Amruthadhaare ; ತಂದೆಯನ್ನು ನಿಂದಿಸಿದ ಕೇಡಿ- ಜೈದೇವ್‌ಗೆ ಕಪಾಳಮೋಕ್ಷ ಮಾಡಿದ ಗೌತಮ್-ಮುಂದೇನು ?
"ಅಮೃತಧಾರೆ" ಧಾರಾವಾಹಿಯಲ್ಲಿ ಮಲ್ಲಿ ಹಿಂದೆ ಬಿದ್ದ ಸುನಿಯನ್ನು ಮನೆಗೆ ಕರೆಸಿಕೊಂಡು ಭೂಮಿಕಾ ಮತ್ತು ಗೌತಮ್ ಮಾತನಾಡಿಸಿದ್ದಾರೆ. ಭೂಮಿಕಾ ಮನದಲ್ಲಿದ್ದ ಗೊಂದಲವನ್ನು ಗೌತಮ್ ಪರಿಹರಿಸುವ ಪ್ರಯತ್ನ ಮಾಡಿದ್ದು ಶಕುನಿ ಮಾವ ಲಕ್ಷ್ಮೀಕಾಂತ್ ತನ್ನ ಮನದ ದುಗುಡವನ್ನು ಪಾರ್ಥ ಮತ್ತು ಅಪೇಕ್ಷಾ ಎದುರು ಹಂಚಿಕೊಂಡಿದ್ದಾನೆ. ಸುನಿಯ ಮೇಲೆ ಕಣ್ಣಿಡುವಂತೆ ಪಾರ್ಥಗೆ ಹೇಳಿದ್ದಾನೆ.
ಮತ್ತೊಂದು ಕಡೆ ತನ್ನ ತಂದೆಯ ಪುಣ್ಯತಿಥಿಯ ಹಿನ್ನೆಲೆ ಗೌತಮ್ ದಿವಾನ್ ತನ್ನ ಪತ್ನಿ ಭೂಮಿಕಾ ಜೊತೆ ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡಿದ್ದಾನೆ. ಇದೇ ಸಮಯದಲ್ಲಿ ಜೈದೇವ್ ಕೂಡ ಶಕುಂತಲಾ ಜೊತೆ ಅಲ್ಲಿಯೇ ಬಂದಿದ್ದು ಗೌತಮ್ ಮತ್ತು ಮನೆಯವರನ್ನು ಕಂಡು ಇಬ್ಬರು ಕೆರಳಿ ಕೆಂಡವಾಗಿದ್ದಾರೆ.

