Amruthadhaare ; ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ - ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿದ ಶಕುಂತಲಾ
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ವಿರುದ್ಧ ಜೈದೇವ್ ಕತ್ತಿ ಮಸೆಯುತ್ತಲೇ ಇದ್ದಾನೆ. ಆದರೆ ಗೆಲುವು ಮಾತ್ರ ಸಿಕ್ತಿಲ್ಲ. ಬದಲಿಗೆ ಪ್ರತಿ ಬಾರಿಯೂ ಮುಖಭಂಗವಾಗುತ್ತಿದೆ. ಕ್ಯಾಬ್ ಡ್ರೈವರ್ ಆಗಿದ್ದ ಗೌತಮ್ ಮತ್ತೆ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದಾನೆ. ಮಲ್ಲಿ ಮತ್ತು ಸುನಿಯ ಮದುವೆ ಕೂಡ ಮಾಡಿ ಮುಗಿಸಿದ್ದಾನೆ. ಪಾರ್ಥ ಕೂಡ ಪಾರ್ಟಿ ಬದಲಿಸಿದ್ದು ಗೌತಮ್ ಹಿಂದೆ ಬಂದು ನಿಂತಿದ್ದಾನೆ. ಭೂಮಿಕಾ, ಮಿಂಚು, ಆಕಾಶ್ ಜೊತೆ ಗೌತಮ್ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.
ಆದರೆ. ಜೈದೇವ್‌ಗೆ ಮಾತ್ರ ನೆಮ್ಮದಿ ಇಲ್ಲ. ಮಾಡಿದ ಒಂದುಪ್ಲಾನ್ ಕೂಡ ವರ್ಕ್ ಆಗ್ತಿಲ್ಲ. ಕಂಪನಿಯ ಲೋಗೋ ವಿಷಯದಲ್ಲಿ ಕೂಡ ಜೈದೇವ್‌ಗೆ ಗೆಲುವು ಸಿಕ್ಕಿಲ್ಲ. ಇದೆಲ್ಲದರಿಂದ ಜೈದೇವ್ ಕಂಗಾಲಾಗಿದ್ದಾನೆ. ಆದರೆ .. ಶಕುಂತಲಾ ಮಾತ್ರ ನೆಮ್ಮದಿಯಿಂದ ಇದ್ದಾಳೆ. ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾಳೆ.

ಸದ್ಯ ಶಕುಂತಲಾಗೆ ಹಿಡಿದಿರುವ ಈ ಜೂಜಿನ ಹುಚ್ಚಿಂದ ಜೈದೇವ್ ಪಿತ್ತ ನೆತ್ತಿಗೇರಿದೆ. ಹೌದು, ಈ ಹಿಂದೆಯೂ ಜೂಜಿನಲ್ಲಿ ಲಕ್ಷಾಂತರ ಹಣ ಕಳೆದುಕೊಂಡಿದ್ದ ಶಕುಂತಲಾ ಈ ಬಾರಿ ಒಂದಲ್ಲ, ಎರಡಲ್ಲ, ಮೂರು ಕೋಟಿ ಹಣ ಕಳೆದುಕೊಂಡಿದ್ಧಾಳೆ. ತನ್ನ ಮುದ್ದಿನ ಮಗನ ಬಳಿ ಬಂದು ಮೂರು ಕೋಟಿ ರೂಪಾಯಿಯ ಚೆಕ್‌ಗೆ ಸಹಿ ಹಾಕುವಂತೆ ಹೇಳಿದ್ದಾಳೆ.
ಶಕುಂತಲಾಳ ಈ ಮಾತು ಕೇಳಿ ಜೈದೇವ್ ಬೆಚ್ಚಿ ಬಿದ್ದಿದ್ದು ಮೂರು ಕೋಟಿ ರೂಪಾಯಿಯನ್ನು ಮೂರು ಸಾವಿರ ರೂಪಾಯಿ ತರ ಕೇಳ್ತಿದ್ದಿಯಲ್ಲ ಎಂದು ಕಿಡಿ ಕಾರಿದ್ದಾನೆ. ಹಣ ಎಲ್ಲ ಕೊಡಲು ಸಾಧ್ಯ ಇಲ್ಲ ಎಂದು ಗುಡುಗಿದ್ದಾನೆ. ಜೈದೇವ್ ಕೋಪಕ್ಕೆ ಹೆದರದ, ಬೆದರದ ಶಕುಂತಲಾ ಇಲ್ಲೊಂದು ತಪ್ಪು ಮಾಡುತ್ತಾಳೆ. ಜೈದೇವ್ ಎದುರು ಗೌತಮ್‌ನ ಹಾಡಿ ಹೊಗಳುತ್ತಾಳೆ.

