Amruthadhaare ; ಎಲ್ಲಾ ಆಯ್ತು ಈಗ ಅಜ್ಜಿ ಆಸ್ತಿ ಮೇಲೆ ಕಣ್ಣಾಕಿದ ಜೈದೇವ್ - ಕೇಡಿಯ ಹೊಸ ಸಂಚು

"ಅಮೃತಧಾರೆ" ಧಾರಾವಾಹಿಯಲ್ಲಿ ಭಾಗ್ಯಮ್ಮ ಸೀದಾ ವಠಾರಕ್ಕೆ ಬಂದು ತನ್ನ ಸೊಸೆಯನ್ನು ಮಾತನಾಡಿಸಿದ್ದಾಳೆ. ಆದರೆ, ಭೂಮಿಕಾ ಮನಸನ್ನು ಬದಲಿಸಲು ಭಾಗ್ಯಮ್ಮ ಕಡೆಯಿಂದಲೂ ಕೂಡ ಸಾಧ್ಯವಾಗಿಲ್ಲ. ಬದಲಿಗೆ ಭಾಗ್ಯಮ್ಮ ಬಳಿ ಗೌತಮ್‌ ಮನವಿ ಮಾಡಿಕೊಂಡಿದ್ದಾನೆ. ಆ ದೇವರು ಇನ್ನೂ ಏನೆಲ್ಲ ಆಟವಾಡುತ್ತಾನೆ ಎನ್ನುವುದನ್ನು ನೋಡೋಣ ಎಂದು ಹೇಳುತ್ತಾನೆ. ನಾನು ಪ್ರಯತ್ನ ಪಡುತ್ತಿದ್ದೇನೆ ಅವರಿಗೆ ಬಂಧ-ಸಂಬಂಧದ ಮಹತ್ವದ ಅರಿವು ಆಗುವವರೆಗೆ......

ಕಾಯೋಣ ಎಂದು ಹೇಳುತ್ತಾನೆ. ಸದ್ಯ ಮಿಂಚು ನನ್ನ ಬದುಕಿನಲ್ಲಿ ಬಂದಿದ್ದಾಳೆ. ನಾನು ಖುಷಿಯಾಗಿದ್ದೇನೆ. ಮನೆಯ ಎದುರುಗಡೆ ಭೂಮಿಕಾ ಇದ್ದಾರೆ. ಆಗಾಗ ನಾವು ಮಾತನಾಡುತ್ತೇವೆ ಎಂದು ಹೇಳಿದ್ದಾನೆ. ಗೌತಮ್ ಮಾತುಗಳನ್ನು ಕೇಳಿ ತನಗೆ ತಾನೇ ಸಮಾಧಾನ ಮಾಡಿಕೊಂಡ ಭಾಗ್ಯಮ್ಮ ಮನೆಯಿಂದ ಹೋಗಿದ್ದಾಳೆ. ಭಾಗ್ಯಮ್ಮನನ್ನು ಕಳುಹಿಸಿದ ಗೌತಮ್ ಬಂದವನೇ ಭೂಮಿಕಾ ಬಳಿ ಕ್ಷಮೆಯನ್ನು ಕೂಡ ಕೇಳಿದ್ದಾನೆ. ಅಮ್ಮ ಇಲ್ಲಿ ಬಂದಿದ್ದರ ಹಿಂದೆ ನನ್ನ ಪಾತ್ರವೇನು ಇಲ್ಲ ತಪ್ಪು ತಿಳಿಯಬೇಡಿ ಎಂದು ಹೇಳುತ್ತಾನೆ. ನೀವು ಬೇಡ ಅಂದರೂ ಕೂಡ ನಾನು ಬಂದಿರುವುದಾಗಿ ಅತ್ತೆ ಹೇಳಿದ್ದಾರೆ, ಹೀಗಾಗಿ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದು ಭೂಮಿಕಾ ಹೇಳಿದ್ದಾಳೆ.

amruthadhaare-dec-8-grandmothers-fortune-at-risk-greedy-jaidev-launches-his-most-ruthless-plot-yet

