Amruthadhaare ; ಸುನಿ ಅವಾಜ್‌ಗೆ ಜೈದೇವ್‌ ಗಪ್‌ಚುಪ್ - ಮಲ್ಲಿಗೆ ಕೈ ಕೊಡ್ತಾನಾ ಕೇಡಿಯ ಪೈಲ್ವಾನ್?

"ಅಮೃತಧಾರೆ" ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಪ್ರೇಮ ಕಥೆಯ ಮೇಲೆ ಗೌತಮ್ ಮತ್ತು ಭೂಮಿಕಾ ಮದುವೆಯ ಅಧಿಕೃತ ಮುದ್ರೆ ಒತ್ತಲು ಸಿದ್ದರಾಗಿದ್ದಾರೆ. ನಿಶ್ಚಿತಾರ್ಥದ ಸಮಾರಂಭ ಹಮ್ಮಿಕೊಂಡಿದ್ದಾರೆ. ಆದರೆ, ಸುನಿಯ ಹಿನ್ನೆಲೆ ಎಲ್ಲಾ ಗೊತ್ತಾಗಿದೆ ಎಂದು ಅಂದುಕೊಂಡಿರುವ ಗೌತಮ್ ಮತ್ತು ಭೂಮಿಕಾಗೆ ಸುನಿಯ ಹಿಂದಿರುವ ವ್ಯಕ್ತಿ ಜೈದೇವ್ ಎನ್ನುವುದು ಇನ್ನೂ ಗೊತ್ತಾಗಿಲ್ಲ.

ವಿಶೇಷ ಅಂದರೆ ಜೈದೇವ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸುನಿಗೆ ಕೂಡ ಮಲ್ಲಿ ಬೇರೆ ಯಾರು ಅಲ್ಲ ಬದಲಿಗೆ ತನ್ನನ್ನೂ ಚೂ ಬಿಟ್ಟಿರುವ ತನ್ನ ಬಾಸ್ ಜೈದೇವ್ ಪತ್ನಿ ಅನ್ನೋದು ಗೊತ್ತಿಲ್ಲ. ಆದರೆ ಈಗ ತಡವಾದರೂ ಕೂಡ ಸತ್ಯ ಸುನಿಗೆ ಗೊತ್ತಾಗಿದೆ. ಮಲ್ಲಿ ಬದುಕಿನ ರಹಸ್ಯ ಅನಾವರಣವಾಗಿದೆ.

Amruthadhaare Feb 28 Suni Discovers the Truth of Malli s Life Blasts Jai Dev

ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ಭೂಮಿಕಾ ಮದುವೆ ಮುನ್ನ ಎಲ್ಲವೂ ಸುನಿಗೆ ಗೊತ್ತಿರಬೇಕು ಎನ್ನುವ ಉದ್ದೇಶದಿಂದ ಭೂತಕಾಲಕ್ಕಿಂತ ವರ್ತಮಾನ ಮತ್ತು ಭವಿಷ್ಯ ಮುಖ್ಯ ಎಂದಿದ್ದ ಸುನಿಗೆ, ಮಲ್ಲಿಯ ಕಣ್ಣೀರ ಕಥೆ ಹೇಳಿದ್ದಾಳೆ. ಮಲ್ಲಿಗೆ ಹಿಂದೆ ಮೋಸ ಮಾಡಿದವರು ಇದೀಗ ಪ್ರೆಸೆಂಟ್ ನಲ್ಲೂ ಇದ್ದಾರೆ. ಅವರಿಂದ ಯಾವುದೇ ಅಪಾಯ ಉಂಟಾಗಬಾರದು ಎಂದು ಸತ್ಯ ಹೇಳ್ತೀನಿ ಎಂದು ಭೂಮಿಕಾ ಪೀಠಿಕೆ ಹಾಕಿ, ಮಲ್ಲಿ ಮಾಜಿ ಗಂಡ ಬೇರೆ ಯಾರೂ ಅಲ್ಲ, ಗೌತಮ್ ದಿವಾನ್ ಅವರ ಸ್ವಂತ ತಮ್ಮ, ಜೈದೇವ್ ಎಂದು ಹೇಳಿದ್ದಾಳೆ.

ಭೂಮಿಕಾ ಹೇಳಿದ ಈ ಮಾತು ಕೇಳಿ ಸುನಿಗೆ ನಿಂತ ನೆಲ ಕುಸಿದಂತಾಗಿದ್ದು ಸುನಿ ಸೀದಾ ಜೈದೇವ್ ಬಳಿ ಬಂದು ಪ್ರಶ್ನೆ ಮಾಡಿದ್ದಾನೆ. ಜೆಡಿ ಎದುರು ಬಂದು ಮೊದಲ ಬಾರಿ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಬಾಸ್ ನೀವು ಈ ಥರ ಮಾಡ್ತೀರಿ ಅಂತ ನಾನು ಅಂದುಕೊಂಡಿರಲಿಲ್ಲ. ನಿಮ್ಮ ಸ್ವಂತ ಹೆಂಡ್ತಿ ಮೇಲೆ ನನ್ನ ಛೂ ಬಿಟ್ಟಿದ್ದೀರಾ? ಖಂಡಿತವಾಗಿಯೂ ನಿಮ್ಮ ಹೆಂಡ್ತಿಯನ್ನು ನಾನು ಮದುವೆಯಾಗೋದಿಲ್ಲ ಎನ್ನುತ್ತಾನೆ.ತಾನೇ ಸಾಕಿದ ಪೈಲ್ವಾನ್‌ ಮಾತು ಕೇಳಿ ಜೈದೇವ್ ಪಿತ್ತ ಸದ್ಯ ನೆತ್ತಿಗೇರಿದೆ.

