Amruthadhaare: ಕಿರಣ್-ಭೂಮಿಕಾ ಭೇಟಿ: ಮಾಜಿ ಪ್ರೇಮಿಗೆ ಭೂಮಿಕಾ ಕೊಟ್ಟ ವಾರ್ನಿಂಗ್ ಏನು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಕಿರಣ್, ಭೂಮಿಕಾ ಅವರ ಪತಿ ಗೌತಮ್ ಆಫಿಸಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಜೈದೇವನೂ ಕೂಡ ಭೂಮಿಕಾಳನ್ನು ಸಿಕ್ಕಿ ಬೀಳಿಸಲು ಆಲೋಚಿಸಿದ್ದಾನೆ.

ಕೆಲಸವಿಲ್ಲದೇ ಪರದಾಡುತ್ತಿರುವ ಕಿರಣ್‌ಗೆ ಜೈದೇವ್ ತನ್ನ ಆಫೀಸಿನಲ್ಲಿ ಕೆಲಸ ಕೊಡಿಸಿದ್ದಾನೆ. ಇನ್ನು ಕಿರಣ್, ಗೌತಮ್ ಯಾರು ಎಂದೇ ಗೊತ್ತಿಲ್ಲ ಎಂಬಂತೆ ನಟಿಸಿದ್ದಾನೆ.

Amruthadhaare kannada Serial 08th December episode written update

ಗೌತಮ್ ಪದೇ ಪದೇ ನಿಮ್ಮನ್ನು ಎಲ್ಲೋ ನೋಡಿದ್ದೇನೆ ಎಂದು ಹೇಳಿದರೂ, ಕಿರಣ್ ನೀವು ಯಾರೋ ಗೊತ್ತೇ ಇಲ್ಲ ಎಂದು ನಟಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಆಫೀಸಿನಲ್ಲಿ ಅಕೌಂಟೆಂಟ್ ಆದ ಕಿರಣ್

ಅಕೌಂಟೆಂಟ್ ಆಗಿ ಈಗ ಕಿರಣ್ ಗೌತಮ್ ಆಫಿಸಿನಲ್ಲಿ ಕೆಲಸ ಪಡೆದಿದ್ದಾನೆ. ಆದರೆ, ಕಿರಣ್ ಈಗ ಜೈದೇವ ಹೇಳಿದಂತೆಯೇ ಕೆಲಸ ಮಾಡಬೇಕಿದೆ. ಜೈದೇವ ಆಫೀಸಿನಲ್ಲಿ ಪುನಃ ಹಣ ದುರುಪಯೋಗ ಪಡಿಸಿಕೊಳ್ಳಬೇಕು. ಹಾಗೆಯೇ ಆ ಆರೋಪವನ್ನು ಸಂಪೂರ್ಣವಾಗಿ ಕಿರಣ್ ಮೇಲೆ ಹಾಕಿ, ಇದರಿಂದ ಭೂಮಿಕಾಳಿಗೆ ತೊಂದರೆಯಾಗುವಂತೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾನೆ. ಜೈದೇವನ ಪ್ಲಾನ್ ಕೇಳಿದ ಶಕುಂತಲಾ ಮತ್ತು ಲಕ್ಷ್ಮೀಕಾಂತ ಕೂಡ ಸಂತಸಗೊಂಡಿದ್ದಾರೆ.

ಬೇಕಂತಲೇ ಭೂಮಿಕಾಗೆ ಕೆಲಸ ಕೊಟ್ಟ ಜೈದೇವ

ಇತ್ತ ಭೂಮಿಕಾ ಮತ್ತು ಗೌತಮ್ ದಿನ ದಿನಕ್ಕೂ ಹತ್ತಿರವಾಗುತ್ತಿದ್ದಾರೆ. ಭೂಮಿಕಾಳನ್ನು ತನ್ನ ಕೈ ವಶದಲ್ಲಿ ಇಟ್ಟುಕೊಳ್ಳಬೇಕು ಎಂದುಕೊಂಡಿರುವ ಶಕುಂತಲಾ ಪ್ಲಾನ್ ಎಲ್ಲವೂ ಫುಲ್ ಉಲ್ಟಾ ಹೊಡೆಯುತ್ತಿದೆ. ಇದರಿಂದ ಈಗ ಶಕುಂತಲಾಳಿಗೆ ಹೊಸದೊಂದು ತಲೆ ನೋವು ಶುರುವಾಗಿದೆ.

Amruthadhaare kannada Serial 08th December episode written update

ಕಿರಣ್- ಭೂಮಿಕಾ ಭೇಟಿ

ಭೂಮಿಕಾ ಮತ್ತು ಗೌತಮ್ ಒಂದಾದರೆ, ತಮ್ಮ ಅಸ್ತಿತ್ವಕ್ಕೆ ಸಮಸ್ಯೆ ಆಗುತ್ತದೆ. ಇದಕ್ಕಾಗಿಯೇ ಜೈದೇವ ಈಗ ಭೂಮಿಕಾಳನ್ನು ತನ್ನ ಆಫಿಸಿಗೆ ಕರೆದು ಕಿರಣ್ ಅನ್ನು ಪರಿಚಯಸಲು ಪ್ಲಾನ್ ಮಾಡಿದ್ದಾನೆ. ಕಿರಣ್ ಮತ್ತು ಭೂಮಿಕಾಳಿಗೆ ಮೊದಲಿನಿಂದಲೂ ಸಂಬಂಧವಿದೆ ಎಂದು ಪ್ರೂವ್ ಮಾಡಿ, ಭೂಮಿಕಾಳನ್ನು ಮನೆಯಿಂದ ಹೊರಗೆ ಹಾಕಲು ಯತ್ನಿಸಿದ್ದಾನೆ.