ಇನ್ನೊಂದು ಕಡೆ ಅಜ್ಜಿ ಮರಳಿ ದಿವಾನ್ ಕೋಟೆಗೆ ಮರಳಿದ್ದಾಳೆ. ಮದುವೆ ಮಾಡಿಸಿ ಮಕ್ಕಳಾಗುವರೆಗೆ ಕಾವಲಾಗಿದ್ದವಳು ನಾನು ಎಂದು ಶಕುಂತಲಾಗೆ ಹೇಳಿದ್ದಾಳೆ. ನಾನು ಬಂದಿದ್ದೂ ಗೊತ್ತಿದ್ದರೂ ದೌಲತ್ತಲ್ಲಿ ಕುಂತಿದಿಯಲ್ಲಾ ಎಂದು ಶಕುಂತಲಾಗೆ ತಪರಾಕಿಯನ್ನು ಹಾಕಿರುವ ಅಜ್ಜಿ ಅವರಿಬ್ಬರನ್ನೂ ಒಂದು ಮಾಡೋದು ಕೂಡಾ ನಾನೇ ಎಂದಿದ್ದಾಳೆ. ಹೇಗಿದ್ದ ಮನೆ ಹೇಗಾಯ್ತು ಎಂದು ಮರುಗಿದ್ದಾಳೆ.

ಇದೇ ಸಮಯದಲ್ಲಿ ಜೈದೇವ್ ವಿರುದ್ಧ ಕೆಂಡ ಕಾರಿರುವ ಅಜ್ಜಿ ಪಾರ್ಥ ನಾನು ಬಂದ ತಕ್ಷಣ ಬಂದು ಕಾಲು ಮುಟ್ಟಿ ನಮಸ್ಕಾರ ಮಾಡಿದ ಆದರೆ ಅವನು ದೌಲತ್ತು ತೋರಿಸ್ತಿದ್ದಾನೆ ಎನ್ನುತ್ತಾಳೆ. ನಿನ್ನ ದೊಡ್ಡ ಮಗನಿಗೆ ಒಳ್ಳೆ ಸಂಸ್ಕಾರ ಕಲಿಸಿದ್ದೀಯಾ, ನೋಡ್ತೀರು ಮುಂದೊಂದು ದಿನ ಅವನೇ ನಿನಗೆ ಮುಳ್ಳಾಗುತ್ತಾನೆ ಎಂದು ಹೇಳುತ್ತಾಳೆ. ಕೆಟ್ಟ ಮೇಲೆ ತಾನೇ ಬುದ್ದಿ ಬರೋದು ಆಗ ಗೊತ್ತಾಗುತ್ತೆ ನಿನಗೆ ಎಂದು ಹೇಳುತ್ತಾಳೆ.

ಆಗ ಶಕುಂತಲಾ ತೇಪೆ ಹಚ್ಚುವ ಕೆಲಸ ಮಾಡಿದ್ದು ಯಾರೋ ಮಾಡಿ ಇಟ್ಟಿದ್ದನ್ನು ಮಜಾ ಮಾಡ್ತಿದ್ದೀರಾ. ಬಿಟ್ಟಿಯಾಗಿ ಸಿಕ್ಕಿದೆ ಬೇಕಾ ಬಿಟ್ಟಿಯಾಗಿ ಬಳಸಿಕೊಳ್ತಿದ್ದೀರಾ ಎಂದು ಅಜ್ಜಿ ಕಿಡಿ ಕಾರುತ್ತಾಳೆ. ಗುಂಡು ಮನೆಯಿಂದ ಹೋದ ಮೇಲೆ ನಿಮ್ಮ ದರ್ಬಾರು ಜೋರಾಗಿದೆ ಎನ್ನುತ್ತಾಳೆ.

amruthadhaare-dec-8-grandmothers-fortune-at-risk-greedy-jaidev-launches-his-most-ruthless-plot-yet

ಇನ್ನೂ ಇದೇ ಸಮಯದಲ್ಲಿ ಅಜ್ಜಿಯನ್ನು ಕಂಡ ನಂತರ ಜೈದೇವ್‌ಗೆ ಸಾಲದ ಸುಳಿಯಿಂದ ಹೊರಗಡೆ ಬರುವ ದಾರಿ ಕಂಡಿದೆ. ಚಿಕ್ಕಮಗಳೂರಿನಲ್ಲಿ ನಮ್ಮ ಟೀ ಎಸ್ಟೆಟ್ ಸೇರಿ ಬೇರೆ ಬೇರೆ ಆಸ್ತಿಗಳಿವೆಯಲ್ಲ ಅವೆಲ್ಲವೂ ಆ ಮುದುಕಿ ಹೆಸರಿನಲ್ಲಿದೆ, ಆ ಮುದುಕಿ ಚೂರು ಮನಸು ಮಾಡಿ ಆ ಆಸ್ತಿ ನಮಗೆ ನೀಡಿದರೆ ನಮ್ಮೆಲ್ಲ ಸಮಸ್ಯೆಗಳು ಮುಕ್ತಾಯವಾಗುತ್ತಾವೆ ಎಂದು ಹೇಳುತ್ತಾನೆ.

