Amruthadhaare ; ಜೈಲಿಂದ ಜೈದೇವ್ ರಿಲೀಸ್ - ಲಕ್ಷ್ಮೀಕಾಂತ್ ಜೊತೆ ಸೇರಿ ಗೌತಮ್ ಬೆನ್ನಿಗೆ ಮತ್ತೊಮ್ಮೆ ಚೂರಿ ಹಾಕ್ತಾಳಾ ಶಕುಂತಲಾ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಜೈಲು ಪಾಲಾಗಿದ್ದಾನೆ. ಅವನ್ಯಾರೋ ನನಗೆ ಗೊತ್ತಿಲ್ಲ ಎಂದು ಶಕುಂತಲಾ ಪೊಲೀಸರಿಗೆ ಹೇಳಿದ ಹಿನ್ನೆಲೆ ನರಕ ಅನುಭವಿಸಿದ್ದಾನೆ. ಮತ್ತೊಂದು ಕಡೆ ಕಾಣೆಯಾದ ಮಗು ಕಥೆ ಮತ್ತೆ ಮುನ್ನೆಲೆಗೆ ಬಂದಿದೆ.

ಪೂಜೆಯಲ್ಲಿ ಮಿಂಚು ಕೂರಬಾರದು ಎಂದು ಪುರೋಹಿತರು ಹೇಳಿದಾಗ, ಮಕ್ಕಳು ದೇವರ ಸಮಾನ ಮಿಂಚು ನನ್ನ ಮಗಳು ಎಂದು ಹೇಳಿದ್ದಾನೆ. ಹಣಕಾಸಿನ ವಿಚಾರದಲ್ಲಿ ಈಗಾಗಲೇ ಗೌತಮ್ ಕೈ ಹಿಡಿದಿರುವ ಅರಸನಕೋಟೆ ಅಖಿಲಾಂಡೇಶ್ವರಿ ಕಳೆದು ಹೋದ ಮಗು ಹುಡುಕುವುದಾಗಿ ಹೇಳಿದ್ದಾಳೆ.

Amruthadhaare Jaidev Released Are Lakshmikanth and Shakuntala Plotting a Double Game

ಈ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಮತ್ತೊಂದು ಕಡೆ ಜ್ಯೋತಿಷಿ ಮಗಳಿಂದಲೇ ಕಂಟಕ ಎನ್ನುವ ಭವಿಷ್ಯವನ್ನು ಹೇಳಿಯಾಗಿದೆ. ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳೆ ಎಂದು ಕೂಡ ಹೇಳಿಯಾಗಿದೆ.

ಜ್ಯೋತಿಷಿಯ ಈ ಮಾತು ಈಗ ಮನ ಕೆಡಿಸಿದೆ. ಕಳೆದು ಹೋದ ಆ ಮಗಳು ಮಿಂಚುನೇನಾ..? ಅಥವಾ ಆ ಮಗಳು ಗೌತಮ್ ಮತ್ತು ಭೂಮಿಕಾ ಬದುಕಿನಲ್ಲಿ ಪ್ರವೇಶ ಮಾಡಿ ಮುಂದೆ ತೊಂದರೆ ಕೊಡುತ್ತಾಳಾ..? ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ.

ಇನ್ನು ಶಕುಂತಲಾ ನಾನು ಬದಲಾಗಿದ್ದೇನೆ ಎಂದು ಹೇಳಿದರೂ ಕೂಡ ಪ್ರೇಕ್ಷಕರಿಗೆ ಮಾತ್ರ ನಂಬಿಕೆ ಬರುತ್ತಿಲ್ಲ. ಮಗ ಜೈದೇವ್ ವಿರುದ್ಧವೇ ಮಾತನಾಡಿ ಆತನನ್ನು ಜೈಲಿಗೆ ಹೋಗುವಂತೆ ಶಕುಂತಲಾ ಮಾಡಿದ್ದರೂ ಕೂಡ ಪ್ರೇಕ್ಷಕರಿಗೆ ಶಕುಂತಲಾ ನಡೆಯ ಮೇಲೆ ಅನುಮಾನ ಇದೆ.

ಹೀಗಿರುವಾಗ ಇದೀಗ ಜೈಲಿನಲ್ಲಿ ಕೊಳೆಯುತ್ತಿದ್ದ ಜೈದೇವ್‌ನನ್ನು ಶಕುನಿ ಮಾಮಾ ಲಕ್ಷ್ಮೀಕಾಂತ್ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಪೊಲೀಸ್ ಠಾಣೆಯಲ್ಲಿ ನಿಮ್ಮ ಸಹವಾಸ ನನಗೆ ಬೇಡ ಎಂದು ಜೈದೇವ್ ಹೇಳಿದ್ದರೂ ಆ ನಂತರ ಪೊಲೀಸರು ಹಾಕಿದ ಅವಾಜ್‌ಗೆ ಹೆದರಿ ಲಕ್ಷ್ಮೀಕಾಂತನ ಜೊತೆ ಹೋಗಲು ಒಪ್ಪಿಕೊಂಡಿದ್ದಾನೆ.

amruthadhaare-jaidev-released-are-lakshmikanth-and-shakuntala-plotting-a-double-game

