Amruthadhaare: ಛೇ, ಕೊನೆಗೂ ಕುತಂತ್ರಿ ಜೈದೇವ್ ಪಾಲಾಯ್ತಾ ಅಜ್ಜಿಯ ಆಸ್ತಿ ? ಪ್ರೇಕ್ಷಕರ ಹಿಡಿಶಾಪ

"ಅಮೃತಧಾರೆ" ಧಾರಾವಾಹಿಯಲ್ಲಿ ಜೈದೇವ್ ಕಣ್ಣೀಗ ಅಜ್ಜಿಯ ಆಸ್ತಿಯ ಮೇಲೆ ಬಿದ್ದಿದೆ.‌ ಚಿಕ್ಕಮಗಳೂರಿನಲ್ಲಿ ಟೀ ಎಸ್ಟೆಟ್ ಸೇರಿ ಬೇರೆ ಬೇರೆ ಆಸ್ತಿ ಹೇಗಾದರೂ ಮಾಡಿ ಕಬಳಿಸಿದರೆ ಸಾಲದ ಸುಳಿಯಿಂದ ಹೊರ ಬರಬಹುದು ಎಂದುಕೊಂಡಿದ್ದಾನೆ. ಶಕುಂತಲಾ ಬಳಿ ಈ ವಿಷಯ ಚರ್ಚೆ ಮಾಡಿದ್ದಾನೆ. ಜೈದೇವ್ ಮಾತುಗಳನ್ನು ಕೇಳಿದ ಶಕುಂತಲಾ ಅವಳು ಜೀವ ಬೇಕಾದರೂ ಕೊಡ್ತಾಳೆ, ಆದರೆ ಹಣ ಕೊಡಲ್ಲ..

ಅದರಲ್ಲಿಯೂ ನಿನಗೆ ಅಂದರೆ ಒಂದು ಪೈಸಾ ಕೂಡ ಕೊಡಲ್ಲ ಎಂದು ಶಕುಂತಲಾ ಹೇಳಿದ್ದು ಗೌತಮ್‌ಗೆ ಆದರೆ ಅವಳ ಮೈಮೇಲೆ ಇರುವ ಒಡವೆಯೆಲ್ಲ ಕೊಡ್ತಾಳೆ ಎಂದು ಹೇಳುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅದೆಲ್ಲವೂ ಮುದುಕಿ ಸ್ವಯಾರ್ಜಿತ ಆಸ್ತಿ ಆ ಆಸ್ತಿಯ ಮೇಲೆ ನಮಗೆ ಹಕ್ಕಿಲ್ಲ ಎಂದು ಹೇಳುತ್ತಾಳೆ. ಅದೆಲ್ಲ ಗೌತಮ್ ಮತ್ತು ಅವನ ಮಕ್ಕಳಿಗೆ ಅಷ್ಟೇ ಸೇರುತ್ತೆ, ಇದೆಲ್ಲ ಯೋಚನೆ ಮಾಡೋದು ಬಿಡು ಬೇರೆ ಏನಾದರೂ ಯೋಚನೆ ಮಾಡು ಎಂದು ಹೇಳಿ ಹೋಗುತ್ತಾಳೆ.

amruthadhaare-dec-9- Sleeping Pill Used Cunning Jaidev Forges Grandma s Signature

ಆದರೆ ಜೈದೇವ್ ಮಾತ್ರ ಈ ವಿಚಾರದಲ್ಲಿ ಗಂಭೀರವಾಗಿದ್ದಾನೆ. ಹೇಗಾದರೂ ಮಾಡಿ ಆಸ್ತಿ ಹೊಡೆಯಬೇಕೆಂದು ತೀರ್ಮಾನ ಮಾಡಿರುವ ಜೈದೇವ್ ಅಜ್ಜಿ ಥರ ಇರೋ ಇನ್ನೊಂದು ಫೇಕ್‌ ಅಜ್ಜಿಯನ್ನ ತರ್ತಿನಿ ಅಂತ ಲಾಯರ್‌ ಬಳಿ ಹೇಳಿದ್ದಾನೆ. ಪೇಪರ್‌ ವ್ಯವಸ್ಥೆ ನೀವು ಮಾಡಿ, ಫೇಕ್‌ ಅಜ್ಜಿ ನಾನು ತರ್ತೀನಿ ಎಂದು ಹೇಳಿದ್ದಾನೆ.

ಇನ್ನೊಂದು ‌ಕಡೆ ಅಜ್ಜಿ ಸರ್ವಮಂಗಳ ಮನೆಗೆ ಬಂದ ವಿಚಾರವನ್ನು ಶಕುನಿ ಮಾವ ಲಕ್ಷ್ಮೀಕಾಂತ್ ಫೋನ್ ಮಾಡಿ ಆನಂದ್ ಗೆ ಹೇಳಿದ್ದಾನೆ. ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡಲೇಬೇಕೆಂಬ ಪ್ರಯತ್ನ ‌ಮಾಡ್ತಿರುವ ಭಾಗ್ಯಮ್ಮಗೆ ಈ ಸುದ್ದಿ ಕೇಳಿ ಖುಷಿಯಾಗಿದ್ದು ನೂರು ಆನೆ ಬಲ ಬಂದಂತಾಯ್ತು ಎಂದು ಹೇಳಿದ್ದಾಳೆ.