ಇದರಿಂದ ಇನ್ನೂ ಕೆರಳುವ ಜೈದೇವ್ ನನ್ನೆದುರೇ ನನ್ನ ಶತ್ರುವನ್ನು ಹೊಗಳ್ತೀಯಾ ಎಂದು ತನ್ನ ತಾಯಿಯ ಜುಟ್ಟು ಹಿಡದು ಮನೆಯಿಂದ ಹೊರಗಡೆ ಹಾಕಿದ್ದಾನೆ. ಜೈದೇವ್‌ನ ಈ ಅಟ್ಟಹಾಸಕ್ಕೆ ಶಕುಂತಲಾ ಕಣ್ಣೀರು ಆಗಿದ್ದಾಳೆ.
ಮುಂದೇನು..?
ತನ್ನ ತಾಯಿಯನ್ನೇ ಸದ್ಯ ಜೈದೇವ್ ಮನೆಯಿಂದ ಹೊರ ಹಾಕಿದ್ದಾನೆ. 3 ಕೋಟಿ ಸಾಲದ ಭಾರ ಹೊತ್ತು ಶಕುಂತಲಾ ಈಗ ಗೌತಮ್ ಮುಂದೆ ಅಂಗಲಾಚುವ ಸಾಧ್ಯತೆ ಇದೆ. ಇನ್ನು ಶಕುಂತಲಾ ಎಷ್ಟೇ ಕೇಡು ಬಯಸಿದರೂ ಗೌತಮ್‌ಗೆ ಶಕುಂತಲಾ ಮೇಲೆ ಮೊದಲಿಂದ ಪ್ರೀತಿ ಇದ್ದೇ ಇದೆ. ಈ ಹಿನ್ನೆಲೆ ಗೌತಮ್ ಮತ್ತೆ ಶಕುಂತಲಾಗೆ ಆಶ್ರಯ ನೀಡಿದರು ನೀಡಬಹುದು. ಲಕ್ಷ್ಮೀಕಾಂತ್‌ಗೆ ಆದಂತೆ ಶಕುಂತಲಾಗೆ ಕೂಡ ಜ್ಞಾನೋದಯವಾದರೂ ಆಗಬಹುದು. ಹಾಗೊಂದು ವೇಳೆ ಶಕುಂತಲಾ ನಿಜಕ್ಕೂ ಗೌತಮ್ ಬಳಿ ಹೋದರೆ ಜೈದೇವ್ ಸುಮ್ಮನೆ ಇರುತ್ತಾನಾ..? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.
ಪ್ರೇಕ್ಷಕರ ಅಭಿಪ್ರಾಯ
ಶಕುಂತಲಾನ ಮನೆಯಿಂದ ಹೊರ ದಬ್ಬಿರುವ ಪ್ರೋಮೋ ಹಲವರಿಗೆ ಖುಷಿ ನೀಡಿದೆ. ಶಕುಂತಲಾ ನಿಂಗೆ ಹೀಗೆ ಆಗಬೇಕು. ಇವರಿಗೆಲ್ಲ ಕೋಟಿಗಳಿಗೆ ಬೆಲೆನೇ ಇಲ್ವಾ. ಜೈದೇವ್ ಸರಿಯಾಗಿ ಮಾಡಿದೆ ಇವತ್ತು 3ಕೋಟಿ ನಾಳೆ 5ಕೋಟಿ ಅಂತಾಳೆ ನಿಮ್ಮ ಅಮ್ಮ ,ಮಾಡಿದುಣ್ಣೋ ಮಹಾರಾಣಿ... ಶಕುಂತಲಾಗೆ ತಕ್ಕ ಪಾಠ ಕಲಿಸಿದ್ದಾನೆ ಜೆಡಿ .. ಕರ್ಮ ರಿಟರ್ನ್...ಸರಿಯಾಗಿದ್ದಾರೆ ತಾಯಿ/ಮಗ .. ಪಾಪದ ಕೊಡ ತುಂಬಿದೆ.. ಅಯ್ಯೋ ಶಕುಂತಲಾ ಹೋಗಿ ಗೌತಮ್ ಮುಂದೆ ಕಣ್ಣೀರು ಹಾಕ್ತಳೆ ಅವನು ಕರಗಿ ಮನೆಯಲೇ ಇಟ್ಟುಕೊಳ್ತಾನೆ.. ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿದ್ದೇನೆ 'ತಲೆಗೆರೆದ ಎಣ್ಣೆ ಕಾಲಿಗೆ ಇಳಿಯುತ್ತದೆ 'ಎಂದು.. ಎಂದೆಲ್ಲ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜೈದೇವ್ ಅಭಿನಯಕ್ಕೆ ಮನ ಸೋತಿದ್ಧಾರೆ.


Click it and Unblock the Notifications











