Amruthadhaare: ಕಿರಣ್‌ಗೆ ಜೈದೇವ ಫೋನ್ ಮಾಡಲು ಕಾರಣವೇನು..?
ಅಮೃತಧಾರೆ ಧಾರಾವಾಹಿಯಲ್ಲಿ ಈಗ ಜೈದೇವ ಮೊದಲಿನಂತೆಯೇ ಆಫಿಸಿಗೆ ಹೋಗುತ್ತಿದ್ದಾನೆ. ಯಾವುದೇ ಟೆನ್ಷನ್ ಇಲ್ಲ. ಯಾರ ಅಡ್ಡಿಯೂ ಇಲ್ಲ.
ಭೂಮಿಕಾಳ ಸ್ನೇಹಿತೆ ಶೃತಿ ಪತಿ ಕಿರಣ್ ಈಗ ಕೆಲಸ ಇಲ್ಲದೇ, ಮನೆಯಲ್ಲೇ ಕಾಲಹರಣ ಮಾಡುತ್ತಿರುತ್ತಾನೆ. ಇದರಿಂದ ಶೃತಿಗೆ ಕೋಪ ಬರುತ್ತಿರುತ್ತದೆ.

ಕೆಲಸ ಹುಡುಕಿಕೋ ಹೋಗು, ಭೂಮಿಕಾ ಬಾಳನ್ನು ಹಾಳು ಮಾಡಿ, ದುಡ್ಡಿನ ಆಸೆಗೆ ಈಗ ನನ್ನನ್ನು ಮದುವೆಯಾಗಿದ್ದೀಯಾ. ಈಗ ನೋಡಿದರೆ ನನ್ನ ಅಪ್ಪ ಕೊಡಿಸಿದ ಕೆಲಸದಲ್ಲೂ ಗೋಲ್ ಮಾಲ್ ಮಾಡಿ ಮನೆಯಲ್ಲಿ ಕುಳಿತಿದ್ದೀಯಾ? ಎಂದು ಬೈಯುತ್ತಿರುತ್ತಾಳೆ.
ಕೆಲಸಕ್ಕಾಗಿ ಭೂಮಿಕಾ ಮನೆಗೆ ಬಂದ ಕಿರಣ್
ಹೆಂಡತಿಯಿಂದ ಬೈಗುಳ ಕೇಳಲಾಗದೇ, ಕಿರಣ್ ಹೊಸದೊಂದು ಪ್ಲ್ಯಾನ್ ಮಾಡುತ್ತಾನೆ. ಅದರಂತೆ ನೇರವಾಗಿ ಭೂಮಿಕಾ ಮನೆಗೆ ಹೋಗುತ್ತಾನೆ. ಭೂಮಿಕಾಳಿಗೆ ಕಿರಣ್ ಎಂದರೆ ಆಗುವುದಿಲ್ಲ. ತನ್ನನ್ನು ಪ್ರೀತಿಸಿ ನಿಶ್ಚಿತಾರ್ಥದ ದಿನವೇ ಮೋಸ ಮಾಡಿದ ಎಂಬ ಕೋಪವಿರುತ್ತದೆ. ಅಷ್ಟೇ ಅಲ್ಲದೇ, ಕಿರಣ್ ತುಂಬಾ ಕೆಟ್ಟವನು, ಎಂಬುದೂ ಕೂಡ ಗೊತ್ತಿರುತ್ತದೆ. ಕಿರಣ್ ಅನ್ನು ತನ್ನ ಮನೆಯಲ್ಲಿ ನೋಡಿದ ಭೂಮಿಕಾಳಿಗೆ ಕೋಪ ಬರುತ್ತದೆ. ಇನ್ಯಾವತ್ತು ನನ್ನ ಮನೆಗೆ ಬರಬೇಡ ಎಂದು ಹೇಳಿ ಕಳಿಸುತ್ತಾಳೆ. ಅಷ್ಟರಲ್ಲಿ ಲಕ್ಷ್ಮೀಕಾಂತ ಎದುರಾಗಿ ಕಿರಣ್ ಅನ್ನು ಮಾತನಾಡಿಸುತ್ತಾನೆ.
ಕಿರಣ್ ಅನ್ನು ಬಳಸಿಕೊಳ್ಳುತ್ತಾನಾ ಜೈದೇವ
ಸಿಕ್ಕ ಅವಕಾಶವನ್ನು ಬಿಡದ ಕಿರಣ್, ಖಾಲಿ ಇದ್ದೀನಿ, ನಿಮ್ಮಲ್ಲಿ ಓಪನಿಂಗ್ಸ್ ಇದ್ದರೆ ಹೇಳಿ ಎಂದು ಕೆಲಸಕ್ಕೆ ವಿಸಿಟಿಂಗ್ ಕಾರ್ಡ್ ಮೂಲಕವೇ ಅಪ್ಲಿಕೇಶನ್ ಅನ್ನು ಹಾಕುತ್ತಾನೆ. ಶಕುಂತಲಾ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಲಕ್ಷ್ಮೀಕಾಂತ ಕಿರಣ್ ಹಾಗೂ ಭೂಮಿಕಾ ನಡುವೆ ಏನೋ ಸರಿಯಿಲ್ಲ. ಕಿರಣ್‌ನಿಂದ ಜೈದೇವನಿಗೆ ಖಂಡಿತವಾಗಿಯೂ ಸಹಾಯವಾಗಬಹುದು ಎಂದು ಭಾವಿಸುತ್ತಾನೆ.

