Amruthadhaare : ಸುನಿ ಡಬಲ್ ಗೇಮ್- ಜೈದೇವ್ ಕುತಂತ್ರಕ್ಕೆ ಬಲಿಯಾಗ್ತಾನಾ ಗೌತಮ್ ದಿವಾನ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾಗೆ ಸಂಸಾರದ ಸುಖ ಸಿಕ್ಕಿದೆ. ಹಲವರ ಆಶಯ ಈಡೇರಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿ ಆಗಿದೆ. ಇನ್ನೇನು ಇದ್ದರೂ ಮಲ್ಲಿಯನ್ನು ದಡ ತಲುಪಿಸಬೇಕಿದೆ. ಹೀಗಾಗಿಯೇ ಭೂಮಿಕಾ ಚಿಂತೆ ಮಾಡುತ್ತಿರುವ ಸಮಯದಲ್ಲಿ ಮಲ್ಲಿ ಹಿಂದೆ ಸುನಿ ಬಿದ್ದಿರುವ ವಿಚಾರ ಗೊತ್ತಾಗಿದೆ. ಗೌತಮ್ ಬಳಿ ಈ ವಿಚಾರವನ್ನು ಚರ್ಚೆ ಕೂಡ ಮಾಡಿರುವ ಭೂಮಿಕಾ ಮನೆಗೆ ಸುನಿಯನ್ನು ಕರೆಸಿಕೊಂಡು ಭೇಟಿಯಾಗಿದ್ದಾಳೆ. ಹಿನ್ನೆಲೆ ಎಲ್ಲ ವಿಚಾರಿಸಿದ್ದಾಳೆ.
ಆದರೂ ಭೂಮಿಕಾಗೆ ಸಮಾಧಾನ ಇಲ್ಲ. ಹೀಗಾಗಿ ಗೌತಮ್ ಬಳಿ ಸುನಿ ಪೂರ್ವಾಪರ ವಿಚಾರಿಸಲು ಭೂಮಿಕಾ ಹೇಳಿದ್ದು ಆನಂದ್ ಮೂಲಕ ಗೌತಮ್ ಎಲ್ಲವನ್ನೂ ವಿಚಾರಿಸಿದ್ದಾನೆ. ಈ ಸಮಯದಲ್ಲಿ ಸುನಿ ವಿದ್ಯಾಭ್ಯಾಸ ಪಡೆದಿದ್ದು ತನ್ನ ಕಂಪನಿಯ ಸಹಾಯದ ಮೂಲಕವೇ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದ್ದು, ಸುನಿ ಅನಾಥ ಎನ್ನುವ ವಿಚಾರ ಕೂಡ ಗೊತ್ತಾಗಿದೆ.

