Amruthadhaare ; ಗೌತಮ್-ಭೂಮಿಕಾ ದೂರ ದೂರ-ಭಾಗ್ಯಮ್ಮ ಶಪಥ ; CCTVಯಲ್ಲಿ ಜೈದೇವ್‌ಗೆ ಕಂಡಿದ್ದೇನು ?

"ಅಮೃತಧಾರೆ" ಧಾರಾವಾಹಿಯಲ್ಲಿ ಭಾಗ್ಯಮ್ಮ ಎದುರುಗಡೆ ಇದ್ದರೂ.. ಬುದ್ದಿವಾದ ಹೇಳಿದರೂ ಕೂಡ ಭೂಮಿಕಾ‌ ಮನಸ್ಸು ಬದಲಾಗಿಲ್ಲ. ಗೌತಮ್ ಪ್ರೀತಿಗೆ ಹೃದಯ ಕರಗಲಿಲ್ಲ. ಬದಲಿಗೆ ಆಕಾಶ್ ಗೆ ನೀವು ಯಾರು ಎನ್ನುವುದು ಗೊತ್ತಾಗೋದು ಬೇಡ ಎಂದು ಭಾಗ್ಯಮ್ಮಗೆ ಭೂಮಿಕಾ ಹೇಳಿದ್ದಾಳೆ. ಭೂಮಿಕಾಳ ಈ ನಡೆ ನುಡಿಯಿಂದ ಭಾಗ್ಯಮ್ಮ ಆಗಾತಗೊಂಡಿದ್ದಾಳೆ. ಆದರೆ ಕುಂದಿಲ್ಲ. ಭರವಸೆ ಕಳೆದುಕೊಂಡಿಲ್ಲ. ಇಂದಲ್ಲ ನಾಳೆ..

ಗೌತಮ್ ಮತ್ತು ಭೂಮಿಕಾನ ಒಂದು ಮಾಡಿಯೇ ಮಾಡುತ್ತೇನೆ ಎಂದು ಶಪಥ ಮಾಡಿದಂತೆ ಇರುವ ಭಾಗ್ಯಮ್ಮ ಸದ್ಯ ಆನಂದ್ ಮನೆಯಿಂದ ಗೌತಮ್ ಮತ್ತು ಭಾಗ್ಯಮ್ಮ ಇರುವ ವಠಾರಕ್ಕೆ ಹೊರಟು ನಿಂತಿದ್ದಾಳೆ.

amruthadhaare-dec-5-bhagyammas-vow-can-she-unite-bhoomika-gautham-jaidev-hunts-the-truth

ಆನಂದ್ ಬಳಿ ಬಂದು ನಾನು ಹೊರಗಡೆ ಹೋಗಿ ಬರ್ತಿನಿ ಎಂದು ಭಾಗ್ಯಮ್ಮ ಹೇಳಿದ್ದು ಆನಂದ್ ಆತಂಕದಲ್ಲಿಯೇ ಎಲ್ಲಿಗೆ ಎಂದು ಕೇಳಿದ್ದಾನೆ. ಭಾಗ್ಯಮ್ಮ ತಾನು ಭೂಮಿಕಾ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದು ಆನಂದ್ ಬೇಡ ಗೌತಮ್ ನಿಮಗೆ ಬೇಡ ಅಂತ ಹೇಳಿದಾನಲ್ಲ ಎನ್ನುತ್ತಾನೆ.

ಈಗಾಗಲೇ ಅತ್ತಿಗೆಯನ್ನು ನೀವು ಭೇಟಿ ಮಾಡಿದ್ದೀರಾ..? ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು. ಹೀಗಿರುವಾಗ ಯಾಕೆ ವ್ಯರ್ಥ ಪ್ರಯತ್ನ ಎನ್ನುತ್ತಾನೆ. ಹೋಗಬೇಡಿ ಏನೂ ಪ್ರಯೋಜನವಾಗಲ್ಲ ಎಂದು ಹೇಳುತ್ತಾನೆ.

ಆಗ ಭಾಗ್ಯಮ್ಮ ನನ್ನದು ಹೆತ್ತ ಕರುಳು, ಗುಂಡು ಏನೋ ಹೇಳಿದ ಎಂದ ಮಾತ್ರಕ್ಕೆ.. ಭೂಮಿಕಾ ಏನೋ‌ ಮಾತನಾಡಿದಳು ಅಂದ ಮಾತ್ರಕ್ಕೆ.. ನಾನು ಸುಮ್ಮನೆ ಇರೋದಕ್ಕೆ ಆಗಲ್ಲ ಎಂದು ಹೇಳುವ ಭಾಗ್ಯಮ್ಮ ನಾನು ನನ್ನ ಪ್ರಯತ್ನ ಮಾಡಲೇಬೇಕು ಎಂದು ಹೇಳುತ್ತಾಳೆ.

