Amruthadhaare ; ಅಬ್ಬಾ, ಕೊನೆಗೂ ಗೊತ್ತಾಗೇ ಹೋಯ್ತು ಮಿಂಚು ಜನ್ಮ ರಹಸ್ಯ, ಕ್ಲೈಮ್ಯಾಕ್ಸ್ ಬಂದೇ ಬಿಡ್ತಾ ?
''ಅಮೃತಧಾರೆ'' ಧಾರಾವಾಹಿ ಕಳೆದ ಕೆಲ ದಿನಗಳಿಂದ ಮಿಂಚು ಸುತ್ತಲೇ ಗಿರಕಿ ಹೊಡೆಯುತ್ತಿದೆ. ಒಂದು ಕಡೆ ಕಿಡ್ನಾಪ್ ಆದ ಮಿಂಚುನ ಭದ್ರಕಾಳಿಯ ಅವತಾರವೆತ್ತಿ ಭೂಮಿಕಾ ಕಾಪಾಡಿದ್ದಾಳೆ. ಇನ್ನೊಂದು ಕಡೆ ಮಿಂಚು ನಮ್ಮ ಮಗಳು ಎಂದು ನಕಲಿ ಅಪ್ಪ ಅಮ್ಮ ಬಂದಿದ್ದಾರೆ. ದುಡ್ಡು, ಮನೆ, ಕಾರು.. ಗೌತಮ್ ಒಡ್ಡಿದ ಯಾವ ಆಮಿಷಕ್ಕೂ ಒಳಗಾಗದೇ ಜೈದೇವ್ ಹೇಳಿದಂತೆಯೇ ಆಕ್ಟ್ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಜೈದೇವ್ ಕಪಿಮುಷ್ಠಿಯಲ್ಲಿ ಸಿಲುಕಿ, ಮಾವ ಲಕ್ಷ್ಮೀಕಾಂತ ವಿಲವಿಲ ಒದ್ದಾಡುತ್ತಿದ್ಧಾನೆ. ಮಿಂಚು ರಹಸ್ಯ ಗೌತಮ್ ಮತ್ತು ಭೂಮಿಕಾಗೆ ಹೇಳಲೇಬೇಕು ಎಂದುಕೊಂಡಿದ್ದಾನೆ. ಆದರೆ, ಸಾಧ್ಯವಾಗುತ್ತಿಲ್ಲ. ಹೀಗಿರುವಾಗ
''ಅಮೃತಧಾರೆ'' ಅಂಗಳಕ್ಕೆ ಮಿಂಚಿನ ಕಥೆಯನ್ನು ಗೌತಮ್ ಮತ್ತು ಭೂಮಿಕಾಗೆ ಹೇಳಲು ''ಅಣ್ಣಯ್ಯ'' ಶಿವು.. ಪಾರು ಮತ್ತು ಕರ್ಣನ ಪುನರಾಗಮನ ಆಗಿದೆ.

ಜೈದೇವ್‌ಗೆ ಚಮಕ ಕೊಟ್ಟ ಶಕುನಿ ಮಾವ
ಲಕ್ಷ್ಮೀಕಾಂತನನ್ನು ಜೈದೇವ್ ಹಗುರವಾಗಿ ತೆಗೆದುಕೊಂಡಿದ್ದ. ಹೀಗಾಗಿ ಕೋಣೆಯೊಂದರಲ್ಲಿ ಕೇವಲ ಕೂಡಿ ಹಾಕಿದ್ದ. ಜೈದೇವ್‌ನ ಬಂಧಿಖಾನೆಯಿಂದ ತಪ್ಪಿಸಿಕೊಳ್ಳಲೇಬೇಕೆಂದು ಕೊನೆಗೂ ನಿರ್ಧಾರ ಮಾಡಿರುವ ಲಕ್ಷ್ಮೀಕಾಂತ್, ಸದ್ಯ ಜೈದೇವ್ ತಲೆಗೆ ಪೈಪಿನಿಂದ ಹೊಡೆದ ನೆಲಕ್ಕುರಳಿಸಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ನಕಲಿ ಅಪ್ಪ-ಅಮ್ಮನ ಪರ ಬಂದ ಡಿಎನ್‌ಎ ಟೆಸ್ಟ್
ಮಿಂಚುನ ನಕಲಿ ಅಪ್ಪ-ಅಮ್ಮ ಬಂದ ಹಿನ್ನೆಲೆ ಗೌತಮ್ ಕೆಲ ಕಾಲ ಪೊಲೀಸರ ಅತಿಥಿಯಾಗಿದ್ದ. ಆಗ ಡಿಎನ್ಎ ಪರೀಕ್ಷೆಯ ಬೇಡಿಕೆ ಇಟ್ಟಿದ್ದ. ಇದರಿಂದ ನಕಲಿ ಅಪ್ಪ ಅಮ್ಮನಿಗೆ ನಡುಕ ಶುರುವಾಗಿತ್ತು. ಜೈದೇವ್ ಬಳಿ ಬಂದು ನಮ್ಮನ್ನು ಬಿಟ್ಟು ಬಿಡಿ ಸರ್ ಎಂದು ಇಬ್ಬರು ಗೋಗರೆದಿದ್ದರು ಕೂಡ. ಆದಾಗ್ಯೂ ಡಿಎನ್‌ಎ ಟೆಸ್ಟ್ ಸದ್ಯ ನಕಲಿ ಅಪ್ಪ ಅಮ್ಮನ ಪರ ಬಂದಿದ್ದು ಈ ವಿಚಾರವನ್ನು ಗೌತಮ್‌ಗೆ ಪಾರ್ಥ ಹೇಳಿದ್ಧಾನೆ.
ಕರ್ಣನ ರಂಗಪ್ರವೇಶ
ಇದೇ ಸಮಯದಲ್ಲಿ ಗೌತಮ್ ಮನೆಗೆ ಕರ್ಣ ಬಂದಿದ್ದಾನೆ. ಹೀಗೆ ಹೋಗುತ್ತಿದ್ದೆ, ನೋಡ್ಕೊಂಡು ಹೋಗೋಣ ಅಂತ ಬಂದೆ ಎಂದು ಹೇಳುವ ಕರ್ಣ, ಅಲ್ಲೇ ಇದ್ದ ಡಿಎನ್‌ಎ ರಿಸಲ್ಟ್ ಮೇಲೆ ಕಣ್ಣು ಹಾಯಿಸುತ್ತಾನೆ. ಯಾರೋ ರಿಪೋರ್ಟ್‌ನ ಅದಲು ಬದಲು ಮಾಡಿದಂತೆ ಇದೆ ಎಂದು ಹೇಳುತ್ತಾನೆ.ಇದೇ ಸಮಯದಲ್ಲಿ ಕೈಮೇಲಿನ ಮಚ್ಚೆಯ ಕುರಿತು ಕೂಡ ಕರ್ಣ ವಿಚಾರಿಸಿದ್ದು ಗೌತಮ್ ತ್ರಿಶೂಲ ಇರುವುದಾಗಿ ಹೇಳುತ್ತಾನೆ. ಆಗ ನೂರಕ್ಕೆ ನುರು % ಅವಳೇ ನಿಮ್ಮ ಮಗಳು ಎಂದು ಕರ್ಣ ಹೇಳುತ್ತಾನೆ.
ಇದೇ ಸಮಯದಲ್ಲಿ ಲಕ್ಷ್ಮೀಕಾಂತ್ ಕೂಡ ಮನೆಗೆ ಓಡೋಡಿಕೊಂಡು ಬಂದಿದ್ದು, ಅಖಿಲಾಂಡೇಶ್ವರಿ ಫೋನ್ ಮಾಡಿದ್ದ ವಿಚಾರ ಹೇಳುತ್ತಾನೆ. ಮಿಂಚು ಅವಳೇ ನಿನ್ನ ಮಗಳು ಕಣಪ್ಪ ಎಂದು ಕಣ್ಣೀರು ಹಾಕುತ್ತಾನೆ. ಲಕ್ಷ್ಮೀಕಾಂತ್ ಮತ್ತು ಕರ್ಣನ ಮಾತುಗಳನ್ನೆಲ್ಲಾ ಕೇಳಿ ಗೌತಮ್ ಮತ್ತು ಭೂಮಿಕಾ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯುತ್ತೆ.

