Amruthadhaare ; ಮಿಂಚು ನಾಪತ್ತೆ, ಮುಂದುವರೆದ ಜೈದೇವ್ ಅಟ್ಟಹಾಸ ; ಗೌತಮ್-ಭೂಮಿಕಾಗೆ ಶಾಕ್ ಮೇಲೆ ಶಾಕ್

''ಅಮೃತಧಾರೆ'' ಧಾರಾವಾಹಿಯಲ್ಲಿ ಸದ್ಯ ಮಿಂಚು ಜನ್ಮ ರಹಸ್ಯದ ಕಥೆ ಶುರುವಾಗಿದೆ. ಒಂದು ಕಡೆ ಮಿಂಚುನ ಕಿಡ್ನ್ಯಾಪ್ ಮಾಡಲು ಜೈದೇವ್ ಮಸಲತ್ತು ಮಾಡುತ್ತಿದ್ದರೆ, ಇನ್ನೊಂದು ಕಡೆ ಮಿಂಚುನ ಹೇಗಾದರೂ ಮಾಡಿ ದತ್ತು ಪಡೆಯಬೇಕೆಂದು ಮಹಿಮಾ ಕಸರತ್ತು ಮಾಡುತ್ತಿದ್ದಾಳೆ. ಮತ್ತೊಂದು ಕಡೆ ಗೌತಮ್ ಮತ್ತು ಭೂಮಿಕಾ ಪರಿಸ್ಥಿತಿ ಗಂಟಲಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತೆ ಆಗಿದ್ದು, ಮಗದೊಂದು ಕಡೆ ಮಿಂಚು ಮನ ಹಳವಂಡ ಆಗಿದೆ.

ಹೀಗಾಗಿಯೇ ಶಾಲೆಗೆ ಹೋಗುವ ನೆಪದಲ್ಲಿ ಹೊರ ಬಂದಿರುವ ಮಿಂಚು, ಮನೆಯಿಂದ ಓಡಿ ಹೋಗುವ ಯೋಚನೆ ಮಾಡಿದ್ದಾಳೆ. ಆದರೆ ಇದೇ ಸಮಯಕ್ಕೆ ಅಲ್ಲಿ ಜೈದೇವ್ ಬಂದಿದ್ದು ಮಿಂಚು ಬ್ರೈನ್ ವಾಶ್ ಮಾಡಿ ತನ್ನ ಜೊತೆ ಕರೆದುಕೊಂಡು ಹೋಗಿದ್ದಾನೆ.

Amruthadhaare Jaidev s Evil Master Plan Succeeds Minchu Goes Missing

ಜೈದೇವ್ ಪ್ಲಾನ್, ಮನೆಗೆ ಬಂದ ಇಬ್ಬರು ಅಪರಿಚಿತರು

ಒಲ್ಲದ ಮನಸಿಂದ ಮಹಿಮಾಗೆ ಮಿಂಚುನ ದತ್ತು ಕೊಡಲು ಗೌತಮ್ ಮತ್ತು ಭೂಮಿಕಾ ಮುಂದಾಗಿದ್ದು, ಇನ್ನೇನು ಮಹಿಮಾ ಮಡಿಲನ್ನು ಮಿಂಚು ಸೇರಬೇಕೆನ್ನನುವಷ್ಟರಲ್ಲಿ ಇಬ್ಬರು ಅಪರಿಚಿತರು ಗೌತಮ್ ಮನೆಗೆ ಓಡೋಡಿಕೊಂಡು ಬಂದಿದ್ಧಾರೆ. ಮಿಂಚು ನಮ್ಮ ಮಗಳು ಎಂದಿದ್ದಾರೆ.