ಮುಂದುವರೆದು ಇಷ್ಟು ವರ್ಷ ಭೂಮಿಕಾ ಎಲ್ಲೋ ಹೋಗಿದ್ದಾಳೆ, ನನ್ನ ಮಗ ಹುಡುಕ್ತಿದ್ದಾನೆ, ಅವಳು ಒಂದಲ್ಲೊಂದು ದಿನ ಸಿಕ್ತಾಳೆ, ಇಬ್ಬರು ಒಂದಾಗ್ತಾರೆ ಎನ್ನುವ ಭರವಸೆ ನನಗೆ ಇತ್ತು ಎಂದು ಹೇಳುವ ಭಾಗ್ಯಮ್ಮ ಈಗ ಅವರಿಬ್ಬರು ಎದುರು ಬದುರು ಇದ್ದಾರೆ ಆದರೆ ಅವರ ಮನಸ್ತಾಪ ಮುಗಿತಾನೇ ಇಲ್ಲ, ಒಂದೇ ಕಡೆ ಇದ್ದರೂ ಬೇರೆ ಬೇರೆ ಇದ್ದಾರೆ ಎಂದು ತನ್ನ ನೋವು ಹೊರ ಹಾಕುತ್ತಾಳೆ. ಗುರುತು ಪರಿಚಯ ಇಲ್ಲದವರಂತೆ ಬದುಕುತ್ತಿದ್ದಾರೆ, ಇದೇನು ಮಕ್ಕಳಾಟನಾ, ಕಣ್ಣಾಮುಚ್ಚಾಲೆನಾ, ಇಬ್ಬರದ್ದೂ ಅತಿಯಾಯ್ತು ಎಂದು ಕಿಡಿ ಕಾರುತ್ತಾಳೆ. ನಾನು ಅವರ ನಡುವೆ ಹೋಗಿಯೇ ಹೋಗ್ತೀನಿ ಇಬ್ಬರನ್ನೂ ಒಂದು ಮಾಡಿಯೇ ಮಾಡ್ತೀನಿ ಎಂದು ಹೇಳುತ್ತಾಳೆ.

amruthadhaare-dec-5-bhagyammas-vow-can-she-unite-bhoomika-gautham-jaidev-hunts-the-truth

ಮತ್ತೊಂದು ಕಡೆ ಇಂಗು ತಿಂದ ಮಂಗನಾದಂತೆ ಆಗಿರುವ ಜೈದೇವ್, ದಿಯಾ ಎದುರು ಭಾಗ್ಯಮ್ಮನ ದೇವಸ್ಥಾನದಲ್ಲಿ ನೋಡಿರುವುದಾಗಿ ಹೇಳಿದ್ದಾನೆ. ತನ್ನ ಮಾತುಗಳ ಮೇಲೆ ತನಗೆ ನಂಬಿಕೆ ಇಲ್ಲದಂತಾಗಿ ಕೊನಗೆ ಮತ್ತೆ ದೇವಸ್ಥಾನಕ್ಕೆ ಹೋಗಿದ್ದಾನೆ. ಮೊನ್ನೆಯ ದಿವಸ ದೇವಸ್ಥಾನದಲ್ಲಿ ಪ್ರಮುಖವಾದ ಬಹುಮುಖ್ಯವಾದ ವಸ್ತು ಕಳೆದುಕೊಂಡಿದ್ದೇನೆ, ಹೀಗಾಗಿ CCTVಯ ದೃಶ್ಯಾವಳಿಯನ್ನೊಮ್ಮೆ ನೀವು ತೋರಿಸಬಹುದಾ ಎಂದು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಕೇಳಿದ್ದಾನೆ. ಇದಕ್ಕೆ ದೇವಸ್ಥಾನದವರು ಒಪ್ಪಿದ್ದು CCTV ದೃಶ್ಯಗಳನ್ನು ಜೈದೇವ್‌ಗೆ ತೋರಿಸಿದ್ದಾರೆ. ಸದ್ಯ ಜೈದೇವ್ ಶಾಕ್ ಆದಂತೆ ಪ್ರೋಮೋದಲ್ಲಿ ತೋರಿಸಲಾಗಿದೆ.

ಪ್ರೇಕ್ಷಕರ ಅಭಿಪ್ರಾಯ

ಸದ್ಯ ಹಲವರು ನಮ್ಮ ಭಾಗ್ಯಮ್ಮ ಗುಂಡು ಭೂ ನಾ ಒಂದು ಮಾಡೇ ಮಾಡಿಸುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾಗ್ಯಮ್ಮ ಮಾತಾಡಿದ್ದು ತುಂಬಾ ಖುಷಿ ಆಯ್ತು ಎಂದು ಹೇಳುತ್ತಿದ್ದಾರೆ. ನೀವು ಹೇಳಿದ್ದು ಸರಿ ಇದೆ ಭಾಗ್ಯಮ್ಮ ಭೂಮಿಕಾದು ಈ ನಡುವೆ ಜಾಸ್ತಿ ಆಯ್ತು ನಮಗೆ ಈ ಭೂಮಿಕಾ ಬೇಡ ಮೊದಲು ಇದ್ರಲ್ಲ ಶಕುಂತಲಾ ಹಣೆಗೆ ಗನ್ ಇಟ್ಟ ಭೂಮಿಕಾ ಅವರು ಬೇಕು ನಮಗೆ ಆ ಬೆಂಕಿ ಭೂಮಿಕಾ ಬೇಕು ಎಂದು ತಮ್ಮ ಮನವಿ ಪತ್ರವನ್ನೂ ಕೂಡ ಈ ಮೂಲಕ ಜೀ ಕನ್ನಡ ವಾಹಿನಿಗೆ ಕಳುಹಿಸುತ್ತಿದ್ದಾರೆ.

More from Filmibeat

English summary
Bhagyamma takes a bold vow to reunite Bhoomika and Gautham. Tune in to Amruthadhaare on Dec 5 as Jaidev reviews critical CCTV footage to uncover the truth behind the joint plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X