Amruthadhaare ; ಗೌತಮ್-ಭೂಮಿಕಾಗೆ ಸಿಕ್ಕಳು ಅಸಲಿ ಮಗಳು ; ಆದ್ರೆ ಶಕುನಿ ಮಾವ ಸುಮ್ಮನೆ ಇರಬೇಕಲ್ಲ?

''ಅಮೃತಧಾರೆ'' ಧಾರಾವಾಹಿಯಲ್ಲಿ ನೀನು ಅನುಭವಿಸಿದ ನೋವು, ನರಕವನ್ನು ಜೈದೇವ್ ತನ್ನ ಕಣ್ಣಾರೆ ನೋಡಬೇಕು ಎಂದು ಹೇಳಿರುವ ಗೆಳತಿ ಲೆಕ್ತಾ ಚುಕ್ತಾ ಮಾಡಬೇಕು ಅಂದರೆ ಶತ್ರು ನಮ್ಮ ಕಣ್ಣೆದುರು ಇರಬೇಕು ಎಂದಿದ್ದಾಳೆ. ಅವನು ಹೊರಗಡೆ ಇದ್ದರೆ ನೀನೇ ಭಯದಲ್ಲಿ ಬದುಕಬೇಕು, ಅದೇ ಅವನು ನಿನ್ನ ಕಣ್ಣಳತೆಯಲ್ಲಿ ಬಾಡಿಗಾರ್ಡ್ ಆಗಿ ಇದ್ದರೆ ಅವನ ಮೇಲೆ ನಿಗಾ ಇಡಬಹುದು ಎಂಬ ಸಲಹೆ ನೀಡಿದ್ದಾಳೆ.

ಗೆಳತಿಯ ಈ ಸಲಹೆ ದಿಯಾಗೆ ಮಾಸ್ಟರ್ ಪ್ಲಾನ್ ಎಂದು ಅನಿಸಿದೆ. ಹೀಗಾಗಿ ಮನೆಯೊಳಗೆ ಜೈದೇವ್‌ನನ್ನು ದಿಯಾ ಸೇರಿಸಿಕೊಂಡಿದ್ದಾಳೆ. ದಿಯಾಳ ಈ ನಿರ್ಧಾರದಿಂದಾಗಿ ಈಗ ಜೈದೇವ್ ಈಗ ದಿಯಾ ಮನೆ ಕೆಲಸದವನಾಗಿದ್ದಾನೆ. ಅಂಹಕಾರದ ಅಮಲಿನಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಜೈದೇವ್‌ಗೆ ಈಗ ಒಂದು ಸಿಗರೇಟ್ ಕೂಡ ಸಿಕ್ತಿಲ್ಲ. ಅದಕ್ಕೂ ದಿಯಾ ಹತ್ತಿರ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಜೈದೇವ್‌ನ ಈ ದಯನೀಯ ಸ್ಥಿತಿಯನ್ನು ಕಂಡು ಮಾವ ಲಕ್ಷ್ಮೀಕಾಂತ್ ಬೆಚ್ಚಿ ಬಿದ್ದಿದ್ದಾನೆ. ದಿಯಾ ವಿರುದ್ಧ ನಿಗಿ ನಿಗಿ ಕೆಂಡವಾಗಿದ್ದಾನೆ.

Amruthadhaare Goutham Real Daughter Laxmikant Plan

ಅಖಿಲಾಂಡೇಶ್ವರಿಯ ಅಭಯ ಹಸ್ತ

ಮತ್ತೊಂದು ಕಡೆ ಗೌತಮ್ ತಲೆ ಮೇಲೆ ಅಖಿಲಾಂಡೇಶ್ವರಿಯ ಅಭಯ ಹಸ್ತ ಇದೆ. ಕಳೆದು ಹೋದ ಮಗುವನ್ನು ಹುಡುಕಿಕೊಡುವುದಾಗಿ ಅಖಿಲಾಂಡೇಶ್ವರಿ ಹೇಳಿದ್ದಾಳೆ. ಅದ್ರಂತೆ ಪ್ರಯತ್ನವನ್ನು ಕೂಡ ಅಖಿಲಾಂಡೇಶ್ವರಿ ಮಾಡಿದ್ದು ಆ ಪ್ರಯತ್ನಕ್ಕೆ ಫಲ ಕೂಡ ಸಿಕ್ಕಿದೆ. ಮಗು ಎಲ್ಲಿ ಇದೆ ಎನ್ನುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ಖುಷಿಯಿಂದ ಗೌತಮ್‌ಗೆ ಫೋನ್ ಮಾಡಿದ್ದಾಳೆ ಅಖಿಲಾಂಡೇಶ್ವರಿ.