ಕಿರಣ್‌ಗೆ ಭೂಮಿಕಾ ಹೇಳಿದ್ದೇನು..?

ಆಫಿಸಿನಲ್ಲಿ ಕೆಲ ವಿಚಾರದ ಬಗ್ಗೆ ನೌಕರರಿಗೆ ಮಾಹಿತಿ ನೀಡಬೇಕು ಎಂದು ಭುಮಿಕಾಳಿಗೆ ಟ್ರೈನಿಂಗ್ ಕೊಡಲು ಜೈದೇವ ಮತ್ತು ಗೌತಮ್ ಸೇರಿ ಒಪ್ಪಿಸಿದ್ದಾರೆ. ಆದರೆ, ಇದರ ಹಿಂದಿನ ಜೈದೇವನ ಪ್ಲಾನ್ ಯಾರಿಗೂ ಗೊತ್ತಿಲ್ಲ. ಆಫಿಸಿನಲ್ಲಿ ಕಿರಣ್ ಅನ್ನು ನೋಡಿದ ಭೂಮಿಕಾ ಶಾಕ್ ಆಗುತ್ತಾಳೆ. ಟ್ರೈನಿಂಗ್ ಕೊಡುವ ಸಂದರ್ಭದಲ್ಲಿ ಕಿರಣ್ ಬೇಕಂತಲೇ ಭೂಮಿ ಭೂಮಿ ಎಂದು ಕರೆಯುತ್ತಾ, ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಾನೆ. ಇದು ಭೂಮಿಕಾಳಿಗೆ ಇರಿಟೇಟ್ ಮಾಡುತ್ತದೆ. ಟ್ರೈನಿಂಗ್ ಮುಗಿದ ಬಳಿಕ ಭೂಮಿಕಾ ಕಿರಣ್‌ಗೆ ವಾರ್ನಿಂಗ್ ಕೊಡುತ್ತಾಳೆ. ನೀನು ಹೀಗೆ ಪುನಃ ಮಾಡಿದರೆ, ಫ್ರೆಂಡ್ ಗಂಡ ಎಂಬುದನ್ನೂ ಮರೆತು ಕೆಲಸದಿಂದ ತೆಗೆಯಬೇಕಾಗುತ್ತದೆ ಎನ್ನುತ್ತಾಳೆ. ಇದರಿಂದ ಹೆದರಿದ ಕಿರಣ್ ತಾನು ರಿಸೈನ್ ಮಾಡುವುದಾಗಿ ಜೈದೇವನ ಬಳಿ ಹೇಳುತ್ತಾನೆ. ಆದರೆ, ಜೈದೇವ ಅದಕ್ಕೆಲ್ಲಾ ಅವಕಾಶವೇ ಇಲ್ಲ. ತಾನು ಹೇಳಿದಂತೆ ಕೇಳಬೇಕು ಎಂದು ಹೇಳಿ ಕಳಿಸುತ್ತಾನೆ.

ಮಹಿಮಾ ಮಾವನಿಗೆ ಹಣ ಕೊಟ್ಟಿದ್ದೇಕೆ..?

ಇನ್ನು ಮಹಿಮಾ ಮನೆಯಲ್ಲಿ ಮಂದಾಕಿನಿ ಮನೆಯ ಖರ್ಚಿನ ಬಗ್ಗೆ ಮಾತನಾಡುತ್ತಿರುತ್ತಾಳೆ. ಈಗ ಭೂಮಿಕಾ ಸಂಬಳ ಇಲ್ಲ. ಎಷ್ಟೇ ದುಡ್ಡಿದ್ದರೂ ಖರ್ಚು ಹೆಚ್ಚಾಗುತ್ತಲೇ ಇದೆ. ಬರುತ್ತಿರುವ ಆದಾಯ ಸಾಕಾಗುತ್ತಿಲ್ಲ. ಮದುವೆಗೆ ಮಾಡಿದ ಸಾಲದ ಹೊರೆಯೂ ಇದೆ. ಇನ್ಮುಂದೆ ಮನೆಯಲ್ಲಿ ಸ್ವಲ್ಪ ಖರ್ಚು ಕಡಿಮೆ ಮಾಡಬೇಕು ಎಂದು ಹೇಳುತ್ತಿರುತ್ತಾಳೆ. ಇದೇ ವೇಳೆಗೆ ಸರಿಯಾಗಿ ಮಹಿಮಾ ಮನೆಗೆ ಬರುತ್ತಾಳೆ. ಮಹಿಮಾ ಅಪಾರ್ಥ ಮಾಡಿಕೊಂಡಳೇನೋ ಎಂದು ಯೋಚಿಸುವಾಗಲೇ ಮಹಿಮಾ ಹಣ ತಂದು ಮಾವನಿಗೆ ಕೊಟ್ಟು. ನಾನೂ ಈ ಮನೆಯವಳೇ ಈ ಮನೆಯ ಕಷ್ಟದಲ್ಲಿ ನನ್ನದೂ ಪಾಲಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಮನೆಯವರಿಗೂ ಖುಷಿಯಾಗುತ್ತದೆ.

More from Filmibeat

English summary
Amruthadhaare kannada Serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X