Amruthadhaare ; ಜೈದೇವ್ ಕೈಯಲ್ಲಿ ತಗ್ಲಾಕಿಕೊಂಡ ಶಕುನಿ ಮಾವ ; ಮಿಂಚು ಕಿಡ್ನ್ಯಾಪ್, ಗೌತಮ್ ಪ್ರಾಣಕ್ಕೆ ಕುತ್ತು ?

''ಅಮೃತಧಾರೆ'' ಧಾರಾವಾಹಿಯಲ್ಲಿ ಮಿಂಚುನೇ ಗೌತಮ್ ಮಗಳು ಎನ್ನುವ ವಿಚಾರ ಲಕ್ಷ್ಮೀಕಾಂತ್‌ಗೆ ಗೊತ್ತಾಗಿದೆ. ಜೈದೇವ್‌ಗೆ ಕೂಡ ಮಗಳ ವಿಚಾರ ಶಕುನಿ ಮಾವನಿಗೆ ಗೊತ್ತಾಗಿದೆ ಎನ್ನುವುದು ಗೊತ್ತಾಗಿದೆ. ಆದರೆ ಈ ಮಿಂಚಿನ ರಹಸ್ಯ ಇನ್ನೂ ಗೌತಮ್‌ಗೆ ಗೊತ್ತಿಲ್ಲ. ಹೀಗಾಗಿ ಮೊದಲು ಗೌತಮ್‌ಗೆ ಈ ಸಿಹಿ ಸುದ್ದಿಯನ್ನು ಹೇಳಬೇಕೆಂದುಕೊಂಡ ಲಕ್ಷ್ಮೀಕಾಂತ್ ಫೋನ್ ಮಾಡಿದ್ದಾನೆ.

ಆದರೆ ಗೌತಮ್ ವ್ಯಾಪ್ತಿ ಪ್ರದೇಶದಿಂದ ಹೊರ ಇದ್ದಾನೆ. ಈ ಕಾರಣಕ್ಕೆ ಆಫೀಸ್‌ಗೆ ಹೊರಡಲು ಲಕ್ಷ್ಮೀಕಾಂತ್ ಮುಂದಾಗಿದ್ದು ದಾರಿ ಮಧ್ಯದಲ್ಲಿ ಲಿಫ್ಟ್ ಕೇಳಿದ್ದಾನೆ. ಆಗ ಮತ್ತೆ ಎದುರಾದವನೇ ಹೊಂಚು ಹಾಕಿ ಸಂಚು ರೂಪಿಸುವುದರಲ್ಲಿ ಸದಾ ಮುಂದಿರುವ ಜೈದೇವ್.

Amruthadhaare Jaidev Confronts Shakuni Uncle Is Minchu s Kidnapping Next

ಜೈದೇವ್‌ನ ಕಂಡು ಅರೆಕ್ಷಣ ಶಾಕ್ ಆಗುವ ಲಕ್ಷ್ಮೀಕಾಂತ್ ಬೇರೆ ದಾರಿ ಇಲ್ಲದೇ ಅವನ ಬೈಕೇರಿ ಕುಂತಿದ್ದಾನೆ. ಯಾವುದೇ ಕಾರಣಕ್ಕೂ ಈ ವಿಷಯ ಇವನಿಗೆ ಗೊತ್ತಾಗಬಾರದೆಂದುಕೊಂಡಿದ್ದಾನೆ. ಇದೇ ಸಮಯದಲ್ಲಿ ಗಾಡಿ ನಿಲ್ಲಿಸಿರುವ ಜೈದೇವ್ ಮಗಳ ರಹಸ್ಯ ಹೇಳುವಂತೆ ಹೇಳಿದ್ದಾನೆ.

ಆಗ ಲಕ್ಷ್ಮೀಕಾಂತ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ. ಜೈದೇವ್‌ ಕೈಯಲ್ಲಿಗ ಲಕ್ಷ್ಮೀಕಾಂತ್ ಸಿಕ್ಕಿ ಬಿದ್ದಿದ್ದಾನೆ. ಜೈದೇವ್‌ನ ಈ ಆರ್ಭಟಕ್ಕೆ ಮತ್ತೆ ಪ್ರೇಕ್ಷಕರು ನಿಗಿನಿಗಿ ಕೆಂಡವಾಗಿದ್ದಾರೆ. ತಮ್ಮ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ.

Amruthadhaare Jaidev Confronts Shakuni Uncle Is Minchu s Kidnapping Next

ಪ್ರೇಕ್ಷಕರ ಅಭಿಪ್ರಾಯ

*ಜೇಡಿನ ಅಲ್ಲೇ ಮಣ್ಣು ತೆಗೆದು ಹೂತು ಹಾಕಬೇಕು

*ನಮ್ಮ ಎಲ್ಲ ವೀಕ್ಷಕ ಪ್ರಭುಗಳಿಗೂ ಗೊತ್ತು......ಹೀಗೆ ಆಗೋದು ಅಂತ.