ಶಕುನಿ ಮಾವನಿಗೆ ಖುಷಿ ಸುದ್ದಿ ಹೇಳಿದ ಅಖಿಲಾಂಡೇಶ್ವರಿ

ಆದರೆ ಗೌತಮ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಮುಳುಗಿ ಹೋಗಿದ್ದಾನೆ. ಅಖಿಲಾಂಡೇಶ್ವರಿಯ ಕರೆಯನ್ನು ಸ್ವೀಕರಿಸಿಲ್ಲ. ಆದರೆ ಈ ಖುಷಿಯ ವಿಚಾರವನ್ನು ಹೇಗಾದರೂ ಮಾಡಿ ಗೌತಮ್‌ಗೆ ಕೂಡಲೇ ಹೇಳಬೇಕೆಂದುಕೊಂಡಿರುವ ಅಖಿಲಾಂಡೇಶ್ವರಿ ಆಫೀಸ್‌ಗೆ ಕರೆ ಮಾಡಿದ್ದಾಳೆ.

ಇದೇ ವೇಳೆ ಮಾವ ಲಕ್ಷ್ಮೀಕಾಂತ್ ಅಖಿಲಾಂಡೇಶ್ವರಿಯ ಜೊತೆ ಮಾತನಾಡಿದ್ದಾನೆ. ಮಗು ಎಲ್ಲಿದೆ ಎನ್ನುವ ವಿಷಯವನ್ನು ಅಖಿಲಾಂಡೇಶ್ವರಿ ಹೇಳಿದ್ದು ಲಕ್ಷ್ಮೀಕಾಂತ್ ಅಡ್ರೆಸ್ ಬರೆದುಕೊಂಡಿದ್ದಾನೆ. ಮಗು ಸಿಕ್ಕಿರುವ ವಿಷಯ ಗೌತಮ್‌ಗೆ ಗೊತ್ತಾಗುತ್ತಾ..? ಅನ್ನುವುದೇ ಸದ್ಯದ ಕುತೂಹಲ. ಯಾಕೆಂದರೆ ಲಕ್ಷ್ಮೀಕಾಂತ್ ಮತ್ತು ಶಕುಂತಲಾ ತಾವು ಬದಲಾಗಿರುವುದಾಗಿ ಹೇಳಿಕೊಂಡರು ಕೂಡ ಪ್ರೇಕ್ಷಕರಿಗೆ ಮಾತ್ರ ಇವರ ಮೇಲೆ ಎಳ್ಳಷ್ಟು ನಂಬಿಕೆ ಇಲ್ಲ. ನಾಯಿ ಬಾಲ ಯಾವತ್ತಿದ್ದರೂ ಡೊಂಕೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಪ್ರೇಕ್ಷಕರ ಅಭಿಪ್ರಾಯ

*ಇವನೊಬ್ಬ ಶಕುನಿ ಮಾಮ ಫೋನ್ ರಿಸೀವ್ ಮಾಡ್ತಾನೆ..ನನಗ್ಯಾಕೋ ಇವಾ ಸರಿ ಆದ ಹಾಗೆ ತೋರಿಲ್ಲ..ಇದೆನ್ನೇ JDಗೆ ಹೋಗಿ ಹೇಳ್ತಾನೆ.

*ಶಕುನಿ ಯಾವಾಗಲೂ ಬದಲಾಗಲ್ಲ

*ಆ ಮಗು ಮಿಂಚುನೇ ಆಗಿರತ್ತೆ

*ಈ ಶಕುನಿ ಮಾವ ಶಕುನಿನೇ...ಅದು ಬದಲಾಗುವ ಕ್ಯಾರೆಕ್ಟರೇ ಅಲ್ಲ ಅನಿಸುತ್ತೆ...ಭೂಮಿ-ಗೌತಮ್ ಬುದ್ಧಿ ಇಲ್ಲದೇ ಹಾವನ್ನ ಮನೆಯಲ್ಲಿ ತಂದು ಬಿಟ್ಟುಕೊಂಡಿದ್ದಾರೆ

*ಅಯ್ಯೋ ಲಕ್ಷ್ಮೀಕಾಂತನಿಗೆ ಸುದ್ದಿ ಮುಟ್ಟಿದೆ ಅಂದರೆ ಕಥೆ ಮುಗಿಯಿತು ಕೇಡಿ ಜೇಡಿ ಲಕ್ಷ್ಮೀಕಾಂತ ಹಾಗೂ ಶಕುಂತಲಾ ಸೇರಿ ಹೊಸ ಗೇಮ್ ಪ್ಲಾನ್ ಪ್ರಾರಂಭ ಮಾಡ್ತಾರೆ.

