Amruthadhare ; ಗೌತಮ್ ಮನದ ನೋವಿಗೆ ಮುಲಾಮು ಹಚ್ತಾಳಾ ಭೂಮಿಕಾ ? ಭಾಗ್ಯಮ್ಮ ಮಾತು ಕೇಳಿ ಬೆಚ್ಚಿ ಬಿದ್ದ ಶಕುಂತಲಾ

''ಅಮೃತಧಾರೆ'' ಧಾರಾವಾಹಿಯಲ್ಲಿ ಆಕಾಶ್‌ನ ಕಿಡ್ನ್ಯಾಪ್ ಮಾಡಿದ್ದ ಜೈದೇವ್ ಸದ್ಯ ಸಂಭ್ರಮದ ಅಲೆಯಲ್ಲಿದ್ದಾನೆ. ಆಸ್ತಿ ಎಲ್ಲವೂ ತನ್ನದಾದ ಖುಷಿಯಲ್ಲಿ ಎಣ್ಣೆ ಹೊಡೆಯುತ್ತಾ , ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಾ ಫುಲ್ ಜಾಲಿ ಮೂಡ್‌ನಲ್ಲಿದ್ದಾನೆ. ದಿಯಾಗೆ ತನ್ನ ಈ ಖುಷಿಯ ವಿಚಾರವನ್ನು ಕೂಡ ಜೈದೇವ್ ಹೇಳಿದ್ದು, ಡಿವೋರ್ಸ್‌ ಪೇಪರ್‌ ಮೇಲೆ ಕೂಡ ಮಲ್ಲಿ ಸಹಿ ತಗೋಬಹುದಿತ್ತಲ್ಲ ಎಂದು ದಿಯಾ ಪ್ರಶ್ನೆ ಮಾಡಿದ್ದಾಳೆ.

ಆಗ ಡಿವೋರ್ಸ್ ಪಡೆದರೆ ಅವಳು ನೆಮ್ಮದಿಯಿಂದ ಇರ್ತಾಳೆ ಎಂದೆಲ್ಲಾ ಜೈದೇವ್ ಮಾತನಾಡುತ್ತಾನೆ. ಇದರಿಂದ ಕೆರಳುವ ದಿಯಾ ಇವನಿಗೊಂದು ಗತಿ ಕಾಣಿಸುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಇನ್ನೊಂದು ಕಡೆ ಜೈದೇವ್ ಕಪಿಮುಷ್ಟಿಯಿಂದ ಆಕಾಶ್‌ನ ಬಿಡಿಸಿಕೊಂಡು ಬಂದಿರುವ ಭೂಮಿಕಾ ಈ ಬಾರಿ ಊರಲ್ಲ ಬದಲಿಗೆ ದೇಶ ಬಿಡಲು ಮುಂದಾಗಿದ್ದಾಳೆ.

amruthadhaare-jan-1-bhagyamma-speaks-shakuntala-stunned-bhoomika-reunites-with-gautham

ಆದರೆ, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆನಂದ್‌ನ ಮಲ್ಲಿ ಭೇಟಿಯಾಗಿದ್ದಾಳೆ. ಲಕ್ಷ್ಮೀಕಾಂತ್ ಮತ್ತು ಆನಂದ್ ಕಡೆಯಿಂದ ಮತ್ತೊಂದು ಮಗು ಬದುಕಿರುವ ವಿಚಾರ ಮಲ್ಲಿಗೆ ಗೊತ್ತಾಗಿದ್ದು ಓಡೋಡಿಕೊಂಡು ಬಂದು ಭೂಮಿಕಾಗೆ ಮಲ್ಲಿ ಸತ್ಯವನ್ನು ಹೇಳಿದ್ದಾಳೆ. ಆದರೆ, ಮಲ್ಲಿಯ ಮಾತನ್ನು ಭೂಮಿಕಾ ಸುತಾರಾಂ ಒಪ್ಪುವುದಿಲ್ಲ.

ಹೀಗಾಗಿ ಆನಂದ್‌ಗೆ ಮಲ್ಲಿ ಕರೆ ಮಾಡಿದ್ದು ಆನಂದ್ ಬಳಿಯೇ ಎಲ್ಲ ಸತ್ಯವನ್ನು ಭೂಮಿಕಾ ಕೇಳಿ ತಿಳಿದುಕೊಂಡಿದ್ದಾಳೆ. ಆದರೂ ಭೂಮಿಕಾಗೆ ಸಮಾಧಾನ ಇಲ್ಲ. ನಂಬಿಕೆ ಬರ್ತಿಲ್ಲ.ಮನಸಿಲ್ಲದ ಮನಸಿಂದ ಮತ್ತೆ ಬ್ಯಾಗ್ ಎತ್ತಿಕೊಂಡು ಮನೆಗೆ ಮರಳಿ ಬಂದಿದ್ದಾಳೆ. ಈ ಕಾರಣಕ್ಕೆ ಸದ್ಯ ಮಲ್ಲಿ ದಾಖಲೆ ಸಮೇತ ಬಂದಿದ್ದು ಪೊಲೀಸ್ ಠಾಣೆಯಲ್ಲಿ ಗೌತಮ್ ನೀಡಿದ್ದ ದೂರಿನ ಪ್ರತಿಯನ್ನೆಲ್ಲ ಭೂಮಿಕಾಗೆ ತೋರಿಸಿದ್ದಾಳೆ.

