Amruthadhaare ; ನಮಗ್ಯಾಕೆ ಈ ಶಿಕ್ಷೆ- ಭಾಗ್ಯಮ್ಮ ಕಣ್ಣೀರು, ಭೂಮಿಕಾ ಮಾತುಗಳಿಗೆ ಕೆರಳಿದ ಪ್ರೇಕ್ಷಕರು
"ಅಮೃತಧಾರೆ" ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಎದುರು ಭಾಗ್ಯಮ್ಮ ಬಂದಿದ್ದಾಳೆ. ದೇವಸ್ಥಾನದಲ್ಲಿ ಪವಾಡ ನಡೆದಿದ್ದು ಭಾಗ್ಯಮ್ಮ ಮಾತನಾಡಿದ್ದಾಳೆ. ಆದರೆ.. ಭಾಗ್ಯಮ್ಮ ಮಾತು ಸದ್ಯ ಭೂಮಿಕಾ ತಲೆ ತಗ್ಗಿಸಿದೆ. ಯಾಕೆಂದರೆ, ಇಷ್ಟು ದಿನ ಮನದಲ್ಲಿಯೇ ಹುದುಗಿದ್ದ ಪ್ರಶ್ನೆಗಳನ್ನೆಲ್ಲಾ ಭಾಗ್ಯಮ್ಮ ಕೇಳಲು ಶುರು ಮಾಡಿದ್ದಾಳೆ. ಆದರೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವ ಬದಲು ಗೌತಮ್ ಎದುರೇ ನೀವು ಯಾರು..
ಎನ್ನುವ ವಿಚಾರ ಆಕಾಶ್ ಗೆ ಗೊತ್ತಾಗಬಾರದು, ಗೊತ್ತಾಗುವುದು ಬೇಡ ಎಂದು ಹೇಳಿದ್ದಾಳೆ. ಭೂಮಿಕಾಳ ಈ ಮಾತು ಕೇಳಿ ಭಾಗ್ಯಮ್ಮಗೆ ಆಘಾತವಾಗಿದೆ. ಈ ಆಘಾತದಲ್ಲೇ ಯಾಕೆ ನಮಗೆ ಶಿಕ್ಷೆ..? ಯಾಕೆ ನಮ್ಮಿಂದ ದೂರ ಹೋಗ್ತಿದೀಯಾ ? ಎಂದು ಭಾಗ್ಯಮ್ಮ ಪ್ರಶ್ನೆ ಮಾಡುತ್ತಾಳೆ.

ನಿನ್ನ ದೃಷ್ಟಿಯಲ್ಲಿ ನನ್ನ ಮಗ ತಪ್ಪು ಮಾಡಿರಬಹುದು, ಆದರೆ ಆ ಮಗು ತಪ್ಪೇನು ? ಎಂದು ಕೇಳುತ್ತಾಳೆ. ಮಗುನ ಯಾಕೆ ನಮ್ಮಿಂದ ದೂರ ಮಾಡ್ತಿದ್ದೀಯಾ ? ಎಂದು ಕೇಳುತ್ತಾಳೆ. ಆ ಮಗುಗೆ ಸಿಗಬೇಕಿರುವ ಪ್ರೀತಿ ಯಾಕೆ ಕಿತ್ತುಕೊಳ್ತಿದ್ದೀಯಾ..? ಆ ಮಗು ನಿನ್ನ ಗಂಡನಿಗೆ ಕೂಡ ಮಗು ಅಲ್ವಾ ? ಎನ್ನುತ್ತಾಳೆ. ಭಾಗ್ಯಮ್ಮ ಕೇಳುವ ಈ ಯಾವ ಪ್ರಶ್ನೆಗಳಿಗೂ ಭೂಮಿಕಾ ಬಳಿ ಉತ್ತರ ಇಲ್ಲ. ಹೀಗಿರುವಾಗ ಆಕಾಶ್ ಅಲ್ಲಿ ಬಂದಿದ್ದು ದೂರದಿಂದಲೇ ಮಾತಾಡಿಸಿಕೊಂಡು ಬರ್ತಿನಿ ಎಂದು ಹೇಳಿ ಭಾಗ್ಯಮ್ಮ ತಬ್ಬಿ ಮುದ್ದಾಡಿದ್ದಾಳೆ.
ಮತ್ತೊಂದು ಕಡೆ ದಿಯಾ ದೆಸೆಯಿಂದ ಹಗಲು ಕುಡುಕನಾದ ಜೈದೇವ್ ಕೈಯಲ್ಲಿ ದೇವಸ್ಥಾನದಲ್ಲಿ ಕಣ್ಣೇದುರು ಗೌತಮ್.. ಭೂಮಿಕಾ.. ಭಾಗ್ಯಮ್ಮ.. ಮಲ್ಲಿ.. ಆಕಾಶ್.. ಇದ್ದರೂ ಕೂಡ ಏನೂ ಮಾಡಲು ಸಾಧ್ಯವಾಗಿಲ್ಲ. ಕುಡಿದು ತೂರಾಡುವ ತನ್ನ ಗಂಡನನ್ನು ದಿಯಾ ಮನೆಗೆ ಕರೆದುಕೊಂಡು ಬಂದಿದ್ದು, ಶಕುನಿ ಮಾವ ಲಕ್ಷ್ಮೀಕಾಂತ್ ಮುಖಕ್ಕೆ ನೀರು ಸಿಂಪಡಿಸುವಂತೆ ದಿಯಾಗೆ ಹೇಳಿದ್ದಾನೆ. ಅದ್ರಂತೆ ದಿಯಾ ನೀರು ಸಿಂಪಡಿಸಿದ್ದು ಜೈದೇವ್ ಎಚ್ಚರಗೊಂಡಿದ್ದಾನೆ. ಜೈದೇವ್, ಶಕುಂತಲಾ ಗಾಯದ ಮೇಲೆ ಲಕ್ಷ್ಮೀಕಾಂತ್ ತನ್ನ ಮಾತುಗಳ ಮೂಲಕ ತುಪ್ಪ ಸುರಿದಿದ್ದಾನೆ.

