Amruthadhare ; ಜೈದೇವ್‌ಗೆ ಹೆದರಿ ದೇಶ ಬಿಡಲು ಮುಂದಾಗಿದ್ದ ಭೂಮಿಕಾಗೆ ಗೊತ್ತಾಯ್ತು ಸತ್ಯ ; ಹೋರಾಡ್ತಾಳಾ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಆಕಾಶ್ ನ ಜೈದೇವ್ ತನ್ನ ಜೊತೆ ಕರೆದುಕೊಂಡು ಬಂದಿದ್ದಾನೆ. ಮಲ್ಲಿಗೆ ಫೋನ್ ಮಾಡಿ ಆಕಾಶ್ ತನ್ನ ಬಳಿ ಇರುವ ವಿಚಾರವನ್ನು ಕೂಡ ಹೇಳಿದ್ದಾನೆ. ಇಷ್ಟೇ ಅಲ್ಲ ನನ್ನಲ್ಲಿ ಇನ್ನೂ ಚೂರು ಪಾರು ಮಾನವೀಯತೆ ಇದೆ ಹೀಗಾಗಿ ಆಕಾಶ್ ಗೆ ನಾನೇನೂ ಮಾಡಲ್ಲ, ಮರು ಮಾತನಾಡದೇ ಬಂದು ಸಹೊ ಹಾಕುವಂತೆ ಹೇಳಿದ್ದಾನೆ. ಇಬ್ಬರಿಗೂ ನೆಮ್ಮದಿ ಮುಖ್ಯ ಎಂದು ಹೇಳಿದ್ದಾನೆ.
ಜೈದೇವ್ ಮಾತು ಕೇಳಿ ಭೂಮಿಕಾ ಆಘಾತಕ್ಕೀಡಾಗಿದ್ದು, ಆತಂಕದಲ್ಲಿಯೇ ಜೈದೇವ್ ಬಳಿ ಮಲ್ಲಿ ಜೊತೆ ಬಂದಿದ್ದಾಳೆ. ಇನ್ನೇನಾದರೂ ಸಹಿ ಮಾಡಲು ಇದೆಯಾ ? ಅಥವಾ ನಮ್ಮಿಂದ ಇನ್ನು ಕಿತ್ಕೋಳ್ಳಲು ಇದೆಯಾ ? ಎಂದು ಪ್ರಶ್ನೆ ಮಾಡಿದ್ದಾಳೆ.ಇವತ್ತೇ ಕೊನೆ, ಇನ್ಯಾವತ್ತು ನಾವು ನಿಮ್ಮ ಮುಖ ನೋಡಬಾರದು ಇವತ್ತೇ ಮುಗಿಸಿ ಎನ್ನುವ ಭೂಮಿಕಾ ಇನ್ಮುಂದೆ ನಮ್ಮನ್ನಾಗಲಿ.. ಮಲ್ಲಿಯನ್ನಾಗಲಿ.. ಹುಡುಕಿಕೊಂಡು ಬರುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾಳೆ.

ಮುಂದುವರೆದು ತಾಳ್ಮೆ ಕಟ್ಟೆ ಒಡೆಯೋದು ಒಂದೇ, ಆಣೆಕಟ್ಟೆ ಒಡೆಯೋದು ಒಂದೆ ಎನ್ನುವ ಭೂಮಿಕಾ ಕೆಣಕಿದರೆ ಭೂಕಂಪ ಆಗತ್ತೆ, ಜ್ವಾಲಾಮುಖಿಯೂ ಒಡೆಯತ್ತೆ. ಇಷ್ಟು ವರ್ಷ ತಾಳ್ಮೆಯಿಂದ ಇದ್ದು ಬಂದೆ. ಇನ್ಮುಂದೆ ಆಗೋದು ಸಂಗಮ ಅಲ್ಲ ಸಂಗ್ರಾಮ ಎಂದೆಲ್ಲಾ ಡೈಲಾಗ್ ಹೊಡೆದಿದ್ದಾಳೆ.
ಭೂಮಿಕಾ ಡೈಲಾಗ್ ಗೆ ಶಿಳ್ಳೆ ಚಪ್ಪಾಳೆ
ಭೂಮಿಕಾ ಹೊಡೆದ ಈ ಡೈಲಾಗ್ ಕೇಳಿ ಹಲವರು ಖುಷಿಯಾಗಿದ್ದರು. ಸೇರಿಗೆ ಸವ್ವಾ ಸೇರು ಎಂಬಂತೆ ಭೂಮಿಕಾ ಇನ್ನು ಮುಂದೆ ರಣರಂಗಕ್ಕೆ ಧುಮುಕುತ್ತಾಳೆ ಎಂದುಕೊಂಡಿದ್ದರು. ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಬಂತು ಎಂದುಕೊಂಡಿದ್ದರು. ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು.
