಣಿದು ಇಬ್ಬರು ಒಂದಾದರೆ ಕಥೆ ಮುಗಿದಂತೆಯೇ. ನಿಜಕ್ಕೂ ''ಅಮೃತಧಾರೆ'' ಮುಕ್ತಾಯದ ಹಂತಕ್ಕೆ ಬಂದು ತಲುಪಿತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