ಮತ್ತೊಂದು ಕಡೆ ವಠಾರದಲ್ಲಿ ಭೂಮಿಕಾ ಹುಟ್ಟುಹಬ್ಬದ ಸಂಭ್ರಮಾಚರಣೆ ಮನೆ ಮಾಡಿದೆ. ವಠಾರದವರು ಎಲ್ಲರೂ ಸೇರಿ ಭೂಮಿಕಾ ಹುಟ್ಟುಹಬ್ಬ ಆಚರಿಸಿದ್ದು, ಗೌತಮ್ ತನ್ನ ಮಡದಿ ಭೂಮಿಕಾಗೆ ಕೇಕ್ ತಿನ್ನಿಸಿ ಖುಷಿ ಪಟ್ಟಿದ್ದಾನೆ. ಆದರೆ ಇದೇ ವೇಳೆ ಕುತಂತ್ರಿ ಜೈದೇವ್‌ ಅಜ್ಜಿಗೆ ಕಷಾಯ ರೆಡಿ ಮಾಡಿದ್ದು ಕಷಾಯದಲ್ಲಿ ನಿದ್ದೆ ಬರುವ ಮಾತ್ರೆ ಹಾಕಿದ್ದಾನೆ. ಜೈದೇವ್‌ನ ಈ ನಡೆಯಿಂದ ದಿಯಾ ಖುಷಿಯಾಗಿದ್ದಾಳೆ.

ಅಜ್ಜಿ ಕಷಾಯ ಕುಡಿದು ಮಲಗಿದ್ದು, ಒಂದು ಕ್ಷಣಕ್ಕೂ ನನ್ನ ಪ್ರೀತಿಯಿಂದ ನೋಡಿಲ್ಲ ನೀನು, ಹಾಗಿದ್ದ ಮೇಲೆ ನಿನ್ನ ಮೊಮ್ಮಗನ ಸಾಲ ತೀರಿಸುವ ದರ್ದು ನನಗ್ಯಾಕೆ ಎಂದು ಹೇಳುತ್ತಾನೆ. ತಪ್ಪಲ್ವಾ, ಅದೇನೋ ಫ್ಯಾಮಿಲಿ ಪಾಲಿಟಿಕ್ಸ್.. ಡ್ರಾಮಾ.. ವಗೈರಾ ವಗೈರಾ ಅಂದುಕೊಳ್ಳೋಣ, ಆದರೆ ನಿನ್ನ ನಿಜವಾದ ಮೊಮ್ಮಗ ಎಂದು ನೀನೇನು ಕರೀತಿಯಾ ಗುಂಡು ಅವನು ಸಾಲ ಮಾಡಿ ಹೋಗೋದು ಅಂತೆ ನಾನು ತೀರಿಸೋದು ಅಂತೆ ಎಂದು ಹೇಳುತ್ತಾನೆ. ಮಲಗಿರುವ ಅಜ್ಜಿಯ ಬಳಿ ಎಲ್ಲಾ ಆಸ್ತಿಯ ಪೇಪರ್​ಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆ.

amruthadhaare-dec-9- Sleeping Pill Used Cunning Jaidev Forges Grandma s Signature

ಸದ್ಯ ಈ ಸಂಚಿಕೆಗೆ ಹಲವು ಪ್ರೇಕ್ಷಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಜೈದೇವ್‌ಗೆ ಹಿಡಿಶಾಪ ಹಾಕುತ್ತಿದ್ದಾರೆ. ಸತ್ಯ ಗೌತಮ್ ಮತ್ತು ಭೂಮಿಕಾಗೆ ಗೊತ್ತು ಆಗಬೇಕು ಹಾಗೆ ಗೌತಮ್ ಅಮ್ಮನಿಗೆ ಮಾತು ಬಂದಿದೆ ಎಲ್ಲಾ ಸತ್ಯ ಹೇಳಿಬಿಡು ಬೇಕು ಎಂದು ಕೆಲವರು ಹೇಳಿದರೆ ಇವನಿಗೆ ಇನ್ನು ಯಾವಾಗ ಬುದ್ದಿ ಬರೋದು? ಭೂಮಿಕಾ ನಿಜ ಹೇಳಿದ್ರೆ ಗೌತಮ್ ಎಲ್ಲರ ಪ್ರಾಣ ಉಳಿಸ್ತಾ ಇದ್ದ, ಇವಳ ಮೌನವೇ ಎಲ್ಲರ ಪ್ರಾಣಕ್ಕೂ ಅಪಾಯ ತಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಸಮಯದಲ್ಲಿ ಅಜ್ಜಿ ನಿಜಕ್ಕೂ ಮಲಗಿದ್ದಾಳಾ ಅಥವಾ ನಾಟಕವಾಡ್ತಿದ್ದಾಳಾ ಎಂಬ ಅನುಮಾನವನ್ನು ಕೂಡ ಹಲವರು ವ್ಯಕ್ತಪಡಿಸಿದ್ದು, ಪೇಪರ್​ಗೆ ಅಜ್ಜಿಯ ಸಹಿಯಂತೂ ಬಿದ್ದಾಗಿದೆ. ಅಜ್ಜಿ ನಾಟಕ ಮಾಡಿ ಜೈದೇವನ ಕುತಂತ್ರ ಬಯಲು ಮಾಡುತ್ತಾಳಾ ? ಎಂಬ ಲೆಕ್ಕಾಚಾರವನ್ನೂ ಕೂಡ ಹಾಕುತ್ತಿದ್ದಾರೆ. ಮುಂದೇನು ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The mystery deepens in Amruthadhaare! Jaidev stole the property after forging Grandma's signature while she slept. Viewers speculate: Is Aji truly unconscious, or is she secretly plotting Jaidev's downfall? (Length: 169 characters)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X