ಕಿರಣ್‌ನ ಆಫೀಸ್‌ಗೆ ಕರೆದ ಜೈದೇವ
ಜೈದೇವ ಮನೆಗೆ ಬಂದ ಕೂಡಲೇ, ಕಿರಣ್ ಮತ್ತು ಭೂಮಿಕಾ ಒಳ್ಳೆಯ ಗೆಳೆಯರು. ಅವನಿಗೆ ಕೆಲಸವಿದ್ದರೆ, ಹೇಳಿ ಎಂದು ಈ ಕಾರ್ಡ್ ಕೊಟ್ಟಿದ್ದಾನೆ ಎಂದು ಹೇಳಿ ನಂಬರ್ ಕೊಡುತ್ತಾನೆ. ಜೈದೇವ ಆಫಿಸಿನಲ್ಲಿ ಹಣ ಕಬಳಿಸಲು ಯಾರಾದರೂ ಬೇಕು ಎಂದು ಕಾಯುತ್ತಿದ್ದ. ಈಗ ಕಿರಣ್ ಅನ್ನು ತನ್ನ ಜೊತೆಗೆ ಕೈ ಜೋಡಿಸಿದರೆ, ಸರಿ ಹೋಗುತ್ತದೆ ಎಂದು ಆಲೋಚಿಸಿದ್ದಾನೆ. ಹೀಗಾಗಿ ಜೈದೇವ ಫೋನ್ ಮಾಡಿ ಕಿರಣ್ ಅನ್ನು ಆಫೀಸಿಗೆ ಬರುವಂತೆ ಕರೆದಿದ್ದಾನೆ.
ಬಟರ್‌ಫ್ಲೈಗಾಗಿ ಒದ್ದಾಡುತ್ತಿರುವ ಜೈ
ಇನ್ನು ಜೈದೇವನಿಗೆ ಭೂಮಿಕಾ ಸಹೋದರಿ ಅಪೇಕ್ಷಾ ಮೇಲೆ ಕಣ್ಣು ಬಿದ್ದಿದೆ. ಆಕೆಯನ್ನು ಪದೇ ಪದೇ ಮಾತನಾಡಿಸುತ್ತಾ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಲೇ ಇದ್ದಾನೆ. ಆದರೆ, ಅಪೇಕ್ಷಾ ಜೈದೇವನನ್ನು ಆದಷ್ಟು ಅವಾಯ್ಡ್ ಮಾಡುತ್ತಾಳೆ. ಈಗ ಜೈದೇವ ಸುಖಾಸುಮ್ಮನೆ ಮಹಿಮಾ ಮನೆಗೆ ಬಂದಿದ್ದಾನೆ. ಅಪೇಕ್ಷಾಳನ್ನು ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ, ಅಪೇಕ್ಷಾ ಮೆಲ್ಲಗೆ ಅಲ್ಲಿಂದ ಜಾರಿಕೊಂಡಿದ್ದು, ಮಹಿಮಾಳಿಗೆ ಜೈ ಹೀಗೆಲ್ಲಾ ಯಾರ ಮನೆಗೂ ಬರೋದಿಲ್ಲ. ಈಗ ಯಾಕೆ ಬಂದಿದ್ದಾನೆ ಎಂಬ ಅನುಮಾನ ಮೂಡಿದೆ.
ಭೂಮಿಕಾ ಆಸೆ ನೆರವೇರಿಸಿದ ಗೌತಮ್
ಭೂಮಿಕಾಳಿಗೆ ತನ್ನ ತಂದೆ ಸದಾಶಿವ ಎಂದರೆ ಬಹಳ ಇಷ್ಟ. ಅದಕ್ಕಾಗಿಯೇ ತನ್ನ ಹೆಸರಿನ ಪಕ್ಕದಲ್ಲಿ ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾಳೆ. ಆದರೆ, ಈಗ ಗೌತಮ್ ಅವರ ಅಜ್ಜಿ ಲಾಯರ್ ಅನ್ನು ಕರೆಸಿದ್ದಾರೆ. ಭೂಮಿಕಾ ಸದಾಶಿವ ಎಂಬ ಹೆಸರನ್ನು ಭೂಮಿಕಾ ಗೌತಮ್ ದಿವಾನ್ ಎಂದು ಬದಲಿಸಬೇಕು ಎಂದು ತೀರ್ಮಾನಿಸಿದ್ದಾಳೆ. ಆದರೆ ಭೂಮಿಕಾಳಿಗೆ ಇದು ಇಷ್ಟವಿಲ್ಲ. ಒಳಗೊಳಗೆ ನೋವು ನುಂಗುತ್ತಿರುತ್ತಾಳೆ. ಈ ಸತ್ಯವನ್ನು ಅರಿತ ಗೌತಮ್ ಮನೆಯವರಿಗೆ ಬೇಡ ಭೂಮಿಕಾ ಹೆಸರನ್ನು ಬದಲಿಸಬೇಡಿ ಎಂದು ಹೇಳುತ್ತಾನೆ. ನಿಧಾನವಾಗಿ ಗೌತಮ್, ಭೂಮಿಕಾಳನ್ನು ತನ್ನವಳೆಂದು ಒಪ್ಪಿಕೊಳ್ಳುತ್ತಿದ್ದಾನೆ.


Click it and Unblock the Notifications