ನೋ ಡೌಟ್, ಇವರಿಬ್ಬರು ಜೈದೇವ್ ಕ್ಯಾಂಪಿನವರು. ಜೈದೇವ್ ಹೇಳಿದಂತೆ ಪಾಠವನ್ನು ಗೌತಮ್ ಮತ್ತು ಭೂಮಿಕಾ ಎದುರು ಒಪ್ಪಿಸಿದ್ಧಾರೆ. ಸದ್ಯ ಇವರ ಮಾತು ಕೇಳಿ ಗೌತಮ್ ಮತ್ತು ಭೂಮಿಕಾ ಕಕ್ಕಾಬಿಕ್ಕಿಯಾಗಿದ್ದು, ಮಹಿಮಾಗೆ ನಿಂತ ನೆಲವೇ ಕುಸಿದಂತಾಗಿದೆ.

amruthadhaare-jaidev-s-evil-master-plan-succeeds-minchu-goes-missing

ಗೊತ್ತಾಯ್ತು ಮಿಂಚು ಕಾಣೆಯಾದ ವಿಚಾರ

ಇದಕ್ಕೂ ಮುನ್ನ ಮಿಂಚು ಶಾಲೆಯಲ್ಲಿ ಇಲ್ಲ ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿದೆ. ಇದರಿಂದ ಆತಂಕಕ್ಕೀಡಾಗಿದ್ದ ಇವರಿಗೆ ಈಗ ಈಗ ಇಬ್ಬರು ಅಪರಿಚಿತರು ಬಂದು ಶಾಕ್ ನೀಡಿದ್ಧಾರೆ. ಜೈದೇವ್ ಹೀಗೆ ಶಾಕ್ ಮೇಲೆ ಶಾಕ್ ನೀಡಿದರೂ ಕೂಡ ಗೌತಮ್ ಮತ್ತು ಭೂಮಿಕಾಗೆ ಇದೆಲ್ಲದರ ಹಿಂದೆ ಜೈದೇವ್ ಕೈವಾಡ ಇದೆ ಎನ್ನುವ ವಿಚಾರ ಮನದಟ್ಟಾಗಿಲ್ಲ. ಲಕ್ಷ್ಮೀಕಾಂತ್ ಕಾಣೆಯಾಗಿ ವಾರವಾಗುತ್ತಾ ಬಂದರೂ ಇಬ್ಬರು ತಲೆ ಕೆಡಿಸಿಕೊಂಡಿಲ್ಲ. ಅಷ್ಟರ ಮಟ್ಟಿಗೆ ಮುಗ್ದರು ಇವರು ಇಬ್ಬರು. ಇವರ ಇದೇ ಮುಗ್ದತೆಗೆ ಮತ್ತು ಜೈದೇವ್‌ನ ಅಟ್ಟಹಾಸಕ್ಕೆ ಹಲವರು ಈಗ ಕೆರಳಿದ್ಧಾರೆ.

ಪ್ರೇಕ್ಷಕರ ಅಭಿಪ್ರಾಯ

* ಮಿಂಚು ಅವಳು ಸ್ವಂತ ಮಗು ಅಂತ ಗೊತ್ತಿದ್ದರೆ ಗೌತಮ ಭೂಮಿ ದತ್ತು ಕೋಡ್ತಿದ್ದರಾ ಮಿಂಚು ಯಾರು ಇಲ್ಲದಾಗ ಗೌತಮಗೆ ಅದೃಷ್ಟ ದೇವತೆ ಆದಳು ಆದರೆ ಗೌತಮ ಅವನಿಗೆ ಎಲ್ಲಾ ಸಿಕ್ಕ ಮೇಲೆ ತಿರಸ್ಕಾರ ಮಾಡಿದ ಜೈದೇವ ಕೈಗೆ ಮಿಂಚು ಸಿಕ್ಕರೆ ಅವನಿಗೆ ಅದೃಷ್ಟ ಲಕ್ಷ್ಮಿ ಒಲಿದು ಗೌತಮಗೆ ದುರಾದೃಷ್ಟ ಅವನನ್ನು ಸುತ್ತುತ್ತದೆ.