ಇದೇ ಸಮಯದಲ್ಲಿ ಜೈದೇವ್ ಕಿರಿಕ್ ಮಾಡಿದ್ದು ಮೊದಲು ಅವರದ್ದು ಮಾಡಿ ಕಳಿಸಿ ಆಮೇಲೆ ನಮ್ಮದು ಮಾಡೋಣ ಎಂದು ಪೂಜಾರಿಗೆ ಹೇಳುತ್ತಾನೆ. ಆಗ ಆ ತರ ಎಲ್ಲ ಹೇಳಬಾರದು ನೀವು ಒಂದೇ ತಂದೆಯ ಮಕ್ಕಳು ನೀವು, ಪಿಂಡವನ್ನೂ ಹಾಗೆಲ್ಲ ಎರಡೆರಡು ಸಾರಿ ಬಿಡಬಾರದು ಎಂದು ಪೂಜಾರಿ ಹೇಳುತ್ತಾರೆ.
ಆದರೆ ಇದನ್ನು ಒಪ್ಪದ ಜೈದೇವ್ ಶಾಸ್ತ್ರೀಗಳಿಗೆ ಅವಾಜ್ ಹಾಕುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಜೈದೇವ್ ತನ್ನ ತಂದೆಯನ್ನೇ ನಿಂದಿಸುತ್ತಾನೆ. ಇದನ್ನು ಕೇಳಿ ಗೌತಮ್ ಸಹನೆಯ ಕಟ್ಟೆ ಒಡೆದಿದ್ದು ಗೌತಮ್ ನನಗೆ ಬೇಕಿದ್ರೆ ಏನೂ ಬೇಕಾದರೂ ಮಾತಾಡು, ಅಪ್ಪನ ಬಗ್ಗೆ ಹಾಗೆಲ್ಲ ಮಾತನಾಡಬೇಡ" ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಜೈದೇವ್ ಕಪಾಳಕ್ಕೆ ಬಾರಿಸಿದ್ದಾನೆ.
ಮುಂದೇನು ..?
ಗೌತಮ್‌ಗೆ ಈಗ ತನ್ನ ತಂದೆಯ ಆಸ್ತಿಯ ಮೇಲಾಗಲಿ ಅಥವಾ ತಾನು ದುಡಿದು ಕಟ್ಟಿದ ಸಾಮ್ರಾಜ್ಯದ ಮೇಲಾಗಲಿ ವ್ಯಾಮೋಹ ಇಲ್ಲ. ಬದಲಿಗೆ ಎಲ್ಲ ಆಸ್ತಿಯನ್ನು ಜೈದೇವ್ ಮತ್ತು ಶಕುಂತಲಾಗೆ ನೀಡಿರುವ ಗೌತಮ್ ಇರುವುದರಲ್ಲಿಯೇ ಖುಷಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಭೂಮಿಕಾ ಮತ್ತು ಭಾಗ್ಯಮ್ಮಗೆ ಗೌತಮ್ ಮೊದಲಿನಂತಾಗಬೇಕೆಂಬ ಆಸೆ ಇದೆ. ಅದರಲ್ಲಿಯೂ ಭಾಗ್ಯಮ್ಮ ನಿನ್ನಿಂದ ಹಲವರಿಗೆ ಉಪಕಾರವಾಗುತ್ತಿತ್ತು, ಸಹಾಯವಾಗುತ್ತಿತ್ತು, ಆದರೆ ಈಗ ಅದೆಲ್ಲವೂ ನಿಂತಿದೆ ಎಂದು ಹೇಳಿದ ಹಿನ್ನೆಲೆ ಗೌತಮ್ ಮರಳಿ ವ್ಯಾಪಾರ ಕ್ಷೇತ್ರಕ್ಕೆ ಇಳಿಯುವ ಯೋಚನೆ ಮಾಡುತ್ತಿದ್ದಾನೆ. ಯಾರಿಗೆ ಗೊತ್ತು ಮುಂದೆ ಗೌತಮ್ ಮತ್ತೊಂದು ಸಾಮ್ರಾಜ್ಯ ಕಟ್ಟಲೂಬಹುದು.
ಮಲ್ಲಿ-ಸುನಿ ಪ್ರೇಮಕಥೆ ಪೂರ್ಣವಾಗುತ್ತಾ..?
ಇನ್ನು ಸುನಿಯನ್ನು ತನ್ನ ಮಾಜಿ ಪತ್ನಿ ಹಿಂದೆ ಕಳುಹಿಸಿರುವ ಜೈದೇವ್, ಮಲ್ಲಿ ಮತ್ತು ಗೌತಮ್ ಯಾವತ್ತು ನೆಮ್ಮದಿಯಿಂದ ಇರಬಾರದು ಎನ್ನುವ ಉದ್ದೇಶ ಇಟ್ಕೊಂಡಿದ್ದಾನೆ. ಆದರೆ, ಸುನಿ ಪಾಲಿಗೆ ಗೌತಮ್ ದೇವರು. ಈ ಹಿನ್ನೆಲೆ ಜೈದೇವ್ ತಾನೇ ತೋಡಿದ ಖೆಡ್ಡಾಗೆ ಬೀಳುವ ಸಾಧ್ಯತೆ ಕೂಡ ಇದೆ. ಮುಂಬರುವ ದಿನಗಳಲ್ಲಿ ಸುನಿ ಮತ್ತು ಮಲ್ಲಿ ಮದುವೆ ನಡೆದರೂ ಕೂಡ ಅಚ್ಚರಿ ಇಲ್ಲ.

ಪ್ರೇಕ್ಷಕರ ಪ್ರತಿಕ್ರಿಯೆ
ಸದ್ಯ ಜೈದೇವ್ ಮತ್ತು ಗೌತಮ್ ಮುಖಾಮುಖಿಯಾದ ಸಂಚಿಕೆಗೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆ ಪೈಕಿ ಕೆಲವರು ನಮ್ಮ ಭೂ ಅಪ್ಪಿ ಮುಖಾಮುಖಿ ಆಗಿದ್ದು ಯಾರಿಗೆಲ್ಲಾ ಖುಷಿ ಆಯ್ತು ಎಂದರೆ, ಶಕುಂತಲಾಗೆ ಗೌತಮ್ ಭೂಮಿನಾ ನೋಡಕ್ಕೆ ಕೂಡಾ ಆಗ್ತಿಲ್ಲ, ಇದೇ ರೀತಿ ಹಾವ ಭಾವ ಇನ್ಮುಂದೆ ಅವರಿಬ್ಬರ ಮುಂದೆ ಇರ್ಬೇಕು ಎಂದು ಮತ್ತೊಬ್ಬರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ಸಿಂಹದ ಘರ್ಜನೆಗೆ ನರಿಗಳು ತತ್ತರ, ಗೌತಮ್ ದಿವಾನ್ ಕೇಡಿಗಳಿಗೆ ಉತ್ತರ ಕೊಡೋದನ್ನಾ ನೋಡೋಕೆ ಕಾಯ್ತಾ ಇದೀವಿ, ಜೆಡಿ ಇನ್ಮೇಲೆ ನಿನ್ ಕಥೆ ಮುಗಿತು ನಮ್ ಗೌತಮ್ ಬಂದಾಯ್ತು ಎಷ್ಟು ಹಾರಾಡ್ತೀಯೋ ಹಾರಾಡು ಎಂದೆಲ್ಲ ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಐದು ವರ್ಷದಿಂದ ತಿಥಿ ಕಾರ್ಯನೇ ಮಾಡಿಲ್ಲವಾ ಎಂಬ ಗಂಭೀರ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.


Click it and Unblock the Notifications











