Amruthadhaare: ಭೂಮಿಕಾಗೆ ಐಸ್‌ಕ್ರೀಂ ಟ್ರೀಟ್.. ಮಹಿಮಾಗೆ ಮಾವ ಸದಾಶಿವ ಕೈ ತುತ್ತು
ಅಮೃತಧಾರೆ ಧಾರಾವಾಹಿಯಲ್ಲಿ ಒಂದುಕಡೆ ಜಯದೇವನಿಗೆ ಸಂಕಟ ಎದುರಾಗಿದೆ. ತಾನು ಮಾಡಿದ ತಪ್ಪುಗಳೆಲ್ಲವೂ ಬಯಲಾಗುವ ಸಮಯ ಎದುರಾಗಿದೆ. ಇದನ್ನು ಹೀಗೆ ಬಿಟ್ಟರೆ ಗೌತಮ್ ಜೊತೆಗೆ ಆನಂದ್ ಇದ್ದರೆ ಎಲ್ಲವೂ ಕಷ್ಟವಾಗುತ್ತೆ ಎಂಬುದು ಶಕುಂತಲಾಳಿಗೂ ಅರ್ಥವಾಗಿದೆ. ಹೀಗಾಗಿ ಶಕುಂತಲಾ ಕೂಡ ಹೊಸ ಪ್ಲಾನ್ ಮಾಡಲು ಮುಂದಾಗಿದ್ದಾಳೆ.
ಭಯದಲ್ಲೇ ಆಫಿಸಿಗೆ ಊಟ ತೆಗೆದುಕೊಂಡು ಹೋದ ಭೂಮಿಕಾಳಿಗೆ ಗೌತಮ್ ಕೆಲಸ ಕೊಟ್ಟಿದ್ದಾನೆ. ಗೌತಮ್‌ಗೂ ಕೂಡ ಫುಲ್ ಖುಷಿಯಾಗುತ್ತದೆ.

ಯಾವಾಗಲೂ ಊಟ ಮಾಡುವುದರಲ್ಲಿ ಖುಷಿ ಪಡುವ ಗೌತಮ್‌ಗೆ ನಾನ್ ವೆಜ್‌ಗಿಂತಲೂ ಬೇರೆ ರುಚಿ ಇಲ್ಲ ಎಂದುಕೊಂಡಿದ್ದ. ಆದರೆ, ಭೂಮಿಕಾ ತಂದ ವೆಜ್ ಊಟವನ್ನು ಸೇವಿಸಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾನೆ.
ಗೌತಮ್‌ಗೆ ಸಹಾಯ ಮಾಡಿದ ಭೂಮಿಕಾ
ಇಷ್ಟು ಒಳ್ಳೆ ಊಟ ಕೊಟ್ಟ ನಿಮಗೆ ದೊಡ್ಡ ಥ್ಯಾಂಕ್ಸ್ ಎಂದು ಕೂಡ ಹೇಳುತ್ತಾನೆ. ಇನ್ನು ಉದ್ಯಮಿಯೊಬ್ಬರನ್ನು ಇನ್ವೈಟ್ ಮಾಡಲು ಬರೆದಿದ್ದ ಕಾರ್ಡ್ ಓದಿ ಅದನ್ನು ಭೂಮಿಕಾ ತಿದ್ದುತ್ತಾಳೆ. ಆಗ ಗೌತಮ್ ತಮಗೆ ಕನ್ನಡದಲ್ಲಿ ಒಂದಷ್ಟು ಇನ್ವಿಟೇಷನ್‌ಗಳಿಗೆ ಲೆಟರ್ ಬೇಕು ಎಂದು ಭೂಮಿಕಾಳಿಗೆ ವಹಿಸುತ್ತಾನೆ.
ಭೂಮಿಕಾಳಿಗೆ ಐಸ್‌ಕ್ರೀಂ ಟ್ರೀಟ್
ಭೂಮಿಕಾ ಆ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾಳೆ. ಹೀಗಾಗಿ ಭೂಮಿಕಾಳಿಗೆ ಟ್ರೀಟ್ ಕೊಡಿಸುತ್ತೇನೆ ಎಂದು ಹೇಳುತ್ತಾನೆ. ಗೌತಮ್ ಬೆನ್ನು ಬಿದ್ದಿರುವ ಆನಂದ್ ಅತ್ತಿಗೆಗೆ ಟ್ರೀಟ್ ಕೊಡಿಸಲು ತಾನೂ ಜೊತೆಗೆ ಹೋಗುತ್ತಾನೆ. ಭೂಮಿಕಾಳಿಗೆ ಐಸ್ ಕ್ರೀಂ ಎಂದರೆ ಇಷ್ಟ ಅನ್ನೋಧು ಗೌತಮ್‌ಗೆ ಗೊತ್ತಾಗುತ್ತದೆ. ಆಗ ಐಸ್ ಕ್ರೀಂ ಕೊಡಿಸುತ್ತಾನೆ. ಆನಂದ್ ಬೇಕಂತಲೇ ಗೌತಮ್ ಹಾಗೂ ಭೂಮಿಕಾ ಇಬ್ಬರಿಗೂ ಐಸ್ ತಿನ್ನಿಸಿಕೊಳ್ಳಿ ಎನ್ನುತ್ತಾನೆ. ಗೌತಮ್ ಒಪ್ಪದಿದ್ದಾಗ, ಚಾಕ್ಲೇಟ್ ಐಸ್ ಕ್ರೀಂಗಿಂತಲೂ ಬೇರೆದು ಚೆನ್ನಾಗಿರುತ್ತೆ ಟ್ರೈ ಮಾಡು ಎಂದು ಛೇಡಿಸಿ, ಭೂಮಿಕಾ ತಿನ್ನುತ್ತಿದ್ದ ಐಸ್ ಕ್ರೀಂ ಅನ್ನು ತಿನ್ನುವಂತೆ ಮಾಡುತ್ತಾನೆ. ಖುಷಿ ಖುಷಿಯಾಗಿ ಮನೆಗೆ ತೆರಳಿದ ಮೇಲೆ ಭೂಮಿಕಾ ಮತ್ತು ಗೌತಮ್ ಯಥಾ ಪ್ರಕಾರ ಜಗಳ ಆಡುತ್ತಾರೆ.