ಪ್ರೇಕ್ಷಕರ ಅಭಿಪ್ರಾಯ
* ಮಾಮ್ಸ್ ಜೈಗೆ ಹೊಡೆದದ್ದು ಒಳ್ಳೆಯ ಕೆಲಸವಾಯಿತು!!!!ಅಂತೂ, ಒಳ್ಳೆಯ ಸುದ್ದಿ!!!
*ಸದ್ಯ ಪ್ರೇಕ್ಷಕರು ನಿಟ್ಟುಸಿರು ಬಿಡಬಹುದು, ಜಯವಾಗಲಿ ಡೈರೆಕ್ಟರ್ ಗೆ
* ಗೌತಮ್ ದಿವಾನ್ ಕರ್ಣ ಮಾಡಿರೋ ಸಾಲ ತೀರಿಸೋಕ್ಕೆ ಕರ್ಣ ಸೀರಿಯಲ್ ಗೆ ಹೋಗುವ ಸಾಧ್ಯತೆ ಇದೇ
* ನಾನು ಮುಂಚೆನೇ ಹೇಳಿದ್ದೆ ಕರ್ಣ ಇಲ್ಲ ಪಾರು ಬಂದ್ರೆ ಸತ್ಯ ಗೊತ್ತಾಗುತ್ತೆ ಅಂತ
*ಅಮೃತವಾದ ಸಂಚಿಕೆ
ಮುಂದೇನು..?
ಜೈದೇವ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ಆದರೆ ಈ ಬಾರಿಯಾದರೂ ಈ ಹಿನ್ನೆಡೆ ಕಥೆಯ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಾ..? ಅಥವಾ ಬೇರೆ ಯಾವುದಾದರೂ ಐಡಿಯಾ ನಿರ್ದೇಶಕರಿಗೆ ಹೊಳೆದು ಧಾರಾವಾಹಿಯ ಕಥೆ ಮತ್ತೆ ಮುಂದುವರೆಯುತ್ತಾ..? ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ. ಮೇಲ್ನೋಟಕ್ಕೆ ''ಅಮೃತಧಾರೆ'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದಂತೆ ಇದ್ದು ದಿಯಾ ಕೊಲೆ ಕೇಸ್‌ನಲ್ಲಿ ಜೈದೇವ್ ಜೈಲು ಪಾಲಾಗಲು ಇನ್ನೆಷ್ಟು ದಿನ ಬೇಕು ಎನ್ನುವುದನ್ನು ಕೂಡ ನೋಡಬೇಕಿದೆ. ಒಟ್ಟಾರೆಯಾಗಿ ಸದ್ಯ ಮಿಂಚು ಜನ್ಮ ರಹಸ್ಯ ಗೌತಮ್ ಮತ್ತು ಭೂಮಿಕಾ ಎದುರು ಬಹಿರಂಗವಾಗಿದೆ. ಇಂದಿನ ಸಂಚಿಕೆ ಕುತೂಹಲ ಮೂಡಿಸಿದೆ.


Click it and Unblock the Notifications