ಭೂಮಿಕಾ ವಿರುದ್ಧ ಜನಾಕ್ರೋಶ
ಸದ್ಯ ಭೂಮಿಕಾ ವಿರುದ್ಧ ಸೋಶಿಯಲ್ ಮೀಡಿಯಾ ಮೂಲಕ ಹಲವರು ಕೆಂಡ ಕಾರುತ್ತಿದ್ದಾರೆ. ಭೂಮಿಕಾ ಆಕ್ಟಿಂಗ್ ಓವರ್ ಆಯ್ತು, ಅಷ್ಟೇ ಅಲ್ಲ ಅಷ್ಟು ದೊಡ್ಡ ಬಿಸಿನೆಸ್ ಮ್ಯಾನ್ ಹೆಂಡ್ತಿ ಅಂದ್ಕೊಂಡು ಈಗ ಪಾಪ ಗೌತಮ್ ಸರ್ ಇವಳಿಗೋಸ್ಕರ ಮನೆ ಆಸ್ತಿ ಎಲ್ಲಾ ಬಿಟ್ಟು ಕಣ್ಣೆದುರಿಗೆ ಇಷ್ಟು ಬಡವಾಗಿ ಬದುಕ್ತಾ ಇದ್ರು, ಆ ಶಕ್ಕೂ ಹೇಳಿದ ಮಾತನ್ನ ನೆನಕೊಂಡು ಒಂದಾಗದೆ ಇರೋದು ಎಷ್ಟು ಸರಿ..? ಗೌತಮ್ ಸರ್ ಅಲ್ಲದೇ ಇನ್ಯಾರದ್ರು ಆಗಿದ್ರೆ ಭೂಮಿಕಾ ಬಿಟ್ಟು ನೆಮ್ಮದಿಯಾಗಿ ರಾಯಲ್ ಆಗಿರ್ತಿದ್ರು ಅನ್ಸತ್ತೆ. ಹೀರೋ ರೋಲ್ ನ ಇಷ್ಟೊಂದು ಕಳಪೆ ಅನ್ನೋ ಹಾಗೆ ತೋರಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೇ ಅಲ್ಲ ಕೊನೆಗೂ ಅವಿವೇಕಿ ಅಧಿಕ ಪ್ರಸಂಗಿ ಭೂಮಿಕಾಗೆ ತಿಳಿ ಹೇಳಿದ ಭಾಗ್ಯಮ್ಮ ಆದರೂ ತನ್ನ ಹುಚ್ಚು ಹಠ ಬಿಡದ ದುರ್ಬುದ್ಧಿ ಬಿಡದ ಭೂಮಿ, ಕೊನೆ ಆಸರೆ ನಮ್ ಭಾಗ್ಯಮ್ಮಗೂ ಕೂಡ ಭೂಮಿ ಬೆಲೆ ಕೊಡ್ಲಿಲ್ಲ, ಭಾಗ್ಯಮ್ಮ ನಿಮ್ ಮೇಲೆ ನಂಬಿಕೆ ಇದೆ ನಮಗೆ ಎಂದು ತಮ್ಮ ಅಸಮಾಧಾನ ಮತ್ತು ಬೇಸರ ಹೊರ ಹಾಕುತ್ತಿದ್ದಾರೆ. ಭಾಗ್ಯಮ್ಮ ಮಾತು ನಿಜ, ಗೌತಮ್ ಮತ್ತು ಭೂಮಿಕಾ ಮತ್ತೆ ಜೊತೆಯಾಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಭಾಗ್ಯಮ್ಮ ಮಾತುಗಳಿಗೆ ಕೂಡ ಭೂಮಿಕಾ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಆಕಾಶ್‌ಗೆ ಭಾಗ್ಯಮ್ಮನೇ ನಿನ್ನ ಅಜ್ಜಿ ಎಂದು ಕೂಡ ಹೇಳಿಲ್ಲ. ಮುಂಬರುವ ದಿನಗಳಲ್ಲಿ ಭಾಗ್ಯಮ್ಮ ಏನ್ಮಾಡ್ತಾಳೆ..? ಶಕುಂತಲಾ ಕ್ರೌರ್ಯದ ಕಥೆಯನ್ನು ಗೌತಮ್‌ಗೆ ಹೇಳುತ್ತಾಳಾ..? ಗೌತಮ್ ಜೊತೆಯಲ್ಲಿ ವಠಾರದಲ್ಲಿಯೇ ಭಾಗ್ಯಮ್ಮ ವಾಸ ಮಾಡುತ್ತಾಳಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