ಕೈ ತುತ್ತು ತಿಂದು ಖುಷಿ ಪಟ್ಟ ಮಹಿಮಾ
ಅಪೇಕ್ಷಾ ಕೆಲಸದಿಂದ ಮನೆಗೆ ಬರುವುದು ತಡವಾಗುತ್ತದೆ. ಇದರಿಂದ ಗಾಬರಿಯಾದ ಸದಾಶಿವ ಮಗಳು ಮನೆಗೆ ಬರುತ್ತಿದ್ದಂತೆ ಜಗಳ ಮಾಡುತ್ತಾನೆ. ಇಷ್ಟೊತ್ತು ತಡ ಮಾಡುವುದು ಸರಿಯಲ್ಲ ಎಂದು ಹೇಳುತ್ತಾನೆ. ಆಗ ಮಹಿಮಾ ಅಪೇಕ್ಷಾಳನ್ನು ವಹಿಸಿಕೊಂಡು ಮಾತನಾಡುತ್ತಾಳೆ. ಆಗ ಸದಾಶಿವ ಮತ್ತು ಜೀವನ್ ಇಬ್ಬರೂ ಕೂಡ ಮಹಿಮಾ ಮಾತು ತಪ್ಪು ಎಂಬಂತೆ ಮಾತನಾಡುತ್ತಾರೆ. ಎಲ್ಲರೂ ಬೇಸರದಲ್ಲಿ ಮಲಗಿದ ಮೇಲೆ ಸದಾಶಿವ ಊಟ ಮಾಡದೇ ಇದ್ದ ಅಪೇಕ್ಷಾಳಿಗೆ ಕೈ ತುತ್ತು ಕೊಡುತ್ತಿರುತ್ತಾನೆ. ಆಗ ಜೀವನ್ ಮತ್ತು ಮಹಿಮಾ ಕೂಡ ಕೈ ತುತ್ತು ತಿನ್ನುತ್ತಾರೆ.
ಶಕುಂತಲಾಳಿಗೆ ಹೊಸ ತಲೆನೋವು
ಇನ್ನು ಶಕುಂತಲಾಳಿಗೆ ಗೌತಮ್ ಮತ್ತು ಭೂಮಿಕಾ ನಡೆದುಕೊಳ್ಳುತ್ತಿರುವುದು ಗಾಬರಿ ತಂದಿದೆ. ಇಬ್ಬರೂ ಹೊರಗಡೆ ಸುತ್ತಾಡುವುದು, ಗೌತಮ್‌ಗೋಸ್ಕರ ಭೂಮಿಕಾ ಊಟ ತೆಗೆದುಕೊಂಡು ಹೋಗುವುದು ಶಕುಂತಲಾಳಿಗೆ ಗಾಬರಿ ಉಂಟು ಮಾಡಿದೆ. ಇಬ್ಬರ ಸಂಬಂಧ ಗಟ್ಟಿಯಾದರೆ ತನಗೆ ಕಷ್ಟವಾಗುತ್ತದೆ. ಪರಿಸ್ಥಿತಿ ತನ್ನ ಕೈ ಮೀರಿದರೆ, ಕಷ್ಟವಾಗುತ್ತದೆ. ಗೌತಮ್ ಅನ್ನು ತನ್ನ ಕೈ ಹಿಡಿತದಿಂದ ತಪ್ಪಿಸಿಕೊಳ್ಳದಂತೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಳೆ. ಈ ಮದುವೆ ಮಾಡಿಸಿದ್ದೇ ಒಂದು ತಲೆ ನೋವಾಗಿ ಕಾಣುತ್ತದೆ.


Click it and Unblock the Notifications