Amruthadhaare Feb 28 Suni Discovers the Truth of Malli s Life Blasts Jai Dev

ಮುಂದೇನು..?

ಸದ್ಯ ಮಲ್ಲಿ ಬೇರೆ ಯಾರು ಬದಲಿಗೆ ಜೈದೇವ್ ಪತ್ನಿ ಎನ್ನುವ ವಿಚಾರ ಸುನಿಗೆ ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಮದುವೆಯಾಗಲ್ಲ ಎಂದು ಸುನಿ ಹೇಳಿಯೂ ಆಗಿದೆ. ಆದರೆ, ಗೌತಮ್ ಮತ್ತು ಭೂಮಿಕಾ ಸುಮ್ಮನಾಗ್ತಾರಾ..? ಮಲ್ಲಿಯನ್ನು ಸುನಿ ಮನಸಾರೆ ಪ್ರೀತಿ ಮಾಡದಿದ್ದರೂ ಕೂಡ ಮಲ್ಲಿ ಸುನಿಗೆ ಮನ ಸೋತಿದ್ದಾಳೆ.

ಇನ್ನೂ ಇದೆಲ್ಲವೂ ಜೈದೇವ್ ಷಡ್ಯಂತ್ರ ಎನ್ನುವ ವಿಚಾರ ಕೂಡ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಬೇಕಿದೆ. ಗೊತ್ತಾದ ಮೇಲೆ ಮಲ್ಲಿ ಬದುಕಿನಿಂದ ಸುನಿಯನ್ನು ಇಬ್ಬರು ಒದ್ದು ಹೊರಗಡೆ ಹಾಕುತ್ತಾರಾ ಅಥವಾ ಮನೆಯೊಳಗೆ ಕರೆದುಕೊಂಡು ಸತ್ಕಾರ ಮಾಡುತ್ತಾರಾ ಎನ್ನುವುದನ್ನು ನೋಡಬೇಕಿದೆ. ಇನ್ನೂ ಪ್ರೀತಿಯಲ್ಲಿ ಮತ್ತೊಮ್ಮೆ ಸೋತು, ನೊಂದು, ಬೆಂದು ಮಲ್ಲಿ ತನ್ನ ಜೀವಕ್ಕೆ ಏನಾದರೂ ಮಾಡಿಕೊಂಡರೆ..? ಈ ಭಯ ಕೂಡ ಸದ್ಯ ಪ್ರೇಕ್ಷಕರನ್ನು ಕಾಡುತ್ತಿದೆ.

ಪ್ರೇಕ್ಷಕರ ಅಭಿಪ್ರಾಯ

ಸದ್ಯ ಭೂಮಿಕಾ ಬಿಚ್ಚಿಟ್ಟ ಮಲ್ಲಿ ಬದುಕಿನ ಸತ್ಯದ ಪ್ರೋಮೋಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಜ ಗೊತ್ತಾಗಬೇಕಿತು,ಇನ್ಮೇಲೆ ಆಟ ಮಜಾ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಸುನಿ ಅಣ್ಣ ಜೇಡಿ ಈ ತರ ಮಾಡಕ್ಕೆ ಹೇಳಿದ್ದು ಅಂತ ನಿಜ ಹೇಳಿಬಿಡು,ಆಮೇಲೆ ಗೌತಮ್ ಭೂಮಿಗೆ ನಿಜ ಗೊತ್ತಾದ್ರೆ ಜೇಡಿ ಜೊತೆಗೆ ನಿನಗೂ ಸೇರಿಸಿ ಮಾರಿ ಹಬ್ಬ ಮಾಡ್ತಾರೆ ಎಂದು ಹೇಳಿದ್ದಾರೆ.

ಸುನೀಲಣ್ಣ ನಿಜ ಒಪ್ಕೋ ಯಾಕ್ ಬೇಕು ನಿಂಗೆಲ್ಲ ಇದು ಎಂದು ಮತ್ತೊಬ್ಬರು ಸಲಹೆ ನೀಡಿದರೆ, ಸಿಂಪಲ್ ಸುನಿ ಹೇಳಿದ್ದು ಜೇಡಿ ಹೆಂಡತಿನ ಮದ್ವೆ ಆಗಲ್ಲಾ ಅಂದಿದ್ದು ಮಲ್ಲಿನಾ ಅಲ್ಲಾ, ಜೇಡಿ ಡಿವೋರ್ಸ್ ಕೊಡಲಿಕ್ಕೆ ಡ್ರಾಮಾ ಮಾಡಿದರೆ ಸುನಿ ಅಥವಾ ಡುಮ್ಮ ಸರ್ ಗೆ ಮೋಸ ಮಾಡಕ್ಕೆ ಮನಸು ಒಪ್ಪದೆ ಈ ಟೈಮ್ ನಾ ಸುನಿ ಯೂಸ್ ಮಾಡ್ಕೊಂಡಿದ್ದಾರೆ ಅಷ್ಟೇ. ಅನ್ಕೊಂಡಿದ್ದೆ ಸುನಿ ಪಾಸಿಟಿವ್ ಶೇಡ್ ಅಂತಾ ಆದರೆ ಅದು ನಿಜಾನೇ ಆಗೋ ತರ ಇದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Jai Dev’s mask falls! Suni learns the dark secrets of Malli’s life and loses her cool. Don’t miss the high-voltage confrontation in today's Amruthadhaare episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X