Amruthadhare ; ತಾಯಿಗೆ ಕೊನೆಗೂ ಸತ್ಯ ಹೇಳಿದ ಆಕಾಶ್ ; ಭೂಮಿಕಾಗೆ ಬಡಿದ ಬರಸಿಡಿಲು-ಬದಲಾಗುತ್ತಾ ನಿರ್ಧಾರ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಎದುರು ಸಿನಿಮಾ ಹೀರೋ ಶೈಲಿಯಲ್ಲಿ ಬಿಲ್ಡಪ್ ಕೊಟ್ಟು ಬಂದಿದ್ದ ಭೂಮಿಕಾ ಮತ್ತೆ ಮೆತ್ತಗಾಗಿದ್ದಾಳೆ. ಜೈದೇವ್ ಹೊಡೆದ ಕೌಂಟರ್ ಡೈಲಾಗ್‌ಗೆ ಬೆದರಿದ್ದಾಳೆ. ಹೀಗಾಗಿಯೇ ಬೆಂಗಳೂರಿನ ಸಹವಾಸ ಮಾತ್ರ ಅಲ್ಲ ಈ ದೇಶದ ಸಹವಾಸವೇ ಬೇಡ ಎಂದು ತೀರ್ಮಾನಕ್ಕೆ ಬಂದಿರುವ ಭೂಮಿಕಾ ಸದ್ಯ ವಿದೇಶ ಯಾತ್ರೆಗೆ ಹೊರಡಲು ಮುಂದಾಗಿದ್ದಾಳೆ. ಜೈದೇವ್‌ನಿಂದ ತಂದೆಯ ಪ್ರಾಣಕ್ಕೆ....

ಸಂಚಕಾರ ಇರುವ ವಿಚಾರ ಅರಿತಿರುವ ಆಕಾಶ್ ಕೂಡ ಈ ಊರು ಬೇಡ ಎಂದು ಹೇಳಿದ್ದು ಮಲ್ಲಿ ಮತ್ತು ಭೂಮಿಕಾ ಇಬ್ಬರನ್ನೂ ಅಚ್ಚರಿಗೆ ದೂಡಿದೆ. ರಣಹೇಡಿಯಂತೆ ಭೂಮಿಕಾ ದೇಶ ತೊರೆಯುತ್ತಿರುವ ವಿಷಯ ಮಗಳು ಮಿಂಚು ಮೂಲಕ ಗೌತಮ್‌ಗೆ ಕೂಡ ಗೊತ್ತಾಗಿದ್ದು ಗೌತಮ್ ಅಕ್ಷರಶಃ ಕಂಗಾಲಾಗಿದ್ದಾನೆ. ಮಿಂಚುನ ಸಮಾಧಾನ ಮಾಡಿ ಭೂಮಿಕಾ ಬಳಿ ಹೋಗದಂತೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಗೋಗರೆದಿದ್ದಾನೆ.

Amruthadhaare Dec 30 Earth-Shattering Twist Akash Spills Gowtham s Truth to Bhumika

ಆದರೆ. ಭೂಮಿಕಾಳದ್ದು ಕಲ್ಲು ಹೃದಯ. ಹಠಮಾರಿ. ಗೌತಮ್ ಎಷ್ಟೇ ಕೇಳಿಕೊಂಡರು ಎಂದಿನಂತೆ ಗೌತಮ್ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಭೂಮಿಕಾ ಆರೋಗ್ಯ ಕಾಪಾಡಿಕೊಳ್ಳಿ ಹುಷಾರು ಎಂದು ಹೇಳಿ ಹೋಗಿದ್ದಾಳೆ.

ಇನ್ನು ಆಕಾಶ್ ತಮ್ಮಿಂದ ದೂರವಾಗುತ್ತಿರುವ ವಿಚಾರ ತಿಳಿದ ಕ್ಷಣದಿಂದ ಭಾವುಕಗೊಂಡಿರುವ ಮಿಂಚು ಕೂಡ ಭೂಮಿಕಾ ಬಳಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೆ, ಭೂಮಿಕಾ ಮಾತ್ರ ನಿರ್ಧಾರ ಬದಲಿಸುವುದಿಲ್ಲ. ಬದಲಿಗೆ ಕೆಲಸದ ಪ್ರಯುಕ್ತ ಹೋಗುತ್ತಿರುವುದಾಗಿ ಹೇಳುತ್ತಾಳೆ. ಮಲ್ಲಿ ಮತ್ತು ಆಕಾಶ್‌ನ ಕರೆದುಕೊಂಡು ಬ್ಯಾಗ್ ಎತ್ತಿಕೊಂಡು ಕ್ಯಾಬ್ ಕಡೆ ಹೆಜ್ಜೆ ಇಡುತ್ತಾಳೆ.

