Amruthadhaare : 6 ವರ್ಷಗಳ ನಂತರ ಕೊನೆಗೂ ಒಂದಾದ ಗೌತಮ್-ಭೂಮಿಕಾ ; ಇದು ಅಮೃತಧಾರೆಯ ಅಂತ್ಯನಾ ? ಹೊಸ ಆರಂಭನಾ?
''ಅಮೃತಧಾರೆ'' ಧಾರಾವಾಹಿಯಲ್ಲಿ ನೀನು ದೂರ ಆಗಿದ್ದೇಕೆ ಎಂದು ಭೂಮಿಕಾಗೆ ಪದೇ ಪದೇ ಪ್ರಶ್ನೆಯನ್ನು ಸದಾಶಿವ ಮಾಡಿದ್ದು ನನಗೆ ಬೇರೇನೂ ಬೇಡ ನೀನು ಯಾಕೆ ಹೀಗಿದೀಯಾ ಅದಕ್ಕೆ ಕಾರಣ ಹೇಳು ಸಾಕು ಎಂದು ಹೇಳಿದ್ದಾನೆ. ನನ್ನ ಹತ್ರನೂ ಮುಚ್ಚಿಡಬೇಕಾ ಎಂದು ಆಣೆ ಮಾಡಿಸಿಕೊಂಡಿದ್ದಾನೆ. ನಾನು ಯಾರ ಹತ್ರ ಕೂಡ ಈ ವಿಷಯ ಹೇಳುವುದಿಲ್ಲ. ಪ್ರಸ್ತಾಪ ಮಾಡುವುದಿಲ್ಲ ಎಂದು ಹೇಳುತ್ತಾನೆ.
ತಂದೆಯ ಮಾತುಗಳನ್ನು ಕೇಳಿ ಕಣ್ಣೀರಾಗುವ ಭೂಮಿಕಾ ತನ್ನ ತಂದೆ ಸದಾಶಿವ ಎದುರು ತನ್ನ ದುಃಖ ಹಂಚಿಕೊಂಡಿದ್ದಾಳೆ. ಮದುವೆಯಾದ ನಂತರ ಶಕುಂತಲಾ ಅತ್ತೆ ನಾನು ಅವರ ಅಡಿಯಾಳು ಆಗಿರುತ್ತೇನೆ ಎಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಂತೆ ನಡೆಯಲಿಲ್ಲ ಎನ್ನುವ ಭೂಮಿಕಾ ಮಲ್ಲಿ ವಿಚಾರದಲ್ಲಿ ಹತ್ತಿಕೊಂಡ ಸಣ್ಣ ಕಿಡಿ ಆ ನಂತರ ಕಾಡ್ಗಿಚ್ಚಿನಂತೆ ಹಬ್ಬಿತು ಎನ್ನುತ್ತಾಳೆ. ನನ್ನ ಮೇಲಿದ್ದ ಕೋಪ ದ್ವೇಷ ಎಲ್ಲವೂ ನನ್ನ ಮಗುವರೆಗೆ ಬಂದು ನಿಲ್ತು ಎನ್ನುತ್ತಾಳೆ.

ಮುಂದುವರೆದು ನಾನು ಮತ್ತು ಗೌತಮ್ ಒಂದಾದರೆ ಅಪೇಕ್ಷಾ, ಪಾರ್ಥ, ನಿಮ್ಮನ್ನೆಲ್ಲ ಸಾಯಿಸುವ ಬೆದರಿಕೆಯನ್ನು ಕೂಡ ಶಕುಂತಲಾ ಅತ್ತೆ ಹಾಕಿದ್ದರು ಎಂದು ಹೇಳುವ ಭೂಮಿಕಾ ನನ್ನ ಇನ್ನೊಂದು ಮಗು ಇಂದು ನನ್ನ ಜೊತೆ ಇಲ್ಲ ಅಂದರೆ ಅದಕ್ಕೆ ಕಾರಣ ಕೂಡ ಶಕುಂತಲಾ ಅತ್ತೆನೇ ಎಂದು ಹೇಳುತ್ತಾಳೆ. ಆ ಕಾರಣಕ್ಕೆ ನಾನು ಎಲ್ಲರಿಂದ ದೂರ ಆದೆ ಎನ್ನುತ್ತಾಳೆ.
ಭೂಮಿಕಾ ಹೇಳಿದ ಮಾತು ಕೇಳಿ ಶಾಕ್ ಆಗುವ ಸದಾಶಿವ ಅವರು ನಿನ್ನ ಮನದಲ್ಲಿ ಭಯದ ಬೀಜ ಬಿತ್ತಿ ತಮ್ಮ ಬೆಳೆ ಬೇಯಿಸಿಕೊಂಡರು ಎಂದು ಹೇಳುತ್ತಾನೆ. ಎಷ್ಟು ದಿನ ಹೀಗೆ ಭಯದಲ್ಲಿ ಬದುಕ್ತೀಯಾ ಎಂದು ಬುದ್ದಿ ಮಾತು ಹೇಳುವ ಸದಾಶಿವ ಭಯ ಇರಬೇಕು ಆದರೆ ಭಯ ಬದುಕಾಗಬಾರದು ಎನ್ನುತ್ತಾನೆ. ನೀನು ಆ ಸಮಸ್ಯೆಯನ್ನು ಎದುರಿಸಬೇಕಿತ್ತು. ಅದೇನಾಗುತ್ತೆ ನೋಡೇ ಬಿಡೋಣ ಎಂದು ನಿಲ್ಲಬೇಕಿತ್ತು ಎಂದು ಹೇಳುವ ಸದಾಶಿವ ಅಳಿಯನ ಜೊತೆ ಬದುಕುವಂತೆ ಹೇಳಿದ್ದಾನೆ.
