Amruthadhaare;ಭಾಗ್ಯಮ್ಮ ಕೈಯಲ್ಲಿ ಆಗದ ಕೆಲಸ ಮಾಡ್ತಾಳಾ ಅಜ್ಜಿ?ಒಬ್ಬರಾ,ಇಬ್ಬರಾ-ಜೋಡಿ ಹಕ್ಕಿ ಒಂದು ಮಾಡೋರು ಯಾರು?

"ಅಮೃತಧಾರೆ" ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಡೆದ ಮನಸ್ಸುಗಳನ್ನು ಒಂದು ಮಾಡುವ ಪ್ರಯತ್ನವನ್ನೂ ಎಲ್ಲರೂ ಮಾಡ್ತಿದ್ದಾರೆ. ಆದರೆ.. ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ.‌ ಎಷ್ಟೇ ಹೇಳಿದರೂ ಕೂಡ ಭೂಮಿಕಾ ಮನಸು ಕರಗುತ್ತಿಲ್ಲ. ಬದಲಿಗೆ ಶಕುಂತಲಾ ಎಲ್ಲಿ ಇರುವ ಚೂರು ಪಾರು ನೆಮ್ಮದಿಗೆ ಕೊಳ್ಳಿ ಇಡುತ್ತಾಳೆ ಎನ್ನುವ ಭಯದಲ್ಲಿ ಹಠ ಹಿಡಿದು ಕುಂತಿದ್ದಾಳೆ‌. ಮಾತನಾಡಲು ಶುರು ಮಾಡಿದ ಭಾಗ್ಯಮ್ಮನ ಮಾತನ್ನೂ...

ಕೂಡ ಕೇಳದಷ್ಟು ಭೂಮಿಕಾ ತನ್ನ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದಾಳೆ. ಹಾಗಂಥ ಭಾಗ್ಯಮ್ಮ ಕುಗ್ಗಿಲ್ಲ. ಇಂದಲ್ಲ..ನಾಳೆ.. ಮಗ ಮತ್ತು ಸೊಸೆಯ ನಡುವೆ ಮೂಡಿರುವ ಬಿರುಕಿನ ಮೇಲೆ ಪ್ರೀತಿಯ ಸಿಮೆಂಟ್ ಹಾಕಿಯೇ ಹಾಕುವುದಾಗಿ ಶಪಥ ಮಾಡಿದ್ದಾಳೆ. ಗೌತಮ್ ಮತ್ತು ಭೂಮಿಕಾ ವಾಸ ಮಾಡುವ ವಠಾರಕ್ಕೆ ಬಂದು ಭೂಮಿಕಾ ಮನೆಗೆ ಹೋಗಿದ್ದಾಳೆ. ಸೊಸೆಯನ್ನು ಮಾತನಾಡಿಸಿದ್ದಾಳೆ.

amruthadhaare-dec-7-grandmother-returns-can-her-arrival-finally-unite-gowtham-and-bhoomika

ಆದರೂ ಭೂಮಿಕಾ ಪ್ರತಿಕ್ರಿಯೆ ಮೊದಲಿನಂತೆ ಇದೆ. ಹೀಗಾಗಿ ಮರಳಿ ಪ್ರಯತ್ನ ಮಾಡಲು ಮುಂದಾದ ಭಾಗ್ಯಮ್ಮಗೆ ಆಕಾಶ್ ಮತ್ತು ಮಿಂಚು ಸಿಕ್ಕಿದ್ದು ಇಬ್ಬರನ್ನೂ ಭಾಗ್ಯಮ್ಮ ಮುದ್ದಾಡಿದ್ದಾಳೆ. ಅಜ್ಜಿ ಎಂದು ಹೇಳು ಎಂದು ಆಕಾಶ್ ಗೆ ಹೇಳಿದ್ದಾಳೆ. ಭಾಗ್ಯಮ್ಮ ತನ್ನ ಅಜ್ಜಿ ಎನ್ನುವ ಸತ್ಯ ಬಲ್ಲ ಆಕಾಶ್ ಅಜ್ಜಿ ಎಂದು ಕರೆದಿದ್ದಾನೆ. ಇದರಿಂದ ಭಾಗ್ಯಮ್ಮ ಖುಷಿಯಾಗಿದ್ದಾಳೆ.

ಮತ್ತೊಂದು ಕಡೆ ಐದು ವರ್ಷದ ಹಿಂದೆ ಗೌತಮ್ ಮನೆಯ ಹೊರಗಡೆ ಹೋದ ಕ್ಷಣದಿಂದ ಕಾಣೆಯಾಗಿದ್ದ ಅಜ್ಜಿ ಮರಳಿ ದಿವಾನ್ ಕೋಟೆಗೆ ಮರಳಿದ್ದಾಳೆ. ಮದುವೆ ಮಾಡಿಸಿ ಮಕ್ಕಳಾಗುವರೆಗೆ ಕಾವಲಾಗಿದ್ದವಳು ನಾನು ಎಂದು ಶಕುಂತಲಾಗೆ ಹೇಳಿದ್ದಾಳೆ. ನಾನು ಬಂದಿದ್ದೂ ಗೊತ್ತಿದ್ದರೂ ದೌಲತ್ತಲ್ಲಿ ಕುಂತಿದಿಯಲ್ಲಾ ಎಂದು ಶಕುಂತಲಾಗೆ ತಪರಾಕಿಯನ್ನು ಹಾಕಿರುವ ಅಜ್ಜಿ ಅವರಿಬ್ಬರನ್ನೂ ಒಂದು ಮಾಡೋದು ಕೂಡಾ ನಾನೇ ಎಂದಿದ್ದಾಳೆ. ಹೇಗಿದ್ದ ಮನೆ ಹೇಗಾಯ್ತು ಎಂದು ಮರುಗಿದ್ದಾಳೆ.