Amruthadhaare Dec 30 Earth-Shattering Twist Akash Spills Gowtham s Truth to Bhumika

ಇದೇ ಸಮಯದಲ್ಲಿ ಒಂದು ನಿಮಿಷ ಮತ್ತೆ ಮರಳಿ ಬರುವುದಾಗಿ ಹೇಳಿರುವ ಆಕಾಶ್ ಮನೆಗೆ ಹೋಗಿದ್ದಾನೆ. ಎಲ್ಲರೂ ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೊವನ್ನು ತೆಗೆದುಕೊಂಡು ಬಂದ ಗೌತಮ್ ಮನೆಯೊಳಗೆ ಹಾಕಿದ್ದಾನೆ. ಮಿಂಚುಗೆ ಮತ್ತೊಮ್ಮೆ ಭಾರವಾದ ಮನಸ್ಸಿಂದ ವಿದಾಯ ಹೇಳಿದ್ದಾನೆ.

ಇದನ್ನು ನೋಡಿರುವ ಭೂಮಿಕಾ ಏನು ಇಟ್ಟು ಬಂದೆ ಎಂದು ಆಕಾಶ್‌ನ ಕೇಳಿದ್ದಾಳೆ. ಆಗ ಆಕಾಶ್ ನಿಮ್ಮ ಮತ್ತು ಪಪ್ಪನ ಫೋಟೋ ಇಟ್ಟು ಬಂದೆ ಎಂದು ಹೇಳಿದ್ದು ಭೂಮಿಗೆ ನಿಂತ ನೆಲ ಕುಸಿದಂತಾಗಿದೆ. ಮಲ್ಲಿ ಕೂಡ ಆಕಾಶ್ ಮಾತುಗಳನ್ನು ಕೇಳಿ ಶಾಕ್ ಆಗಿದ್ದು ಗೌತಮ್ ಅವರೇ ನನ್ನ ಪಪ್ಪ ಎನ್ನುವುದು ನನಗೆ ಮೊದಲೇ ಗೊತ್ತಿತ್ತು ಎಂದು ಭೂಮಿಕಾಗೆ ಆಕಾಶ್ ಹೇಳಿದ್ದಾನೆ.

ಆಕಾಶ್ ಹೇಳಿದ ಈ ಮಾತುಗಳಿಂದ ಭೂಮಿಕಾಗೆ ಬರಸಿಡಿಲು ಬಡಿದಂತಾಗಿದ್ದು, ಸದ್ಯ ಹಲವರು ಮಕ್ಕಳ ಅಭಿನಯ ಮನೋಜ್ಞವಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಲೇ ಭೂಮಿಕಾ ವಿರುದ್ಧ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕುತ್ತಿದ್ದಾರೆ. ಹೆದರಿಕೊಂಡು ಹೀಗೆ ಇನ್ನೆಷ್ಟು ದಿನ ಭೂಮಿಕಾ ಅಲ್ಲಿಂದ ಇಲ್ಲಿ.. ಇಲ್ಲಿಂದ ಅಲ್ಲಿ.. ಅಲೆದಾಡಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಮುಂದೇನು..?

ಈ ವಠಾರ ಖಾಲಿ ಮಾಡುವ ಸಂಚಿಕೆ ನಡುವೆ ಸದ್ಯ ಆನಂದ್ ಮುಂದೆ ಮಾವ ಲಕ್ಷ್ಮೀಕಾಂತ್ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ಮಲ್ಲಿಯೂ ಕೂಡ ಇವರಿಬ್ಬರ ಎದುರು ಬಂದಿದ್ದು, ಇನ್ನೊಂದು ಮಗು ಬದುಕಿರುವ ವಿಚಾರವನ್ನು ಲಕ್ಷ್ಮೀಕಾಂತ್ ಹೇಳಿದ್ದಾನೆ. ಆನಂದ್ ಕೂಡ ಮಗು ಬದುಕಿದ್ದು ಹುಡುಕುವ ಪ್ರಯತ್ನವನ್ನು ಅಂದಿನಿಂದ ಮಾಡುತ್ತಿರುವುದಾಗಿ ಹೇಳಿದ್ದಾನೆ. ಮತ್ತೊಂದು ಮಗು ಬದುಕಿರುವ ವಿಚಾರ ತಿಳಿದ‌ ಮಲ್ಲಿ ಸೀದಾ ದೇಶ ಬಿಡಲು ಮುಂದಾದ ಭೂಮಿಕಾ ಬಳಿ ಬಂದು ವಿಷಯ ಹೇಳಿದ್ದಾಳೆ‌.

ಭೂಮಿಕಾಗೆ ಮತ್ತೊಂದು ಮಗು ಬದುಕಿರುವ ವಿಚಾರ ಗೊತ್ತಾಗಿದೆ. ಈ ಕಾರಣಕ್ಕೆ ಭೂಮಿಕಾ ತನ್ನ ನಿರ್ಧಾರ ಬದಲಿಸಿದರು ಬದಲಿಸಬಹುದು. ಗೌತಮ್ ಜೊತೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದರು ಮಾಡಬಹುದು. ಯಾರಿಗೆ ಗೊತ್ತು ಗೌತಮ್ ಮನೆ ಸೇರಿರುವ ಮಿಂಚುನೇ ಇವರ ಇಬ್ಬಳ ಮಗಳಾಗಿದ್ದರು ಆಗಿರಬಹುದು. ಸದ್ಯ ''ಅಮೃತಧಾರೆ'' ಕುತೂಹಲ ಕೆರಳಿಸಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Akash has finally told Bhumika the truth about Gowtham. Is this the end of the road for them? Don't miss the Amruthadhaare Dec 30 episode update!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X