ಮತ್ತೊಂದು ಕಡೆ ಹಲವು ದಿನಗಳಿಂದ ಕಾಣೆಯಾಗಿದ್ದ ಶಕುಂತಲಾ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಶಕುಂತಲಾನ ಹುಡುಕಿಕೊಂಡು ಭಾಗ್ಯಮ್ಮನೇ ಮನೆಗೆ ಬಂದಿದ್ದಾಳಾ..? ಅಥವಾ ಭಾಗ್ಯಮ್ಮನನ್ನು ಹುಡುಕಿಕೊಂಡು ಶಕುಂತಲಾ ಆನಂದ್ ಮನೆಗೆ ಬಂದಿದ್ದಾಳಾ..? ಎನ್ನುವುದು ಗೊತ್ತಿಲ್ಲವಾದರೂ ಭಾಗ್ಯಮ್ಮಳನ್ನು ನೋಡಿದವಳೇ ಶಕುಂತಲಾ ಅಪಹಾಸ್ಯ ಮಾಡಲು ಶುರು ಮಾಡಿದ್ದಾಳೆ. ಮಾತು ಮರಳಿ ಬಂದಿರುವ ವಿಚಾರ ಗೊತ್ತಿರದೇ ನನ್ನೆಲ್ಲಾ ಬಂಡವಾಳವನ್ನು ಅತ್ತೆ ಹತ್ತಿರ ಹೇಳು ನೋಡೋಣ ಎಂದು ಸವಾಲು ಹಾಕಿದ್ದಾಳೆ.

amruthadhaare-jan-1-bhagyamma-speaks-shakuntala-stunned-bhoomika-reunites-with-gautham

ಇನ್ನು ಮೊದಲಿಂದ ಶಕುಂತಲಾ ಕೈ ತಿರುಗಿಸುವುದರಲ್ಲಿ ಭಾಗ್ಯಮ್ಮದು ಎತ್ತಿದ ಕೈ. ಹೀಗಾಗಿಯೇ ಶಕುಂತಲಾ ಮಾತು ಕೇಳಿ ಕೆರಳಿದ ಭಾಗ್ಯಮ್ಮ, ಶಕುಂತಲಾ ಕೈ ತಿರುಗಿಸಿದ್ದಾಳೆ. ಇನ್ನು ನಿನ್ನ ಆಟ ಮುಗಿತು, ಕೇಡುಗಾಲ ಶುರುವಾಯ್ತು ಎಂದು ಅವಾಜ್ ಹಾಕಿದ್ದಾಳೆ. ಭಾಗ್ಯಮ್ಮ ಮಾತನಾಡಿರುವುದನ್ನು ಕಂಡು ಸದ್ಯ ಶಕುಂತಲಾ ಕಂಗಾಲಾಗಿದ್ದಾಳೆ. ಮತ್ತೊಂದು ಕಡೆ ಭೂಮಿಕಾ ಕಣ್ಣೀರಾಗಿದ್ದು ಗೌತಮ್‌ ಬಳಿ ಹೋಗುವ ಆಸೆ ವ್ಯಕ್ತಪಡಿಸಿದ್ದಾಳೆ. ಸದ್ಯ ಸದ್ಯ ಭಾಗ್ಯಮ್ಮ ರೌದ್ರಾವತಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಸೂಪರ್ ಭಾಗ್ಯಮ್ಮ ಎಂದಿದ್ದಾರೆ.

ಮುಂದೇನು..?

ವಠಾರಕ್ಕೆ ಏನೋ ಭೂಮಿಕಾ ಮರಳಿ ಬಂದಿದ್ದಾಳೆ. ನಾನು ಮಾಡಿದ್ದು ತಪ್ಪೆಂದು ಕಣ್ಣೀರು ಹಾಕಿದ್ದಾಳೆ. ಗೌತಮ್ ಬಳಿ ಹೋಗಲು ನಿರ್ಧಾರ ಮಾಡಿದ್ದಾಳೆ. ಆದರೆ ಇದೆಲ್ಲವೂ ಅಷ್ಟೊಂದು ಸುಲಭವಾಗಿ ನಡೆಯುತ್ತಾ..? ಅಥವಾ ಮುಂದೆ ಮತ್ಯಾವುದಾದರೂ ಅನಾಹುತ ನಡೆಯುತ್ತಾ..? ಎನ್ನುವುದನ್ನು ನೋಡಬೇಕಿದೆ. ಇನ್ನು ಆಸ್ತಿ ಸಿಕ್ಕ ಖುಷಿಯಲ್ಲಿರುವ ಜೈದೇವ್‌ನ ದಿಯಾ ಇನ್ನೂ ಬೀದಿಗೆ ತರುವುದು ಬಾಕಿ ಇದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆಯಾದರೂ ಸದ್ಯ ''ಅಮೃತಧಾರೆ'' ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮುಂದೆ ಮತ್ಯಾವ ತಿರುವನ್ನು ಧಾರಾವಾಹಿ ಪಡೆಯುತ್ತೆ ಎನ್ನುವುದನ್ನು ಈಗ ನೋಡಬೇಕಿದೆ.

More from Filmibeat

English summary
"A massive twist in Amruthadhaare! How will Shakuntala react to Bhagyamma's voice? Meanwhile, Bhoomika plans a shocking reunion with Gautham. Get the full update here!"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X