ಜೈದೇವ್‌ನ ಈ ಮಾತು ಕೇಳಿ ಶಕುಂತಲಾ ಕಕ್ಕಾಬಿಕ್ಕಿಯಾದರೆ ದಿಯಾ ಖುಷಿಯಾಗಿದ್ದಾಳೆ. ಅವಳು ಜೀವ ಬೇಕಾದರೂ ಕೊಡ್ತಾಳೆ, ಆದರೆ ಹಣ ಕೊಡಲ್ಲ.. ಅದರಲ್ಲಿಯೂ ನಿನಗೆ ಅಂದರೆ ಒಂದು ಪೈಸಾ ಕೂಡ ಕೊಡಲ್ಲ ಎಂದು ಶಕುಂತಲಾ ಹೇಳಿದ್ದು ಗೌತಮ್‌ಗೆ ಆದರೆ ಅವಳ ಮೈಮೇಲೆ ಇರುವ ಒಡವೆಯೆಲ್ಲ ಕೊಡ್ತಾಳೆ ಎಂದು ಹೇಳುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅದೆಲ್ಲವೂ ಮುದುಕಿ ಸ್ವಯಾರ್ಜಿತ ಆಸ್ತಿ ಆ ಆಸ್ತಿಯ ಮೇಲೆ ನಮಗೆ ಹಕ್ಕಿಲ್ಲ ಎಂದು ಹೇಳುತ್ತಾಳೆ. ಅದೆಲ್ಲ ಗೌತಮ್ ಮತ್ತು ಅವನ ಮಕ್ಕಳಿಗೆ ಅಷ್ಟೇ ಸೇರುತ್ತೆ, ಇದೆಲ್ಲ ಯೋಚನೆ ಮಾಡೋದು ಬಿಡು ಬೇರೆ ಏನಾದರೂ ಯೋಚನೆ ಮಾಡು ಎಂದು ಹೇಳಿ ಹೋಗುತ್ತಾಳೆ.

ಇದೇ ಸಮಯದಲ್ಲಿ ಜೈದೇವ್‌ಗೆ ಅಜ್ಜಿ ಆಸ್ತಿ ಯಾಕೆ ಕೇಳ್ತಿದ್ದೀರಾ ಎಂದು ದಿಯಾ ಕೇಳಿದ್ದು, ಅತ್ತೆ ಅವರು ಕೊಡಲ್ಲ ಎಂದು ಹೇಳಿ ಹೋದ್ರಲ್ಲ ಎಂದು ಹೇಳುತ್ತಾಳೆ. ಆಗ ಜೈದೇವ್ ಯಾಕೆ ಕೊಡಲ್ಲ ಕೊಡೋ ತರ ಮಾಡೋಣ ಎಂದು ಹೇಳುತ್ತಾನೆ. ಸದ್ಯ ಜೈದೇವ್ ಕಣ್ಣೀಗ ಅಜ್ಜಿಯ ಆಸ್ತಿ ಮೇಲೆ ಬಿದ್ದಿದ್ದು ಆಸ್ತಿಗೋಸ್ಕರ ಜೈದೇವ್ ಅಜ್ಜಿಯ ಪ್ರಾಣವನ್ನೇ ಬಲಿ ಪಡೆಯುತ್ತಾನಾ..? ಮನೆಗೆ ಬಂದ ಅಜ್ಜಿ ಮುಂದೇನು ಮಾಡುತ್ತಾಳೆ..? ಭೂಮಿಕಾ ಮತ್ತು ಗೌತಮ್‌ನ ಅಜ್ಜಿ ಒಂದು ಮಾಡ್ತಾಳಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
After his last scheme failed, what is Jaidev's next target? Tune in to find out why the grandmother's property is now in his sights, triggering a brutal family inheritance war!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X