ದೇಶ ಬಿಡಲು ಮುಂದಾದ ಭೂಮಿಕಾ
ಜೈದೇವದ ಕಪಿಮುಷ್ಟಿಯಿಂದ ಆಕಾಶ್ ನ ಪಾರು ಮಾಡಿಕೊಂಡು ಬಂದ ಭೂಮಿಕಾ ಮತ್ತೆ ರಣಹೇಡಿಯಂತೆ ಓಡಿ ಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ. ಜೈದೇವ್ ನಿಂದ ತಂದೆಯ ಪ್ರಾಣಕ್ಕೆ ಸಂಚಕಾರ ಇರುವ ವಿಚಾರ ಅರಿತಿರುವ ಆಕಾಶ್ ಕೂಡ ಈ ಊರು ಬೇಡ ಅಂತ ಹೇಳಿದ್ದಾನೆ. ಭೂಮಿಕಾ ದೇಶ ತೊರೆಯುತ್ತಿರುವ ವಿಷಯ ಮಗಳು ಮಿಂಚು ಮೂಲಕ ಗೌತಮ್ ಗೆ ಗೊತ್ತಾಗಿದ್ದು ಗೌತಮ್ ಕಂಗಾಲಾಗಿದ್ದಾನೆ.

ಭೂಮಿಕಾಳ ಈ ನಿರ್ಧಾರದಿಂದ ಬೇಸತ್ತ ಪ್ರೇಕ್ಷಕರು ತಮ್ಮ ಆಕ್ರೋಶವನ್ನು ಸೋಶಿಯಲ್ ಮೀಡಿಯಾ ಮೂಲಕ ಹೊರ ಹಾಕಿದ ಬೆನ್ನಲ್ಲೇ ಧಾರಾವಾಹಿ ತಂಡ ಇನ್ನೊಂದು ಟ್ವಿಸ್ಟ್ ಕೂಡ ರಿವೀಲ್ ಮಾಡಿದ್ದು ಗೌತಮ್ ಮತ್ತು ಭೂಮಿಕಾ ಮರೆತೇ ಹೋದ ಕಾಣೆಯಾದ ಮಗು ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಮಗು ವಿಚಾರ ಹೇಳಿದ ಶಕುನಿ
ನಡೆದ ಎಲ್ಲಾ ವಿದ್ಯಮಾನಗಳಿಂದ ನೊಂದು ಬೆಂದಿರುವ ಮಾವ ಲಕ್ಷ್ಮೀಕಾಂತ್ ಆನಂದ್ ಮುಂದೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ಮಲ್ಲಿಯ ಎದುರು ಇನ್ನೊಂದು ಮಗು ಬದುಕಿರುವ ವಿಚಾರವನ್ನು ಕೂಡ ಹೇಳಿದ್ದಾನೆ. ಮತ್ತೊಂದು ಮಗು ಬದುಕಿರುವ ವಿಚಾರ ತಿಳಿದ ಮಲ್ಲಿ ಸೀದಾ ಬಂದು ಭೂಮಿಕಾಗೆ ವಿಷಯ ಹೇಳಿದ್ದಾಳೆ.
ಮುಂದೇನು ?
ಸದ್ಯ ವಿದೇಶಕ್ಕೆ ಹಾರಲು ಮುಂದಾದ ಭೂಮಿಕಾಗೆ ಮತ್ತೊಂದು ಮಗು ಬದುಕಿರುವ ವಿಚಾರ ಗೊತ್ತಾಗಿದೆ. ಈ ಕಾರಣಕ್ಕೆ ಭೂಮಿಕಾ ತನ್ನ ನಿರ್ಧಾರ ಬದಲಿಸಿದರು ಬದಲಿಸಬಹುದು. ಗೌತಮ್ ಜೊತೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದರು ಮಾಡಬಹುದು. ಯಾರಿಗೆ ಗೊತ್ತು ಗೌತಮ್ ಮನೆ ಸೇರಿರುವ ಮಿಂಚುನೇ ಇವರ ಇಬ್ಬಳ ಮಗಳಾಗಿದ್ದರು ಆಗಿರಬಹುದು. ಸದ್ಯ ಪ್ರೋಮೋ ನೋಡಿದ ಹಲವರು ಈ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