ಆದರೆ ಗೌತಮ್ ನ ದೇವರ ಸ್ಥಾನದಲ್ಲೊ ಇಟ್ಟಿರುವ ಸುನಿಗೆ ಮಲ್ಲಿಯ ಭಾವನೇ ಗೌತಮ್ ಎನ್ನುವ ವಿಚಾರ ಗೊತ್ತಿಲ್ಲ. ಸುನಿ ಮೂಲಕ ಜೈದೇವ್ ಖೆಡ್ಡಾ ತೋಡಿದ್ದಾನೆ ಎನ್ನುವ ಕಹಿ ಸತ್ಯ ಕೂಡ ಗೌತಮ್ ಗೆ ಇನ್ನೂ ಗೊತ್ತಾಗಿಲ್ಲ.
ಸದ್ಯ ಗೌತಮ್ ಮತ್ತು ಭೂಮಿಕಾ ಮನೆಯಲ್ಲಿ ಸುನಿ ಕುರಿತು ಚರ್ಚೆ ಮಾಡಿದ್ದು, ಗೌತಮ್ ಪ್ರೀತಿಗೆ ಮನಸ್ಸು ಮುಖ್ಯ ವಯಸ್ಸಲ್ಲ ಎಂದು ಹೇಳಿದ್ದಾನೆ. ಗೌತಮ್ ಮಾತುಗಳಿಗೆ ಭೂಮಿಕಾ ಕೂಡ ಸಮ್ಮತಿಯನ್ನು ಸೂಚಿಸಿದ್ದು, ಗೌತಮ್ ಮತ್ತೊಮ್ಮೆ ಸುನಿಯನ್ನು ಮನೆಗೆ ಕರೆಸುವಂತೆ ಹೇಳಿದ್ದಾನೆ. ಇಬ್ಬರು ಕುಳಿತು ಅವನ ಜೊತೆ ಮಾತನಾಡೋಣ ಎಂದಿದ್ದಾನೆ.
ಅದ್ರಂತೆ ಭೂಮಿಕಾ ಸುನಿಗೆ ಫೋನ್ ಮಾಡಿ ಕರೆದಿದ್ದು, ಮನೆಗೆ ಮತ್ತೆ ಸುನಿ ಬಂದಿದ್ದಾನೆ. ಗೌತಮ್ ದಿವಾನ್‌ನ ಕಂಡು ಅಚ್ಚರಿಗೊಂಡಿದ್ದಾನೆ. ಈ ಮೂಲಕ ಮಲ್ಲಿಯ ಭಾವ ಗೌತಮ್ ಎನ್ನುವ ವಿಚಾರ ಪ್ರೀತಿಯ ನಾಟಕವಾಡುತ್ತಿರುವ ಸುನಿಗೆ ಗೊತ್ತಾಗಿದೆ. ಗೌತಮ್ ದಿವಾನ್ ಗೆ ನಾನು ಮೋಸ ಮಾಡ್ತಿದ್ದೀನಾ..? ಎನ್ನುವ ಪಾಪ ಪ್ರಜ್ಞೆ ಕಾಡುತ್ತಿದೆ.
ಈ ಪ್ರೋಮೋಗೆ ಸದ್ಯ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಪ್ರೀತಿಗೆ ವಯಸ್ಸು ಅಷ್ಟು ಮುಖ್ಯ ಅಲ್ಲ. ಮನಸ್ಸು ಒಪ್ಪಿದ್ರೆ, ಅರ್ಥ ಮಾಡಿಕೊಂಡ್ರೆ ಅದೇ ಸಾಕು. ಆದರೆ ಜೀವನದ ರಿಯಾಲಿಟಿ ಕೂಡ ಸ್ವಲ್ಪ ಯೋಚಿಸಬೇಕು.. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಆ ಹುಡುಗನ ಜೊತೆ ಮಾತ್ರ ಮದುವೆ ಮಾಡಿಸಬೇಡಿ ನೋಡೋ ಜನರು ಅದೇ ಕಲಿತರೇ ಕಷ್ಟ ಈ ರೀತಿ ಯೋಚ್ನೆ ಸೀರಿಯಲ್ ಗೆ ಇರಲಿ.. ನಮ್ಮ ಸಿಂಪಲ್ ಸುನಿ, ಇರೋ ಸತ್ಯ ಎಲ್ಲಾನು ನಮ್ಮ ಗುಂಡು ಗೆ ಹೇಳ್ಬೇಕು.. ಕೇಡಿ ಜೇಡಿ ಮಣ್ಣು ಮುಕ್ಕೋದು ಗ್ಯಾರಂಟಿ..ಜೆ ಡಿ ಪ್ಲಾನ್ ಎಲ್ಲಾ ಡುಮ್ಮು ಗೆ ಹೇಳು ಸುನಿ..ಸಿಂಪಲ್ ಸುನಿ ಒಳ್ಳೆ ಹುಡುಗಾನೇ ಜೆಡಿ ಮಾತ್ ಕೇಳ್ಬಾರ್ದು ಎಲ್ಲಾ ಸರಿ ಆಗುತ್ತೆ..ಎಂದೆಲ್ಲ ಹಲವರು ಕಾಮೆಂಟ್ ಮಾಡಿದ್ದಾರೆ.

ಒಟ್ನಲ್ಲಿ ಸದ್ಯ ಜೈದೇವ್ ಆದೇಶದಂತೆ ಮಲ್ಲಿಯ ಜೊತೆ ಪ್ರೀತಿಯ ನಾಟಕವಾಡಿದ ಸುನಿ, ಸಂದಿಗ್ದ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾನೆ. ಗೌತಮ್ ದಿವಾನ್ ಮೇಲಿನ ಅಭಿಮಾನದಿಂದ ತನ್ನೆಲ್ಲ ತಪ್ಪನ್ನು ಒಪ್ಪಿಕೊಂಡು ಸುನಿ ತಪ್ಪು ತಿದ್ದಿಕೊಂಡು ಗೌತಮ್ ಜೊತೆ ಕೈ ಜೋಡಿಸುತ್ತಾನಾ..? ಅಥವಾ ಜೈದೇವ್ ಮಾತುಗಳಿಗೆ ಕಟ್ಟುಬಿದ್ದು ಗೌತಮ್ ದಿವಾನ್‌ಗೆ ನಂಬಿಕೆ ದ್ರೋಹ ಮಾಡಿ ಮಲ್ಲಿಗೆ ಮೋಸ ಮಾಡುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದ್ದು ''ಅಮೃತಧಾರೆ''ಯ ಮುಂದಿನ ಸಂಚಿಕೆ ಸದ್ಯ ಕುತೂಹಲ ಕೆರಳಿಸಿದೆ.


Click it and Unblock the Notifications