ಅದ್ರಂತೆ ಭೂಮಿಕಾ ಕೂಡ ಸದ್ಯ ಗೌತಮ್ ಎದುರು ಮನ ಬಿಚ್ಚಿ ಮಾತನಾಡಿದ್ದಾಳೆ. ಮನದ ನೋವು ಹಂಚಿಕೊಂಡು ಕಣ್ಣೀರಾಗಿದ್ದಾಳೆ. ದಯಮಾಡಿ ನನ್ನ ಇನ್ಮುಂದೆ ದೂರ ಮಾಡಬೇಡಿ ಎಂದು ಗೌತಮ್ ಕೂಡ ಕಣ್ಣೀರಾಗಿದ್ದಾನೆ.
ಈಗ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು ಮನೆಯಲ್ಲಿ ಸೀತಾ ರಾಮ ಕಲ್ಯಾಣ ಪೂಜೆಯನ್ನು ಹಮ್ಮಿಕೊಂಡಿದ್ದಾರೆ. ಭೂಮಿಕಾ ವಠಾರದವರಿಗೆ ಪೂಜೆಗೆ ಕರೆಯುತ್ತಿದ್ದು ಇದೇ ಸಮಯದಲ್ಲಿ ನಿನ್ನೆ ರಾತ್ರಿ ಮನೆಯಲ್ಲಿ ಸದ್ದು ಜೋರಾಗಿ ಕೇಳಿಸುತ್ತಿತ್ತಲ್ಲ ಎಂದು ವಠಾರದ ಮಹಿಳೆಯರು ಭೂಮಿಕಾಗೆ ಪ್ರಶ್ನೆ ಮಾಡಿದ್ದಾರೆ. ಆಗ ನನ್ನ ಗಂಡ ಮತ್ತು ಮಕ್ಕಳು ಮಾತನಾಡುತ್ತಿದ್ದೆವು ಎಂದು ಭೂಮಿಕಾ ಹೇಳಿದಾಗ ವಠಾರದವರು ಅಚ್ಚರಿಗೊಳ್ತಾರೆ. ಗೌತಮ್‌ನ ತೋರಿಸಿ ನೋಡಿ ಅವರೇ ನನ್ನ ಗಂಡ ಎಂದು ಹೇಳಿದಾಗ ಶಾಕ್ ಆಗುತ್ತಾರೆ.

ಸದ್ಯ ಗೌತಮ್ ಮತ್ತು ಭೂಮಿಕಾ ಮನೆಯಲ್ಲಿ ಸೀತಾರಾಮ ಕಲ್ಯಾಣ ಪೂಜೆ ನಡೆಯುತ್ತಿದೆ. ಪೂಜೆಯಲ್ಲಿ ಸದಾಶಿವ ಕುಟುಂಬಸ್ಥರು, ಗೌತಮ್ ತಾಯಿ ಭಾಗ್ಯ, ಅಜ್ಜಿ ಎಲ್ಲರೂ ಭಾಗವಹಿಸಿದ್ದಾರೆ.ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಮುಂದೇನು ? ಅಂತ್ಯನಾ ? ಹೊಸ ಆರಂಭನಾ..?
ಭೂಮಿಕಾ ಮತ್ತು ಗೌತಮ್ ಒಂದಾದ ಹಿನ್ನೆಲೆ ''ಅಮೃತಧಾರೆ'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ ಎನ್ನುವ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ. ಆದರೆ ಗೌತಮ್ ಮತ್ತು ಭೂಮಿಕಾ ಒಂದಾದರೂ ಕೂಡ ಜೈದೇವ್ ಮತ್ತು ಶಕುಂತಲಾ ಕಥೆ ಇನ್ನೂ ಮುಗಿದಿಲ್ಲ. ದಿಯಾ ಇಬ್ಬರನ್ನು ಇನ್ನೂ ಬೀದಿಗೆ ತಂದಿಲ್ಲ. ಇನ್ನು ಭೂಮಿಕಾ ಮತ್ತು ಗೌತಮ್ ಒಂದಾದ ಸುದ್ದಿ ಜೈದೇವ್ ಮತ್ತು ಶಕುಂತಲಾ ಕಿವಿಗೆ ಇನ್ನು ಬಿದ್ದಿಲ್ಲ. ಬಿದ್ದಾದ ನಂತರ ಇಬ್ಬರು ಸುಮ್ಮನೆ ಕೂಡ ಕೂರಲ್ಲ.
ಹೀಗಾಗಿ ಸದ್ಯಕ್ಕೆ ಅಂತ್ಯವಾಗುವ ಲಕ್ಷಣಗಳು ಕಡಿಮೆ ಇದ್ದು ವಠಾರದಲ್ಲಿರುವ ಭೂಮಿಕಾ ಮತ್ತು ಗೌತಮ್ ಮುಂಬರುವ ದಿನಗಳಲ್ಲಿ ತಮ್ಮದೇ ಹೊಸ ಸಾಮ್ರಾಜ್ಯ ಕಟ್ಟಿದರು ಕಟ್ಟಬಹುದು. ತೊಂದರೆ ಕೊಡಲು ಬಂದ ಜೈದೇವ್ ಮತ್ತು ಶಕುಂತಲಾಗೆ ಇಬ್ಬರು ಸೇರಿ ತಿರುಗೇಟು ನೀಡಿದರು ನೀಡಬಹುದು. ಒಟ್ನಲ್ಲಿ ಸದ್ಯ ''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