*ಜೆಡಿ ಫುಟ್ ಪಾತ್ ಗೆ ಬಂದ್ರೂ ಹಲ್ಕಾ ಬುದ್ದಿ ಬಿಟ್ಟಿಲ್ಲ

*ಡುಮ್ಮು ಸರ್ ಬೇಗ ಬಂದು ಕಾಪಾಡಿ ಮಾವಯ್ಯನ್ನ

*ಅಂಕೊಂಡೆ ಆದ್ರೆ ಇಷ್ಟು ಬೇಗ ಸಿಕ್ತಾರೆ ಅಂತ ಅಂದುಕೊಂಡಿರಲಿಲ್ಲ, ಗೌತಮ್ ಬೇಗ ಬನ್ನಿ ಮಾವ ನಾ ಕಾಪಾಡಿ

*ಎಲ್ಲಿ ಇದ್ದೀಯ ಗೌತಮ್ ಬಾ ನಿನ್ನ ಮಾವನನ್ನು ಕಾಪಾಡು

* ಸಾಕಪ್ಪಾ ಸಾಕು. ಮಾಮನ್ನ ಸಾಯಿಸ್ತಾನಾ ಜೈದೇವ್? ಕರ್ಮ

* ಹಾವಿಗೆ ಹಾಲು ಎರೆದರೆ ಹಿಂಗೆ ಆಗೋದು

ಮುಂದೇನು ?

ಸದ್ಯ ಜೈದೇವ್ ಕೈಯಲ್ಲಿ ಲಕ್ಷ್ಮೀಕಾಂತ್ ತಗ್ಲಾಕಿಕೊಂಡಿದ್ದಾನೆ. ಅಳಿಮಯ್ಯನಿಗೆ ಚಳ್ಳೆ ಹಣ್ಣು ತಿನಿಸಿ, ಲಕ್ಷ್ಮೀಕಾಂತ್ ಅಲ್ಲಿಂದ ಪಾರಾಗುವುದು ಅನುಮಾನ. ಬಲವಂತದಿಂದ ಜೈದೇವ್ ಈಗ ಲಕ್ಷ್ಮೀಕಾಂತ್‌ನ ಫೋನ್ ಕಿತ್ತುಕೊಂಡರು ಕಿತ್ತುಕೊಳ್ಳಬಹುದು. ಯಾಕೆಂದರೆ ಎಲ್ಲಾ ಡಿಟೈಲ್ಸ್ ಇರುವುದು ಶಕುನಿ ಮಾವನ ಮೊಬೈಲ್‌ನಲ್ಲಿಯೇ.

ಈ ಜಟಾಪಟಿಯಲ್ಲಿ ಲಕ್ಷ್ಮೀಕಾಂತ್‌ಗೆ ಪೆಟ್ಟಾದರು ಆಗಬಹುದು. ಪ್ರಜ್ಞೆ ತಪ್ಪಿ ಬಿದ್ದರೂ ಬೀಳಬಹುದು. ಪ್ರಾಣಕ್ಕೂ ಅಪಾಯ ಎದುರಾದರು ಆಗಬಹುದು. ಅಥವಾ ಲಕ್ಷ್ಮೀಕಾಂತ್‌ನ ಒಂದು ಕಡೆ ಕೂಡಿ ಹಾಕಿ ಆ ನಂತರ ಮಿಂಚುನ ಕಿಡ್ನ್ಯಾಪ್ ಮಾಡಿ ಗೌತಮ್‌ನ ಜೈದೇವ್ ಬ್ಲ್ಯಾಕ್ ಮೇಲ್ ಮಾಡಿದರು ಮಾಡಬಹುದು. ಈ ಸಾಧ್ಯತೆ ಕೂಡ ಇದೆ.

ಇನ್ನು ಮತ್ತೊಂದು ಕಡೆ ಲಕ್ಷ್ಮೀಕಾಂತ್‌ಗೆ ಗೌತಮ್ ಫೋನ್ ಮಾಡಿದ್ದಾನೆ. ಆದರೆ ಕೆಡಿಯ ಕಪಿಮುಷ್ಠಿಯಲ್ಲಿ ಸಿಲುಕಿರುವ ಲಕ್ಷ್ಮೀಕಾಂತ್ ಫೋನ್ ಸ್ವೀಕರಿಸಲು ಸಾಧ್ಯವಾಗಿಲ್ಲ. ಆನಂದ್ ಕೂಡ ಲಕ್ಷ್ಮೀಕಾಂತ್ ತನಗೆ ಫೋನ್ ಮಾಡಿ ಮಗು ವಿಚಾರ ವಿಚಾರಿಸಿದ್ದು ಇನ್ನು ಗೌತಮ್‌ಗೆ ತಿಳಿಸಿಲ್ಲ. ಹೀಗಾಗಿ ಗೌತಮ್‌ಗೆ ಲಕ್ಷ್ಮೀಕಾಂತ್ ಚಿಂತೆ ಶುರುವಾಗಿ ಹುಡುಕಿಕೊಂಡು ಹೋದರು ಹೋಗಬಹುದು. ಆ ಸಮಯದಲ್ಲಿ ಲಕ್ಷ್ಮೀಕಾಂತ್ ಕಂಡರು ಕಾಣಬಹುದು.


ಜ್ಯೋತಿಷಿ ಭವಿಷ್ಯ ನಿಜವಾಗೋ ಸಮಯ ಬಂತು

ಅಂದ್ಹಾಗೇ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಿಂಚುಳನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು. ಒಟ್ನಲ್ಲಿ ''ಅಮೃತಧಾರೆ'' ಸದ್ಯ ರೋಚಕ ಹಂತಕ್ಕೆ ತಲುಪಿದೆ. ಕ್ಲೈಮ್ಯಾಕ್ಸ್ ಹಂತ ಬಂದಂತೆ ಇದೆ. ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
A massive clash of villains! Jaidev takes on Shakuni Uncle in Amruthadhaare. Will this dangerous confrontation lead to Minchu getting kidnapped? Find out!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X