ಲಕ್ಷ್ಮೀಕಾಂತ್ ಮಾಡಿದ ಈ ಕೆಲಸದಿಂದ ಈಗ ಹಲವರಿಗೆ ಆಘಾತವಾಗಿದೆ. ಶಕುಂತಲಾ ಮಾತ್ರ ಅಲ್ಲ ಲಕ್ಷ್ಮೀಕಾಂತ್ ಕೂಡ ಬದಲಾಗಿಲ್ಲ ಎನ್ನುವ ಅಭಿಪ್ರಾಯ ಪ್ರೇಕ್ಷಕರ ವಲಯದಲ್ಲಿ ಈಗ ವ್ಯಕ್ತವಾಗುತ್ತಿದೆ. ಜೈದೇವ್ ಜೈಲಿನಲ್ಲಿರುವ ವಿಷಯ ತಿಳಿದು ಖುದ್ದು ಗೌತಮ್‌, ಜೈದೇವ್‌ನ ಬಿಡಿಸಿಕೊಂಡು ಬರುವ ಜವಾಬ್ಧಾರಿಯನ್ನು ಲಕ್ಷ್ಮೀಕಾಂತ್ ಗೆ ವಹಿಸಿದ್ದರು ವಹಿಸಿರಬಹುದು. ಆ ಸಾಧ್ಯತೆ ಕೂಡ ಇದೆ.

ಆದರೆ.. ಗೌತಮ್ ಈ ಕೆಲಸ ಮಾಡಿರಲಿಕ್ಕಿಲ್ಲ ಎನ್ನುವ ನಂಬಿಕೆ ಪ್ರೇಕ್ಷಕರದ್ದು. ಹೀಗಾಗಿಯೇ ಲಕ್ಷ್ಮೀಕಾಂತ್ ವಿರುದ್ಧ ಈಗ ಪ್ರೇಕ್ಷಕರು ಕೆಂಡ ಕಾರುತ್ತಿದ್ದಾರೆ.

ಪ್ರೇಕ್ಷಕರ ಅಭಿಪ್ರಾಯ

* ಯಾರನ್ನ ನಂಬಬೇಕೋ ಯಾರನ್ನ ನಂಬಬಾರದೋ ಒಂದು ಗೊತ್ತಾಗುತ್ತಿಲ್ಲ ಜೊತೆಯಲ್ಲೇ ಇದ್ದು ಕತ್ತಿ ಮಸಿಯುತ್ತಾರೆ

*ಮಾವಾ ಮತ್ತೆ ಶಕುನಿ ಆದನಾ.?

*ಶಕುನಿ ಬದಲಾಗಿಲ್ವಾ ಕರ್ಮ

*ಮಾವನಿಗೆ ಇದು ಬೇಕಿತ್ತಾ

*ಹುಟ್ಟು ಗುಣ ಸುಟ್ಟರು ಹೋಗಲ್ಲ

*ಶಕುನಿ ಅವನ ಬುದ್ದಿ ಎಲ್ಲಿ ಬಿಡತಾನೆ

*ಯಲಾ ಕುತಂತ್ರಿ ಮಾವ

*ಕೇಡಿ ಜೈ ದೇವ್ ಶಕುನಿ ಮಾಮ ಇಬ್ಬರು ಶಕುನಿಗಳು ಮಾತೆ ಒಂದಾಗಿದ್ದಾರೆ ಇಬ್ಬರು ಶಕುನಿಗಳು ಸೇರಿ ಏನೋ ಸ್ಕೆಚ್ ಹಾಕಿದ್ದಾರೆ.

ಮುಂದೇನು ..?

ಸದ್ಯ ಜೈಲಿಂದ ಹೊರ ಬಂದಿರುವ ಜೈದೇವ್ ಸುಮ್ಮನೆ ಅಂತೂ ಕೂರಲ್ಲ. ದಿಯಾ ಬೆನ್ನೇರುವ ಪ್ರಯತ್ನ ಮಾಡುತ್ತಾನೆ. ಇದೇ ಸಮಯದಲ್ಲಿ ಗೌತಮ್ ವಿರುದ್ಧವೂ ಮತ್ತೊಮ್ಮೆ ಮಸಲತ್ತು ಮಾಡುವುದರಲ್ಲಿ ಅನುಮಾನ ಇಲ್ಲ. ಮಗಳಿಂದಲೇ ಕಂಟಕ ಎಂದು ಜ್ಯೋತಿಷಿ ಹೇಳಿದ ವಿಚಾರ ಜೈದೇವ್ ಗೆ ಗೊತ್ತಾದರೂ ಆಗಬಹುದು. ಅವಳನ್ನು ಇವನೇ ಹುಡುಕಿ ಆಕೆಯ ತಲೆಯನ್ನು ಜೈದೇವ್ ತುಂಬಬಹುದು. ಗೌತಮ್ ವಿರುದ್ಧ ಎತ್ತಿ ಕಟ್ಟಬಹುದು. ಜೈದೇವ್‌ನ ಈ ಕುತಂತ್ರಕ್ಕೆ ಶಕುಂತಲಾ ಮತ್ತು ಲಕ್ಷ್ಮೀಕಾಂತ್ ಕೂಡ ಕೈ ಜೋಡಿಸುತ್ತಾರಾ ಎನ್ನುವುದನ್ನು ನೋಡಬೇಕಿದೆ.

ಒಟ್ನಲ್ಲಿ ''ಅಮೃತಧಾರೆ'' ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇನ್ನೆಷ್ಟು ದಿನ ''ಅಮೃತಧಾರೆ'' ಮುಂದುವರೆಯುತ್ತೆ..? ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Jaidev returns! Amruthadhaare hits a new peak as Lakshmikanth and Shakuntala’s suspicious behavior sparks "double game" rumors against Gautham. Has Shakuntala really changed, or is this a master plan to destroy Gautham? Read the latest spoilers today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X