amruthadhaare-dec-7-grandmother-returns-can-her-arrival-finally-unite-gowtham-and-bhoomika

ಸದ್ಯ ಅಜ್ಜಿ ಮರಳಿ ಮನೆಗೆ ಬಂದ ಹಿನ್ನೆಲೆ ಈ ಧಾರಾವಾಹಿಯನ್ನು ತಪ್ಪದೇ ನೋಡುವ ಹಲವು ಪ್ರೇಕ್ಷಕರಲ್ಲಿ ಆಸೆ ಚಿಗುರೊಡೆದಿದ್ದು, ಭಾಗ್ಯಮ್ಮ ನ ಜೊತೆಗೆ ಅಜ್ಜಿ ಕೂಡ ಸೇರಿಕೋತರೆ, ನಿಜವಾದ ಲೇಡಿ ಕಮಿಷನರ್ ಅಜ್ಜಿ ಎಂದು ಹೇಳುತ್ತಿದ್ದಾರೆ. ಅಸಲಿ ಆಟ ಇನ್ಮೇಲೆ ಶುರು, ಅಜ್ಜಿ ಮರಳಿ ಬಂದಾಯ್ತು, ಅಜ್ಜಿ ಸಾಧನೆಗಳು ಒಂದಾ ಎರಡಾ ? ಮೊದಲ ಭಾಗದಲ್ಲಿ ಇವರಿಂದಲೇ ದಾರಿಗೆ ಬಂದಿದ್ರೂ ಗೌತಮ್ ಮತ್ತು ಭೂಮಿ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ತಿದ್ದಾರೆ. ನಮ್ ಭೂಮಿ ಗುಂಡು ನಾ ನಮ್ಮ ಸೂಪರ್ ಅಜ್ಜಿ ಒಂದ್ ಮಾಡ್ತಾರೆ ಎಂದು ಕೂಡ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದಂತೆ ಸದ್ಯ ಅಜ್ಜಿ ಬಂದ ಹಿನ್ನೆಲೆ ಶಕುಂತಲಾ ಮತ್ತು ಜೈದೇವ್ ಆಟಾಟೋಪಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ಇದೆ. ಇನ್ನು ಲಕ್ಷ್ಮೀಕಾಂತ್ ಪಾರ್ಟಿ ಬದಲಿಸಿದ್ದಾನೆ. ಈ ಹಿನ್ನೆಲೆ ಶಕುಂತಲಾ ಮತ್ತು ಜೈದೇವ್‌ನ ಅಸಲಿ ಮುಖದ ಪರಿಚಯವನ್ನು ಕೂಡ ಶಕುನಿ ಮಾಮಾ ಲಕ್ಷ್ಮೀಕಾಂತ್ ಅಜ್ಜಿಗೆ ಮಾಡಿಕೊಡುವ ಸಾಧ್ಯತೆಗಳಿವೆ.

ಒಟ್ನಲ್ಲಿ ಗೌತಮ್ ಮತತ್ಉ ಭೂಮಿಕಾ ಇಬ್ಬರನ್ನು ಒಂದು ಮಾಡುವ ಪ್ರಯತ್ನವನ್ನು ಆನಂದ್, ಅಪರ್ಣಾ, ಭಾಗ್ಯಮ್ಮ, ಮಲ್ಲಿ, ಆಕಾಶ್ ಮತ್ತು ಮಿಂಚು ಮಾಡಿದ್ದಾರೆ. ಆದರೆ ಯಾರಿಂದಲೂ ಕೂಡ ಭೂಮಿಕಾ ಮನಸು ಬದಲಿಸಲು ಸಾಧ್ಯವಾಗಿಲ್ಲ. ಈ ಅಸಾಧ್ಯ ಕೆಲಸವನ್ನು ಈಗ ಅಜ್ಜಿ ಮಾಡುತ್ತಾಳಾ..? ಗೌತಮ್ ಮತ್ತು ಭೂಮಿಕಾ ಒಂದಾಗುತ್ತಾರಾ..? ಶಕುಂತಲಾ ಮತ್ತು ಜೈದೇವ್ ಕಥೆ ಅಜ್ಜಿ ಬಂದ ಹಿನ್ನೆಲೆ ಮುಂದೇನು ಆಗುತ್ತೆ..? ಲಕ್ಷ್ಮೀಕಾಂತ್ ಮುಂದೇನು ಮಾಡುತ್ತಾನೆ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Check out the latest 'Amruthadhaare' Kannada serial written update for Dec 7. The grandmother's entry changes everything for Gowtham and Bhoomika's marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X