* ಮಿಂಚು ಇವ್ನ್ ಜೊತೆ ಹೋಗ್ತಾಳೆ, ಅಪ್ಪನಿಗೆ ತೊಂದ್ರೆ ಆಗುತ್ತೆ, ಭವಿಷ್ಯ ಹೇಳಿರೋ ಹಾಗೆ

* ಅಯ್ಯೋ!! ಇಲ್ಲದೇ ಇರುವುದನ್ನು ತುರುಕಿ ತುರುಕಿ ವೀಕ್ಷಕರ ಸಹನೆ ಪರೀಕ್ಷೆ ಮಾಡ್ತಿದ್ದಾರೆ... ಏನು ಕರ್ಮ

* ಕೈಯಾರೆ ಭೂಮಿಕಾ, ಗೌತಮ್ ತಮ್ಮ ಮಗಳನ್ನು ಕೇಡಿ JD ಗೆ handover ಮಾಡಿದ ಹಾಗೆ ಇದೆ ..ಮನಸಿಲ್ಲದ ಮನಸಿನಿಂದ ಮಿಂಚು ಮಾಯ ವಾದಳು

* ಇವರನ್ನು ಸಹ ಜೆಡಿ ಕಳಿಸಿದ್ದಾನೆ ಗೌತಮ್‌ಗೆ ಟೆನ್ಶನ್ ಕೊಡಲು

*ಮತ್ತೊಂದು ಹೈ ಡ್ರಾಮಾ ಶುರು

* ಜೆಡಿ ಪ್ಲಾನ್ ಇದು

*ಕೋಟಿ ಕೊಡು ಮಿಂಚು ನಾ ಕರ್ಕೊಂಡು ಹೋಗು ಅಂತಾನೆ ಈಗ ಜೈ ಪಕ್ಕಾ ಅವನಿಗೆ ದುಡ್ಡು ಬೇಕು ದುಡ್ಡು

* ಯಾವಾಗ್ಲೂ ವಿಲನ್ನೇ ಗೆಲ್ಲೋದಾದ್ರೆ ನಿಮ್ಮ ಸೀರಿಯಲ್‌ಗೆ ಹೀರೋ-ಹೀರೋಯಿನ್ ಯಾಕೆ ಬೇಕು? ರಬ್ಬಿಶ್! ಅಷ್ಟು ಚೆನ್ನಾಗಿರೋ ಆರ್ಟಿಸ್ಟ್‌ಗಳನ್ನ ಇಟ್ಕೊಂಡು ಬರೀ ಈ ವಿಲನ್ ಜಯದೇವ್‌ನೇ ತೋರ್ಸ್ತಾರಲ್ಲ, ಯಾವಾಗ್ಲೂ ಅವನ ಮೇಲೆ ಏನ್ ಲವ್ವೋ ನಿಮ್ಗೆ?

ಮುಂದೇನು ?

ಸದ್ಯ ಮಿಂಚು ಕಾಣೆಯಾಗಿದ್ದಾಳೆ. ಜೈದೇವ್ ಕಪಿಮುಷ್ಠಿಯಲ್ಲಿರುವ ಲಕ್ಷ್ಮೀಕಾಂತ್ ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು ಬಂದು ಗೌತಮ್‌ಗೆ ಸತ್ಯ ಹೇಳ್ತಾನಾ..? ಅಥವಾ ಇನ್ನಾದರೂ ಇದೆಲ್ಲವೂ ಜೈದೇವ್ ಪಿತೂರಿ ಎನ್ನುವ ವಿಚಾರ ಗೌತಮ್‌ಗೆ ಗೊತ್ತಾಗುತ್ತಾ..? ಇಲ್ಲವಾದಲ್ಲಿ ಜೈದೇವ್ ಬ್ಲಾಕ್ ಮೇಲ್ ಶುರು ಮಾಡಿದ ನಂತರವಷ್ಟೇ ಜ್ಞಾನೋದಯವಾಗುತ್ತಾ..? ಮಿಂಚು ಜನ್ಮ ರಹಸ್ಯದ ಈ ಎಪಿಸೋಡ್‌ಗೆ ಅದ್ಯಾವಾಗ ಬ್ರೇಕ್ ಬೀಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
A mysterious new couple enters the Diwan House just as Minchu vanishes! Has Jaidev won? Check out the latest shocking twist in Zee Kannada’s Amruthadhaare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X