*ಅಯ್ಯೋ ಲಕ್ಷ್ಮಿಕಾಂತ್ ಅವ್ರೆ ಮತ್ತೆ ವಿಲನ್ ಆಗಬೇಡಿ,ಸಿಕ್ಕಿರೋ ಅವಕಾಶ ಬಳಸಿ ವಿಶ್ವಾಸ ಗಳಿಸಿ

*ಇವನು ವಿಷಯವನ್ನ ಗೌತಮ್‌ಗೆ ಹೇಳಿದರೆ ಒಳ್ಳೆಯವನು... ಅಥವಾ ಇವನು ಮುಚ್ಚಿಟ್ಟರೆ ಇವನು ಇನ್ನೂ ಕಂತ್ರಿ ಬುದ್ಧಿ ಇವನು ಬಿಟ್ಟಿಲ್ಲ ಅಂತಾನೆ ಅರ್ಥ

*ಶಕುನಿ ಯೋಗ್ಯತೆ ಈಗ ಗೊತ್ತಾಗುತ್ತೆ ನಾಯಿ ಬಾಲ ಯಾವತ್ತಿದ್ರು ಡೊಂಕು ಅಂತ

Amruthadhaare Goutham Real Daughter Laxmikant Plan

ಮುಂದೇನು ..?

ಜೈದೇವ್‌ನ ಪರಿಸ್ಥಿತಿ ಕಂಡು ಮರುಗುತ್ತಿರುವ ಲಕ್ಷ್ಮೀಕಾಂತ್, ಗೌತಮ್‌ಗೆ ಮಗುವಿನ ವಿಚಾರ ಹೇಳಬಹುದು. ಆದರೆ ಇದೇ ಸಮಯದಲ್ಲಿ ಜೈದೇವ್‌ಗೆ ಕೂಡ ಈ ವಿಚಾರ ಹೇಳುವ ಸಾಧ್ಯತೆ ಇದೆ. ಉದ್ದೇಶಪೂರ್ವಕವಾಗಿ ಹೇಳದಿದ್ದರೂ ಕೂಡ ಜಸ್ಟ್ ಮಾತ್ ಮಾತಲ್ಲಿ ಲಕ್ಷ್ಮೀಕಾಂತ್ ಬಾಯಿಂದ ಮಗು ವಿಷಯ ಜೈದೇವ್ ಎದುರು ಹೊರ ಬೀಳುವ ಸಾಧ್ಯತೆ ಇದೆ.

ಗೌತಮ್ ಪ್ರಾಣಕ್ಕೆ ಸಂಚಕಾರ ?

ಇನ್ನು ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಜೈದೇವ್ ಹಾತೊರೆಯುತ್ತಿದ್ದಾನೆ. ಈ ಹಿನ್ನೆಲೆ ವಿಷಯ ಗೊತ್ತಾದ ನಂತರ ಜೈದೇವ್ ಆ ಮಗುವನ್ನು ಕಿಡ್ನ್ಯಾಪ್ ಮಾಡಬಹುದು. ಬ್ಲ್ಯಾಕ್ ಮೇಲ್ ಮಾಡಬಹುದು. ಪ್ರಾಣಕ್ಕೆ ಕುತ್ತು ತರಬಹುದು. ಆ ಮಗು ಮಿಂಚುನೇ ಆಗಿದ್ದರೂ ಆಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.

ಒಟ್ನಲ್ಲಿ ''ಅಮೃತಧಾರೆ'' ಸದ್ಯ ರೋಚಕ ಹಂತಕ್ಕೆ ತಲುಪಿದೆ. ಕ್ಲೈಮ್ಯಾಕ್ಸ್ ಹಂತ ಬಂದಂತೆ ಇದೆ. ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Goutham's lost child is found! Will Laxmikant harm the daughter or team up with Jaydev to destroy the Dewans? Get the shocking Amruthadhaare spoiler here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X